Ad image

ಯುದ್ಧ ಮಾಡುವ ಸಮಯವಲ್ಲ, ಅಮಾಯಕರ ಹತ್ಯೆ ಒಪ್ಪಲಾಗದು : ಪ್ರಧಾನಿ ಮೋದಿ

Vijayanagara Vani
ಯುದ್ಧ ಮಾಡುವ ಸಮಯವಲ್ಲ, ಅಮಾಯಕರ ಹತ್ಯೆ ಒಪ್ಪಲಾಗದು : ಪ್ರಧಾನಿ ಮೋದಿ

ವಿಯೆನ್ನಾ, 10 : ಆಸ್ತಿಯಾದ ಚಾನ್ಸೆಲ‌ ಕಾರ್ಲ್ ನೆಹಮ್‌‌ ಅವರೊಂದಿಗೆ ಉಕ್ರೇನ್ ಸಂಘರ್ಷ ಮತ್ತು ಪಶ್ಚಿಮ ಏಷ್ಯಾದ ಪರಿಸ್ಥಿತಿ ಸೇರಿದಂತೆ ಜಗತ್ತಿನ ಇತರ ಸಂಘರ್ಷಗಳ ಕುರಿತು “ವಿವರವಾದ ಫಲಪ್ರದ ಚರ್ಚೆ” ನಡೆಸಿರುವುದಾಗಿ ಪ್ರಧಾನಿ ನರೇಂದ್ರ ಮೋದಿ ಅವರು ಬುಧವಾರ ಹೇಳಿದ್ದಾರೆ.
ಎರಡು ದಿನಗಳ ಭೇಟಿಗಾಗಿ ಮಂಗಳವಾರ ರಾತ್ರಿ ರಷ್ಯಾ ಆಗಮಿಸಿರುವ ಪ್ರಧಾನಿ ಮೋದಿ, ಭಾರತ ಮತ್ತು ಆಸ್ತಿಯಾ ಪರಸ್ಪರ ಸಹಕಾರವನ್ನು ಮತ್ತಷ್ಟು ಬಲಪಡಿಸಲು ಹೊಸ ಸಾಧ್ಯತೆಗಳನ್ನು ಗುರುತಿಸಿವೆ ಮತ್ತು ಮುಂಬರುವ ದಶಕದ ಸಹಕಾರಕ್ಕಾಗಿ ಒಂದು ನೀಲನಕ್ಷೆ ಸಿದ್ಧವಾಗಿದೆ ಎಂದು ತಿಳಿಸಿದ್ದಾರೆ.
ಚಾನ್ಸೆಲರ್ ನೆಹಮ್ಮರ್ ಮತ್ತು ನಾನು ಫಲಪ್ರದವಾದ ಚರ್ಚೆ ನಡೆಸಿದ್ದೇವೆ.

ನಮ್ಮ ಪರಸ್ಪರ ಸಹಕಾರವನ್ನು ಮತ್ತಷ್ಟು ಬಲಪಡಿಸಲು ನಾವು ಹೊಸ ಸಾಧ್ಯತೆಗಳನ್ನು ಗುರುತಿಸಿದ್ದೇವೆ. ನಮ್ಮ ಸಂಬಂಧಕ್ಕೆ ಕಾರ್ಯತಂತ್ರದ ನಿರ್ದೇಶನವನ್ನು ನೀಡಲು ನಾವು ನಿರ್ಧರಿಸಿದ್ದೇವೆ. ಮುಂಬರುವ ದಶಕದ ಸಹಕಾರಕ್ಕಾಗಿ ನೀಲನಕ್ಷೆಯನ್ನು
ಸಿದ್ಧಪಡಿಸಲಾಗಿದೆ” ಎಂದು ಪ್ರಧಾನಿ ಮೋದಿ ಅವರು ಚಾನ್ಸೆಲರ್ ನೆಹರ್ ಅವರ ಮಾತುಕತೆಯ ನಂತರ ಜಂಟಿ ಸುದ್ದಿಗೋಷ್ಠಿಯಲ್ಲಿ ಹೇಳಿದ್ದಾರೆ.
“ಚಾನ್ಸೆಲರ್ ನೆಹಮ್ಮರ್ ಮತ್ತು ನಾನು ಪ್ರಪಂಚದಾದ್ಯಂತ ನಡೆಯುತ್ತಿರುವ
ಸಂಘರ್ಷಗಳ ಬಗ್ಗೆ ಸುದೀರ್ಘವಾಗಿ ಮಾತನಾಡಿದ್ದೇವೆ. ಅದು ಉಕ್ರೇನ್ ಸಂಘರ್ಷ ಅಥವಾ ಪಶ್ಚಿಮ ಏಷ್ಯಾದ ಪರಿಸ್ಥಿತಿಯಾಗಿರಬಹುದು. ಇದು ಯುದ್ಧದ ಸಮಯವಲ್ಲ ಎಂದು ನಾನು ಮೊದಲೇ ಹೇಳಿದ್ದೇನೆ” ಎಂದು ಪ್ರಧಾನಿ ಮೋದಿತಿಳಿಸಿದರು.
ಸಮಸ್ಯೆಗಳಿಗೆ ಯುದ್ಧಭೂಮಿಯಲ್ಲಿ ಪರಿಹಾರ ಕಂಡುಕೊಳ್ಳಲು ಸಾಧ್ಯವಿಲ್ಲ ಎಂದು ಪ್ರತಿಪಾದಿಸಿದ ಮೋದಿ, ಭಾರತ ಮತ್ತು ಆಸ್ತಿಯಾ ಮಾತುಕತೆ ಮತ್ತು ರಾಜತಾಂತ್ರಿಕತೆಗೆ ಒತ್ತು ನೀಡುತ್ತವೆ ಮತ್ತು ಅದಕ್ಕಾಗಿ ಅಗತ್ಯವಿರುವ ಯಾವುದೇ ಬೆಂಬಲವನ್ನು ನೀಡಲು ಸಿದ್ಧ ಎಂದುಹೇಳಿದರು.
ಭಾರತ ಮತ್ತು ಆಸ್ನಿಯಾ ಎರಡೂ ಭಯೋತ್ಪಾದನೆಯನ್ನು ಬಲವಾಗಿ
ಖಂಡಿಸುತ್ತವೆ ಮತ್ತು ಎಲ್ಲೇ ಆದರೂ ಅಮಾಯಕರ ಹತ್ಯೆಯನ್ನು ಒಪ್ಪಿಕೊಳ್ಳಲು ಸಾಧ್ಯವಿಲ್ಲ. ಭಾರತ ಮತ್ತು ಆಸ್ತಿಯಾ ಮಾತುಕತೆ ಮತ್ತು ರಾಜತಾಂತ್ರಿಕತೆಗೆ ಒತ್ತು ನೀಡುತ್ತವೆ ಮತ್ತು ಅದಕ್ಕಾಗಿ ಅಗತ್ಯವಿರುವ ಯಾವುದೇ ಬೆಂಬಲವನ್ನು ನೀಡಲು ನಾವು ಒಟ್ಟಿಗೆ ಸಿದ್ಧರಿದ್ದೇವೆ ಎಂದು ಪ್ರಧಾನಿ ಮೋದಿ ಹೇಳಿದರು. ಪ್ರಧಾನಿ ಮೋದಿಯವರ ಮಾತಿಗೆ ಧ್ವನಿಗೂಡಿಸಿದ ಆಸ್ತಿಯಾ ಚಾನ್ಸೆಲರ್ ನೆಹಮ್ಮರ್ ಅವರು, ಆಸ್ತಿಯಾ ಮತ್ತು ಭಾರತದ ನಡುವಿನ ಬಲವಾದ ಸಂಬಂಧವನ್ನು ಎತ್ತಿ ತೋರಿಸಿದರು.
“ಭಾರತ ಮತ್ತು ಆಸ್ತಿಯಾ ನಡುವೆ ಉತ್ತಮ ಸಂಬಂಧವಿದೆ. ಇದು 1950 ರ ದಶಕದಲ್ಲಿ ಪ್ರಾರಂಭವಾದ ನಂಬಿಕೆಯ ಸಂಬಂಧವಾಗಿದೆ. ಭಾರತವು ಆಸ್ತಿಯಾಕ್ಕೆ
ಸಹಾಯ ಮಾಡಿದೆ ಎಂದರು.

Share This Article
error: Content is protected !!
";