ರಾಜ್ಯದ ವೀರಶೈವ ಲಿಂಗಾಯತ ಸಮಾಜ ಎಲ್ಲಾ ಉಪಪಂಗಡಗಳ ಒಟ್ಟಿಗೆ ಬಣಜಿಗ ಸಮುದಾಯ ನೇತೃತ್ವವಹಿಸಿ ವಿಶ್ವದಲ್ಲಿ ಏಕೈಕ ಲಿಂಗಾಯತ ಸಮುದಾಯದ ಶಕ್ತಿ ಆಗಬೇಕಾಗಿದೆ : ಮಾಜಿ ಮುಖ್ಯಮಂತ್ರಿ ಹಾಗೂ ಸಂಸದ ಜಗದೀಶ್ ಶೆಟ್ಟರ್

Vijayanagara Vani
ರಾಜ್ಯದ ವೀರಶೈವ ಲಿಂಗಾಯತ ಸಮಾಜ ಎಲ್ಲಾ ಉಪಪಂಗಡಗಳ ಒಟ್ಟಿಗೆ ಬಣಜಿಗ ಸಮುದಾಯ ನೇತೃತ್ವವಹಿಸಿ ವಿಶ್ವದಲ್ಲಿ ಏಕೈಕ ಲಿಂಗಾಯತ ಸಮುದಾಯದ ಶಕ್ತಿ ಆಗಬೇಕಾಗಿದೆ : ಮಾಜಿ ಮುಖ್ಯಮಂತ್ರಿ ಹಾಗೂ ಸಂಸದ ಜಗದೀಶ್ ಶೆಟ್ಟರ್
ಕಾರಟಗಿ : ತಾಲೂಕು ಬಣಜಿಗ ಸಮಾಜ ಕ್ಷೇಮಾಭಿವೃದ್ಧಿ ಸಂಘದಿಂದ ನೂತನ ಪದಾಧಿಕಾರಿಗಳ ಪದಗ್ರಹಣ ಹಾಗೂ ಎಸ್ ಎಸ್ ಎಲ್ ಸಿ ಹಾಗೂ ಪಿಯುಸಿ ಪರೀಕ್ಷಾ ಪಲಿತಾಂಶದಲ್ಲಿ 85% ಮತ್ತು ಸಿಬಿಎಸ್ಇ ಸಿಲೆಬಸ್ ನಲ್ಲಿ 80% ಅಂಕಪಡಿದ ಬಣಜಿಗ ಕ್ಷೇಮಾಭಿವೃದ್ಧಿ ಸಂಘದ ಪ್ರತಿಭಾವಂತ ವಿದ್ಯಾರ್ಥಿಗಳಿಗೆ    ಪ್ರತಿಭಾ ಪುರಸ್ಕಾರ ಕಾರ್ಯಕ್ರಮವನ್ನು ಪಟ್ಟಣದ ಕನ್ವೆನ್ಷನ್ ಹಾಲ್ ನಲ್ಲಿ  ಭಾನುವಾರ ಆಯೋಜಿಸಲಾಗಿತ್ತು. 
ಈ ಕಾರ್ಯಕ್ರಮದ ಉದ್ಘಾಟನೆಯನ್ನು ಮಾಜಿ ಮುಖ್ಯಮಂತ್ರಿ ಹಾಗೂ ಬೆಳಗಾವಿಯ ಹಾಲಿ ಸಂಸದ ಜಗದೀಶ್ ಶೆಟ್ಟರ್  ಉದ್ಘಾಟಿಸಿ ಮಾತನಾಡಿದ ಅವರು ಈ ಕಾರ್ಯಕ್ರಮವು ಅತ್ಯಂತ ಶಿಸ್ತು ಮತ್ತು ಕ್ರಮಬದ್ಧವಾಗಿ ಜರುಗಿದೆ. ಇಂತಹ ಕಾರ್ಯಕ್ರಮಗಳನ್ನು ಅಫ್ಜಲ್ಪುರ, ಇಲ್ಕಲ್, ಬಾಗಲಕೋಟೆ, ಜಮಖಂಡಿ,ಬೀಳಗಿ, ಎಲ್ಲಾ ಕಡೆ ದೊಡ್ಡ ಪ್ರಮಾಣದಲ್ಲಿ ಹಮ್ಮಿಕೊಂಡಿದ್ದಾರೆ.  ಇಡೀ ವೀರಶೈವ ಲಿಂಗಾಯತ ಸಮುದಾಯ ಒಗ್ಗಟ್ಟಾಗಿರಬೇಕೆನ್ನುವ ಮೂಲ ಉದ್ದೇಶವಾಗಿದೆ, ಈ ಉಪಪಂಗಡಗಳು ತಮ್ಮ ಸಮಾಜವನ್ನು  ಬಲಪಡಿಸುತ್ತವೆ. ಮತ್ತು ಸಮಾಜದಲ್ಲಿ ಜಾಗೃತಿ ಮೂಡಿಸುವಂಥದ್ದು, ಆರ್ಥಿಕವಾಗಿ ಹಿಂದುಳಿದ ದುರ್ಬಲ    ವ್ಯಕ್ತಿಗಳನ್ನು ಇನ್ನು ಹೆಚ್ಚಿನ ನೆರವು ತರಲಿಕ್ಕೆ  ಆರ್ಥಿಕವಾಗಿ ಮೇಲೆ ತರುವಂತದ್ದು, ಪ್ರತಿಭಾವಂತರಿಗೆ ಹೆಚ್ಚಿನ ರೀತಿಯಲ್ಲಿ ಪ್ರೋತ್ಸಾಹ ನೀಡುವಂತದ್ದು ಈ ನಮ್ಮ ಸಮುದಾಯವಾಗಿದೆ,ಈ ಬಣಜಿಗ ಸಮುದಾಯದ ಬಾಂಧವರು ವೀರಶೈವ ಲಿಂಗಾಯತ ಧರ್ಮದ ಅತ್ಯಂತ ನಿಷ್ಠೆಯ, ಪ್ರಾಮಾಣಿಕ ಅನುಯಾಯಿಗಳಾಗಿದ್ದು, ಎಲ್ಲಾ ಉಪಪಂಗಡಗಳ ಸಂಘಟನೆಯೊಂದಿಗೆ ನಮ್ಮ ಬಣಜಿಗ ಸಮುದಾಯ ಒಡಗೂಡಿ  ನಮ್ಮ ಏಕೈಕ ಕೊನೆಯ ಗುರಿ ಇಡೀ ವಿಶ್ವ ಲಿಂಗಾಯತ ಸಮುದಾಯ ಒಂದು ಶಕ್ತಿ ಆಗಬೇಕಿದೆ. ನಮ್ಮೆಲ್ಲರಿಗೆ ಪ್ರೇರಣೆ ಶಕ್ತಿ 12 ನೇ ಶತಮಾನದ ಬಸವಣ್ಣನವರಾಗಿದ್ದಾರೆ. ಸಮಾನತೆಯ ಹಕ್ಕನ್ನು ಸಾರಿದವರು. ಮೇಲ್ಬರ್ಗ ಕೀಳುವರ್ಗ ಎನ್ನುವ ತಾರತಮ್ಯವನ್ನು ಹೋಗಲಾಡಿಸಿದವರು. ಮತ್ತು ಅವರ ತತ್ವ ಸಿದ್ಧಾಂತಗಳು ಇಂದಿಗೂ ಜಾರಿಯಲ್ಲಿದೆ.  ನಾಡಿನಾಧ್ಯಂತ ಹರಡಿಕೊಂಡಿರುವ ವೀರಶೈವ ಲಿಂಗಾಯತ ಸಮುದಾಯದ ಜನತೆ, ಮಠ, ಧಾರ್ಮಿಕ ಕೇಂದ್ರಗಳ ಅಭಿವೃದ್ಧಿ, ಬೆಳವಣಿಗೆಯಲ್ಲಿ ಬಹುದೊಡ್ಡ ಕೊಡುಗೆಯನ್ನು ನೀಡಿದೆ. ಆದರೆ ಇತ್ತೀಚಿನ ದಿನಗಳಲ್ಲಿ ಬೇರೆ ಬೇರೆ  ಎಲ್ಲಾ ಉಪ ಪಂಗಡಗಳನ್ನು ಒಂದೇ ವೇದಿಕೆಯಲ್ಲಿ ಒಂದೆಡೆಗೂಡಿಸಬೇಕಿದೆ ,ಅದರ   ಬಣಜಿಗ ಸಮಾಜ ಹೊತ್ತುಕೊಳ್ಳಬೇಕಾಗಿದೆ. ಬಣಜಿಗ ಸಮಾಜ ಎಲ್ಲಾ ಒಳಪಂಗಡಗಳನ್ನು ಸಮನ್ವಯತೆಯಿಂದ, ಬಂಧುತ್ವ ಭಾವನೆಯಿಂದ ನೋಡಿಕೊಂಡು ಹೋಗಬೇಕು. ಇನ್ನು ಸಮಾಜದ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನೀಡುವುದು ಮಕ್ಕಳಿಗೆ ಮುಂದಿನ ಶಿಕ್ಷಣಕ್ಕೆ ನೆರವು  ನೀಡಿದಂತಾಗುತ್ತದೆ ಎಂದರು.
ನಂತರ ಮಾಜಿ ಶಾಸಕರಾದ ಪರಣ್ಣ ಮುನವಳ್ಳಿ, ಬಸವರಾಜ ದಢೇಸೂಗೂರು ಮಾತನಾಡಿದರು.
ಬಳಿಕ ಬಣಜಿಗ ಸಮಾಜದ ಇತಿಹಾಸ ಮತ್ತು ಪರಂಪರೆಯ ಬಗ್ಗೆ ಪ್ರಾದ್ಯಾಪಕ ಅಶೋಕ ಹಂಚಳಿ ವಿಶೇಷ ಉಪನ್ಯಾಸ ನೀಡಿದರು.
ಬಳಿಕ ತಾಲೂಕಾ ಬಣಜಿಗ ಕ್ಷೇಮಾಭಿವೃದ್ಧಿ ಸಂಘಕ್ಕೆ ನೂತನವಾಗಿ ಆಯ್ಕೆಯಾದ ಪದಾಧಿಕಾರಿಗಳಿಗೆ ಪದಗ್ರಹಣ ಭೋಧಿಸಲಾಯಿತು.
ಇದೇ ಸಂದರ್ಭದಲ್ಲಿ ಕಳೆದ ಸಾಲಿನಲ್ಲಿ ನಡೆದ ಎಸ್ಎಸ್ಎಲ್ಸಿ ಮತ್ತು ದ್ವಿತೀಯ ಪಿಯು ಪರೀಕ್ಷೆಯಲ್ಲಿ ಶೇ. 85 ರಷ್ಟು ಅಧಿಕ ಅಂಕಪಡೆದ ವಿದ್ಯಾರ್ಥಿಗಳಿಗೆ  ಪ್ರೋತ್ಸಾಹ ಧನ ಮತ್ತು ಪ್ರಶಂಸಾ ಪ್ರಮಾಣ ಪತ್ರ  ನೀಡಿ ಗೌರವಿಸಲಾಯಿತು .ಮತ್ತು ತಾಲೂಕಿನ ಬಸ್ಸು ನಿಲ್ದಾಣ  ಸೇರಿದಂತೆ  ವಿವಿಧ ಇಲಾಖೆಗಳಿಗೆ  ಭೂದಾನ ಮಾಡಿದ  ಭೂದಾನಿಗಳಿಗೆ, ಸಂಘ, ಸಂಸ್ಥೆ, ಸರಕಾರಿ ಹುದ್ದೆಗಳಿಗೆ ಆಯ್ಕೆಯಾದ ಸಾಧಕರಿಗೆ ಸನ್ಮಾನಿಸಿದರು.
ಈ ವೇಳೆ ಅಧ್ಯಕ್ಷ ಜಗದೀಶಪ್ಪ ಅವರಾದಿ, ಗೌರವಾಧ್ಯಕ್ಷ ಸಣ್ಣ ವೀರೇಶಪ್ಪ ಚಿನಿವಾಲ್,  , ಸೂಗೂರೇಶ್ ಬಪ್ಪೂರು, , ಪ್ರಭು ಉಪನಾಳ, ಚಂದ್ರಶೇಖರ ಸೋಮಲಾಪುರ,ಮೇಘಾ ದಿವಟರ್ ಅಂದಾನಪ್ಪ ಜವಳಿ,ಬೆಳಗಲ್ ಮಲ್ಲಿಕಾರ್ಜುನಗೌಡ ವಿಶ್ವನಾಥ್ ಬಳ್ಳೊಳ್ಳಿ, ವಿಶ್ವನಾಥ್ ಮುರಡಿ, ಸುರೇಶ್ ಶೆಟ್ಟರ್, ವಿಶ್ವನಾಥ್ ಜಮತ್ನಳ್ಳಿ, ಶರಣಪ್ಪ ಭತ್ತದ, ಪಾರ್ವತಿ ಪವಾಡಶೆಟ್ಟರ್,  ಸೇರಿದಂತೆ ಸುತ್ತಮುತ್ತಲಿನ ಗ್ರಾಮಗಳ ಬಣಜಿಗೆ ಸಮುದಾಯದ  ಮಹಿಳೆಯರು, ಯುವಕರು,ಮಕ್ಕಳು. ಹಿರಿಯರು. ಸೇರಿ ಮತ್ತಿ ತರರಿದ್ದರು.
  ಬಾಕ್ಸ್
ಬಣಜಿಗ ಸಮುದಾಯದವರು , ಪ್ರತಿ ತಾಲೂಕ, ಗ್ರಾಮಗಳಲ್ಲಿ ಸಮುದಾಯದವರ ಜನ ಗಣತಿಯನ್ನು ಮಾಡಿ, ಸಮಾಜದಲ್ಲಿ ಆರ್ಥಿಕವಾಗಿ ಮತ್ತು ಸಾಮಾಜಿಕವಾಗಿ ಹಿಂದುಳಿದಿರುವಂತಹ ವ್ಯಕ್ತಿಗಳು ತಾಲೂಕಿನಾದ್ಯಂತ ಇರುವ ಸಮಾಜದ ಕೌಟುಂಬಿಕ ವಿವರಗಳನ್ನು ಸಂಗ್ರಹಿಸಬೇಕು. ಇದರಿಂದ ರಾಜಕೀಯ ಸಾಮಾಜಿಕ ಆರ್ಥಿಕವಾಗಿ  ಪ್ರಾತಿನಿಧ್ಯ ದೊರಕಲು ಸಹಾಯವಾಗುತ್ತದೆ  ಎಂದು ಮಾಜಿ ಮುಖ್ಯಮಂತ್ರಿ ಹಾಗೂ ಬೆಳಗಾವಿ ಸಂಸದ  ಜಗದೀಶ್ ಶೆಟ್ಟರ್ ಸಮಾಜ ಬಾಂಧವರಿಗೆ ತಿಳಿಸಿದರು.
WhatsApp Group Join Now
Telegram Group Join Now
Share This Article
error: Content is protected !!