Ad image

ಮರಕ್ಕೆ ಕಾರು ಡಿಕ್ಕಿ ಇಬ್ಬರು ವೈದ್ಯರು ಓರ್ವ ವಕೀಲ ಸಾವು

Vijayanagara Vani
ಮರಕ್ಕೆ ಕಾರು ಡಿಕ್ಕಿ ಇಬ್ಬರು ವೈದ್ಯರು ಓರ್ವ ವಕೀಲ ಸಾವು

ಬಳ್ಳಾರಿ: ತಾಲೂಕಿನ ಆಂದ್ರ ಪ್ರದೇಶದ ಗಡಿಗೆ ಹೊಂದಿಕೊಂಡಿರುವ ವಿಡುಪನಕಲ್ಲು- ಚೇಳ್ಳಗುರ್ಕಿ ಮಧ್ಯೆ ಇಂದು ಬೆಳಗಿನ ಜಾವ ಕಾರು ಚಾಲಕನ ನಿಯಂರ್ರ ತಪ್ಪಿ ಮರಕ್ಕೆ ಡಿಕ್ಕಿ ಹೊಡೆದು

- Advertisement -
Ad imageAd image

ಸ್ಥಳದಲ್ಲೇ ಬಳ್ಳಾರಿಯ ಮೂವರು ಸಾವನ್ನಪ್ಪಿ ಮತ್ತೊಬ್ಬರು ಗಾಯಗೊಂಡಿದ್ದಾರೆ.

ಬಳ್ಳಾರಿಯ ಬಿಮ್ಸ್ ಆಸ್ಪತ್ರೆಯ ಕ್ಯಾನ್ಸರ್ ವೈದ್ಯ ಡಾ.ಗೋವಿಂದರಾಜುಲು, ನೇತ್ರ ತಜ್ಞ ಡಾ.ಯೋಗೀಶ್ ಮತ್ತು ವಕೀಲ ವೆಂಕಟನಾಯ್ಡು ಸ್ಥಳದಲ್ಲೇ ಸಾವನ್ನಪ್ಪಿದ್ದರೆ. ಖಾಸಗೀ ವೈದ್ಯ, ಗಂಧರ್ವ ಗಿರಿ ಎಸ್ಟೇಟ್ ಮಾಲೀಕ ಡಾ.ಅಮರೇಗೌಡ ಪಾಟೀಲ್
ಅವರು ಗಾಯಗೊಂಡಿದ್ದಾರೆ.

ಇವರು ನಾಲ್ವರು ಬ್ಯಾಂಕಾಕ್ ಪ್ರವಾಸ ಮುಗಿಸಿಕೊಂಡು ಬೆಂಗಳೂರು ವಿಮಾನ ನಿಲ್ದಾಣದ ಮೂಲಕ ಅನಂತಪುರಂ ಮಾರ್ಗವಾಗಿ ಬಳ್ಳಾರಿಗೆ ಆಗಮಿಸುತ್ತಿದ್ದರು. ಲಾಯರ್ ಮತ್ತು ಪೈನಾನ್ಸರ್ ಆಗಿದ್ದ ವೆಂಕಟನಾಯ್ಡು ಅವರು ಅಮರೇಗೌಡ ಅವರ ಪೋರ್ಡ್ ಎಂಡೆವರ ಕಾರನ್ನು ಚಲಾಯಿಸುತ್ತಿದ್ದರು. ನಿದ್ರೆಯ ಮಂಪರಿನಲ್ಲಿ ಚೇಳ್ಳಗುರ್ಕಿ ಇನ್ನು ಐದು ಕಿಲೋ ಮೀಟರ್ ಇರುವಾಗ ಕಾರು ನಿಯಂತ್ರಣ ತಪ್ಪಿ ಬೆಳಗಿನ ಜಾವ 4 ಗಂಟೆಗೆ ಮರಕ್ಕೆ ಗುದ್ದಿದೆ.

ಅಮರೇಗೌಡ ಅವರ ಐ ಪೋನ್ ಅಪಘಾತದ ಮೆಸೇಜ್ ನೀಡಿದ್ದು ಸಂಬಂಧಿಕರಿಗೆ ತಿಳಿದಿದೆ.
.ಅಮರೇಗೌಡ ಅವರಿಗೆ ಬಿಮ್ಸ್ ನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಪ್ರಾಣಾಪಾಯದಿಂದ ಪಾರಾಗಿದ್ದಾರೆ.

ಮೃತರ ಶವಗಳನ್ನು ಬಿಮ್ಸ್ ಆಸ್ಪತ್ರೆಗೆ ತಂದಿದೆ.

ಡಾ.ಗೋವಿಂದರಾಜುಲು ಅವರು ಈ ಭಾಗದಲ್ಲಿ ಕ್ಯಾನ್ಸರ್ ಚಿಕಿತ್ಸೆ ನೀಡುವಲ್ಲಿ ಖ್ಯಾತರಾಗಿದ್ದರು. ಬಡ ರೋಗಿಗಳಿಗೆ ಚಿಕಿತ್ಸೆ ನೀಡುವಲ್ಲಿ ಅವರ ಗುಣ ಮೆಚ್ಚುಗೆಯಾಗಿತ್ತು.

ಇವರ ಸಾವಿಗೆ ಬಿಮ್ಸ್ ನಿರ್ದೇಶಕ ಡಾ.ಗಂಗಾಧರಗೌಡ ಮತ್ತು ಸಿಬ್ಬಂದಿ ತೀವ್ರ ಶೋಕ ವ್ಯಕ್ತಪಡಿಸಿದ್ದಾರೆ.

Share This Article
error: Content is protected !!
";