ಬೆಂಗಳೂರು: ಜ.05: ಅನಿಲ್ ಗುನ್ನಾಪೂರ ಅವರು ಬರೆದ ‘ಸರ್ವೇ ನಂಬರ್-97’ ಎಂಬ ಕಥಾಸಂಕಲನವನ್ನು ಹೊoಗಿರಣ ಪ್ರಕಾಶನ, ಬುಕ್ ಬ್ರಹ್ಮ ಹಾಗೂ ನ್ಯಾಯ ಸ್ಪಂದನ ಬೆಂಗಳೂರು, ಓದು ಗೆಳೆಯರ ಬಳಗ, ಬಾಗಲಕೋಟೆ ಇವರ ಸಹಯೋಗದಲ್ಲಿ ಭಾನುವಾರ ಬೆಳಗ್ಗೆ 10.30ಕ್ಕೆ ಕನ್ನಡ ಸಾಹಿತ್ಯ ಪರಿಷತ್ ನ ಶ್ರೀಕೃಷ್ಣರಾಜ ಪರಿಷತ್ತು ಮಂದಿರದಲ್ಲಿ ಪುಸ್ತಕ ಬಿಡುಗಡೆ ಸಮಾರಂಭ ನಡೆಯಿತು.
‘ಸರ್ವೆ ನಂಬರ್-97’ ಕಥಾಸoಕಲನವನ್ನು ಹಿರಿಯ ಕವಿ ಹಾಗೂ ಚಿಂತಕ ಡಾ. ಮೂಡ್ನಾಕೂಡು ಚಿನ್ನಸ್ವಾಮಿ, ರಘುನಾಥ ಚ.ಹ ಹಾಗೂ ಬಿಬಿಎಂಪಿ ವಲಯ ಆಯುಕ್ತರು ಮತ್ತು ಯಲಹಂಕ ವಲಯದ ಕರೀಗೌಡ (ಐಎಎಸ್), ಕವಯಿತ್ರಿ ಜ.ನಾ.ವೇಜಶ್ರೀ ಮತ್ತಿತರರು ಗಣ್ಯರು ಬಿಡುಗಡೆಗೊಳಿಸಿದರು.
ಡಾ. ಮೂಡ್ನಾಕೂಡು ಚಿನ್ನಸ್ವಾಮಿ ಮಾತನಾಡಿದ ಅವರು ನಮ್ಮ ಭೂಮಾಪನ ಇಲಾಖೆಯ ಇತಿಹಾಸವು ಕನ್ನಡ ಸಾಹಿತ್ಯದಲ್ಲಿ ಹೆಚ್ಚೆಚ್ಚು ಬರಲೆಂದು ಆಶಿಸುತ್ತ, ಅನಿಲ ಅವರು ಬರೆದ ಕತೆಗಳು ಹಲವು ವಿಶ್ವವಿದ್ಯಾಲಯಗಳಿಗೆ ಪಠ್ಯವಾಗಿವೆ ಹಾಗೂ ಪ್ರತಿಷ್ಠಿತ ಬಹುಮಾನವನ್ನು ಪಡೆದಿರುವ ಅನಿಲ ಗುನ್ನಾಪೂರ ಅವರಂತಹ ಲೇಖಕರನ್ನು ಮತ್ತು ಸಾಹಿತ್ಯಾಸಕ್ತರನ್ನು ಪ್ರೋತ್ಸಾಹಿಸುವುದು ನಮ್ಮೆಲ್ಲರ ಜವಾಬ್ದಾರಿ ಎಂದರು.
ಇದೇ ಸಂದರ್ಭದಲ್ಲಿ ರಘುನಾಥ ಚ.ಹ ಅವರು ಅಧ್ಯಕ್ಷತೆ ವಹಿಸಿ ಮಾತನಾಡಿ ಇಂಡಿ ತಾಲೂಕಿನ ಲೇಖಕರು, ಪ್ರಸ್ತುತ ಬಾಗಲಕೋಟೆಯಲ್ಲಿ ಭೂಮಾಪಕರಾಗಿ ಸೇವೆ ಸಲ್ಲಿಸುತ್ತಿರುವ ಅನಿಲ್ ಗುನ್ನಾಪೂರ ಅವರ ಎರಡನೇ ಪುಸ್ತಕದಲ್ಲಿ ತಮ್ಮ ಅನುಭವಕ್ಕೆ ನಿಲುಕಿದ ಜೊತೆಯ ಜೀವಗಳ ಜೀವನವನ್ನು ಬೇರೆ ಜೀವಗಳಿಗೆ ಮುಟ್ಟಿಸುವಲ್ಲಿ ಯಶಸ್ವಿಯಾಗಿರುವುದು ಇದೊಂದು ವಿಶಿಷ್ಟವಾದದ್ದು, ಹಾಗೆ ಇನ್ನುಳಿದ ಕಥೆಗಳಲ್ಲೂ ಮನುಷ್ಯನ ಬದುಕಿನ ಸಂಕಟಗಳಿಗೆ ಕನ್ನಡಿ ಹಿಡಿದಿರುವರು ವಿಶೇಷವಾಗಿದೆ ಎಂದರು.
ಇದೇ ಕಾರ್ಯಕ್ರಮದಲ್ಲಿ ಶೋಭಾ ಗುನ್ನಾಪುರ, ಹೈಕೋರ್ಟ್ ನ್ಯಾಯವಾದಿ ಸುನಿಲ್ ಗುನ್ನಾಪುರ, ವಿಶ್ವವಿದ್ಯಾಲಯದ ಪ್ರಾಧ್ಯಾಪಕರು, ಸಾಹಿತ್ಯ ಆಸಕ್ತರು, ಮತ್ತಿತರು ಭಾಗವಹಿಸಿದ್ದರು.
ಫೋಟೋ ಕ್ಯಾಪ್ಶನ್: ಕನ್ನಡ ಸಾಹಿತ್ಯ ಪರಿಷತ್ ನ ಶ್ರೀಕೃಷ್ಣರಾಜ ಪರಿಷತ್ತು ಮಂದಿರದಲ್ಲಿ ಅನಿಲ್ ಗುನ್ನಾಪೂರ ಅವರ ‘ಸರ್ವೇ ನಂಬರ್-97’ ಪುಸ್ತಕವನ್ನು ಚಿಂತಕ ಡಾ. ಮೂಡ್ನಾಕೂಡು ಚಿನ್ನಸ್ವಾಮಿ, ರಘುನಾಥ ಚ.ಹ ಹಾಗೂ ಬಿಬಿಎಂಪಿ ವಲಯ ಆಯುಕ್ತ ಕರೀಗೌಡ (ಐಎಎಸ್), ಕವಯಿತ್ರಿ ಜ.ನಾ.ತೇಜಶ್ರೀ, ಲೇಖಕ ಅನಿಲ್ ಗುನ್ನಾಪುರ, ಗಣ್ಯರು ಬಿಡುಗಡೆಗೊಳಿಸಿದರು.