ವರ್ತಕರುಯಾವುದೇ ಹಳೆಯ ಬಿತ್ತನೆ ಬೀಜ, ನಕಲಿ ಬಿತ್ತನೆ ಬೀಜ ಮಾರಾಟ ಮಾಡಬಾರದು ನಕಲಿ ಹಳೆಯ ಬೀಜ ಮಾರಾಟ ಮಾಡುವುದು ಕಂಡು ಬಂದಲ್ಲಿ ಅಂತವರ ಮೇಲೆ ನಿರ್ದಾಕ್ಷಿಣ್ಯವಾಗಿ ಕ್ರಮ ಕೈಗೊಳ್ಳಲಾಗುವುದು ಎಂದು ತಹಶಿಲ್ದಾರ್ ಕೆ.ರಾಘವೇಂದ್ರ ರಾವ್ ತಿಳಿಸಿದರು.
ಅವರು ಗುರುವಾರ ಪಟ್ಟಣದ ತಹಶಿಲ್ದಾರ್ ಕಛೇರಿಯಲ್ಲಿ ಹಮ್ಮಿಕೊಂಡಿದ್ದ ರಸಗೊಬ್ಬರ ಮತ್ತು ಬೀಜ ಮಾರಾಟಗಾರರ ಮತ್ತು ಸಭೆಯನ್ನುದ್ದೇಶಿಸಿ ಮಾತನಾಡಿದರು.
,ನರ್ಸರಿ,ಬೀಜ ರಸಗೊಬ್ಬರ, ಕೀಟನಾಶಕ ಮಾರಾಟಗಾರರ ಮತ್ತು ಮಾಲೀಕರ ಸಭೆ ನಡೆಸಿ ಎಚ್ಚರಿಸಿದರು.
ರೋಗಕ್ಕೆ ಸಂಬಂಧಿಸಿದ ಔಷಧಿ ಮಾತ್ರ ರೈತರಿಗೆ ವಿತರಣೆ ಮಾಡಬೇಕು. ಇದಕ್ಕೆ ಇದು ಕಾಂಬಿನೇಶನ್ ಇದು ಸಿಂಪರಣೆ ಮಾಡಿ ಅಂತ ಹೇಳಿ ರೋಗಕ್ಕೆ ಸಂಬಂಧಿಸಿದಲ್ಲದ್ದನ್ನು ರೈತರಿಗೆ ವಿತರಣೆ ಮಾಡಬಾರದು ಒಂದು ವೇಳೆ ಹಾಗೆ ಮಾರಾಟ ಮಾಡಿದರೆ ಮುಲಾಜಿಲ್ಲದೇ ಕಾನೂನು ಕ್ರಮ ಕೈಗೊಳ್ಳಲಾಗುವುದು.
ನರ್ಸರಿಯಲ್ಲಿ ಮೆಣಸಿನಕಾಯಿ ಸಸಿ ಹಾಕಿ ಮಾರಾಟ ಮಾಡುವವರು ತಮಗೆ ಯಾವ ಇಲಾಖೆಯಿಂದ ಸಸಿ ಮಾರಾಟ ಮಾಡಲು ಅನುಮತಿ ನೀಡಿದೆಯೋ ಅದನ್ನು ನಮಗೆ ತೋರಿಸಿ ಅನುಮತಿ ಇದ್ದಲ್ಲಿ ತೊಂದರೆ ಇಲ್ಲ ಆದರೆ ಯಾವುದೇ ರೀತಿಯ ಯಾವುದೇ ಇಲಾಖೆಯಿಂದ ಅನುಮತಿ ಪಡೆಯದೇ ನರ್ಸರಿ ಪ್ರಾರಂಭಿಸಿದಲ್ಲಿ ಸಸಿ ಮಾರಾಟ ಮಾಡಲು ಮುಂದಾದಲ್ಲಿ ಈ ಕೂಡಲೇ ತೋಟಗಾರಿಕೆ ಇಲಾಖೆಯಿಂದ ಇಂದೇ ಅಂತಹವುಗಳ ಮೇಲೆ ಕಾನೂನು ಕ್ರಮ ಜರುಗಿಸಲಾಗುವುದು ರೈತರಿಗೆ ಮೋಸ ,ವಂಚನೆ ಮಾಡದೇ ನ್ಯಾಯಯುತವಾಗಿ ವ್ಯಾಪಾರ ಮಾಡಬೇಕು ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಕರ್ನಾಟಕ ಪ್ರಾಂತ ರೈತ ಸಂಘದ ಜಿಲ್ಲಾ ಅಧ್ಯಕ್ಷರು ವಿ ಎಸ್ ಶಿವಶಂಕರ್, ಜಿಲ್ಲಾ ಕಾರ್ಯದರ್ಶಿ ಗಾಳಿ ಬಸವರಾಜ ,ಮೇಟಿ ಕಲ್ಗುಡೆಪ್ಪ, ಅಮೃತಾಪುರ ಹನುಮಂತಪ್ಪ, ಬೈಲೂರು ಕಲ್ಗುಡೆಪ್ಪ, ಜೆ .ಗಂಗಣ್ಣ, ಹುಲೆಪ್ಪ ,ಕೆಂಚಪ್ಪ, ಮುರುಣಿ ಕಲ್ಗುಡೆಪ್ಪ, ದೇವರಾಜ್, ರಂಗಪ್ಪ ಸೇರಿದಂತೆ ಇತರ ರೈತರು ವರ್ತಕರು ಭಾಗವಹಿಸಿದ್ದರು.