ಬಳ್ಳಾರಿ: ಜೂ 05 ಲೋಕಸಭಾ ಚುನಾವಣೆಯ ಫಲಿತಾಂಶದಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ಇ ತುಕಾರಾಮ್ ಗೆಲುವು ಸಾಧಿಸಿದ ನಿಟ್ಟಿನಲ್ಲಿ ಕಾಂಗ್ರೆಸ್ ಪಕ್ಷದ ಯುವ ಮುಖಂಡರು ಮತ್ತು ಸಚಿವೆ ನಾಗೇಂದ್ರ ರವರ ಕಟ್ಟಾ ಬೆಂಬಲಿಗ ತಾಲೂಕಿನ ಸಂಜೀವರಾಯನಕೋಟೆ ಗ್ರಾಮದ ಉಮೇಶ್ ಗೌಡ ಮತ್ತು ಅವರ ಸ್ನೇಹಿತರು ಮತ್ತು ಕಾಂಗ್ರೆಸ್ ಪಕ್ಷದ ಕಾರ್ಯಕರ್ತರಿಂದ ಗ್ರಾಮದ ದೇವಸ್ಥಾನಗಳಲ್ಲಿ ವಿಶೇಷ ಪೂಜೆ ಸಲ್ಲಿಸಿ ಸಿಹಿ ಹಂಚಿ ಪಟಾಕಿ ಸಿಡಿಸಿ ಸಂಭ್ರಮಿಸಿದರು.
ಈ ಸಂದರ್ಭದಲ್ಲಿ ಉಮೇಶ್ ಗೌಡ ಮಾತನಾಡಿ, ಈ ತುಕಾರಾಮ್ ನಾಲ್ಕು ಭಾರಿ ಶಾಸಕರಾಗಿ ಒಂದು ಭಾರಿ ಸಚಿವರಾಗಿ ಅತ್ಯಂತ ಅನುಭವಿ ರಾಜಕಾರಿಣಿಯಾಗಿದ್ದು ಇವರು ಬಳ್ಳಾರಿ ಜಿಲ್ಲೆಯಲ್ಲಿ ಮತ್ತು ಸಂಡೂರು ತನ್ನ ಕ್ಷೇತ್ರದಲ್ಲಿ ಬಹಳಷ್ಟು ಅಭಿವೃದ್ಧಿ ಕಾರ್ಯಗಳನ್ನು ಕೈಗೊಂಡಿದ್ದಾರೆ. ಸರ್ಕಾರದ ಮತ್ತು ಪಕ್ಷದ ಯೋಜನೆಗಳನ್ನು ಜನರಿಗೆ ಸಕಾಲದಲ್ಲಿ ತಲುಪಿಸಲು ಸಹಕಾರಿಯಾಗಿದ್ದಾರೆ. ಈ ಹಿಂದೆ ಸೋನಿಯಾ ಗಾಂಧಿ ಬಳ್ಳಾರಿಯಲ್ಲಿ ಗೆಲುವು ಸಾಧಿಸಿ ಕಾಂಗ್ರೆಸ್ ಭದ್ರಕೋಟೆಯನ್ನಾಗಿ ಮಾಡಿದ್ದರು. ಈ ಭಾರಿ ಕೂಡ ಬಿ.ಜೆ.ಪಿ ಪಕ್ಷವನ್ನು ಛಿದ್ರ ಮಾಡಿ ಮತ್ತೊಮ್ಮೆ ಕಾಂಗ್ರೆಸ್ ಭದ್ರಕೋಟೆ ಎಂಬ ಅಸ್ಥಿತ್ವವನ್ನು ಉಳಿಸಿಕೊಂಡಿದೆ. ಅಲ್ಲದೆ ರಾಜ್ಯದ ಪಂಚ ಗ್ಯಾರಂಟಿಗಳು ಸಮರ್ಪಕ ಜಾರಿಯಾಗಿದ್ದು ಲೋಕಸಭಾ ಚುನಾವಣೆಯ ಗೆಲುವಿಗೆ ಶ್ರೀರಕ್ಷೆಯಾಗಿದೆ. ಈ ಅವಳಿ ಜಿಲ್ಲೆಯ ಜನತೆ ಈ ಭಾರಿ ಲೋಕಸಭಾ ಚುನಾವಣೆಯಲ್ಲಿ ಕೈಹಿಡಿದಿದ್ದಾರೆ ಇನ್ನು ಮುಂದೆ ಕೂಡ ತುಕಾರಾಮ್ ಮತ್ತು ಸಚಿವ ಬಿ ನಾಗೇಂದ್ರ ರವರು ಅಭಿವೃದ್ಧಿಗೆ ಒತ್ತು ನೀಡಲಿದ್ದಾರೆ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಮಾಜಿ ಗ್ರಾಮ ಪಂಚಾಯಿತಿ ಅಧ್ಯಕ್ಷ ಕೆ.ಜಿ ದೇವರಾಜ, ಮಾಜಿ ಸದಸ್ಯರಾದ ಹೇಮಂತ್, ಲಿಂಗಾರೆಡ್ಡಿ, ಸುಂಕಪ್ಪ, ಗ್ರಾಮದ ಮುಖಂಡ ಕ್ಯಾಂಡಿಡೆಟ್ ಬಸಪ್ಪ, ಸಿದ್ದರಾಮಪ್ಪ, ಸುನಿಲ್, ಸುಂಕಣ್ಣ, ಎಂ.ಡಿ ಹೊನ್ನೂರಸ್ವಾಮಿ, ರೇವಣ್ಣ ಸಿದ್ದಪ್ಪ, ನಾಗದೇವ, ಗಂಗಾಧರ, ಕೆ ಆಂಜನೇಯ, ಹೊನ್ನೂರಸ್ವಾಮಿ, ಕರಿಬಸವ, ವೀರೇಶ್ ಸೇರಿದಂತೆ ಇತರರಿದ್ದರು.