Ad image

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಪ್ರವಾಸ ಕಾರ್ಯಕ್ರಮ

Vijayanagara Vani
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಪ್ರವಾಸ ಕಾರ್ಯಕ್ರಮ
ಬಳ್ಳಾರಿ,ಡಿ.07
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಡಿ.08 ರಂದು ಬಳ್ಳಾರಿ ಜಿಲ್ಲೆಯಲ್ಲಿ ಪ್ರವಾಸ ಕೈಗೊಳ್ಳುವರು.
ಡಿ.08 ರಂದು ಬೆಳಿಗ್ಗೆ 10 ಗಂಟೆಗೆ ಬೆಂಗಳೂರಿನ ಹೆಚ್‌ಎಎಲ್‌ನ ವಿಮಾನ ನಿಲ್ದಾಣದಿಂದ (ವಿಶೇಷ ವಿಮಾನದ ಮೂಲಕ) ನಿರ್ಗಮಿಸಿ ಬೆಳಿಗ್ಗೆ 10.50 ಕ್ಕೆ ತೋರಣಗಲ್‌ನ ಜಿಂದಾಲ್‌ನ ಏರ್‌ಸ್ಟಿçಪ್ ಗೆ ಆಗಮಿಸುವರು.
ನಂತರ ಬೆಳಿಗ್ಗೆ 11 ಗಂಟೆಗೆ ತೋರಣಗಲ್‌ನ ಜಿಂದಾಲ್ ಏರ್‌ಸ್ಟಿçಪ್‌ನಿಂದ ಹೊರಟು, 11.15 ಗಂಟೆಗೆ ಸಂಡೂರು ಪಟ್ಟಣದಲ್ಲಿ ಪಕ್ಷದ ವತಿಯಿಂದ ಆಯೋಜಿಸಿರುವ ಸಂಡೂರು ವಿಧಾನಸಭಾ ಕ್ಷೇತ್ರದ ಮತದಾರರಿಗೆ ಕೃತಜ್ಞತೆ ಸಲ್ಲಿಕೆ ಸಮಾರಂಭದಲ್ಲಿ ಭಾಗವಹಿಸುವರು.
ಬಳಿಕ ಮಧ್ಯಾಹ್ನ 02.30 ಗಂಟೆಗೆ ಅಲ್ಲಿಂದ ಹೊರಟು, 02.45 ಗಂಟೆಗೆ ತೋರಣಗಲ್‌ನ ಜಿಂದಾಲ್ ಏರ್‌ಸ್ಟಿçಪ್‌ಗೆ ಆಗಮಿಸಿ, 02.50 ಕ್ಕೆ ವಿಶೇಷ ವಿಮಾನದ ಮೂಲಕ ಹುಬ್ಬಳ್ಳಿಗೆ ತೆರಳುವರು ಎಂದು ಮುಖ್ಯಮಂತ್ರಿಯವರ ವಿಶೇಷ ಕರ್ತವ್ಯಾಧಿಕಾರಿ ಹಾಗೂ ಪದನಿಮಿತ್ತ ಸರ್ಕಾರದ ಅಪರ ಕಾರ್ಯದರ್ಶಿ ಕೆ.ಚಿರಂಜೀವಿ ಅವರು ತಿಳಿಸಿದ್ದಾರೆ.
Share This Article
error: Content is protected !!
";