Ad image

ಕುಡಿಯುವ ನೀರಿಗಾಗಿ ನಗರಾಭಿವೃದ್ಧಿ ಹೋರಾಟ ಸಮಿತಿ ಪ್ರತಿಭಟನೆ..

Vijayanagara Vani
ಕುಡಿಯುವ ನೀರಿಗಾಗಿ ನಗರಾಭಿವೃದ್ಧಿ ಹೋರಾಟ ಸಮಿತಿ ಪ್ರತಿಭಟನೆ..
filter: 0; fileterIntensity: 0.0; filterMask: 0; captureOrientation: 0; module: photo; hw-remosaic: false; touch: (-1.0, -1.0); modeInfo: ; sceneMode: 128; cct_value: 0; AI_Scene: (-1, -1); aec_lux: 131.0; aec_lux_index: 0; hist255: 0.0; hist252~255: 0.0; hist0~15: 0.0; albedo: ; confidence: ; motionLevel: 0; weatherinfo: null; temperature: 51;
ಸಿಂಧನೂರು: ನಗರದ ಬಸವೇಶ್ವರ ವೃತ್ತದಿಂದ ಕುಡಿಯುವ ನೀರಿಗಾಗಿ ಬಿಂದಿಗೆ ಹಿಡಿದು ನಗರಾಭಿವೃದ್ಧಿ ಹೋರಾಟ ಸಮಿತಿ  ನಗರಸಭೆ ಕಛೇರಿ ವರೆಗೆ ಬೃಹತ್ ಪ್ರತಿಭಟನೆ ಮೆರವಣಿಗೆ ಮಾಡಿ,ಶಾಸಕ ಹಾಗೂ ಪೌರಾಯುಕ್ತರ ವಿರುದ್ ಘೋಷಣೆ ಹಾಕುವುದರ ಮೂಲಕ ಆಕ್ರೋಶ ವ್ಯಕ್ತಪಡಿಸಿದರು..
ನಗರಸಭೆ ಆಡಳಿತ ಮಂಡಳಿ, ಪೌರಾಯುಕ್ತರು ಮತ್ತು ಶಾಸಕರ ದಿವ್ಯ ನಿರ್ಲಕ್ಷತನದಿಂದ ನಗರದಲ್ಲಿ ನೀರಿನ ಸಮಸ್ಯೆ ಉಲ್ಬಣಗೊಂಡಿದೆ.  ಇವರು ಅಚ್ಚುಕಟ್ಟಾಗಿ ಕಾರ್ಯ ನಿರ್ವಿಸಿದ್ದರೆ ನಗರದ ಜನತೆ ಕುಡಿಯುವ ನೀರಿಗಾಗಿ ಹಲೆದಾಡುವ ಪರಿಸ್ಥಿತಿ ಬರುತ್ತಿರಲಿಲ್ಲ ಎಂದು ಯಶಸ್ವಿಯಾಗಿ ಸಮಿತಿಯ ಮುಖಂಡರು   ಪೊಲೀಸ್ ಬ್ಯಾರಿಕೆಟ್ ಮುರಿದು ನಗರಸಭೆ ಮುತ್ತಿಗೆ ಹಾಕುವ ನಿಟ್ಟಿನಲ್ಲಿ ಭಾಗಷಃ ಯಶಸ್ವಿಯಾದರು. 
ಕೂಡಲೇ ಪ್ರತಿಭಟನಾ ಸ್ಥಳಕ್ಕೆ ಜಿಲ್ಲಾ ಅಧಿಕಾರಿಗಳು ಮತ್ತು ನಗರಸಭೆಯ ಪೌರಾಯುಕ್ತರು ಆಗಮಿಸಿ ನೀರಿನ ಸಮಸ್ಯೆ ಇತ್ಯರ್ಥ ಪಡಿಸುವ ನಿಟ್ಟಿನಲ್ಲಿ ಮುಂದಾಗಬೇಕು ಎಂದು ನಗರ ಅಭಿವೃದ್ಧಿ ಹೋರಾಟ ಸಮಿತಿಯ ಮುಖಂಡರು ಪಟ್ಟು ಹಿಡಿದರು. ನಂತರ ಕೇವಲ ಪೌರಾಯುಕ್ತರಿಗೆ ಮನವಿ ಪತ್ರ ಸಲ್ಲಿಸಿದರು. ಈ ಹೋರಾಟ ನಗರ ಅಭಿವೃದ್ಧಿ ಹೋರಾಟಗಾರರಿಗೆ ಹುಮ್ಮಸ್ಸು ಹೆಚ್ಚಾಗಿದ್ದು ಮುಂದಿನ ದಿನಮಾನಗಳಲ್ಲಿ ಇದು ಯಾವ ರೀತಿ ರೂಪ ಪಡೆದು ನೀರಿನ ಸಮಸ್ಯೆ ನಿವಾರಣೆ  ಆಗುತ್ತದೆ ಎಂದು ಕಾದು ನೋಡಬೇಕು. ಈ ಸಂಧರ್ಭದಲ್ಲಿ ಮುಖಂಡರಾದ ಡಿ.ಹೆಚ್ ಕಂಬಳಿ, ಎಸ್ ದೇವೇಂದ್ರಗೌಡ, ಡಾ.ಶಿವರಾಜ್, ಸರಸ್ವತಿ ಪಾಟೀಲ್, ನಾಗರಾಜ ಪೂಜಾರ್,ದೌಲಸಾಬ್ ದೊಡ್ಡಮನಿ,ಬಸವರಾಜ್ ಬಾದರ್ಲಿ, ಶಂಕರ ಗುರಿಕಾರ್ ಸೇರಿದಂತೆ ಅನೇಕರು ಇದ್ದರು.

Share This Article
error: Content is protected !!
";