Ad image

ಪಶ್ಚಿಮ ಬಂಗಾಳದಲ್ಲಿ ಮಹಿಳೆಯರ ಮೇಲೆ ನಡೆದ ದೌರ್ಜನ್ಯ, ಹಲ್ಲೆ ಪ್ರಕರಣ ಕೇಂದ್ರ ಗೃಹ ಸಚಿವರ ಮಧ್ಯಸ್ಥಿಕೆಗೆ ಆಗ್ರಹ

Vijayanagara Vani
ಪಶ್ಚಿಮ ಬಂಗಾಳದಲ್ಲಿ ಮಹಿಳೆಯರ ಮೇಲೆ ನಡೆದ ದೌರ್ಜನ್ಯ, ಹಲ್ಲೆ ಪ್ರಕರಣ ಕೇಂದ್ರ ಗೃಹ ಸಚಿವರ ಮಧ್ಯಸ್ಥಿಕೆಗೆ ಆಗ್ರಹ
ಹೊಸಪೇಟೆ: ಜು 05ಪಶ್ಚಿಮ ಬಂಗಾಳದಲ್ಲಿ ಮಹಿಳೆಯರ ಮೇಲಿನ ಅನ್ಯಾಯ ಮತ್ತು ಅಸoಸ್ಕೃತಿಯ ವರ್ತನೆ ಕುರಿತು ಇಲ್ಲಿನ ಜಾಗೃತಿ ಮಹಿಳಾ ಸಂಘಟನೆಯ ಸದಸ್ಯರು ಕೇಂದ್ರ ಗೃಹ ಸಚಿವರಿಗೆ ಡಿಸಿ ಅವರ ಮೂಲಕ ಪತ್ರ ರವಾನಿಸಿದ್ದಾರೆ. ಪಶ್ಚಿಮ ಬಂಗಾಳದ ಕೂಚ್ ಬೆಹಾರ್ ಮತ್ತು ಉತ್ತರ ದಿನಾಜ್ ಪುರದಲ್ಲಿ (ಚೋಪ್ರಾ) ನಡೆದ ಘಟನೆಯಿಂದ ಮಹಿಳೆಯರೆಲ್ಲರೂ ದುಃಖಿತರಾಗಿದ್ದೇವೆ. ಪಶ್ಚಿಮ ಬಂಗಾಳದಲ್ಲಿ ದಿನದಿಂದ ದಿನಕ್ಕೆ ಮಹಿಳೆಯರ ಸ್ಥಿತಿ ಗಂಭೀರ ಮತ್ತು ಕಳವಳಕಾರಿಯಾಗಿದೆ. ಕಾನೂನು ಮತ್ತು ಸುವ್ಯವಸ್ಥೆ ಕೇವಲ ನಿಘಂಟುಗಳಿಗೆ ಸೀಮಿತವಾದಂತಿದೆ. ಕೂಚ್ ಬೆಹಾರ್ ಮತ್ತು ಉತ್ತರ ದಿನಾಜ್ ಪುರ ಘಟನೆಗಳು ಇಡಿ ನಾಗರೀಕ ಸಮಾಜಕ್ಕೆ ನಾಚಿಕೆಗೇಡಿನ ಮತ್ತು ತಲೆತಗ್ಗಿಸುವ ಸಂಗತಿಯಾಗಿದೆ. ಅಮಾಯಕ ನಾಗರಿಕರು ಹಾಗೂ ವಿಶೇಷವಾಗಿ ಮಹಿಳೆಯರ ಶೋಷಣೆ ಮತ್ತು ನೋವಿನ, ಕಿರುಕುಳವು ಅತ್ಯಂತ ಖಂಡನೀಯವಾಗಿದೆ. ಭಾರತೀಯ ಸಂವಿಧಾನ ವನ್ನು ಉಲ್ಲಂಘಿಸುವ ಈ ಘಟನೆಗಳು ತಾಲಿಬಾನ್ ಆಡಳಿತವನ್ನು ಮೆಲಕು ಹಾಕುತ್ತಿದೆ. ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಹಿಳೆಯಾಗಿದ್ದರು, ಮಹಿಳೆಯರಿಗೆ ಆಗುತ್ತಿರುವ ಅನ್ಯಾಯ, ಅಪಮಾನ, ದೌರ್ಜನ್ಯ ಪ್ರಕರಣಗಳು, ನಿಲ್ಲುತ್ತಿಲ್ಲ, ಇದರಿಂದ ನಾವೆಲ್ಲರೂ ನೊಂದಿದ್ದೇವೆ, ಈ ಘಟನೆಯನ್ನು ಖಂಡಿಸಿದ್ದೇವೆ, ಕೂಡಲೇ ಈ ವಿಚಾರದಲ್ಲಿ ಕೇಂದ್ರ ಗೃಹ ಸಚಿವ ಅಮಿತ್ ಷಾ ಅವರು ಕೂಡಲೇ ಮಧ್ಯಪ್ರವೇಶಿಸಿ,ಅಗತ್ಯ ಕ್ರಮಗಳನ್ನು ಕೈಗೊಂಡು, ಘಟನೆಯ ಕುರಿತು ನ್ಯಾಯಾಂಗ ತನಿಖೆಗೆ ಒಳಪಡಿಸಿ, ಮಹಿಳೆಯರಿಗೆ ಆಗುತ್ತಿರುವ ಅಪಮಾನ, ಅನ್ಯಾಯವನ್ನು ಸರಿಪಡಿಸಬೇಕು, ತಪ್ಪಿತಸ್ಥರು ಯಾರೇ ಇರಲಿ, ಎಸ್ಟೇ ಬಲಿಸ್ಟವಾಗಿರಲಿ ಕಠಿಣ ಕಾನೂನು ಕ್ರಮ ಜರುಗಿಸಬೇಕು, ಸಂತ್ರಸ್ಥ ಮಹಿಳೆಯರಿಗೆ ದೈಹಿಕ ಹಾಗೂ ಮಾನಸಿಕ ಚಿಕಿತ್ಸೆ ಹಾಗೂ ಅವರ ಪುನರ್ವಸತಿಗೆ ವ್ಯವಸ್ಥೆ ಕಲ್ಪಿಸಬೇಕು ಎಂದು ಕಾರ್ಯಕರ್ತರು ಒತ್ತಾಯಿಸಿದರು. ಈ ಸಂದರ್ಭದಲ್ಲಿ ಜಾಗೃತಿ ಮಹಿಳಾ ಸಂಘಟನೆಯ ಜ್ಯೋತಿ ನಾಗರಾಜ್, ಪದ್ಮಜಾ ಆರ್.ಜೋಶಿ, ಕಲಾವತಿ ಗೋಪಾಲಕೃಷ್ಣ, ಜ್ಯೋತಿ ಕುಲಕರ್ಣಿ, ಜಯಶ್ರೀ ಕೆ.ಸೇರಿದಂತೆ ಸುಮಾರು ಜನ ಮಹಿಳಾ ಸದಸ್ಯರು ಇದ್ದರು. 
ಬಾಕ್ಸ್ ಮಾಡಬಹುದು ಪಶ್ಚಿಮ ಬಂಗಾಳದಲ್ಲಿ ನಡೆದ ಅಮಾನವೀಯ ಘಟನೆಗೆ ಸಂಬಂಧಿಸಿದಂತೆ ಕೇಂದ್ರ ಗೃಹ ಸಚಿವ ಅಮಿತ್ ಷಾ ಅವರು ಕೂಡಲೇ ಮಧ್ಯಪ್ರವೇಶಿಸಿ,ಅಗತ್ಯ ಕ್ರಮಗಳನ್ನು ಕೈಗೊಂಡು, ನ್ಯಾಯಾಂಗ ತನಿಖೆಗೆ ಒಳಪಡಿಸಿ, ಮಹಿಳೆಯರಿಗೆ ಆಗುತ್ತಿರುವ ಅಪಮಾನ, ಅನ್ಯಾಯವನ್ನು ಸರಿಪಡಿಸಬೇಕು.
ಜ್ಯೋತಿ ನಾಗರಾಜ್ – ಜಾಗೃತಿ ಮಹಿಳಾ ಸಂಘಟನೆಯ ಮುಖ್ಯಸ್ಥರು ಹೊಸಪೇಟೆ

Share This Article
error: Content is protected !!
";