Ad image

ಮೀನುಗಾರಿಕೆ ಇಲಾಖೆ: ಅರ್ಜಿ ಆಹ್ವಾನ

Vijayanagara Vani
ಬಳ್ಳಾರಿ,ಜೂ.23
ಮೀನುಗಾರಿಕೆ ಇಲಾಖೆಯ ವತಿಯಿಂದ 2025-26 ನೇ ಸಾಲಿನ ವಿವಿಧ ಯೋಜನೆಗಳಡಿ ಜಲಾಶಯಗಳಿಗೆ ಬಲಿತ ಬಿತ್ತನೆ ಮೀನುಮರಿಗಳನ್ನು ಸರಬರಾಜು ಮಾಡಲು ಆಸಕ್ತ ನೋಂದಾಯಿತ ಮೀನುಮರಿ ಪಾಲನಾದಾರರಿಂದ ಅರ್ಜಿ ಆಹ್ವಾನಿಸಲಾಗಿದೆ.
ಸರ್ಕಾರ ನಿಗಪಡಿಸಿದ ದರಗಳಲ್ಲಿ (ಸಾಗಾಣಿಕೆ ವೆಚ್ಚ ಸೇರಿ) ಉತ್ತಮ ತಳಿಯ 80-100 ಗಾತ್ರದ ಮೀನುಮರಿಗಳನ್ನು ಸರಬರಾಜು ಮಾಡಲು ಅರ್ಹರಿಂದ ಅರ್ಜಿ ಆಹ್ವಾನಿಸಲಾಗಿದೆ.
ಅರ್ಜಿಗಳನ್ನು ಇಲಾಖೆಯ ವೆಬ್‌ಸೈಟ್ WWW.fisheries.karnataka.gov.in ಗೆ ಭೇಟಿ ಸಲ್ಲಿಸಬಹುದು. ಅರ್ಜಿ ಸಲ್ಲಿಸಲು ಜುಲೈ 18 ಕೊನೆಯ ದಿನ.
ಹೆಚ್ಚಿನ ಮಾಹಿತಿಗಾಗಿ ನಗರದ ನಾಗಲಕೆರೆ ಹತ್ತಿರದ ಮೀನುಗಾರಿಕೆ ಇಲಾಖೆಯ ಉಪ ನಿರ್ದೇಶಕರ ಕಚೇರಿ ಅಥವಾ ಮೊ.9449593156 ಗೆ ಹಾಗೂ ಆಯಾ ತಾಲ್ಲೂಕು, ವಲಯ ಮೀನುಗಾರಿಕೆ ಇಲಾಖೆಯ ಕಚೇರಿಗಳಿಗೆ ಸಂಪರ್ಕಿಸಬಹುದು ಎಂದು ಮೀನುಗಾರಿಕೆ ಉಪ ನಿರ್ದೇಶಕ ಶಿವಣ್ಣ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Share This Article
error: Content is protected !!
";