Ad image

ತುಂಗಭದ್ರಾ ಜಲಾಶಯದ 19ನೇ ಗೇಟ್ ಎಲ್ಲಾ ಗೇಟ್ ಗಳ ಜೊತೆ ಮುಂದಿನ ವರ್ಷವೇ ಬದಲಾಯಿಸಿ : ದರೂರು ಪುರುಷೋತ್ತಮ್ ಗೌಡ 

Vijayanagara Vani
ತುಂಗಭದ್ರಾ ಜಲಾಶಯದ 19ನೇ ಗೇಟ್ ಎಲ್ಲಾ ಗೇಟ್ ಗಳ ಜೊತೆ ಮುಂದಿನ ವರ್ಷವೇ ಬದಲಾಯಿಸಿ : ದರೂರು ಪುರುಷೋತ್ತಮ್ ಗೌಡ 
ಬಳ್ಳಾರಿ ಜೂ. 9: ತುಂಗಭದ್ರಾ ಜಲಾಶಯಕ್ಕೆ 1953 ರಲ್ಲಿ ನಿರ್ಮಾಣ ಮಾಡಿ ಅಂದು ಆ ಜಲಾಶಯಕ್ಕೆ 
33 ಗೇಟುಗಳನ್ನು ಅಳವಡಿಸಿಲಾಗಿತ್ತು. ಆ ಗೇಟ್ಗಳನ್ನು ಅಳವಡಿಸಿ ಇಂದಿಗೆ 
ಸುಮಾರು 72 ವರ್ಷಗಳಾಗಿವೆ. ಈಗಾಗಲೇ ಗೇಟುಗಳ ಗುಣಮಟ್ಟ ಕಳೆದುಕೊಂಡು ಹಿಂದಿನ
ವರ್ಷ 19ನೇ ಗೇಟು ಮುರಿದು ಬಿದ್ದಾಗ ಗೇಟಿಗೆ ಸ್ಟಾಪ್‌ಲಾಗ್ ಅಳವಡಿಸಿ ರೈತರಿಗೆ ನೀರಿನ ವ್ಯವಸ್ಥೆ ಮಾಡಲಾಗಿತ್ತು ಮತ್ತು ಮುಂದಿನ ವರ್ಷಕ್ಕೆ ಎಲ್ಲಾ 33 ಹೊಸ ಗೇಟುಗಳನ್ನು ಅಳವಡಿಸುತ್ತೇವೆ
ಎಂದು ತಿಳಿಸಿದ್ದೀರಿ, ಆದರೇ ಇದುವರೆಗೂ ಯಾವುದೇ ಗೇಟು ಅಳವಡಿಸಲಾಗಿಲ್ಲ ಈಗ ಅಳವಡಿಸಲು ಸಹ ಸಮಯವಿಲ್ಲ ವೃಥಾ ಸಮಯ ಹಾಳು ಮಾಡದೆ 19ನೇ ಗೀತಂ ಸಹ ಮುಂದಿನ ವರ್ಷದಲ್ಲಿ ಎಲ್ಲಾ 33 ಗೇಟು ಅಳವಡಿಸುವ ಸಂದರ್ಭದಲ್ಲಿ ಅದನ್ನು ಅಳವಡಿಸಿರಿ, ಈಗ ಜಲಾಶಯದಲ್ಲಿ 25tmc ನೀರು ಸಂಗ್ರಹಗೊಂಡ ತಕ್ಷಣ ಕಾಲುವೆಗಳಿಗೆ ಬಿಡುಗಡೆ ಮಾಡಿ ಎಂದು ತುಂಗಭದ್ರ ರೈತ ಸಂಘದ ಜಿಲ್ಲಾಧ್ಯಕ್ಷ ದರು ಪುರುಷೋತ್ತಮ್ ಗೌಡ ಟಿಬಿ ಬೋರ್ಡ್ ಅನ್ನು ಒತ್ತಾಯಿಸಿದರು.
ಅವರು ಇಂದು ಜಿಲ್ಲಾಧಿಕಾರಿಗಳ ಮೂಲಕ ಜಲ ಸಂಪನ್ಮೂಲ ಸಚಿವ ಡಿಕೆ ಶಿವಕುಮಾರ್ ಅವರಿಗೆ ಮನವಿ ಪತ್ರವನ್ನು ಸಲ್ಲಿಸಿ ಸಲ್ಲಿಸಿ ಮಾತನಾಡಿ, ಈಗಾಗಲೇ ತುಂಗಭದ್ರ ಜಯಲಾಶಯದಲ್ಲಿ 22 ಟಿ.ಎಮ್.ಸಿ ನೀರು ಶೇಖರಣೆ ಆಗಿದ್ದು
ಜಲಾಶಯಕ್ಕೆ ಸತತವಾಗಿ ನೀರು ಹರಿದು ಬರುತ್ತದೆ. ತಜ್ಞರ ಸಮೀತಿಯು ಈ ವರ್ಷ 80% ಮಾತ್ರ ಜಲಾಶಯದಲ್ಲಿ
ನೀರಿನ ಶೇಖರಣೆ ಮಾಡುತ್ತೇವೆ ಎಂದು ತಿಳಿಸಿರುವುದರಿಂದ ಬಳ್ಳಾರಿ ವಿಜಯನಗರ, ಕೊಪ್ಪಳ
ಹಾಗೂ ರಾಯಚೂರು ಜಿಲ್ಲೆಗಳ ರೈತರು ಆತಂಕ ಗೊಂಡಿದ್ದಾರೆ ಮಾನ್ಯ ಸಚಿವರು ಒಂದು ನಿರ್ಧಾರವನ್ನು ಕೈಗೊಂಡು ರೈತರ ಆತಂಕವನ್ನು ದೂರ ಮಾಡಬೇಕೆಂದು ಜಲಸಂಪನ್ಮೂಲ ಸಚಿವ ಡಿಕೆ ಶಿವಕುಮಾರ್ ಅವರಲ್ಲಿ ಮನವಿ ಮಾಡಿದರು.

Share This Article
error: Content is protected !!
";