ವಿಜಯನಗರದಲ್ಲಿ ನೀರಿನ ರಾಜಕೀಯ, ಮಾಜಿ ಮತ್ತು ಹಾಲಿ ಗಳ ನಡುವೆ ತೀರ್ವಪೋನ್ ಸಂಭಾಷಣೆ. ಸೋಮವಾರ ನಗರಸಭೆಯಲ್ಲಿ ತುರ್ತು ಸಭೆ : ಚಂದ್ರಪ್ಪ

Vijayanagara Vani
ವಿಜಯನಗರದಲ್ಲಿ ನೀರಿನ ರಾಜಕೀಯ, ಮಾಜಿ ಮತ್ತು ಹಾಲಿ ಗಳ ನಡುವೆ ತೀರ್ವಪೋನ್ ಸಂಭಾಷಣೆ. ಸೋಮವಾರ ನಗರಸಭೆಯಲ್ಲಿ ತುರ್ತು ಸಭೆ : ಚಂದ್ರಪ್ಪ

 ವಿಜಯನಗರದಲ್ಲಿ ವರುಣನ ಕೃಪೆಯಿಂದ ಜಾನುವಾರುಗಳಿಗೆ ಮತ್ತು ಜನರಿಗೆ ನೀರು ದೊರಕಿ ನೆಮ್ಮದಿಯ ನಿಟ್ಟುಸಿರು ಬಿಟ್ಟರೂ , ನಗರದಲ್ಲಿ ನೀರಿನ ರಾಜಕೀಯ ಬಾರೀ ಜೋರಾಗಿ ಸುದ್ದಿ ಯಾಗುತ್ತಲಿದೆ. ಮಾಜಿ ಶಾಸಕ ಆನಂದ್ ಸಿಂಗ್ ಇತ್ತೀಚೆಗೆ ನಗರ ಸೇರಿದಂತೆ ಇತರ ಗ್ರಾಮಗಳಿಗೆ ತಮ್ಮ ಟ್ಯಾಂಕರ್ ಗಳ ಮೂಲಕ ಚಿತ್ತ್ವಾಡ್ಗಿ ಯ ಮುನ್ಸಿಪಲ್ ಕಾಲೇಜ್ ಹತ್ತಿರ ಇರುವ , ನಗರಕ್ಕೆ ಕುಡಿಯುವ ನೀರು ಸರಭರಾಜು ಮಾಡುವ ಟ್ಯಾಂಕರ್‌ಬಳಿ ನೀರು ತುಂಬಿಸಿ ಕೊಂಡು ಹೋಗಲು ಬಂದಾಗ , ಪೌರಾಯುಕ್ತರು ಖಾಸಾಗಿ ಯವರಿಗೆ ನೀರು ಕೊಡದಿರಲು ಹೇಳಿದ್ದಾರೆಂದು ಆನಂದ್ ಸಿಂಗ್ ರವರ ನೀರಿನ ಟ್ಯಾಂಕಿಗೆ ನೀರು ಕೊಟ್ಟಿಲ್ಲ , ಇದೇ ವಿಷಯಕ್ಕೆ ಖುದ್ದಾಗಿ ಸ್ಥಳಕ್ಕೆ ಬಂದ ಆನಂದ್ ಸಿಂಗ್, ಪೌರಾಯುಕ್ತ ಚಂದ್ರಪ್ಪ ಅವರನ್ನು ಕರೆಯಿಸಿ ವಿಚಾರಿಸಿದರು. ಈ ಸಂದರ್ಭದಲ್ಲಿ ನಡೆದ ಚರ್ಚೆಯಲ್ಲಿ ಸ್ಥಳದಲ್ಲಿ ಜಮಾಯಿಸಿದ್ದ ಆನಂದ್ ಸಿಂಗ್ ಬೆಂಬಲಿಗರು ಪೌರಾಯುಕ್ತರಿಗೆ ದಿಕ್ಕಾರ ಕೂಗಿದರು. ಈ ಘಟನೆಯಿಂದ ಪೌರಾಯುಕ್ತ ಚಂದ್ರಪ್ಪ ಸ್ವಲ್ಪ ವಿಚಲಿತರಾದಂತೆ ಕಂಡು ಬಂದರು.ಆದರೂ ಪಟ್ಟು ಬಿಡದ ಮಾಜಿ ಶಾಸಕ ಆನಂದ್ ಸಿಂಗ್ ,” ನಾವು ಸಾರ್ವಜನಿಕರಿಗೆ ಸಮಸ್ಯೆ ಇದ್ದಲ್ಲಿ ನೀರು ಸರಭರಾಜು ಮಾಡುತ್ತೇವೆ , ಇದನ್ನು ಯಾರು ತಡೆದಿದ್ದಾರೆ, ಹೇಳಿ ?ಎನ್ನಲು , ಅಧಿಕಾರಿ ಚಂದ್ರಪ್ಪ ಮಾದ್ಯಮಗಳ ಮುಂದೆ ವಿಷಯ ಹೊರಹಾಕಲು ಆಗುವುದಿಲ್ಲ ಎಂದು ಉತ್ತರಿಸಿದರು.
ಅವರ ಸಂಭಾಷಣೆ ಹೀಗಿತ್ತು:
.ಪೌರಾಯುಕ್ತ: ನೀವು ಎಲ್ಲಿ ತೊಂದರೆ ಇದೆ ಹೇಳಿ , ನಮ್ಮ ಟ್ಯಾಂಕರ್ ಗಳಿಂದ ನೀರು ಕಳಿಸುತ್ತೇವೆ,
ಆನಂದ್ ಸಿಂಗ್: ಇಡೀ ೩೩ ವಾರ್ಡಗಳಲ್ಲಿ ನೀರಿನ ತೊಂದರೆ ಇದೆ. ನಾನು ನಾಲ್ಕು ಭಾರಿ ಎಂ.ಎಲ್.ಏ ಆದರೂ ನೀರಿನ ಸಮಸ್ಯೆ ಸರಿಪಡಿಸಲು ಆಗಿಲ್ಲ. ಸದ್ಯದ ಪರಿಸ್ಥಿತಿಯಲ್ಲಿ ಎಲ್ಲೆಲ್ಲಿ ನೀರಿನ ಅವಶ್ಯಕತೆ ಇದೆ , ಅಲ್ಲಿ ನಾವು ನೀರು ತಲುಪಿಸಲು ಪ್ರಯುತ್ನಿಸುತ್ತೇವೆ. ಇಲ್ಲಿ ನಗರ ಸದಸ್ಯರೆಲ್ಲೂ ಬಂದಿದ್ದಾರೆ. ಅವರ ಸಮಸ್ಯೆ ಕೇಳಿ.ಪೌರಾಯುಕ್ತೆ “ಲತಾ” ಕೂಡಾ ಬಂದಿದ್ದಾರೆ. ಬೇಕಾದರೆ ಅವರೇ , ಆದೇಶಿಸುತ್ತಿದ್ದಾರೆ. ಎನೆನ್ನುತ್ತೀರಾ?.
.ಪೌರಾಯುಕ್ತ : ನಾಳೆ ತುರ್ತಾಗಿ ಮೀಟಿಂಗ್ ಕರೆದು ಕ್ರಮ ಕೈಗೊಳ್ಳುತ್ತೇವೆ.
ಈ ಸಂಭಾಷಣೆಗಳ ನಂತರ ಮಾಜಿ ಶಾಸಕ ಅನಂದ್ ಸಿಂಗ್ ಮತ್ತು ಶಾಸಕ “ಗವಿಯಪ್ಪ” ಅವರಿಗೂ ಪೋನ್ ಸಂಭಾಷಣೆ ನಡೆದು . ಗವಿಯಪ್ಪ ಆನಂದ ಸಿಂಗ್ ರವರಿಗೆ ನೀವು ರಾಜಕೀಯ ಮಾಡುವಾಗ ನಾವು ಅಡ್ಡ ಪ್ರವೇಶಿಸಿಲ್ಲ. ಈಗ್ಯಾಕೆ ನೀವು ಮದ್ಯ ಬಂದೀರಿ?. ನಮ್ಮ ಕೆಲಸ ನಾವು ಮಾಡುತ್ತೇವೆ.ನಮಗೂ ಸಾರ್ವಜನಿಕರ ಸಮಸ್ಯೆ ಬಗ್ಗೆ ಗಮನ ಇದೆ , ಎಂದು ತುಸು ಕೋಪದಲ್ಲಿಯೇ ಮಾತಾಡಿದಂತೆ ಕಂಡು ಬಂದಿತು.ಕೊನೆಗೆ ನಾಳೆ ಸೋಮವಾರ ತುರ್ತಾಗಿ ನಗರಸಭೆಯಲ್ಲಿ ಸಭೆ ನಡೆಸಿ ಸದಸ್ಯರ ಜೊತೆ ಚರ್ಚಿಸಿ ತೀರ್ಮಾನ ಕೈಗೊಳ್ಳುವುದಾಗಿ ಫವರಾಯುಕ್ತ ಚಂದ್ರಪ್ಪ ತಿಳಿಸಿದ ನಂತರ ವಿಷಯ ತಣ್ಣಗಾಗಿದೆ. ಸ್ಥಳದಲ್ಲಿ ಯಾವುದೇ ಅಹಿತ ಕರ ಘಟನೆ ನಡೆಯದಿರಲು ಚಿತ್ತ್ವಾಡ್ಗಿ ಪೊಲೀಸ್ ಸಿಪಿಐ ಜೊತೆ ಹಾಜರಿದ್ದರು.
ಬಾಕ್ಸ್: ನೀರು ಟ್ಯಾಂಕರ್ ಗೆ ಬಿಡಲು ಓವರ್ ಹೆಡ್ ಟ್ಯಾಂಕರ್ ಬಳಿ ಪೌರಾಯುಕ್ತ ಚಂದ್ರಪ್ಪ ನವರು ಆಗಮಿಸುತ್ತಿದ್ದಂತೆ , ದಿಕ್ಕಾರ ಗಳು ಕೂಗಿದರು.ಇಲ್ಲಿಯವರೆಗೂ ನಗರ ಸಭೆಯಲ್ಲಿ ನಡೆವ ಚರ್ಚೆಗಳಲ್ಲಿ ಮೌನವಹಿಸುತ್ತಿದ್ದ, ಪೌರಾದ್ಯಕ್ಷೆ “ಲತಾ” ಪೌರಾಯುಕ್ತರಿಗೆ

WhatsApp Group Join Now
Telegram Group Join Now
Share This Article
error: Content is protected !!