Ad image

ವರ್ತಮಾನದಲ್ಲಿ ವಚನಗಾರ್ತಿಯರ ಯೋಚನೆಗಳ ಅಗತ್ಯತೆ

Vijayanagara Vani
ವರ್ತಮಾನದಲ್ಲಿ ವಚನಗಾರ್ತಿಯರ ಯೋಚನೆಗಳ ಅಗತ್ಯತೆ

ವಚನಕಾರರ ಕಾಲದಲ್ಲಿ ಬಸವಣ್ಣನವರು ಅಕ್ಷರಕ್ಕಿಂತ ಅನುಭವಕ್ಕೆ ಮಾನ್ಯತೆ ಕೊಟ್ಟರು.ಅಕ್ಷರಗಳು ಆರಂಭವಾದ ಮೇಲೆ ಅಕ್ಷರಗಳು ಕೆಲವರ ಸೊತ್ತಾಗಿ ಅವರಿಗೆ ಬೇಕಾದದ್ದನ್ನು ಬರೆದರು,ಮಾತ್ರವಲ್ಲ ಕೇವಲ ಅಕ್ಷರಗಳಿಂದ ಇಡೀ ವ್ಯವಸ್ಥೆಯನ್ನು ನಿಯಂತ್ರಿಸುತ್ತಾ ಬಂದರು.ಇದಕ್ಕೆ ಪ್ರತಿಯಾಗಿ ವಚನಕಾರರು ಅನುಭವ ಮತ್ತು ಅನುಭಾವಕ್ಕೆ ಮಹತ್ವಕೊಟ್ಟರು.ಅದಕ್ಕೆ ಒಂದೆಡೆ ಅಲ್ಲಮ ಹೇಳುತ್ತಾರೆ “ಅಳಿಸಲಾಗದ ಲಿಪಿಯನ್ನು ಬರೆಯಬಾರದು”ಭಾರತೀಯ ಸಂಸ್ಕೃತಿಯಲ್ಲಿ ಅಸಂಖ್ಯಾತ ತಳಸಮುದಾಯಗಳು ಅಕ್ಷರಗಳ ಹಂಗಿಲ್ಲದೆ ಅನುಭವದ ಜ್ಞಾನಪರಂಪರೆಯನ್ನು ಹೊಂದಿದ್ದವು.ಆದರೆ ಆ ಜನರ ಅನುಭವದ ಅಮೃತವನ್ನು ಕೆಲವೊಮ್ಮೆ ನಿರಾಕರಿಸಿದರೆ,ಮತ್ತೆ ಕೆಲವೊಮ್ಮೆ ಆ ಜ್ಞಾನವನ್ನು ತಮ್ಮದೆಂಬAತೆ ಅಕ್ಷರ ಕಲಿತವರು ಶಾಸ್ತçವಾಗಿಸಿ, ಅವರನ್ನೇ ದೂರವಿಟ್ಟರು.ಅದಕ್ಕಾಗಿ ವಚನಕಾರರು ಶಾಸ್ತçಗಳಿಗಿಂತ ಕಾಯಕಕ್ಕೆ ಮಹತ್ವ ನೀಡಿ ಆ ಮೂಲಕ ಗ್ರಹಿಸಿದ ಜ್ಞಾನವನ್ನು ವಚನಗಳನ್ನಾಗಿಸಿ ಸಮಸಮಾಜವನ್ನು ಕಟ್ಟಲು ಯತ್ನಿಸಿದರು.ಆದರೆ ಇಂದು ನಮ್ಮ ನಡುವೆ ಪ್ರಯೋಜನವಾದಿಗಳು ಹೆಚ್ಚಾಗುತ್ತಿದ್ದಾರೆ,ಎಲ್ಲರಿಗೂ ಎಲ್ಲ ಕಡೆ ನನಗೇನು ಲಾಭ ಎಂಬ ಮನೋಧೋರಣೆ ಹೆಚ್ಚಾಗುತ್ತಿದೆ.ಆದರೆ ಶರಣರ ಕಾಲದಲ್ಲಿ “ಅಕ್ಷರಶಃ ಪರೋಪಕಾರಾರ್ಥಂ ಇದಂ ಶರೀರಂ”ನAತೆ ನಡೆದುಕೊಂಡರು.ಸAಗ್ರಹ ನೀತಿಗೆ ವಿರೋಧ ಮಾಡಿದವರು.ದಾಸೋಹಕ್ಕೆ ಪ್ರಾಧಾನ್ಯತೆ ನೀಡಿದವರು,ಸರಳ ಬದುಕನ್ನು ಅಳವಡಿಸಿಕೊಂಡು ಮಾದರಿಯಾಗಿ ಬದುಕಿದವರು.ಶರಣರ ಬಾಳಿನಲ್ಲಿ ಕಾಯಕವೆಂದರೆ ಬರೀ ಹೊಟ್ಟೆ ತುಂಬಿಸಿಕೊಳ್ಳವುದಲ್ಲ,ಲೋಭದ ದಂಧೆಯೂ ಅಲ್ಲ,ಅದೊಂದು ಸತ್ಯ ಶುದ್ಧ ಜೀವನ ಮಾರ್ಗ. ತೋರಿಕೆ ಬದುಕು ಅವರದಲ್ಲ.ಹನ್ನೆರಡನೇ ಶತಮಾನದ ಶರಣರ ಗಣದಲ್ಲಿ ಸತ್ಯಕ್ಕನೆಂಬ ಶರಣೆ ಇದ್ದಳು.ಈ ಶರಣೆಯ ವೃತ್ತಿ ಜಾಡಮಾಲಿ ಕೆಲಸ.ಅಕ್ಷರಗಳ ಜ್ಞಾನಕ್ಕಿಂತ ಅನುಭವ ಜ್ಞಾನವಿದ್ದ ಈಕೆ ಶರಣ ತತ್ವಕ್ಕೆ ಅನುಗುಣವಾಗಿ ಬದುಕಿದವಳು.ತನ್ನ ಕಾಯಕದ ಬಗ್ಗೆ ತಾತ್ಸಾರವಾಗಲಿ,ಅವಮಾನವಾಗಲಿ,ತಿರಸ್ಕಾರ ಭಾವವಾಗಲಿ ಇರಲಿಲ್ಲ.ಇಂಥಹ ಕಡುಕಷ್ಟ ಜೀವನದಲ್ಲೂ ಪ್ರಾಮಾಣಿಕತೆ ಮೈಗೂಡಿಸಿಕೊಂಡ ಈಕೆ ಹೇಳುತ್ತಾಳೆ:

ಲಂಚವAಚನಕ್ಕೆ ಕೈಯಾನದ ಭಾಷೆ
ಬಟ್ಟೆಯಲ್ಲಿ ಹೊನ್ನವಸ್ತç ಬಿದ್ದಿದ್ದರೆ ನಾನು ಕೈ ಮುಟ್ಟಿ ಎತ್ತಿದೆನಾದರೆ
ನಿಮ್ಮಾಣೆ ನಿಮ್ಮ ಪ್ರಮಥರಾಣೆ
ಅದೇನು ಕಾರಣವೆಂದರೆ ನೀವಿಕ್ಕಿದ ಭಿಕ್ಷದಲ್ಲಿಪ್ಪೆನಾಗಿ
ಇಂತಲ್ಲದೆ ನಾನು ಅಳಿಮನವ ಮಾಡಿದೆನಾದರೆ
ನೀನಾಗಲೇ ಎನ್ನ ನರಕದಲ್ಲಿ ಅದ್ದಿ ಎದ್ದು ಹೋಗಾ ಶಂಭುಜಕ್ಕೇಶ್ವರಾ||


ಇಲ್ಲಿ ವಚನಕಾರ್ತಿಯಾದ ಸತ್ಯಕ್ಕ ತೀರಾ ತಳಸಮುದಾಯದವಳಾಗಿದ್ದು, ಬಡತನದಲ್ಲಿದ್ದರೂ ಕೂಡ ಅಂದಿನ ಆಕೆಯ ಗಟ್ಟಿಯ ನಿಲವು ಈ ಹೊತ್ತು ನಮಗೆ ಮಾದರಿಯಾಗಿದೆ.ದಾರಿಯಲ್ಲಿ ಬಿದ್ದಿದ್ದ ಬಂಗಾರವಾಗಲಿ,ಯಾವುದೇ ವಸ್ತುವಾಗಲಿ ಕಸಗುಡಿಸುವಾಗ ಸಿಕ್ಕರೆ ಅದನ್ನು ನಾನು ಕೈ-ಎತ್ತಿಯೂ ಮುಟ್ಟುವುದಿಲ್ಲ-ಎನ್ನುತ್ತಾಳೆ ಸತ್ಯಕ್ಕ.ಲಂಚ_ಭ್ರಷ್ಟಾಚಾರ ತುಂಬಿತುಳುಕುವ ವರ್ತಮಾನದ ಬದುಕಿನಲ್ಲಿ ಸತ್ಯಕ್ಕನ ಮಾತುಗಳು ನಮಗೆ ಹೆಚ್ಚರಿಸುತ್ತವೆ.
ಬಸವಣ್ಣನವರ ಸಮಾಜ ಸುಧಾರಣೆ ವೈವಿದ್ಯಮಯವಾದುದು,ಜಾತಿ_ಧರ್ಮ_ಪಂಥ_ವರ್ಗ ಅಸಮಾನತೆಯನ್ನು ಹೋಗಲಾಡಿಸುವ ಕೈಂಕರ್ಯಗಳ ನಡುವೆ ಸಮಾಜದ ಪಿಡುಗಗಳಿಗೆ ಮದ್ದಾದವರು.ಹೆಣ್ಣು ಮಕ್ಕಳನ್ನು ದೇವರ ಹೆಸರಲ್ಲಿ ವೇಶ್ಯಯಾಗಿಸಿ ಅನುಭವಿಸಿದ ಪುರುಷ ಪ್ರಧಾನ ವ್ಯವಸ್ಥೆಯಲ್ಲಿ ಆ ವೃತ್ತಿಗೆ ಅನಿವಾರ್ಯವಾಗಿ ಬಂದು ಕಷ್ಟ ಅನುಭವಿಸಿದ ಶಿವಶರಣೆ ಅಕ್ಕಮ್ಮ 154 ವಚನಗಳು ಬರೆದಿದ್ದಾಳೆಂದು ಸಂಶೋಧಕರು ಹೇಳುತ್ತಾರೆ.ಇಂತಹ ಮಹಿಳೆಯರು ಸಮಾಜದ ಮುಖ್ಯವಾಹಿನಿಗೆ ಬರುವುದು ಇಂದಿಗು ಕಷ್ಠ,ಆದರೆ ಅಂದು ಬಸವಣ್ಣನವರು ಶಿವಶರಣೆ ಅಕ್ಕಮ್ಮನನ್ನು ವಚನಕಾರ್ತಿಯನ್ನಗಿಸಿರುವುದು ಅಭಿನಂದನೀಯವಾದುದು.ಅಕ್ಕಮ್ಮ ಬರೆಯುತ್ತಾಳೆ:
ಎನ್ನ ಸಮಗ್ರಾಹಕ ಶೀಲಸಂಪಾದಕನಲ್ಲದೆ
ಎನ್ನ ಕಣ್ಣಿನಲ್ಲಿ ನೋಡೆ ಜಿಹ್ವೆಯಲ್ಲಿ ನೆನೆಯೆ
ಮಿಕ್ಕಾದ ತಟ್ಟುವ ಮುಟ್ಟುವ ತಾಗುವ ಸೋಂಕುವ
ನಾನಾ ಗುಣಂಗಳಲ್ಲಿ ಶೋಧಿಸಿಯಲ್ಲದೆ ಬೆರೆಯೆ
ಕೊಂಬಲ್ಲಿ ಕೊಡುವಲ್ಲಿ
ಎನ್ನ ವ್ರತಾಚಾರವ ಅಂಗೀಕರಿಸಿದವರಲ್ಲಿಗಲ್ಲದೆ ಹೋಗೆ

ಅಕ್ಕಮ್ಮ ಯಾವುದೋ ಕಾರಣಗಳಿಗೆ ವೇಶ್ಯಯ ವೃತ್ತಿಗೆ ಹೋದ ಆಕೆ ನಂತರದ ದಿನಗಳಲ್ಲಿ ಆ ವೃತ್ತಿಯಲ್ಲೂ ರೂಢಿಗತ ವ್ಯವಹಾರ ಸಂಬAಧಗಳ ಕೀಳುತನವನ್ನು ತಿರಸ್ಕರಿಸಿ ಪರಸ್ಪರ ಅರಿವಿನ ಸ್ನೆಹಶೀಲತೆಗುಣವನ್ನು ಬಯಸುತ್ತಾಳೆ.ತನ್ನ ಸಮಗ್ರಾಹಕ ಶೀಲಸಂಪಾದಕನಲ್ಲದಿದ್ದರೆ ಕಣ್ಣಿನಿಂದ ನೋಡಲಾರೆ,ನಾಲಿಗೆಯಿಂದ ನೆನೆಯಲಾರೆ.ಅನ್ನುತ್ತಾ..ನನ್ನ ಈ ವ್ಯವಹಾರದಲ್ಲೂ ವ್ರತವನ್ನು ಬಿಡಲಾರೆ_ಎನ್ನುತ್ತಾರೆ.
ಮೋಳಿಗೆ ಮಹದೇವಿ ಕಾಶ್ಮೀರದಿಂದ ಕಲ್ಯಾಣಕ್ಕೆ ಬಂದವಳು,ಅವಳ ಗಂಡ ಮೋಳಿಗೆ ಮಾರಯ್ಯ ಕಾಶ್ಮೀರದ ಸಾವಲಾಕ್ಷದಲ್ಲಿ ರಾಜನಾಗಿದ್ದವನು,ಈತ ಬಸವಣ್ಣನವರ ಸಾಮಾಜಿಕ_ಧಾರ್ಮಿಕ ವಿಷಯದಲ್ಲಾದ ಕ್ರಾಂತಿಗಳನ್ನು ತಿಳಿದು ಆಕರ್ಷಣೆಗೆ ಒಳಗಾಗಿ ಪತ್ನಿಯೊಂದಿಗೆ ಬಂದು ಕಲ್ಯಾಣದಲ್ಲಿ ಕಟ್ಟಿಗೆ ಮಾರುವ ಕಾಯಕದೊಂದಿಗೆ ಜೀವನ ಕಳೆಯುತ್ತಾನೆ.ರಾಜ ಪದವಿಯನ್ನು ಬಿಟ್ಟು ಕಾಯಕ ಜೀವನದ ಶ್ರಮ ಮಾರ್ಗವನ್ನು ಆಪೇಕ್ಷಿಸಿ ಬಾಳು ಕಟ್ಟಿಕೊಂಡರು.ಕಟ್ಟಿಗೆ ಮಾರಿ ಜೀವನ ಸಾಗಿಸುತ್ತಾ ದಾಸೋಹ ಮಾಡುತ್ತಾ ಸಮಸಮಾಜದ ನಿರ್ಮಾಣಕ್ಕೆ ಆದರ್ಶವಾದವರು.ಮಾತ್ರವಲ್ಲ ಅವರು ವಚನಗಳನ್ನು ಬರೆದರು.ಬದುಕಿಗೆ ಸಂಬAಧಿಸಿದ ಹಲವು ಬಗೆಯ ತಾತ್ವಿಕತೆಗಳನ್ನು ಅರಿತವರು,ಎಲ್ಲಾ ತಾತ್ವಿಕ ಚಿಂತನೆಗಳ ಗುರಿ ಬದುಕನ್ನು ಅರ್ಥೈಸಿಕೊಳ್ಳುವುದಾಗಿದೆ.ಅರ್ಥೈಯಿಸಿಕೊಳ್ಳುತ್ತಾ ಇರುವಿಕೆಯನ್ನು ಅರಿಯುವುದು,ಅರಿಯುತ್ತಾ ಗುರಿಯತ್ತ ಪಯಣ ಮಾಡುವುದು,ಇಂತಹ ಪಯಣದಲ್ಲಿ ನಂಬಿಕೊAಡ ತತ್ವಗಳಿಗೆ ಒಮದು ಗಡಿ ಇರುತ್ತದೆ, ಯಾವ ತಾತ್ವಿಕತೆಯೂ ಅಂತಿಮ ಅಲ್ಲ,ಅದು ಜಂಗಮ,ಬದಲಾವಣೆಗೆ ಒಳಪಡುತ್ತಿರುತ್ತದೆ ಎನ್ನುತ್ತಾ ಬರೆಯುತ್ತಾರೆ:

ಆರು ಮಣಿಗೆ ದಾರವನೇರಿಗೆ
ಕುಣಿಕೆಗೆ ಮಣಿಯಿಲ್ಲದೆ ಅರಸುತ್ತಿದ್ದರಲ್ಲಾ ತತ್ವಜ್ಞರು.
ಇದು ಆದಿಯ ಕ್ರೀ ಅನಾದಿಯ ಜ್ಞಾನ
ಈ ಉಭಯದ ಭೇಧಿಸಿದಡೆ ಕುಣಿಕೆಯ ಮಣಿ ತಲಡಿಗೇರಿತ್ತು.
ಎನ್ನಯ್ಯ ಪ್ರಿಯ ಇಮ್ಮಡಿ ನಿಃ ಕಳಂಕ
ಮಲ್ಲಿಕಾರ್ಜುನ ಲಿಂಗವು ಏಕವೆಂದಲ್ಲಿ.

ನಮ್ಮ ಇತಿಹಾಸದಲ್ಲಿ ಮಹಿಳೆಯು ಎಷ್ಟೇ ದುಡಿದರೂ, ಶ್ರಮ ಪಟ್ಟರೂ ಎರಡನೇ ದರ್ಜೆಯ ವ್ಯಕ್ತಿಯಾಗಿ ಉಳಿದದ್ದೆ ಹೆಚ್ಚು ಆದರೆ ಶರಣರ ಕಾಲದಲ್ಲಿ ಕೆಲವು ಕಾಯಕಗಳು ಶಿಶರಣೆಯರ ಜೊತೆ ಸೇರಿಕೊಂಡು ಮಾನ್ಯತೆ ಪಡೆದಿವೆ.ಮೋಳಿಗೆ(ಕಟ್ಟಿಗೆ) ಮಹದೇವಿ, ಆಯ್ದಕ್ಕಿ ಲಕ್ಕಮ್ಮ, ಕದಿರ (ನೂಲನ್ನು ತೆಗೆಯುವ ಕಾಯಕ) ಕಾಯಕದ ಕಾಳವ್ವೆ,ಕಾಲಕಣ್ಣೆಯ ಕಾಮವ್ವ,ಹೀಗೆ ಪುರಷ ಪ್ರಧಾನವ್ಯವಸ್ಥೆಯಲ್ಲಿ ಮಹಿಳೆಯೂ ತಾನು ಅವಿರತವಾಗಿ ಮಡುವ ಕೆಲಸದೊಂದಿಗೆ ಗುರುತಿಸಿಕೊಳ್ಳುವ ಅವಕಾಶ ಬಸವಾದಿ ಶರಣರು ನೀಡಿದ್ದಾರೆ.ಕದಿರ ರೆಮ್ಮೆವ್ವ
ನಾ ತಿರುಹುವ ರಾಟೆಯ ಕುಲಜಾತಿಯ ಕೇಳಿರಣ್ಣಾ
ಅಡಿಯ ಹಲಗೆ ಬ್ರಹ್ಮ,ತೋರಣ ವಿಷ್ಣು
ನಿಂದ ಬೊಂಬೆ ಮಹಾರುದ್ರ, ರುದ್ರನ ಬೆಂಬಳಿಯವೆರಡು ಸೂತ್ರಕರ್ಣ
ಅರಿವೆಂಬ ಕದಿರು ಭಕ್ತಿಯೆಂಬ ಕೈಯಲ್ಲಿ ತಿರುಹಲಾಗಿ
ಸುತ್ತಿತ್ತು ನೂಲು ಕದಿರು ತುಂಬಿತ್ತು.
ಇಲ್ಲಿ ಗಮನಿಸ ಬೇಕು ನಾವು_ ಶರಣೆಯರು ಬಹುತೇಕ ಅವರು ಮಾಡುವ ಕಾಯಕದ ಮೂಲಕ ತತ್ವಜ್ಞಾನವನ್ನು ವಿವರಿಸಿದ್ದಾರೆ.ಅವರು ಬಳಸಿದ ವಸ್ತುಗಳೆ ಪ್ರತಿಮೆಗಳು, ಇದು ಅನುಭವ ಮತ್ತು ಅನುಭಾವ.
ಮತ್ತೊಬ್ಬ ವಚನಕಾರ್ತಿ ಆಮುಗೆ ರಾಯಮ್ಮ ಒಂದೆಡೆ ಬರೆಯುತ್ತಾರೆ
ಮುಂಡದಲ್ಲಿ ತಿರುಗುವವರು ಕೋಟ್ಯನು ಕೋಟಿ
ತಲೆಯಲ್ಲಿ ತಿರುಗುವವರನಾರನೂ ಕಾಣೆ.
ಅಂಗದಲ್ಲಿಪ್ಪ ಮಲಿನವ ಕಳೆವರು ಕೋಟ್ಯಾನು ಕೋಟಿ,
ಮನದಲ್ಲಿಪ್ಪ ಮಲಿನವ ಕಳೆವವರನಾರನೂ ಕಾಣೆ
ಆಮುಗೇಶ್ವರಾ||
ದೇಹದ ಸೌಂದರ್ಯ ಮತ್ತು ದೇಹದ ಮೇಲಿನ ಪ್ರೀತಿಯನ್ನು ಆಮುಗೆ ರಾಯಮ್ಮ ವ್ಯಂಗವಾಗಿ ಹೇಳುತ್ತಾರೆ,ಬುದ್ದಿವಂತಿಕೆ ಮತ್ತು ಆತ್ಮ ಜ್ಞಾನದ ಅರಿವು ಕಡಿಮೆ ಇರುವ ಜನರೇ ಹೆಚ್ಚು,ದೇಹದ ಕೊಳೆಯನ್ನು ತೆಗೆಯಲು ಶ್ರಮಿಸಿದಷ್ಟು ಮಾನಸಿಕ ಮಲಿನತೆ ತೊಡೆಯಲು ಜನ ಕಷ್ಟ ಪಡುವುದಿಲ್ಲ ಅಥವಾ ಇಷ್ಟ ಪಡುವುದಿಲ್ಲ.ಅದರಲ್ಲಿ ಸಿಗುವ ತಾತ್ಕಾಲಿಕ ಸುಖಕ್ಕೆ ಜನ ಮಾರು ಹೋಗುತ್ತಾರೆ,ಶಾಸ್ವತ ಸಮಾಧಾನ ನೀಡುವ ಪರಿಶುದ್ಧ ಮನಸ್ಸು ಮತ್ತು ಶುದ್ಧ ಕಾಯಕದಲ್ಲಿ ನಿರತರಾಗುವ ಮಹತ್ವವನ್ನು ಸಾರುತ್ತಾಳೆ ಆಮುಗೆ ರಾಯಮ್ಮ.
ವಚನಕಾರ್ತಿಯರಲ್ಲಿ ಕೆಲವು ಪುಣ್ಯ ಸ್ತಿçÃಯರು ಬರುತ್ತಾರೆ.ಪುಣ್ಯ ಸ್ತಿçà ಎಂಬ ಪದವು “ಪತೀವ್ರತೆ” ಎಂಬ ಪದಕ್ಕೆ ಸಮನಾದುದಲ್ಲ.ಶರಣರ ಕಾಲದಲ್ಲಿ ವೇಶ್ಯ ವೃತ್ತಿಗೆ ಬಂದAತಹ ಮಹಿಳೆಯರಿಗೆ ಬಸವಾದಿ ಶರಣರ ಮಾರ್ಗದರ್ಶನ ಪಡೆದ ಕೆಲವು ಪುರುಷರು ಆ ಹೆಣ್ಣು ಮಕ್ಕಳನ್ನು ಮದುವೆಯಾಗಿ ಕೌಟುಂಬಿಕ ಜೀವನಕ್ಕೆ ಅವಕಾಶ ಮಾಡಿಕೊಟ್ಟರು. ಮಾತ್ರವಲ್ಲದೆ ಆ ಸಾಮಜಿಕ ಪಿಡುಗಿಗೆ ಇತಿಶ್ರೀ ಹಾಡಲು ಮುಂದಾದರು. ಇಂತಹ ಪುಣ್ಯದ ಮಹಿಳೆಯನ್ನು ತಮ್ಮ ಬಾಳಿನ ಪುಣ್ಯದ ಮಡದಿಯಾಗಿ ಮಾಡಿಕೊಂಡ ಮಹಾತ್ಮರು ಈ ಶರಣರು.
ಹಡದಪ್ಪಣ್ಣಗಳ ಪುಣ್ಯಸ್ತಿçà ಲಿಂಗಮ್ಮನ ವಚನ ಹೀಗಿದೆ:
ಕನಿಷ್ಟದಲ್ಲಿ ಹುಟ್ಟಿದೆ
ಉತ್ತಮದಲ್ಲಿ ಬೆಳೆದೆ
ಸತ್ಯ ಶರಣರ ಪಾದವಿಡಿದೆ
ಆ ಶರಣರ ಪಾದವಿಡಿದು ಗುರುವ ಕಂಡೆ
ಲಿAಗವ ಕಂಡೆ, ಜಂಗಮನ ಕಂಡೆ,
ಮಹಾಬೆಳಗಿನೊಳಗೋಲಾಡಿ
ಸುಖಿಯಾದೆ,ನಮ್ಮ ಅಪ್ಪಣ್ಣ ಪ್ರಿಯ ಚೆನ್ನ ಬಸವಣ್ಣಾ||
ಹೀಗೆ ಹಲವರು ವಚನಕಾರ್ತಿಯರು 12 ನೇ ಶತಮಾನದಲ್ಲಿ ಪುರುಷರಿಗೆ ಸಮನಾಗಿ ಕಾಯಕದಲ್ಲಿ ನಿರತರಾಗಿ, ದಾಸೋಹಕ್ಕೆ ಕೈ ಜೋಡಿಸಿ, ವಿಚರವಂತಿಕೆಯಿAದ ವಚನಗಳನ್ನು ಬರೆದರು,ಇದು ವಿಶ್ವಕ್ಕೆ ಮಾದರಿಯಾಗುವ ಕೆಲಸ.
ಅಕ್ಕಿಯನ್ನು ಆಯ್ದು ತಂದು ದಾಸೋಹ ಮಾಡಿ ಉಳಿದುದ ಉಂಡು ಬದುಕಿದ ಮಾರ್ಗದರ್ಶಿ ದಂಪತಿ ಆಯ್ದಕ್ಕಿ ಮಾರಯ್ಯ ಮತ್ತು ಲಕ್ಕಮ್ಮ ಇವರು ಅತ್ಯಂತ ಸರಳ ಜೀವನ ನಡೆಸಿದವರು.ಆಸೆ ಮನುಷ್ಯನಿಗೆ ಸಲ್ಲದು ರೋಷವೂ ಸಲ್ಲದು,ಅರಸನಿಗೆ ಆಸೆ ಇರಬಹುದು,ಶರಣರಿಗಲ್ಲ,ರೋಷವು ಕಟು ಹೃದಯಿಗಳಿಗಿರ ಬಹುದು ಶರಣರಿಗೆ ಅಲ್ಲ ಎಂದು ಹೇಳುವಲ್ಲಿ ಆಸೆ _ರೋಷಗಳು ಮಾನವನ ಬದುಕಿಗೆ ಎಷ್ಟು ಮಾರಕ ಎಂಬುದನ್ನು ಸಾರುತ್ತವೆ.ಮಾತ್ರವಲ್ಲ ಗಂಡನಿಗೆ ಈ ರೀತಿ ಬುದ್ದಿ ಹೇಳುವ ಸತಿ ಇಂದಿನ ದಿನಮಾನಗಳಲ್ಲಿ ಅಗತ್ಯವಿದೆ.
ಆಸೆ ಎಂಬುದು ಅರಸಿಂಗಲ್ಲದೆ,
ಶಿವಬಕ್ತರಿಗುAಟೆ ಅಯ್ಯಾ?
ರೋಷವೆಂಬುದು ಯಮದೂತರಿಗಲ್ಲದೆ,
ಅಜಾತರಿಗುಂಟೆ ಅಯ್ಯಾ?
ಈಸಕ್ಕಿಯಾಸೆ ನಿಮಗೇಕೆ? ಈಶ್ವರನೊಪ್ಪ.
ಮಾರಯ್ಯ ಪ್ರಿಯ ಅಮರೇಶ್ವರಲಿಂಗಕ್ಕೆ ದೂರ ಮಾರಯ್ಯ.
ಮತ್ತೊಂದು ವಿಶೇಷವೆಂದರೆ ಆಸೆ_ರೋಷಗಳು ದೇವತೆಗಳಿಗಿರ ಬಹುದು ಶರಣರಿಗೆ ಅಲ್ಲ ಎಂಬಲ್ಲಿ ಶರಣರು ದೇವತೆಗಳಿಗಿಂತ ಖರಾರುವಕ್ಕಾಗಿ ಬದುಕಬೇಕೆಂಬುದನ್ನು ಸಾರಿದಂತಿದೆ.
ವೈರಾಗ್ಯತಾಳಿದ ತಾಯಿ ನೀನು ದೇಹದ ಮೇಲೆ ನಿಮಗೆ ಇನ್ನೂ (ಭ್ರಾಂತಿ) ಮಮಕಾರವಿದೆ ಅಥವಾ ಆ ಬಗ್ಗೆ ನಿಮಗೆ ಎಲ್ಲರಿಗೆ ಇರುವ ಭಾವ ನಿನ್ನಲ್ಲೂ ಇದೆ ತಾಯಿ ಎಂದು ಅಲ್ಲಮ ಪ್ರಭುಗಳು ಅನುಭವ ಮಂಟಪದಲ್ಲಿ ಕೇಳಿದಾಗ ಅಕ್ಕ ಮಹಾದೇವಿ ಉತ್ತರಿಸುತ್ತಾರೆ.ಈ ಕೇಶದ ಮುಚ್ಚು ಮರೆ ದೇಹದ ಮೇಲೆ ನನಗಿರುವ ಮೋಹದಿಂದಲ್ಲ,ಅಣ್ಣAದಿರಾ! ನಿಮ್ಮ ಮನಗಳು ಅಲುಗಾಡದಿರಲಿ ಎಂದು ಉತ್ತರಿಸಿದಳು.ಇಂತಹ ಉತ್ತರ ಕೊಡಲು ಅಕ್ಕ ಮಹಾದೇವಿಯಿಂದ ಮಾತ್ರ ಸಾಧ್ಯ.

ಫಲ ಒಳಗಡೆ ಪಕ್ವವಾಗಿಯಲ್ಲದೆ,
ಹೊರಗಣ ಸಿಪ್ಪೆ ಒಪ್ಪಗೆಡದು
ಕಾಮನ ಮುದ್ರೆಯ ಕಂಡು ನಿಮಗೆ
ನೋವದೀತೆಂದು
ಆ ಭಾವದಿಂದ ಮುಚ್ಚಿದೆ.
ಇದಕ್ಕೆ ನೋವೇಕೆ?
ಕಾಡದಿರಣ್ಣಾ?
ಚನ್ನಮಲ್ಲಿಕಾರ್ಜುನ ದೇವರ
ದೇವನ ಒಳಗಾದವಳ.

ಅಲ್ಲಮ ಪ್ರಭುಗಳು ಎಲ್ಲ ಶರಣರಿಗೆ ಅಕ್ಕ ಮಹಾದೇವಿಯ ಸಾಮರ್ಥ್ಯ ತಿಳಿಯಲಿ ಎಂದು ಪರೀಕ್ಷಿಸದ ಈ ಸಂವಾದ ಇಂದಿಗೂ ಪುರುಷ ಲೋಕಕ್ಕೆ ಹೆಚ್ಚರಿಕೆಯ ಮಾತುಗಳಾಗಿವೆ. ಹೀಗೆ ಎಲ್ಲ ವಚನಕಾರ್ತಿಯರಿಗೆ ಮಿಗಿಲಾದವರು ಅಕ್ಕಮಹಾ ದೇವಿಯವರು. ಇವರ ವಿಚಾರ, ಮಹಿಳೆಯಾಗಿ ಪುರಷ ವ್ಯವಸ್ಥೆಗೆ ಉತ್ತರಿಸುವ ಪರಿ ಇಂದಿನ ಸಮಾಜಕ್ಕೆ ಕಿವಿಹಿಂಡಿ ಹೇಳಿದಂತಿದೆ.ಅಕ್ಕನ ಬದುಕು ಮತ್ತು ಮಲ್ಲಿಕಾರ್ಜುನನ ಬಗೆಗಿನ ಭಕ್ತಿ ಶರಣರಲ್ಲಿಯೇ ವಿಶೇಷವಾದುದು.ಅನುಭವ ಮಂಟಪದಲ್ಲಿ ಅಷ್ಟೂ ಜನ ಪುರಷರ ಸಭೆಯಲ್ಲಿ ಒಂಟಿಯಾಗಿ ನಿಂತು ಮಹ ಜ್ಞಾನಿಗಳದ ಅಲ್ಲಮ ಮತ್ತು ಬಸವಣ್ಣನವರ ಪ್ರಶ್ನೆಗಳಿಗೆ ಉತ್ತರಿಸಿದ ಪರಿ ಇಂದಿನ ಮಹಿಳ ಲೋಕಕ್ಕೆ ಆತ್ಮವಿಶ್ವಾಸ ತುಂಬುವ ಸಂವಾದವಾಗಿ ನಿಲ್ಲುತ್ತದೆ.ಎಲ್ಲ ವಚನಕಾರ್ತಿಯರ ಬದುಕು, ಸಾಧನೆ, ಕಾಯಕ ಪ್ರಜ್ಞೆ ನಮ್ಮೆಲ್ಲರಿಗೆ ಸಾರ್ವಕಾಲಿಕ ದಾರಿ ದೀಪ.

ಡಾ|| ಯು ಶ್ರೀನಿವಾಸ ಮೂರ್ತಿ
ಉಪನ್ಯಾಸಕರು
ಬಾಲಕಿಯರ ಪ.ಪೂ.ಕಾಲೇಜ್ ಬಳ್ಳಾರಿ.ಫೋ:9731063950

Share This Article
error: Content is protected !!
";