Ad image

ಜಿಂದಾಲ್ ನಲ್ಲಿ ಕಾರ್ಮಿಕರ ಸಾವಿನ ಲೆಕ್ಕ ಬರೆಯಲು ಚಿತ್ರಗುಪ್ತನೆ ಇಲ್ಲ !

Vijayanagara Vani
ಸಂಡೂರು ತಾಲೂಕಿನ ತೋರಣಗಲ್ಲು ಪಟ್ಟಣದ ಜೆ ಎಸ್ ಡಬ್ಲ್ಯೂ ಸ್ಟೀಲ್  ಕೈಗಾರಿಕೆಯಲ್ಲಿ ಆಗಿರುವ ಅಪಘಾತಗಳು ಹಾಗೂ ಕಾರ್ಮಿಕರ ಬೇಡಿಕೆಗಳ ಕುರಿತು ತಹಶೀಲ್ದಾರ್ ಅವರ ನೇತೃತ್ವದಲ್ಲಿ ಕಾರ್ಮಿಕ ಸಂಘಟನೆಗಳು,  ಜಿಲ್ಲಾ ಕಾರ್ಮಿಕ ಅಧಿಕಾರಿಗಳು ಹಾಗೂ 
ಜೆ ಎಸ್ ಡಬ್ಲ್ಯೂ ಅಧಿಕಾರಿಗಳ ಸಭೆಯನ್ನು ತಹಶೀಲ್ದಾರ ಅವರ ಕಚೇರಿಯಲ್ಲಿ ಸಭೆ ನಡೆಯಿತು.
ಈ ಸಭೆಗೆ ಜೆ ಎಸ್ ಡಬ್ಲ್ಯೂ ಜನರಲ್ ಮ್ಯಾನೇಜರ್ ಶಶಿಕುಮಾರ್, ಸಹಾಯಕ ಜನರಲ್ ಮ್ಯಾನೇಜರ್ ಸ್ವರೂಪ್ ಹಾಗೂ ಪಿ ಆರ್ ಓ ಸುರೇಶ್ ಹಾಜರಿದ್ದರು. ಕಾರ್ಖಾನೆಯ ಜೆ ಎಸ್ ಡಬ್ಲ್ಯೂ  ಮುಖ್ಯಸ್ಥರಾದ ಪಿ ಕೆ ಮುರುಗನ್ ಹಾಗೂ ಮಾನವ ಸಂಪನ್ಮೂಲ ಮುಖ್ಯಸ್ಥ ಹಿರಿಯ ಉಪಾಧ್ಯಕ್ಷ ಸಂಜಯ್ ಹಂಡೂರ ಗೈರು ಹಾಜರಿ ಬಗ್ಗೆ ಸಿಐಟಿಯು ಸಂಘಟನೆ ಮುಖಂಡರು ಆಕ್ಷೇಪ ಎತ್ತಿದರು. ನಂತರ ಸಭೆಯ ತೀರ್ಮಾನಗಳನ್ನು ಆಡಳಿತ ಮಂಡಳಿಗೆ ತಿಳಿಸಿ ಮುಂದಿನ ಸಭೆಯಲ್ಲಿ ಅವರನ್ನು ಹಾಜರಾಗುವಂತೆ  ನೋಡಿಕೊಳ್ಳುವದಾಗಿ ತಿಳಿಸಿದರು. 
ಅಪಘಾತಗಳು ಸಂಬಂಧಪಟ್ಟ ಕೈಗಾರಿಕೆ  ಮಾಲೀಕರ ಹಾಗೂ ಉನ್ನತ ಆಡಳಿತ ವರ್ಗದವರ ಕಡೆಯಿಂದ ಆಗಿರುವ ನಿರ್ಲಕ್ಷ ಹಾಗೂ ಲೋಪವಾಗಿರುವದನ್ನು ದೃಢಪಡಿಸುತ್ತದೆ. ತೋರಣಗಲ್ಲು ಜಿಂದಾಲ್ ಸ್ಟೀಲ್ ಕೈಗಾರಿಕೆಯಲ್ಲಿ ಬಿಸಿ ನೀರು ಹರಿಸುವ ಪೈಪ್ ಲೈನ್ ದುರಸ್ತಿ ಕಾರ್ಯನಿರತ ಯುವ ಇಂಜಿನಿಯರ್ ಗಳಾದ ಹೊಸಪೇಟೆ ತಾಲೂಕಿನ ಭುವನಹಳ್ಳಿ ಗ್ರಾಮದ ಸಹಾಯಕ ಗಂಟೆ ಜಡೆಪ್ಪ (31), ಸಹಾಯಕ ವ್ಯವಸ್ಥಾಪಕ ಚೆನ್ನೈನ ಶಿವ ಮಹದೇವ್ (22), ಬೆಂಗಳೂರಿನ ಸಿವಿಲ್ ಇಂಜಿನಿಯರ್ ಸುಶಾಂತ್ ಕೃಷ್ಣ ನೈನಾರು (23) ಎಂಬ ಯುವ ನೌಕರರು ಮೃತರಾಗಿದ್ದಾರೆ. ಈ ಮೂವರು ನೌಕರರು ಯುವಕರಾಗಿದ್ದು ಕೆಲಸದ ಅನುಭವ ಕೊರತೆಯು ಇದೆ ಇವರನ್ನು ಅಪಾಯಕಾರಿ ಕೆಲಸದಲ್ಲಿ ತೊಡಗಿಸಿರುವುದು ಆಡಳಿತ ಮಂಡಳಿಯ ಕಾನೂನು ಉಲ್ಲಂಘನೆಯು ಕಂಡುಬರುತ್ತದೆ. ಅದ್ದರಿಂದ ಕಂಪನಿಯ ಮುಖ್ಯಸ್ಥರಾದ ಪಿ.ಕೆ.ಮುರುಗನ್ ಹಾಗೂ ಮಾನವ ಸಂಪನ್ಮೂಲದ ಹಿರಿಯ ಉಪಾಧ್ಯಕ್ಷರಾದ ಸಂಜಯ್ ಹಂಡೂರ ರವರನ್ನು ಮುಖ್ಯ ಆರೋಪಿಗಳನ್ನಾಗಿ ಮಾಡಿ ಕೇಸನ್ನು ದಾಖಲಿಸಲು ಒತ್ತಾಯಿಸಲಾಯಿತು.
ಇದಕ್ಕೆ ಪ್ರತಿಕ್ರಿಯೆ ನೀಡಿದ ಕಾರ್ಖಾನೆ ಸುರಕ್ಷತೆ ಸ್ವಾಸ್ಥ್ಯ ಇಲಾಖೆಯ ಸಹಾಯಕ ನಿರ್ದೇಶಕರಾದ ವರುಣ್ ರಾಮ್ ಕಾನೂನು ಪ್ರಕಾರ ಚಾರ್ಜ್ ಶೀಟ್ ಸಲ್ಲಿಸಲು ಮೂರು ತಿಂಗಳು ಕಾಲಾವಕಾಶಗಳಿದ್ದು ಇದಕ್ಕೆ ಸಂಬಂಧಿಸಿದಂತೆ ತನಿಖೆ ನಡೆಸಿ ಕಾನೂನು ಪ್ರಕಾರ ತಪಿತಸ್ಥರ ಹೆಸರನ್ನು ನಮೂದಿಸಿ ಜೆ ಎಂ ಎಫ್ ಸಿ ಬಳ್ಳಾರಿ ಕೋರ್ಟಿಗೆ ನೀಡಲಾಗುವುದಾಗಿ ತಿಳಿಸಿದರು
ಜೆ ಎಸ್ ಡಬ್ಲ್ಯೂ ಅಪಘಾತ ಸಾವುಗಳನ್ನು ಸಮಗ್ರ ವರದಿ. ಕೈಗಾರಿಕೆಗಳಲ್ಲಿ ಅಪಘಾತಗಳಲ್ಲಿ ಅಂಗವಿಕಲರಾದವರು. ಜೀವ ಕಳೆದುಕೊಂಡ ಹಾಗೂ ಕಾರ್ಮಿಕ ಕುಟುಂಬಗಳಿಗೆ ಪರಿಹಾರ ನೀಡಿರುವದು ಬಗ್ಗೆ ಮಾಹಿತಿಯನ್ನು ಜೆ ಎಸ್ ಡಬ್ಲ್ಯೂ ಅಧಿಕಾರಿಗಳಿಗೆ ಕೇಳಿಕೊಳ್ಳಲಾಯಿತು. ಕಾರ್ಮಿಕರ ರಕ್ಷಣೆಯನ್ನು ಸಂಪೂರ್ಣವಾಗಿ
ನಿರ್ಲಕ್ಷಿಸಲಾಗಿದೆ.  ಕೆಲಸದ ಸ್ಥಳದಲ್ಲಿ ಸುರಕ್ಷತೆ ಮತ್ತು ಆರೋಗ್ಯಕ್ಕೆ ಸರಿಯಾದ ಪ್ರಾಮುಖ್ಯತೆಯನ್ನು ನೀಡಲು ಕಾನೂನು ಕ್ರಮಗಳ ಜಾರಿ ಮತ್ತು ಅವುಗಳ ಅನುಷ್ಠಾನ ಕಾರ್ಮಿಕ ಇಲಾಖೆ ಮತ್ತು ಕೈಗಾರಿಕೆ ಸುರಕ್ಷ ಇಲಾಖೆ ಅಧಿಕಾರಿಗಳು ಗಂಭೀರವಾಗಿ ಪರಿಗಣಿಸಲಾಗುವುದೆಂದು ತಿಳಿಸಿದರು.
ಕಾರ್ಮಿಕ ಕಾಯಿದೆಯಡಿಯಲ್ಲಿ
ಪರಿಹಾರ ಸೌಲಭ್ಯ ಕುಟುಂಬಗಳಿಗೆ ನೀಡುವದಾಗಿ ತಿಳಿಸಿದರು.
ಕಾರ್ಖಾನೆಗಳ ಬಾಯ್ಲರ್ ಸುರಕ್ಷತೆ ಮತ್ತು ಸ್ವಾಸ್ಥ್ಯ ಇಲಾಖೆಯು ಕೈಗಾರಿಕಾ ಅಪಘಾತಗಳಿಗೆ ಕಾರಣವಾಗಿರುವ ಕಾರ್ಖಾನೆಯ ಮುಖ್ಯಸ್ಥರನ್ನು ಕಾನೂನು ಬದ್ಧವಾಗಿ ಹೊಣೆಗಾರರನ್ನಾಗಿ ಮಾಡಿ ದೂರು ದಾಖಲಿಸಲಾಗುವದು.
ಭೂ ಕಳೆದುಕೊಂಡ ಸಂತ್ರಸ್ತರಿಗೆ ಉದ್ಯೋಗ ನೀಡುವುದು ಕುರಿತಂತೆ ಉದ್ಯೋಗಗಳನ್ನು ಅಸೋಸಿಯೇಟ್ ಕಂಪನಿಗಳಲ್ಲಿ ನೀಡುತ್ತಿರುವವರನ್ನು ಪ್ರಶ್ನಿಸಲಾಯಿತು. ಎಂ.ಓ.ಯು ಪ್ರಕಾರ ಇದುವರೆಗೆ ಎಷ್ಟು ಜನ ಭೂ ಸಂತ್ರಸ್ತ ಕುಟುಂಬಗಳಿಗೆ ಉದ್ಯೋಗ ನೀಡಲಾಗಿದೆ ಹಾಗೂ ಇನ್ನು ಎಷ್ಟು ಜನಕ್ಕೆ ನೀಡಬೇಕಾಗಿರುವುದನ್ನು ತಿಳಿಸಲು ಸಮಯಾವಕಾಶವನ್ನು ಕೇಳಿದರು.
ಗುತ್ತಿಗೆ ಕಾರ್ಮಿಕರ ಕನಿಷ್ಠ ಸೌಲಭ್ಯಗಳು ಜಾರಿ ಆಗುತ್ತಿಲ್ಲ ವೇತನದಲ್ಲಿ ತಾರತಮ್ಯ ಮಾಡಲಾಗುತ್ತಿದೆ ಗುತ್ತಿಗೆದಾರರು ಭವಿಷ್ಯ ನಿಧಿ ವಂತಿಗೆಯನ್ನು ಸಂದಾಯ ಮಾಡುವಲ್ಲಿ ಕಾರ್ಮಿಕರಿಗೆ ವಂಚಿಸಲಾಗುತ್ತದೆ. ಪ್ರತಿ ತಿಂಗಳು ಅವರ ಕೆಲಸದ ದಿನಗಳಿಗೆ ಅನುಗುಣವಾಗಿ ವಂತಿಗೆ ಸಂದಾಯ ಆಗುತ್ತಿಲ್ಲ ಕೇವಲ 8 -10 ದಿನಗಳ ಕೆಲಸದ ಹಣವನ್ನು ಮಾತ್ರ ಸಂದಾಯ ಮಾಡುತ್ತಿದ್ದಾರೆ ಇದರಿಂದಾಗಿ ಮುಂದಿನ ದಿನಗಳಲ್ಲಿ ಕಾರ್ಮಿಕರ ಭವಿಷ್ಯ ಹಣವನ್ನು ಪಡೆಯಲು ಮತ್ತು ಪಿಂಚಣಿ ಹಣ ಪಡೆಯಲು ಕಾರ್ಮಿಕರು ವಂಚಿತರಾಗಲಿದ್ದಾರೆ. ಮಹಿಳಾ ಕಾರ್ಮಿಕರಿಗೆ ವೇತನ ತಾರತಮ್ಯ  ಅನುಸರಿಸಲಾಗುತ್ತಿದೆ ಗುತ್ತಿಗೆ ಕಾರ್ಮಿಕರಿಗೆ ನೀಡುತ್ತಿರುವ ಇನ್ಸೆಂಟ್ ವನ್ನು ನಿಲ್ಲಿಸಲಾಗಿದೆ. ಕಾರ್ಮಿಕ ಇಲಾಖೆ ಇವುಗಳ ಬಗ್ಗೆ ಪರಿಶೀಲಿಸಲು ತಿಳಿಸಲಾಯಿತು. ಸಂಡೂರು ವಲಯ ಅಪಘಾತಗಳ ಸಂಖ್ಯೆ ಹೆಚ್ಚಾಗಿದ್ದು ಟ್ರಾಮಾ ಶಾಖೆಗಳನ್ನು ತರಬೇತಿ ನೀಡಿದ ಸಂಚಾರಿ ಆಂಬುಲೆನ್ಸ್ ಗಳನ್ನು ಪ್ರಾರಂಭಿಸುವದು. ತೋರಣದಲ್ಲಿನಲ್ಲಿ ಇಂದಿರಾ ಕ್ಯಾಂಟೀನ್ ಸ್ಥಾಪಿಸುವುದು. ಸ್ಥಳೀಯರಿಗೆ ಸಂಜೀವಿನಿ ಆಸ್ಪತ್ರೆಯಲ್ಲಿ ರಿಯಾಯಿತಿ ದರದಲ್ಲಿ ಚಿಕಿತ್ಸೆ ನೀಡಬೇಕೆಂದು ತಿಳಿಸಿದರು
ಈ ಸಭೆಯಲ್ಲಿ ತಹಶೀಲ್ದಾರ್ ಅನಿಲ್ ಕುಮಾರ್, ಜಿಲ್ಲಾ ಕಾರ್ಮಿಕ ಅಧಿಕಾರಿ ಅಲ್ತಾಫ್ ಹಾಗೂ ವರುಣ್ ರಾಮ್ ಸಹಾಯಕ ಕಾರ್ಖಾನೆಗಳ ನಿರ್ದೇಶಕರು ಬಾಯ್ಲರ್ ಹಾಗೂ ಸುರಕ್ಷತೆ ಮತ್ತು
ಸ್ವಾಸ್ಥ್ಯ ಇಲಾಖೆ ಅಧಿಕಾರಿಗಳು ಭಾಗವಹಿಸಿದ್ದರು.
ಸಿಐಟಿಯು ಜಿಲ್ಲಾ ಸಮಿತಿ, ಜೆ.ಎಂ.ಚನ್ನಬಸಯ್ಯ ಜಿಲ್ಲಾ ಪ್ರಧಾನ ಕಾರ್ಯದರ್ಶಿ, ಜೆ.ಸತ್ಯ ಬಾಬು ಜಿಲ್ಲಾಧ್ಯಕ್ಷರು, ಎಂ ತಿಪ್ಪೇಸ್ವಾಮಿ, ಸಹ ಕಾರ್ಯದರ್ಶಿ, ಸೋಮಪ್ಪ ಮುಖಂಡರು, ಎಂ ಮಲ್ಲಿಕಾರ್ಜುನ ಸ್ವಾಮಿ ಸಿಐಟಿಯು ತಾಲೂಕ ಸಂಚಾಲಕರು, ವಿ.ಎಸ್ ಶಿವಶಂಕರ್ ಜಿಲ್ಲಾ ಅಧ್ಯಕ್ಷರು, ಕರ್ನಾಟಕ ಪ್ರಾಂತ ರೈತ ಸಂಘ, ಎ. ಸ್ವಾಮಿ, ದುರ್ಗಮ್ಮ, ದೇವದಾಸಿ ಮಹಿಳೆಯರ ವಿಮೋಚನ ಸಂಘ, ಕಾಲೂಬ, ಡಿವೈ ಎಫ್ ಐ, ಅಕ್ಷರ ದಾಸೋಹ ಬಿಸಿಯೂಟ ನೌಕರ ಸಂಘದ ದ್ರಾಕ್ಷಿಯಣಿ, ಧನಂಜಯ ದಲಿತ ಹಕ್ಕುಗಳ ಸಮಿತಿ ಮುಂತಾದವರು ಭಾಗವಹಿಸಿದ್ದರು.

Share This Article
error: Content is protected !!
";