ಇಂದು ಹೈವೋಲ್ಟೇಜ್ ಪಂದ್ಯ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ನಡೆಯಲಿದೆ

Vijayanagara Vani
ಇಂದು ಹೈವೋಲ್ಟೇಜ್ ಪಂದ್ಯ  ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ನಡೆಯಲಿದೆ

ಮೇ 18 ಶನಿವಾರ, ಐಪಿಎಲ್‌ 2024ರ ಪ್ಲೇ ಅಫ್‌ನ ಕೊನೆಯ ಸ್ಥಾನಕ್ಕಾಗಿ ಇಂದು ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್‌ಸಿಬಿ) ಮತ್ತು ಚೆನ್ನೈ ಸೂಪರ್ ಕಿಂಗ್ಸ್ (ಸಿಎಸ್‌ಕೆ) ನಡುವೆ ನಾಕೌಟ್ ಪಂದ್ಯ ನಡೆಯಲಿದೆ. ಹೈವೋಲ್ಟೇಜ್‌ ಪಂದ್ಯಕ್ಕೆ ಬೆಂಗಳೂರಿನ ಎಂ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ನಡೆಯಲಿದೆ.

ಸಿಎಸ್‌ಕೆ ಸುಲಭವಾಗಿ ಪಂದ್ಯ ಗೆದ್ದರೆ ಸಾಕು ಪ್ಲೇ ಆಫ್‌ಗೆ ಹೋಗಲಿದೆ. ಆದರೆ, ಆರ್‌ಸಿಬಿ ಗೆಲುವಿನಲ್ಲಿ ಭಾರೀ ಲೆಕ್ಕಚಾರವಿದೆ. ಉತ್ತಮ ರನ್‌ ರೇಟ್‌ನೊಂದಿಗೆ ಆರ್‌ಸಿಬಿ, ಸಿಎಸ್‌ಕೆ ಎದುರು ಪಂದ್ಯ ಗೆಲ್ಲಬೇಕಾದ ಒತ್ತಡದಲ್ಲಿದೆ. ಮೇ 18 ಶನಿವಾರ, ಐಪಿಎಲ್‌ 2024ರ ಪ್ಲೇ ಅಫ್‌ನ ಕೊನೆಯ ಸ್ಥಾನಕ್ಕಾಗಿ ಇಂದು ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್‌ಸಿಬಿ) ಮತ್ತು ಚೆನ್ನೈ ಸೂಪರ್ ಕಿಂಗ್ಸ್ (ಸಿಎಸ್‌ಕೆ) ನಡುವೆ ನಾಕೌಟ್ ಪಂದ್ಯ ನಡೆಯಲಿದೆ. ಹೈವೋಲ್ಟೇಜ್‌ ಪಂದ್ಯಕ್ಕೆ ಬೆಂಗಳೂರಿನ ಎಂ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ನಡೆಯಲಿದೆ.

ಆರ್‌ಸಿಬಿ ಆಡಿರುವ 13 ಪಂದ್ಯಗಳಲ್ಲಿ 6 ಪಂದ್ಯ ಗೆದ್ದು 7 ರಲ್ಲಿ ಸೋಲು ಕಂಡಿದೆ. ಪ್ರಸ್ತುತ +0.387 ರ ನೆಟ್ ರನ್ ರೇಟ್ ಹಾಗು 12 ಅಂಕಗಳೊಂದಿಗೆ ಅಂಕಪಟ್ಟಿಯಲ್ಲಿ 6ನೇ ಸ್ಥಾನದಲ್ಲಿದೆ. ಇತ್ತ ಸಿಎಸ್‌ಕೆ ಇದುವರೆಗೆ ಒಟ್ಟು 13 ಪಂದ್ಯಗಳಲ್ಲಿ 7 ರಲ್ಲಿ ಗೆದ್ದು, 6 ರಲ್ಲಿ ಸೋತಿದೆ. +0.528 ರ ನೆಟ್ ರನ್ ರೇಟ್ ಮತ್ತು 14 ಅಂಕಗಳೊಂದಿಗೆ 4ನೇ ಸ್ಥಾನದಲ್ಲಿದೆ. ಈವರೆಗೆ ಐಪಿಎಲ್‌ನಲ್ಲಿ ಸಿಎಸ್‌ಕೆ ವಿರುದ್ಧ ಆರ್‌ಸಿಬಿ ಕಳಪೆ ದಾಖಲೆ ಹೊಂದಿದೆ. ಆದರೆ ಆರ್‌ಸಿಬಿ ತನ್ನ ಶುಭ ದಿನದಂದು ಸಿಎಸ್‌ಕೆ ಎದುರು ನಾಕೌಟ್‌ ಪಂದ್ಯವಾಡುತ್ತಿದೆ. ಆರ್‌ಸಿಬಿ ಮೇ 18 ರಂದು ಹಲವು ದಾಖಲೆಯನ್ನು ಐಪಿಎಲ್‌ ಇತಿಹಾಸದಲ್ಲಿ ಬರೆದಿದೆ. ಹೀಗಾಗಿ ಆರ್‌ಸಿಬಿ ಪಾಲಿಗೆ ಮೇ 18 ಅದೃಷ್ಟದ ದಿನವಾಗಿದೆ.

ಆರ್‌ಸಿಬಿಗೆ ಮೇ 18 ಅದೃಷ್ಟ ಐಪಿಎಲ್‌ ಇತಿಹಾಸದಲ್ಲಿ ಅರ್‌ಸಿಬಿ ಮೇ 18 ರಂದು ಆಡಿದ ಎಲ್ಲಾ ನಾಲ್ಕು ಪಂದ್ಯಗಳನ್ನು ಭರ್ಜರಿಯಾಗಿ ಗೆದ್ದು ಬೀಗಿದೆ. ಅಲ್ಲದೆ ಮೇ 18 ರಂದು ಸಿಎಸ್‌ಕೆಎ ಅನ್ನು ಎರಡು ಬಾರಿ ಆರ್‌ಸಿಬಿ ಸೋಲಿಸಿದೆ. ಮೇ 18 ರಂದು ಆರ್‌ಸಿಬಿ ದಾಖಲೆಯ ಗೆಲುವಿನ ನೋಟ ಇಲ್ಲಿದೆ.

1) ಮೇ 18, 2013 ರಂದು ಸಿಎಸ್‌ಕೆ ಮತ್ತು ಆರ್‌ಸಿಬಿ ನಡುವಿನ ಪಂದ್ಯ ಎಂ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ನಡೆದಿತ್ತು. ಅಂದು ಕೂಡ ಮಳೆ ಬಂದ ಕಾರಣ ಪಂದ್ಯವನ್ನು 8 ಓವರ್‌ಗಳಿಗೆ ನಡೆಸಲಾಗಿತ್ತು. ಮೊದಲು ಬ್ಯಾಟಿಂಗ್‌ ಮಾಡಿದ ಆರ್‌ಸಿಬಿ ವಿರಾಟ್‌ ಕೊಹ್ಲಿ ಅರ್ಧಶತಕ ನೆರವಿನಿಂದ 2 ವಿಕೆಟ್ ನಷ್ಟಕ್ಕೆ 106 ರನ್‌ ಗಳಿಸಿತ್ತು. ಈ ಗುರಿ ಬೆನ್ನಟ್ಟಿ ಸಿಎಸ್‌ಕೆ 6 ವಿಕೆಟ್‌ ಕಳೆದುಕೊಂಡು 82 ರನ್‌ ‌‌ಕಲೆ ಹಾಕಿತ್ತು. ಹೀಗಾಗಿ ಆರ್‌ಸಿಬಿ 24 ರನ್‌ಗಳಿಂದ ಗೆಲುವು ಸಾಧಿಸಿತ್ತು. 2) ಮೇ 18, 2014 ರಂದು ಎರಡನೇ ಬಾರಿಗೆ ರಾಂಚಿಯಲ್ಲಿ ಆರ್‌ಸಿಬಿ ಮತ್ತು ಚೆನ್ನೈ ಮುಖಾಮುಖಿಯಾಗಿದ್ದವು. ಈ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್‌ ಮಾಡಿದ ಸಿಎಸ್‌ಕೆ 4 ವಿಕೆಟ್‌ಗಳನ್ನು ಕಳೆದುಕೊಂಡು 139 ರನ್‌ಗಳ ಸುಲಭ ಟಾರ್ಗೆಟ್‌ ಅನ್ನು ಆರ್‌ಸಿಬಿಗೆ ನೀಡಿತ್ತು. ಆರ್‌ಸಿಬಿ ಈ ಗುರಿಯನ್ನು 5 ವಿಕೆಟ್‌ ಕಳೆದುಕೊಂಡು ಜಯಗಳಿಸಿತ್ತು.

3) ಮೇ 18, 2016 ರಂದು ಮೂರನೇ ಬಾರಿಗೆ ತವರಿನ ಎಂ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ಆರ್‌ಸಿಬಿ ಮತ್ತು ಪಂಜಾಬ್‌ ಕಿಂಗ್ಸ್‌ ನಡುವೆ ಪಂದ್ಯ ನಡೆದಿತ್ತು. ಮೊದಲು ಬ್ಯಾಟಿಂಗ್‌ ಮಾಡಿದ ಆರ್‌ಸಿಬಿ ವಿರಾಟ್‌ ಕೊಹ್ಲಿ ಶತಕ ಮತ್ತು ಕ್ರಿಸ್‌ ಗೇಲ್‌ ಅರ್ಧಶತಕ ಮೂಲಕ 3 ವಿಕೆಟ್‌ ನಷ್ಟಕ್ಕೆ 211 ರನ್‌ಗಳ ಬೃಹತ್‌ ಟಾರ್ಗೆಟ್‌ ನೀಡಿತ್ತು. ಈ ಗುರಿಯನ್ನು ಬೆನ್ನಟ್ಟಿದ ಪಂಜಾಬ್‌, ಆರ್‌ಸಿಬಿ ಬೌಲಿಂಗ್‌ ದಾಳಿಗೆ ತತ್ತರಿಸಿ 9 ವಿಕೆಟ್‌ ಕಳೆದುಕೊಂಡು 120 ರನ್‌ಗಳಿಸಲಷ್ಟೆ ಶಕ್ತವಾಗಿತ್ತು. ಹೀಗಾಗಿ ಆರ್‌ಸಿಬಿ 82 ರನ್‌ಗಳ ಜಯ ಸಾಧಿಸಿತ್ತು. 4) ಮೇ 18, 2023 ರಂದು ಕೊನೆಯ ಬಾರಿಗೆ ಸನ್ ರೈಸರ್ಸ್‌‌ ಹೈದರಾಬಾದ್ ವಿರುದ್ಧ ಆರ್‌ಸಿಬಿ ಸೆಣಸಾಡಿತ್ತು. ಮೊದಲು ಬ್ಯಾಟಿಂಗ್‌ ಮಾಡಿದ ಎಸ್‌ಆರ್‌ಹೆಚ್‌ 5 ವಿಕೆಟ್‌ ನಷ್ಟಕ್ಕೆ 187 ರನ್‌ಗಳ ಗುರಿ ನೀಡಿತ್ತು.‌ ಆರ್‌ಸಿಬಿ ಕೇವಲ 2 ವಿಕೆಟ್‌ ಕಳೆದುಕೊಂಡು ‌ಎಸ್‌ಆರ್‌ಹೆಚ್‌ ವಿರುದ್ಧ ಗೆಲುವು ಕಂಡಿತ್ತು. 18ನೇ ದಿನಾಂಕದಂದು ವಿರಾಟ್ ಕೊಹ್ಲಿ ಬ್ಯಾಟಿಂಗ್‌ನಲ್ಲಿ ಆರ್‌ಸಿಬಿ ಪರ ಅದ್ಭುತ ಪ್ರದರ್ಶನ ನೀಡಿದ್ದಾರೆ. ಅವರ ಜೆರ್ಸಿ ನಂಬರ್‌ ಕೂಡ 18 ಆಗಿದ್ದು, ಐಪಿಎಲ್ ಇತಿಹಾಸದಲ್ಲಿ ಮೇ 18 ರಂದು ವಿರಾಟ್ ಕೊಹ್ಲಿ ಬ್ಯಾಟಿಂಗ್ ಅಂಕಿಅಂಶಗಳು ಹೀಗಿವೆ. ಮೇ 18, 2013: 29 ಎಸೆತಗಳಲ್ಲಿ ಅಜೇಯ 56 ರನ್ (ಸಿಕ್ಸರ್‌-4, ಬೌಂಡರಿ-6) ಮೇ 18, 2014: 29 ಎಸೆತಗಳಲ್ಲಿ 27 ರನ್ (ಸಿಕ್ಸರ್‌-1, ಬೌಂಡರಿ-1) ಮೇ 18, 2016: 50 ಎಸೆತಗಳಲ್ಲಿ 113 ರನ್ (ಸಿಕ್ಸರ್‌-8, ಬೌಂಡರಿ-12) ಮೇ 18, 2023: 63 ಎಸೆತಗಳಲ್ಲಿ 100 ರನ್ (ಸಿಕ್ಸರ್‌-4, ಬೌಂಡರಿ-12) 18 ರನ್‌ಗಳಿಂದ ಗೆಲ್ಲಬೇಕಿದೆ ಆರ್‌ಸಿಬಿ ಆರ್‌ಸಿಬಿ ತಂಡ ಪ್ಲೇಆಫ್‌ಗೆ ಪ್ರವೇಶಿಸಬೇಕಾದರೆ, ಸಿಎಸ್‌ಕೆ ವಿರುದ್ಧ ಮೊದಲು ಬ್ಯಾಟಿಂಗ್ ಮಾಡಿ 18 ಅಥವಾ ಅದಕ್ಕಿಂತ ಹೆಚ್ಚಿನ ರನ್‌ಗಳಿಂದ ಗೆಲ್ಲಬೇಕು. ಆಗ ಸಿಎಸ್‌ಕೆ ತಂಡದ ನೆಟ್ ರನ್-ರೇಟ್ ಅನ್ನು ಮೀರಿಸುತ್ತದೆ. ಒಂದು ವೇಳೆ ಎರಡನೇ ಇನ್ನಿಂಗ್ಸ್ ಬ್ಯಾಟಿಂಗ್ ಮಾಡಿದರೆ, ಆರ್‌ಸಿಬಿ ತಂಡ 11 ಎಸೆತಗಳು ಬಾಕಿ ಇರುವಂತೆಯೇ ಗುರಿ ಬೆನ್ನಟ್ಟಬೇಕಾಗುತ್ತದೆ.

WhatsApp Group Join Now
Telegram Group Join Now
Share This Article
error: Content is protected !!