Ad image

ದೇವರದಾಸಿಮಯ್ಯನವರು ತತ್ವಗಳು ಯುವಪೀಳಿಗೆಗೆ ಆದರ್ಶವಾಗಬೇಕು: ಡಾ.ರೋಹಿಣಿ

Vijayanagara Vani
ದೇವರದಾಸಿಮಯ್ಯನವರು ತತ್ವಗಳು ಯುವಪೀಳಿಗೆಗೆ ಆದರ್ಶವಾಗಬೇಕು: ಡಾ.ರೋಹಿಣಿ
ದೇವರ ದಾಸಿಮಯ್ಯ ಅವರ ತತ್ವಗಳು ಹಾಗೂ ಸಂದೇಶಗಳು ಇಂದಿನ ಯುವ ಪೀಳಿಗೆ ಆದರ್ಶವಾಗಗಬೇಕು ಎಂದು ಜಿಲ್ಲಾಧಿಕಾರಿಗಳ ಕಚೇರಿ ಸಹಾಯರಾದ ಡಾ. ರೋಹಿಣಿ ಅವರು ಹೇಳಿದರು.
ಇಂದು (ಎ.2) ರಂದು ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಜಿಲ್ಲಾಡಳಿತ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ವತಿಯಿಂದ ಆಯೋಜಿಸಲಾಗಿದ್ದ ದೇವರ ದಾಸಿಮಯ್ಯ ಜಯಂತಿಯನ್ನು ಅವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡುವ ಮೂಲಕ ಉದ್ಘಾಟಿಸಿ ಮಾತನಾಡಿದರು, ಸಮಾಜ ಸುಧಾರಣೆಯಲ್ಲಿ ದೇವರ ದಾಸಿಮಯ್ಯನವರ ಪಾತ್ರ ಅಪಾರ ಎಂದು ಹೇಳಿದರು.
ವಿಶೇಷ ಉಪನ್ಯಾಸಕರಾಗಿ ಡಾ. ಕೆ. ಎಸ್. ಅನಿತಾ ಅವರು ಮಾತನಾಡಿ ಕಾಯಕದಲ್ಲೇ ದೇವರನ್ನು ಕಂಡವರು ವಚನಕಾರರು, ಬಸವಣ್ಣನವರಿಗಿಂತ ಮುಂಚೆಯೇ ಕಾಯಕದಲ್ಲಿ ದೇವರನ್ನು ಕಂಡವರು ದೇವರ ದಾಸಿಮಯ್ಯನವರು, ಒಮ್ಮೆ ಶಿವ ಜೇಡರ ದಾಸಿಮಯ್ಯನವರ ಕಾಯಕಕ್ಕೆ ಒಲಿದು ಅಕ್ಷಯ ಪಾತ್ರೆಯನ್ನು ಜೇಡರ ದಾಸಿಮಯ್ಯನವರಿಗೆ ನೀಡುತ್ತಾನೆ, ಲೋಕ ಕಲ್ಯಾಣಕ್ಕಾಗಿ ಸಮಾಜದ ಅಭಿವೃದ್ಧಿಗಾಗಿ ಅ ಅಕ್ಷಯ ಪಾತ್ರೆಯನ್ನು ಜೇಡರ ದಾಸಿಮಯ್ಯ ಬಳಸುತ್ತಾರೆ ಅದರಿಂದಲೇ ಅವರಿಗೆ ದೇವರ ದಾಸಿಮಯ್ಯ ಎಂಬ ಹೆಸರು ಬಂದಿತು ಎಂದು ಹೇಳಿದರು.
ತಮಗೆ ಸಿಕ್ಕ ಅವಕಾಶವನ್ನು ಯಾರು ಸಮಾಜದ ಅಭಿವೃದ್ಧಿಗಾಗಿ ಶ್ರಮವಹಿಸುತ್ತರೋ ಅವರು ಎಂದಿಗೂ ಸಮಾಜದ ನೆನಪಿನಲ್ಲಿ ಉಳಿಯುತ್ತಾರೆ, ಅದಕ್ಕೆ ನಿದರ್ಶನ ಜೇಡರ ದಾಸಿಮಯ್ಯ, ಬಂಡವಾಳಶಾಹಿಗಳ ವಿರುದ್ಧ ಸಾಮಾಜಿಕ ಅನಿಷ್ಟ ಪದ್ಧತಿಗಳ ವಿರುದ್ಧ ತಮ್ಮ ವಚನಗಳ ಮೂಲಕ ಧ್ವನಿ ಎತ್ತಿದವರು ದೇವರ ದಾಸಿಮಯ್ಯನವರು ಎಂದರು.
ಭಾರತೀಯ ಸಂವಿಧಾನದ ಆಶಯಗಳಿಗೆ ಪೂರಕವಾದ ತತ್ವಗಳನ್ನು ದೇವರ ದಾಸಿಮಯ್ಯ ಹೊಂದಿದ್ದರು, ಮಹಿಳೆಯರಿಗೆ ಸಮಾನ ಗೌರವ ಅವಕಾಶ ನೀಡಬೇಕು ಹಾಗೂ ಲಿಂಗತ್ವ ಅಸಮಾನತೆಯ ವಿರುದ್ಧ ಕಿಡಿ ಕಾರಿದ್ದರು ದೇವರ ದಾಸಿಮಯ್ಯನವರು ಎಂದರು.
ಡಿ. ದೇವರಾಜ್ ಅರಸ್ ಹಿಂದುಳಿದ ವರ್ಗಗಳ ವೇದಿಕೆಯ ಅಧ್ಯಕ್ಷರಾದ ಎಲ್. ಸಂದೇಶ್ ಮಾತನಾಡಿ ವೈಯಕ್ತಿಕ ಅಭಿವೃದ್ಧಿಗಾಗಿ ಶ್ರಮಿಸುವವರು ಕೇವಲ ಅವರ ಮನೆಗಳಲ್ಲೆ ಉಳಿದುಕೊಳ್ಳುತ್ತಾರೆ, ಸಮಾಜ ಏಳಿಗೆಗಾಗಿ ಶ್ರಮಿಸುವವರು ಸಮಾಜದಲ್ಲಿ ಮಾದರಿ ವ್ಯಕ್ತಿಗಳಾಗಿ ಜನಮಾನಸದಲ್ಲಿ ಅಚ್ಚಳಿಯದ ನೆನಪಾಗಿ ಉಳಿಯುತ್ತಾರೆ, ಶರಣರು,ಸಂತರು, ಮಹಾನೀಯರ ಎಲ್ಲರೂ ಸಹ ಸಮಾಜದ ಏಳಿಗೆಗಾಗಿ ಶ್ರಮಿಸಿದವರು ಎಂದು ಹೇಳಿದರು.
ಸಭೆಯಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ಡಾ. ಬಿ. ವಿ. ನಂದೀಶ್, ಕನ್ನಡ ಸಾಹಿತ್ಯ ಪರಿಷತ್ ಮಾಜಿ ಅಧ್ಯಕ್ಷರಾದ ಎಂ. ವಿ ಧರಣಯ್ಯ , ಮುಖಂಡರಾದ ಎನ್. ಡಿ ಹರಿಪ್ರಸಾದ್ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು

Share This Article
error: Content is protected !!
";