ಶಿವಮೊಗ್ಗ: ಅ.04: ಕೆಳದಿ ಶಿವಪ್ಪ ನಾಯಕ ಕೃಷಿ ಮತ್ತು ತೋಟಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯ ಇರುವಕ್ಕಿ ಶಿವಮೊಗ್ಗ, ಕೃಷಿ ಮಹಾವಿದ್ಯಾಲಯ ನವಿಲೆ, ಎನ್ಎಸ್ಎಸ್ ಘಟಕ 1-2 ಹಾಗೂ ದೈಹಿಕ ಶಿಕ್ಷಣ ವಿಭಾಗ, ಕೃಷಿ ಮಹಾವಿದ್ಯಾಲಯ, ರೆಡ್ ಕ್ರಾಸ್ ಸಂಜೀವಿನಿ ರಕ್ತದಾನ ಕೇಂದ್ರ ಶಿವಮೊಗ್ಗ ಇವರ ಸಂಯುಕ್ತಾಶ್ರಯದಲ್ಲಿ “ರಾಷ್ಟ್ರೀಯ ರಕ್ತದಾನ ದಿನಾಚರಣೆ” ಅಂಗವಾಗಿ “ಸ್ವಯಂ ಪ್ರೇರಿತ ರಾಷ್ಟ್ರೀಯ ರಕ್ತದಾನ ಶಿಬಿರ”ವನ್ನು (ಅಕ್ಟೋಬರ್ 5 ರ ಶನಿವಾರ ಬೆಳಗ್ಗೆ 10 ರಿಂದ 3ರ ವರೆಗೆ) ಆಯೋಜಿಸಲಾಗಿದೆ ಎಂದು ಡಾ.ಡಿ.ತಿಪ್ಪೇಶ್ ರವರು (ಡೀನ್) ಪತ್ರಿಕಾ ಪ್ರಕಟಣೆಯಲ್ಲಿ ಹೇಳಿದ್ದಾರೆ.
ಇದೇ ಸಂದರ್ಭದಲ್ಲಿ ಸ್ವಯಂ ಪ್ರೇರಿತ ರಾಷ್ಟ್ರೀಯ ರಕ್ತದಾನ ಶಿಬಿರದಲ್ಲಿ ಮುಖ್ಯ ಅತಿಥಿ ಶಿವಮೊಗ್ಗ ಜಿಲ್ಲಾಧಿಕಾರಿ ಶ್ರೀ ಗುರುದತ್ತ ಹೆಗಡೆ, ಕುಲಪತಿಗಳಾದ ಡಾ.ಆರ್.ಸಿ. ಜಗದೀಶ್, ಕೃಷಿ ಮಹಾವಿದ್ಯಾಲಯ ಅವರಣ ಮುಖ್ಯಸ್ಥ ಡಾ.ಡಿ ತಿಪ್ಪೇಶ್,
ಎಲ್ಲಾ ವಿಭಾಗಗಳ ಮುಖ್ಯಸ್ಥರು, ವಿದ್ಯಾರ್ಥಿ ಕಲ್ಯಾಣ ನಿರ್ದೇಶಕರು, ಎನ್ಎಸ್ಎಸ್ ಘಟಕ 1-2, ದೈಹಿಕ ಶಿಕ್ಷಣ ಮತ್ತು ಕ್ರೀಡಾ ವಿಭಾಗದ ಸಂಯೋಜಕರು, ನಿಲಯಪಾಲಕರು,
ಬೋಧಕ ಮತ್ತು ಭೋದಕೇತರ ವರ್ಗದವರು, ವಿದ್ಯಾರ್ಥಿಗಳು ಹಾಗೂ ಸಾರ್ವಜನಿಕರು ತಮ್ಮ ಜೊತೆಯಲ್ಲಿ ಕೊರೆದುಕೊಂಡು ಬಂದು ರಕ್ತದಾನ ಮಾಡಿ ಶಿಬಿರವನ್ನು ಯಶಸ್ವಿಗೊಳಿಸುವುದು, ಇದೇ ವೇಳೆಯಲ್ಲಿ ರಕ್ತ ನೀಡುವ ದಾನಿಗಳಿಗೆ ಪ್ರಶಸ್ತಿ ಪತ್ರ, ಲಘು ಉಪಹಾರ ವ್ಯವಸ್ಥೆ ಮಾಡಿರುತ್ತದೆ.
ರಕ್ತ ಮತ್ತು ರಕ್ತದಾನ ಸಂಕ್ಷಿಪ್ತ ಮಾಹಿತಿ:
ರಕ್ತಕ್ಕೆ ನಿರಂತರ ಬೇಡಿಕೆ ಇದೆ. ಅಪಘಾತಗಳು, ತುರ್ತು ಶಸ್ತ್ರಚಿಕಿತ್ಸೆ, ಕ್ಯಾನ್ಸರ್ ರೋಗಿಗಳಿಗೆ, ಗರ್ಭಿಣಿ ಸ್ತ್ರೀಯರಿಗೆ, ಸುಟ್ಟ ಗಾಯದಿಂದ ಬಳಲುತ್ತಿರುವವರಿಗೆ ರಕ್ತವೇ ಜೀವದ್ರವ ಸಹಾಯವಾಗಲಿದೆ.
ಸಮಯ: ಬೆಳಗ್ಗೆ 10.00 ರಿಂದ 3.00 ರವರೆಗೆ, ಸ್ಥಳ: ಡಾ.ಎಂ.ಎಸ್. ಸ್ವಾಮಿನಾಥನ್ ಸಭಾಂಗಣ, ಕೃಷಿ ಮಹಾವಿದ್ಯಾಲಯ ನವಿಲೆ ಶಿವಮೊಗ್ಗ, ದೂರವಾಣಿ ಸಂಖ್ಯೆ: 9449620601, 7676664174, 9481512563,
9035912057, (7975443302 ರೆಡ್ ಕ್ರಾಸ್ ಸಂಜೀವಿನಿ ರಕ್ತದಾನ ಕೇಂದ್ರದ ದಿನಕರ್) ಇವರನ್ನು ಸಂಪರ್ಕಿಸಬೇಕೆಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.