ಪದ್ಮಶ್ರೀ ಪ್ರಶಸ್ತಿ ವಿಜೇತೆ ಡಾ.ಸೂಲಗಿತ್ತಿ ನರಸಮ್ಮ ಯವರ 105ನೇ ಜನ್ಮ ದಿನೋತ್ಸವ ಕಾರ್ಯಕ್ರಮದ ಅಂಗವಾಗಿ ಪಟ್ಟಣದಲ್ಲಿ ಅಭಿಮಾನಿಗಳ ಬಳಗದ ವತಿಯಿಂದ ಜನ್ಮ ದಿನಾಚರಣೆ ಆಚರಿಸಲಾಯಿತು. ಈ ಸಂದರ್ಭದಲ್ಲಿ ಬುಗಡೇ ನಾಗರಾಜ್ ಮಾತನಾಡಿ ಸೂಲಗಿತ್ತಿ ನರಸಮ್ಮ ನವರು 15000 ಕ್ಕಿಂತ ಹೆಚ್ಚು ಹೆರಿಗೆ ಮಾಡಿ ಕರ್ನಾಟಕದ ಕೀರ್ತಿಯನ್ನು ಎತ್ತಿ ಹಿಡಿದಿದ್ದಾರೆ. ಅದಲ್ಲದೆ ರಾಜ್ಯದ 27 ಸಾವಿರ ಗೃಹರಕ್ಷಕರ ಕುಟುಂಬಗಳಿಗೆ 365 ದಿವಸ ಕರ್ತವ್ಯ ಕೊಡಿಸಲು ತನ್ನ 12 ನೇ ಮಗನಾದ ಶ್ರೀ ರಾಮ್ ಪಾವಗಡ ಹೈ ಕೋರ್ಟ್ ವಕೀಲರನ್ನು ಹೋರಾಟಕ್ಕೆ ನಮಗೆ ನೀಡಿದ್ದಾರೆ. ಇಂದು 27 ಸಾವಿರ ಗೃಹರಕ್ಷಕರ ಕುಟುಂಬಗಳಿಗೆ ಆ ತಾಯಿಯ ಆಶೀರ್ವಾದ ನಮ್ಮ ಮೇಲೆ ಇರಬೇಕು. ಇದಕ್ಕೆ 27 ಸಾವಿರ ಗೃಹರಕ್ಷಕರು ಸಹ ಚಿರಋಣಿಯಾಗಿ 15ನೇ ಜನ್ಮದಿನೋತ್ಸವ ಆಚರಣೆಯು ಗೃಹರಕ್ಷಕರ ಪೋಷಕರು ಇಂದು ವಿಶೇಷ ಪೂಜೆ ಮಾಡಿದ್ದೇವೆ ಎಂದರು.
ಈ ಸಂದರ್ಭದಲ್ಲಿ ಬಿ ನಾಗರಾಜ್ ಮತ್ತು ಹೆಚ್. ಕೆ.. ಕೆಂಚಪ್ಪ..ಎಕೆ ಬಸವರಾಜ.. ಹೆಚ್.. ತಿಮ್ಮಪ್ಪ.ಹೆಚ್.. ರಾಜಶೇಖರ… ಹೆಷ್.. ಪಕ್ಕೀರ. ಹೆಚ್. ಗಣೇಶ.. ಬಿ. ನವೀನ್ ಕುಮಾರ್. ಹೆಚ್. ಬಸವರಾಜ್.. ಕಿಶೋರ್.. ಕಲಂದರ್. ಸೇರಿದಂತೆ ಅನೇಕರು ಉಪಸ್ಥಿತರಿದ್ದರು.