Ad image

ಸ್ಥಳೀಯ ಪ್ರತಿಭೆಗಳ ಅನಾವರಣ ವೇದಿಕೆ ‘ತಿಂಗಳ ಸೊಬಗು’

Vijayanagara Vani
ಸ್ಥಳೀಯ ಪ್ರತಿಭೆಗಳ ಅನಾವರಣ ವೇದಿಕೆ ‘ತಿಂಗಳ ಸೊಬಗು’
ಬಳ್ಳಾರಿ,
ಜಿಲ್ಲೆಯ ಸ್ಥಳೀಯ ಮಟ್ಟದ ಕಲಾ ಪ್ರತಿಭೆಗಳನ್ನು ಗುರುತಿಸಿ, ಅವರ ಸಾಧನೆಯ ಬೆಳೆವಣಿಗೆ ಹಾಗೂ ಪ್ರೋತ್ಸಾಹಿಸುವ ನಿಟ್ಟಿನಲ್ಲಿ ಪ್ರತಿ ತಿಂಗಳ ಮೂರನೆಯ ಶನಿವಾರದಂದು ಆಯೋಜಿಸುವ ‘ತಿಂಗಳ ಸೊಬಗು’ ಸಾಂಸ್ಕøತಿಕ ಕಾರ್ಯಕ್ರಮ ಉತ್ತಮ ವೇದಿಕೆಯಾಗಿದೆ.
ಕನ್ನಡ ಮತ್ತು ಸಂಸ್ಕøತಿ ಇಲಾಖೆ ಹಾಗೂ ಸಾಂಸ್ಕೃತಿಕ ಸಮುಚ್ಚಯ ನಿರ್ವಹಣಾ ಸಮಿತಿ ಇವರ ಸಂಯುಕ್ತಾಶ್ರಯದಲ್ಲಿ ಶನಿವಾರದಂದು (ಜು.20) ನಗರದ ಡಾ.ರಾಜಕುಮಾರ್ ರಸ್ತೆಯ ಸಾಂಸ್ಕøತಿಕ ಸಮುಚ್ಚಯ ಆವರಣದ ನಾಡೋಜ ಸುಭದ್ರಮ್ಮ ಮನ್ಸೂರು ಬಯಲು ರಂಗಮಂದಿರದಲ್ಲಿ ಆಯೋಜಿಸಲಾದ “ತಿಂಗಳ ಸೊಬಗು” ಸಾಂಸ್ಕøತಿಕ ಕಾರ್ಯಕ್ರಮವು ಕಲಾ ಪ್ರೇಕ್ಷಕರ ಅಸ್ವಾದನೆಗೆ ಸಾಕ್ಷಿಯಾಯಿತು.
ಮೂರು ಸಾವಿರಕ್ಕೂ ಅಧಿಕ ಜಾದು ಕಾರ್ಯಕ್ರಮ ನೀಡಿದ, ಅಂತರಾಷ್ಟ್ರೀಯ ಜಾದು ಪ್ರಶಸ್ತಿಯ ಪುರಸ್ಕøತ, ಜಾದು ಮಾಂತ್ರಿಕ ರತ್ನ ಎಂದೇ ಪ್ರಸಿದ್ದಿಯಾದ ಬಳ್ಳಾರಿಯ ಪ್ರಕಾಶ ಹೆಮ್ಮಾಡಿ ಅವರ ಜಾನಪದ ಜಾದುವಿನ ಕೈ ಚಳಕಕ್ಕೆ ನೆರೆದಿದ್ದ ಪ್ರೇಕ್ಷಕರು ವಿಸ್ಮಯಗೊಳ್ಳುತ್ತಾ ಚಪ್ಪಾಳೆಯ ಸುರಿಮಳೆಗೈದರು.
ಇವರಿಗೆ ತಮ್ಮ ಧರ್ಮಪತ್ನಿ ನೇತ್ರಾವತಿ ಹೆಮ್ಮಾಡಿಯವರು ಜಾದುವಿಗೆ ಸಹಕಾರ ನೀಡಿದರು.
ಇನ್ನೂ ಸಿರುಗುಪ್ಪ ತಾಲ್ಲೂಕಿನ ಧಾತ್ರಿ ರಂಗ ಸಂಸ್ಥೆಯ ‘ಶ್ರೀ ಕೃಷ್ಣ ಸಂಧಾನ’ ಹಾಸ್ಯ ನಾಟಕಕ್ಕೆ ಕಲಾಭಿಮಾನಿಗಳು ಮನಸ್ಸು ಬಿಚ್ಚಿ ನಕ್ಕು ನಲಿದು, ಭರಪೂರ ಮನರಂಜನೆ ಪಡೆದರು.
ಈ ಸಂಧರ್ಭದಲ್ಲಿ ಅಪರ ಜಿಲ್ಲಾಧಿಕಾರಿ ಮಹಮ್ಮದ್ ಎನ್.ಜುಬೇರ್, ಅಬಕಾರಿ ಇಲಾಖೆಯ ಉಪ ಆಯುಕ್ತ ಮಂಜುನಾಥ, ಕನ್ನಡ ಮತ್ತು ಸಂಸ್ಕøತಿ ಇಲಾಖೆಯ ಸಹಾಯಕ ನಿರ್ದೇಶಕ ನಾಗರಾಜ್ ಸೇರಿದಂತೆ ಸಿಬ್ಬಂದಿ ಹಾಗೂ ಸಾರ್ವಜನಿಕರು ಉಪಸ್ಥಿತರಿದ್ದರು.

Share This Article
error: Content is protected !!
";