ಸಿರುಗುಪ್ಪ :ಅ 9 ತಾಲೂಕಿನ ಹಳೇಕೋಟೆ 64 ಗ್ರಾಮದಲ್ಲಿ 5ಕೋಟಿ ರೂಪಾಯಿಯ ವೆಚ್ಚದಲ್ಲಿ ನಿರ್ಮಾಣ ಗೊಳ್ಳುತ್ತಿರುವ ಶ್ರೀ ವೀರಭದ್ರ ದೇವರ ನೂತನ ಗುಡಿಯಲ್ಲಿನ ಗರ್ಭ ಗುಡಿ ಲೋಕಾರ್ಪಣೆ ಯ ಅಂಗವಾಗಿ 09.08.2024 ರೇವತಿ ಪಂಚಮಿ ಶುಕ್ರವಾರ ಉದಯ 5:30 ರಿಂದ 9:00 ರ ಸ್ಥಿರ ಲಗ್ನದಲ್ಲಿ ಶ್ರೀ ವೀರಭದ್ರ ದೇವರ ದೇವಸ್ಥಾನ ದ ಆವರಣದಲ್ಲಿ ಕಳಸ, ಡೊಳ್ಳು, ಸಮಾಳ ಮತ್ತು ಗಂಗೆ ಸ್ಥಳದ ಕಾರ್ಯಕ್ರಮ ದೊಂದಿಗೆ ಪ್ರಾರಂಭ ಮಾಡಿ ಹಬ್ಬದ ಸಡಗರ ಸಂಭ್ರಮದೊಂದಿಗೆ ಉತ್ತರ ಮತ್ತು ಪೂರ್ವ ದಿಕ್ಕಿನ ಕಪ್ಪು ಶಿಲೆಯ ಬಾಗಿಲುಗಳನ್ನು ವಿಧಿ ವಿಧಾನಗಳಿಂದ ಸ್ಥಾಪಿಸಿ, ಷಟಸ್ಥಲ ಬ್ರಹ್ಮಿ ಶ್ರೀ ವಾಮದೇ ಶಿವಾಚಾರ್ಯರು ,ಹಂಪಿ ಸಾವಿರ ದೇವರ ಮಠ ಎಮ್ಮಿಗನೂರು, ಷಟಸ್ಥಲ ಬ್ರಹ್ಮ ಶ್ರೀ ವೀರಭದ್ರ ಶಿವಾಚಾರ್ಯರು ಕಂಬಾಳಿ ಮಠ ತೆಕ್ಕಲಕೋಟೆ, ನಿರಂಜನ ಪ್ರಣವ ಸ್ವರೂಪಿ ಮಲ್ಲಿಕಾರ್ಜುನ ಮಹಾಸ್ವಾಮಿಗಳು ಹಳೆಕೋಟೆ ಇವರು ಉದ್ಘಾಟನೆ ಕಾರ್ಯಕ್ರಮವನ್ನು ನೆರವೇರಿಸಿದರು ಹಾಗೂ ಗರ್ಭ ಗುಡಿಯಲ್ಲಿ ದೇವರ ಗದ್ದುಗೆ (ಪೀಠ) ವನ್ನು ವಿಶೇಷ ಪೂಜಾ ಕೈಂಕರ್ಯಗಳೊಂದಿಗೆ ಗುರುಗಳ ಸಂಮ್ಮುಖದಲ್ಲಿ ದೇವರ ಮೂಲ ಸ್ಥಾನಕ್ಕೆ ಸ್ಥಾಪಿಸಲಾಯಿತು.
ಈ ಸಂದರ್ಭದಲ್ಲಿ ದೇವಸ್ಥಾನದ ಪೂಜಾರಿ ವೃಂದ, ಶ್ರೀ ವೀರಭದ್ರ ದೇವಸ್ಥಾನ ದ ಆಡಳಿತ ಮಂಡಳಿಯ ಅಧ್ಯಕ್ಷರು, ಪದಾಧಿಕಾರಿಗಳು, ಸದಸ್ಯರು ಊರಿನ ಹಿರಿಯ ಮುಖಂಡರು, ಭಕ್ತಾದಿಗಳು ಉಪಸ್ಥಿತರಿದ್ದರು.