ನವ ವೃಂದಾವನಕ್ಕೆ ಮೂರನೇ ವರ್ಷದ ಪಾದಯಾತ್ರೆ ಯಶಸ್ವಿ.

Vijayanagara Vani
ನವ ವೃಂದಾವನಕ್ಕೆ ಮೂರನೇ ವರ್ಷದ ಪಾದಯಾತ್ರೆ ಯಶಸ್ವಿ.
ಗಂಗಾವತಿ ನಗರದ ಹಿರೇಜಂತಕಲ್ ವಿರುಪಾಪುರ ಆರ್ಯವೈಶ್ಯ ಸಮಾಜ ಬಾಂಧವರಿಂದ ಪ್ರತಿ ವರ್ಷದಂತೆ ಈ ವರ್ಷದ ಮೂರನೇ  ಪಾದಯಾತ್ರೆಯನ್ನು  ಸಂಪೂರ್ಣವಾಗಿ ಯಶಸ್ವಿಯಾಗಿ ಜರಗಿತು. ಇದಕ್ಕೆ ಮಂತ್ರಾಲಯದ ಶ್ರೀ ಗುರು ಸಾರ್ವಭೌಮ ರಾಘವೇಂದ್ರ ಸ್ವಾಮಿಗಳವರ ಪ್ರೇರಣೆ ಹಾಗೂ ತಾಯಿ ಶ್ರೀ ಕನ್ನಿಕಾ ಪರಮೇಶ್ವರಿ ಅಮ್ಮನವರ ಅನುಗ್ರಹ ಕಾರಣವಾಗಿದೆ ಎಂದು ಆರ್ಯವೈಶ್ಯ ಸಮಾಜದ ಅಧ್ಯಕ್ಷ ಹಾಗೂ ಪಾದಯಾತ್ರೆಯ ಆಯೋಜಕ ದರೋಜಿ ನಾಗರಾಜ ಶ್ರೇಷ್ಟಿ  ಹೇಳಿದರು. ಅವರು ಗುರುವಾರ ಮೂರನೆಯ ವರ್ಷದ ಪಾದಯಾತ್ರೆಯನ್ನು ಆನೆಗುಂದಿಯ ತುಂಗಭದ್ರ ತಟದಲ್ಲಿರುವ ನವ ವೃಂದಾವನ ಕ್ಷೇತ್ರಕ್ಕೆ ತೆರಳಿ ವಿಶೇಷ ಪೂಜೆ ನಡೆಸಿ ಬಳಿಕ ಮಾತನಾಡಿದರು. ನವ ವೃಂದಾವನ ಕ್ಷೇತ್ರ ಒಂಬತ್ತು ಯತಿವರ್ಯರ ಪುಣ್ಯ ಹಾಗೂ ಶಕ್ತಿ ಕ್ಷೇತ್ರ ವಾಗಿದ್ದು ದೇಶ ವಿದೇಶದಿಂದ ಭಕ್ತಾದಿಗಳನ್ನು ಸೆಳೆಯುವ ಪವಿತ್ರ ತಾಣವಾಗಿದೆ ಎಂದು ತಿಳಿಸಿದರು. ಪಾದಯಾತ್ರೆಗೆ ಸಂಬಂಧಿಸಿದಂತೆ 150 ಕ್ಕೂ ಹೆಚ್ಚು ಸಮಾಜ ಬಾಂಧವರು ಮಹಿಳಾ ಮಂಡಳಿಯ ಸದಸ್ಯರು ಹಾಗೂ ಯುವಕ ಸಂಘದವರು ತುಂಬು ಹೃದಯದ ಸಹಕಾರವನ್ನು ನೀಡುತ್ತಾ ಬರಲಾಗಿದ್ದು ಧಾರ್ಮಿಕತೆ ಮನೋಭಾವನೆ ಜೊತೆ ಉತ್ತಮ ಸಂಸ್ಕಾರ ಬೆಳೆಸುವಲ್ಲಿ ಸಹಕಾರಿಯಾಗಿದೆ ಎಂದು ಹೇಳಿದರು. ಇದಕ್ಕೂ ಮುಂಚೆ ನವ ವೃಂದಾವನ ಯತಿವರ್ಯರಿಗೆ  ನರಸಿಂಹ ಆಚಾರ್. ವಿಜಯೇಂದ್ರ ಆಚಾರ್. ಆನಂದ ಆಚಾರ್. ಇವರ ನೇತೃತ್ವದಲ್ಲಿ ನವ ವೃಂದಾವನ ಒಂಬತ್ತು ಯತಿವರ್ಯರಿಗೆ   ಮಹಾಪಂಚಾಮೃತ ಅಭಿಷೇಕ್ ನೆರವೇರಿಸಲಾಯಿತು.ಅಷ್ಟೋತ್ತರ ಪಾರಾಯಣ ಭಜನೆ ಸ್ಥಳದ ಮಹಿಮೆಯ ಕುರಿತು ಅರ್ಚಕರಿಂದ ಉಪನ್ಯಾಸ ಹಾಗೂ ಗುರು ಭೀಮ್ ಭಟ್ಜ ಜೋಶಿ ಅವರ ನೇತೃತ್ವದಲ್ಲಿ ವಿಶೇಷ ಪೂಜಾ ಕಾರ್ಯಕ್ರಮಗಳನ್ನು ನಡೆಸಲಾಯಿತು. ಬಳಿಕ ಮಹಾಮಂಗಳಾರತಿ ತೀರ್ಥ ಪ್ರಸಾದ ನಡೆಸಲಾಯಿತು ಈ ಸಂದರ್ಭದಲ್ಲಿ ಸಮಾಜದ ಅಧ್ಯಕ್ಷರಾದ ದರೋಜಿ ನಾಗರಾಜ ಶ್ರೇಷ್ಟಿ. ಎನ್ ಗಂಗಾಧರ. ಜಿ ಆರ್ ಎಸ್ ಸತ್ಯನಾರಾಯಣ. ಹಣವಾಳ ಚಂದ್ರಶೇಖರ. ಲಿಂಗಪ್ಪ ಜನಾದ್ರಿ .ಆನೆಗೊಂದಿ ಗೋಪಾಲ ಶ್ರೇಷ್ಟಿ. ದಮ್ಮೂರು  ಸುರೇಶ. ದಮ್ಮೂರ  ರಾಜಕುಮಾರ.  ದರೋಜಿ ವೆಂಕಟೇಶ.  ದರೋಜಿ ಮಲ್ಲಿಕಾರ್ಜುನ. ಈಶ್ವರ ಶ್ರೇಷ್ಟಿ.    ಹೊಸಳ್ಳಿ ಬಸವರಾಜ. ರಾಘವೇಂದ್ರ ಬನ್ನಿಗೋಳ .ಬದ್ರಿ ಆನೆಗುಂದಿ. ಸೌದ್ರಿ ನಾಗರಾಜ. ಜಗದೀಶ ಶ್ರೇಷ್ಟಿ.ಸೇರಿದಂತೆ ನವ ವೃಂದಾವನ ಭಜನಾ ಮಂಡಳಿಯ ಅಧ್ಯಕ್ಷರಾದ ದರೋಜಿ ನರಸಿಂಹ ಶ್ರೇಷ್ಟಿ.ಮತ್ತು ಭಜನಾ ಮಂಡಳಿಯ ಸದಸ್ಯರು ಹಾಗೂ ಮಹಿಳಾ ಮಂಡಳಿಯ ಅಧ್ಯಕ್ಷರಾದ ಶ್ರೀಮತಿ  ದಮ್ಮೂರು ರುಕ್ಮಿಣಿ ಮತ್ತು ವಾಸವಿ ಮಹಿಳಾ ಭಜನಾ ಮಂಡಳಿ ಅಧ್ಯಕ್ಷರಾದ ಶ್ರೀಮತಿ ಮಂಜುಳ ದಮ್ಮೂರು ಮಹಿಳಾ ಭಜನಾ ಮಂಡಳಿಯ ಸದಸ್ಯರು ಮತ್ತು ಗಂಗಾವತಿ ತಾಲ್ಲೂಕಿನ ಸುತ್ತಾಮುತ್ತಲ್ಲಿನ ಸಮಾಜ ಭಾಂದವರು ಭಾಗವಹಿಸಿದ್ದರು.
WhatsApp Group Join Now
Telegram Group Join Now
Share This Article
error: Content is protected !!