ಜೈವಿಕ ದ್ರವ್ಯರಾಶಿಯ ಬಳಕೆ, ಥರ್ಮಲ್ ಪವರ್ ಪ್ಲಾಂಟ್‍ಗಳಲ್ಲಿ ಬಯೋಮಾಸ್ ಬಳಕೆಯ ಕುರಿತು ರೈತರಿಗೆ ಒಂದು ದಿನದ ಕಾರ್ಯಾಗಾರ

Vijayanagara Vani
ಜೈವಿಕ ದ್ರವ್ಯರಾಶಿಯ ಬಳಕೆ, ಥರ್ಮಲ್ ಪವರ್ ಪ್ಲಾಂಟ್‍ಗಳಲ್ಲಿ ಬಯೋಮಾಸ್ ಬಳಕೆಯ ಕುರಿತು ರೈತರಿಗೆ ಒಂದು ದಿನದ ಕಾರ್ಯಾಗಾರ
ಬಳ್ಳಾರಿ,ಜು.18
ತಾಲ್ಲೂಕಿನ ಹಗರಿಯ ಐಸಿಎಆರ್ ಕೃಷಿ ವಿಜ್ಞಾನ ಕೇಂದ್ರದಲ್ಲಿ ರಾಷ್ಟ್ರೀಯ ಮಿಷನ್
ಸಮರ್ಥ ಮಿಷನ್ ಅಡಿಯಲ್ಲಿ ಉಷ್ಣ ವಿದ್ಯುತ್ ಸ್ಥಾವರಗಳಲ್ಲಿ ಜೈವಿಕ ದ್ರವ್ಯರಾಶಿಯ ಬಳಕೆ, ಥರ್ಮಲ್ ಪವರ್ ಪ್ಲಾಂಟ್ಗಳಲ್ಲಿ ಬಯೋಮಾಸ್ ಬಳಕೆಯ ಕುರಿತು ರೈತರಿಗೆ ಒಂದು ದಿನದ ಸಾಮಥ್ರ್ಯ ನಿರ್ಮಾಣ ಕಾರ್ಯಕ್ರಮವನ್ನು ಗುರುವಾರ ಹಮ್ಮಿಕೊಳ್ಳಲಾಯಿತು.
ಮಿಷನ್ ನಿರ್ದೇಶಕ ಸತೀಶ್ ಉಪಾಧ್ಯಾಯ ಅವರು ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ವಿವಿಧ ಅನ್ವಯಿಕೆಗಳಲ್ಲಿ ಕೃಷಿ ಅವಶೇಷಗಳ ಬಳಕೆಯನ್ನು ಉತ್ತೇಜಿಸುವುದು ಮತ್ತು ಸುಗಮಗೊಳಿಸುವುದು, ಜೈವಿಕ ದ್ರವ್ಯರಾಶಿಯ ಒಟ್ಟುಗೂಡಿಸುವಿಕೆ, ಸಾಗಣೆ, ಉತ್ಪಾದನೆ, ಪೂರೈಕೆ ಮತ್ತು ಸಹ-ಫೈರಿಂಗ್ಗಾಗಿ ಪರಿಸರ ವ್ಯವಸ್ಥೆಯನ್ನು ಅಭಿವೃದ್ಧಿಪಡಿಸುವಲ್ಲಿ ಅನುವು ಮಾಡಿಕೊಡುತ್ತದೆ ಎಂದು ಹೇಳಿದರು.
ಬೆಳೆ ಅವಶೇಷಗಳ ನಿರ್ವಹಣೆಗೆ ರಾಷ್ಟ್ರೀಯ ನೀತಿ, ಕೃಷಿ ಯಾಂತ್ರೀಕರಣಕ್ಕೆ ಕೇಂದ್ರ ಯೋಜನೆ, ಉಷ್ಣ ವಿದ್ಯುತ್ ಸ್ಥಾವರಗಳಲ್ಲಿ ಸಹ-ಫೈರಿಂಗ್ ಮೂಲಕ ವಿದ್ಯುತ್ ಉತ್ಪಾದನೆಗೆ ಬಯೋಮಾಸ್ ಬಳಕೆಯ ನೀತಿ ಮತ್ತು ಕೃಷಿ ಕ್ಷೇತ್ರವು ಹೇಗೆ ಮುಂದೆ ಬರಬಹುದು ಮತ್ತು ಕೊಡುಗೆ ನೀಡಬಹುದು ಎಂದು ಮಾರ್ಗದರ್ಶನ ನೀಡಿದರು.
ಬಳಿಕ ವಾಯು ಮಾಲಿನ್ಯದ ಜ್ವಲಂತ ಸಮಸ್ಯೆಯ ಬಗ್ಗೆ ಮಾತನಾಡಿದರು. ಜೀವರಾಶಿಯ ವಿವಿಧ ಸಂಭಾವ್ಯ ಉಪಯೋಗಗಳ ಬಗ್ಗೆ ವಿವರಿಸಿದರು.
ಫರೀದಾಬಾದ್ನ ಎನ್ಪಿಟಿಐ ಮಹಾ ನಿರ್ದೇಶಕ ಡಾ.ತೃಪ್ತಾ ಠಾಕೂರ್ ಅವರು ಮಾತನಾಡಿ, ಕೃಷಿ-ಅವಶೇಷಗಳ ಉದ್ದೇಶಪೂರ್ವಕ ಬಳಕೆ ಮತ್ತು ಗಳಿಕೆಯ ಸಾಮಥ್ರ್ಯವನ್ನು ಹಂಚಿಕೊಳ್ಳಲು ಆದರ್ಶ ವೇದಿಕೆಯನ್ನು ಒದಗಿಸಿದ್ದು, ರೈತರು ಕಾರ್ಯಾಗಾರದ ಸದುಪಯೋಗ ಪಡೆದುಕೊಳ್ಳಬೇಕು ಎಂದರು.
ಕಾರ್ಯಕ್ರಮದಲ್ಲಿ ಫರೀದಾಬಾದ್ನ ಎನ್ಪಿಟಿಐ ಪ್ರಧಾನ ನಿರ್ದೇಶಕ ಡಾ.ಮಂಜು ಮಾಮ್, ಮಿಷನ್ ಸದಸ್ಯರಾದ ಪ್ರಫುಲ್ ಚಂದ್ರ ಡೋಂಗ್ರೆ, ಸಮರ್ಥ, ಹಗರಿಯ ಕೃಷಿ ವಿಜ್ಞಾನ ಕೇಂದ್ರದ ಮುಖ್ಯಸ್ಥ ಡಾ.ಜಿ.ರವಿಶಂಕರ್, ಡಾ.ಎಂ.ಗೋವಿಂದಪ್ಪ, ಎನ್ಪಿಟಿಐ ನಿರ್ದೇಶಕ ಸಂಜಯ ಪಾಟೀಲ್ ಸೇರಿದಂತೆ ಸುಮಾರು 250ಕ್ಕೂ ಹೆಚ್ಚು ರೈತರು ಉಪಸ್ಥಿತರಿದ್ದರು
WhatsApp Group Join Now
Telegram Group Join Now
Share This Article
error: Content is protected !!