– ಹರಪನಹಳ್ಳಿ ಕ್ಷೇತ್ರದ ಶೈಕ್ಷಣಿಕ ಅಭಿವೃದ್ಧಿಗೆ ಬಿಜೆಪಿ ಸರಕಾರ ಅಪಾರ ಕೊಡುಗೆ ನೀಡಿದ್ದು, ವಿಧಾನ ಪರಿಷತ್ ಕ್ಷೇತ್ರದ ಅಭ್ಯರ್ಥಿ ಅಮರನಾಥ ಪಾಟೀಲ್ ಅವರ ಗೆಲುವಿಗೆ ಸಹಕಾರಿಯಾಗಲಿದೆ ಎಂದು ಮಾಜಿ ಕಂದಾಯ ಸಚಿವ ಜಿ.ಕರುಣಾಕರರೆಡ್ಡಿ ಹೇಳಿದರು.

Vijayanagara Vani
– ಹರಪನಹಳ್ಳಿ ಕ್ಷೇತ್ರದ ಶೈಕ್ಷಣಿಕ ಅಭಿವೃದ್ಧಿಗೆ ಬಿಜೆಪಿ ಸರಕಾರ ಅಪಾರ ಕೊಡುಗೆ ನೀಡಿದ್ದು, ವಿಧಾನ ಪರಿಷತ್ ಕ್ಷೇತ್ರದ ಅಭ್ಯರ್ಥಿ ಅಮರನಾಥ ಪಾಟೀಲ್ ಅವರ ಗೆಲುವಿಗೆ ಸಹಕಾರಿಯಾಗಲಿದೆ ಎಂದು ಮಾಜಿ ಕಂದಾಯ ಸಚಿವ ಜಿ.ಕರುಣಾಕರರೆಡ್ಡಿ ಹೇಳಿದರು.

ಪಟ್ಟಣದ ಎಸ್.ಯು.ಜೆ.ಎಂ ಕಾಲೇಜಿನಲ್ಲಿ ಬುಧವಾರ ವಿಧಾನ ಪರಿಷತ್ ಚುನಾವಣೆ ನಿಮಿತ್ತ ಈಶಾನ್ಯ ಪದವಿಧರ ಕ್ಷೇತ್ರದ ಅಭ್ಯರ್ಥಿ ಅಮರನಾಥ್ ಪಾಟೀಲ್ ಪರ ಮತಯಾಚಿಸಿ ಮಾತನಾಡಿದ ಅವರು, ತಮ್ಮ ಅಧಿಕಾರಾವಧಿಯಲ್ಲಿ ಬಿಜೆಪಿ ಸರಕಾರ ಹೇರಳವಾಗಿ ಅನುದಾನ ನೀಡಿದ ಪರಿಣಾಮ ಪದವಿ ಕಾಲೇಜ್, ಡಿಪ್ಲೋಮೋ ಕಾಲೇಜ್, ಪ್ರಾಥಮಿಕ, ಫ್ರೌಡ ಶಾಲೆಗಳ ವಿದ್ಯಾರ್ಥಿಗಳಿಗೆ ವಸತಿ ನಿಲಯಗಳು, ಶಾಲಾ ಕಾಲೇಜಗಳಿಗೆ ಸುಸಜ್ಜಿತ ಕಟ್ಟಡಗಳನ್ನು ನಿರ್ಮಿಸಿದೆ. ಇದರಿಂದ ಸಾವಿರಾರು ಬಡ ವಿದ್ಯಾರ್ಥಿಗಳ ಶೈಕ್ಷಣಿಕ ಪ್ರಗತಿಗೆ ರಹದಾರಿಯಾಗಿದೆ. ತಾಲೂಕಿನಲ್ಲಿ ಸುಮಾರು ೪೦೦ಕ್ಕೂ ಹೆಚ್ಚು ಶಾಲಾ ಕೊಠಡಿಗಳ ನಿರ್ಮಾಣ ಮಾಡಲಾಗಿದೆ ಎಂದರು.
ಆದರೆ ಈಗಿನ ರಾಜ್ಯ ಕಾಂಗ್ರೆಸ್ ಸರಕಾರ ವಿದ್ಯಾರ್ಥಿಗಳ ವೇತನಗಳನ್ನು ಕಡಿತಗೊಳಿಸಿದೆ. ಬೊಮ್ಮಯಿ ಸರಕಾರ ರೈತರ ಮಕ್ಕಳಿಗೆ ನೀಡುವ ವಿದ್ಯಾರ್ಥಿ ವೇತನಕ್ಕೂ ಕಡಿವಾಣ ಹಾಕಿ ಅವರ ಭವಿಷ್ಯಕ್ಕೆ ಮಾರಕವಾಗುತ್ತಿದೆ. ಆದ್ದರಿಂದ ಬಿಜೆಪಿ ಅಭ್ಯರ್ಥಿಗಳನ್ನು ಗೆಲ್ಲಿಸಲು ಪದವೀಧರರು ಪಕ್ಷದ ಅಭ್ಯರ್ಥಿ ಅಮರನಾಥ್ ಪಾಟೀಲ್ ಅವರಿಗೆ ಮತ ನೀಡಿ ಅತೀ ಹೆಚ್ಚಿನ ಅಂತರದಿAದ ಗೆಲ್ಲಿಸಬೇಕು ಎಂದು ಮತಯಾಚಿಸಿದರು.
ಮಾಜಿ ವಿಧಾನ ಪರಿಷತ್ ಸದಸ್ಯ ಅರುಣ್ ಶಹಪುರ್ ಮಾತನಾಡಿ, ಕರುಣಾಕರೆಡ್ಡಿಯವರು ಕಂದಾಯ ಸಚಿವರಿದ್ದ ವೇಳೆ ರಾಜ್ಯದ ಆನೇಕ ಕಡೆಗಳಲ್ಲಿ ಸರಕಾರಿ ಶಾಲೆಗಳನ್ನು ನಿರ್ಮಾಣ ಮಾಡಲು ಸರಕಾರದ ಜಾಗ ನೀಡಿದ್ದರು. ಆದ್ದರಿಂದ ರಾಜ್ಯದಲ್ಲಿ ಶಿಕ್ಷಣ ಕ್ಷೇತ್ರಕ್ಕೆ ಇವರ ಕೊಡುಗೆ ಅಪಾರವಾಗಿದೆ ಎಂದರು.
ಫಾರ್ಮಸಿ ಕಾಲೇಜ್, ಬಂಗಿ ಬಸಪ್ಪ ಕಾಲೇಜ್, ಬಿ.ಎಡ್ ಕಾಲೇಜ್, ಎಸ್.ಯು.ಜೆ.ಎಂ.ಕಾಲೇಜ್, ಸರಕಾರಿ ಜೂನಿಯರ್ ಪಿಯು ಕಾಲೇಜ್, ಸರಕಾರಿ ಜೂನಿಯರ್ ಪ್ರೌಡಶಾಲೆ, ಟಿಎಂಎಇ ಶಿಕ್ಷಣ ಸಂಸ್ಥೆಯ ಪ್ರೌಡಶಾಲೆ, ತರಳಬಾಳು ಶಿಕ್ಷಣ ಸಂಸ್ಥೆಯ ಫ್ರೌಢ ಶಾಲೆ, ಪಾಲಿಟೇಕ್ನಿಕ್ ಕಾಲೇಜ್ ಹಾಗೂ ಪದವಿ, ಪಿಯು ಕಾಲೇಜ್ ಸರಕಾರಿ ಪ್ರಥಮ ದರ್ಜೆ ಕಾಲೇಜ್‌ನ ಪದವಿಧರರಲ್ಲಿ ಮತಯಾಚಿಸಿದರು.
ಮುಖಡರಾದ ಪುರಸಭೆ ಸದಸ್ಯ ಕಿರಣ ಶಾನಬೋಗ್, ಮುಖಂಡರಾದ ಆರ್.ಲೋಕೇಶ್, ಚಂದ್ರಶೇಖರ ಪೂಜಾರ, ನಿರಂಜನ್, ಮಹೇಶ ಪೂಜಾರ, ಹಗರಿಬೊಮ್ಮನಹಳ್ಳಿಯ ಆರ್.ಎಸ್.ಎಸ್. ಮುಖಂಡ ಕೊಟ್ರೇಶಪ್ಪ, ಹಾಗೂ ಇತರರು ಉಪಸ್ಥಿತರಿದ್ದರು.

WhatsApp Group Join Now
Telegram Group Join Now
Share This Article
error: Content is protected !!