ಧಾರವಾಡ ಜು30: ಹುಬ್ಬಳ್ಳಿಯ ಗೋಕುಲ ನಗರದ ನಿವಾಸಿ ರೋಹಿತ್ ಜೋಶಿ ಎನ್ನುವವರು ದಿ:09/08/2021 ರಂದು ರೂ.91,000 ಪಾವತಿಸಿ ಇಲೆಕ್ಟ್ರೀಕ್ ಸ್ಕೂಟರನ್ನು ಎದುರುದಾರರಿಂದ ಖರೀದಿಸಿದ್ದರು. ವಾಹನವು ಬ್ಯಾಟರಿಯ ಮೇಲೆ 36 ತಿಂಗಳು ಮತ್ತು ವಾಹನದ ಬಿಡಿ ಬಾಗಗಳ ಮೇಲೆ ಒಂದು ವರ್ಷದ ವಾರಂಟಿಯನ್ನು ಹೊಂದಿತ್ತು. ದೂರುದಾರರು ಎದುರುದಾರರ ಹೇಳಿಕೆಯಂತೆ ವಾಹನವನ್ನು ಉಪಯೋಗಿಸುತ್ತಿದ್ದು ನಂತರ ಒಮ್ಮಿಂದೊಮ್ಮೆಲೆ ಬ್ಯಾಟರಿ ಪೂರ್ತಿ ಖಾಲಿಯಾಗಿ ರಸ್ತೆಯ ಮದ್ಯ ನಿಲ್ಲಲು ಪ್ರಾರಂಭಿಸಿತು. ಅಲ್ಲದೇ ಎದುರುದಾರರು ಹೇಳಿದಷ್ಟು ಮೈಲೇಜನ್ನೂ ಸಹ ವಾಹನವು ಕೊಡುತ್ತಿರಲಿಲ್ಲ. ಈ ವಿಷಯವನ್ನು ದೂರುದಾರರು ಎದುರುದಾರರಿಗೆ ತಿಳಿಸಿದಾಗ ಬೇರೆ ಬ್ಯಾಟರಿಯನ್ನು ಕೊಟ್ಟು ಮುಂದೆ ಅದರ ಬದಲಿಗೆ ಹೊಸ ಬ್ಯಾಟರಿಯನ್ನು ಕೊಡುವುದಾಗಿ ತಿಳಿಸಿರುತ್ತಾರೆ. ನಂತರ ಕೊಟ್ಟಿರುವ ಹಳೆ ಬ್ಯಾಟರಿಯೂ ಸಹ ಸರಿಯಾಗಿ ಕೆಲಸ ಮಾಡದೆ ದೂರುದಾರರು ತೊಂದರೆಯನ್ನು ಅನುಭವಿಸಬೇಕಾಗಿರುತ್ತದೆ. ಎದುರುದಾರರ ಇಂತಹ ನಡವಳಿಕೆ ಗ್ರಾಹಕರ ರಕ್ಷಣಾ ಕಾಯ್ದೆ ಅಡಿ ಸೇವಾ ನ್ಯೂನ್ಯತೆ ಆಗುತ್ತದೆ ಅಂತಾ ಹೇಳಿ ಅವರ ವಿರುದ್ಧ ಕ್ರಮ ಕೈಗೊಳ್ಳುವಂತೆ ದೂರುದಾರರು ಧಾರವಾಡ ಜಿಲ್ಲಾ ಗ್ರಾಹಕರ ಆಯೋಗಕ್ಕೆ ದಿ: 26/05/2024 ರಂದು ದೂರನ್ನು ಸಲ್ಲಿಸಿದ್ದರು.
ಸದರಿ ದೂರಿನ ಬಗ್ಗೆ ಕೂಲಂಕುಷವಾಗಿ ವಿಚಾರಣೆ ನಡೆಸಿದ ಆಯೋಗದ ಅಧ್ಯಕ್ಷರಾದ ಈಶಪ್ಪ. ಭೂತೆ ಹಾಗೂ ವಿಶಾಲಾಕ್ಷಿ. ಅ. ಬೋಳಶೆಟ್ಟಿ ಸದಸ್ಯರು, ದೂರುದಾರರು ಎದುರುದಾರರಾದ ಟ್ರೈಯೋ ಗ್ರೂಪ್ಸ್ ಇವರಲ್ಲಿ ರೂ.91,000 ಹಣ ಪಾವತಿಸಿ ಪ್ಯೂವರ್ ಎನರ್ಜಿಯ ಇ-ವಾಹನವನ್ನು ಖರೀದಿಸಿದ್ದರು. ಆದರೆ ವಾಹನ ಖರೀದಿಸಿದ ಕೆಲವೇ ದಿನಗಳಲ್ಲಿ ರಸ್ತೆಯಲ್ಲಿ ಹೋಗುವಾಗ ತಕ್ಷಣವೇ ನಿಲ್ಲುವುದು ಮತ್ತು ಮೈಲೇಜ್ ಸರಿಯಾಗಿ ಕೊಡುತ್ತಿರಲಿಲ್ಲ. ಎದುರುದಾರರು ಎರಡು ಸಲ ಬೇರೆ ಬ್ಯಾಟರಿಯನ್ನು ಕೊಟ್ಟರು ಸಹ ಅವು ಸರಿಯಾಗಿ ಕೆಲಸ ಮಾಡದೇ ದೂರುದಾರರಿಗೆ ತೊಂದರೆ ಆಗುತ್ತಿತ್ತು. ಈ ವಿಷಯವಾಗಿ ದೂರುದಾರರು ಸಾಕಷ್ಟು ಸಲ ಎದುರುದಾರರಿಗೆ ವಿನಂತಿಸಿದರು ಅವರು ಸರಿಪಡಿಸಿ ಕೊಟ್ಟಿರುವುದಿಲ್ಲ. ಇಂತಹ ಎದುರುದಾರ ನಡಾವಳಿಕೆ ಗ್ರಾಹಕರಾದ ದೂರುದಾರರಿಗೆ ಸೇವಾ ನ್ಯೂನ್ಯತೆ ಎಸಗುವುದರೊಂದಿಗೆ ಅನುಚಿತ ವ್ಯಾಪಾರ ಪದ್ಧತಿ ಮಾಡಿದ್ದಾರೆಂದು ಆಯೋಗ ಎದುರುದಾರ ವಿರುದ್ಧ ಅಭಿಪ್ರಾಯಪಟ್ಟು ತೀರ್ಪು ನೀಡಿದೆ.
ಈ ಎಲ್ಲ ಸಂಗತಿಗಳನ್ನು ಆಧರಿಸಿ ಎದುರುದಾರ ಪ್ಯೂವರ್ ಎನರ್ಜಿ ಟ್ರೈಯೋ ಗ್ರೂಪ್ಸ್ ಕಂಪನಿಗೆ ಆದೇಶವಾದ ಒಂದು ತಿಂಗಳ ಒಳಗಾಗಿ ದೂರುದಾರರ ವಾಹನಕ್ಕೆ ಹೊಸ ಬ್ಯಾಟರಿಯನ್ನು ಅಳವಡಿಸಿ ಕೊಡಬೇಕು ಅಂತಾ ಆಯೋಗ ಅಭಿಪ್ರಾಯಪಟ್ಟಿದೆ. ಒಂದು ವೇಳೆ ಅದನ್ನು ಸರಿಪಡಿಸಿಕೊಡದೇ ಇದ್ದ ಕಾರಣ ದೂರುದಾರರ ಪಾವತಿ ಮಾಡಿದ ಹಣ ರೂ.91,000 ಬಡ್ಡಿಯೊಂದಿಗೆ ದೂರುದಾರರಿಗೆ ಮರಳಿ ಕೊಡಬೇಕುಅಂತಾಆಯೋಗ ಆದೇಶಿಸಿದೆ. ದೂರುದಾರರಿಗೆಆಗಿರುವ ಅನಾನುಕೂಲ, ತೊಂದರೆ ಹಾಗೂ ಮಾನಸಿಕ ಹಿಂಸೆಗಾಗಿ ರೂ.50,000/- ಪರಿಹಾರಮತ್ತು ರೂ.10,000/ ಪ್ರಕರಣದಖರ್ಚು ವೆಚ್ಚ ನೀಡುವಂತೆಆಯೋಗ ಪ್ಯೂವರ್ಎನರ್ಜಿ ಪ್ರೈ.ಲಿ. ಗೆ ನಿರ್ದೇಶಿಸಿದೆ.