Ad image

ಮಾನವನ ಸರ್ವತೋಮುಖ ಬೆಳವಣಿಗೆಗೆ ವಚನ ಸಾಹಿತ್ಯ ಅಗತ್ಯ .

Vijayanagara Vani
ಮಾನವನ ಸರ್ವತೋಮುಖ ಬೆಳವಣಿಗೆಗೆ ವಚನ ಸಾಹಿತ್ಯ ಅಗತ್ಯ .

ಬಳ್ಳಾರಿ: ಮಾನವನ ಸರ್ವತೋಮುಖ ಬೆಳವಣಿಗೆಗೆ ವಚನ ಸಾಹಿತ್ಯ ಅಗತ್ಯ ಎಂದು ಉಪನ್ಯಾಸಕ ಶರಣಪ್ಪ ಅಭಿಪ್ರಾಯ ವ್ಯಕ್ತಪಡಿಸಿದರು.
ನಗರದ ಬಸವೇಶ್ವರ ನಗರದ ರಾಷ್ಟ್ರೀಯ ಬಸವದಳದಲ್ಲಿ ಕನ್ನಡ ಸಾಹಿತ್ಯ ಪರಿಷತ್ತು ತಾಲೂಕು ಘಟಕವು ಏರ್ಪಡಿಸಿದ್ದ ದತ್ತಿ ಉಪನ್ಯಾಸ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು 12ನೇ ಶತಮಾನದ ವಚನಗಳು ಸಾಮಾಜಿಕ ಚಳುವಳಿ ಮಾಡಲು ಪ್ರೋತ್ಸಾಹ ನೀಡುತ್ತವೆ. ಸರ್ವಕಾಲಿಕ, ವಚನಗಳು ಅನರ್ಗ್ಯ ರತ್ನಗಳಿದ್ದಂತೆ ಲೋಕದ ಡೊಂಕನ್ನು ತಿದ್ದುವುದರ ಜೊತೆಗೆ ಮನುಷ್ಯನ ಡೊಂಕನ್ನು ತಿದ್ದಲು ಸಹಕಾರಿಯಾಗಿವೆ. ಸೌಜನ್ಯ ,ತಾಳ್ಮೆ ದೊಡ್ಡ ಆಸ್ತಿಗಳು. ತಮ್ಮ ಜೀವನದಲ್ಲಿ ನಿಸ್ವಾರ್ಥ ಮನೋಭಾವಗಳನ್ನು ರೂಢಿಸ್ಕೊಳ್ಳಬೇಕು ಎಂದು ತಮ್ಮ ಉಪನ್ಯಾಸದಲ್ಲಿ ತಿಳಿಸಿದರು.
ಕಾರ್ಯಕ್ರಮದ ಉದ್ಘಾಟನೆಯನ್ನು ವಕೀಲರು ಹಾಗೂ ಯೋಗ ಸಾಧಕರಾದ ಶ್ರೀಯುತ ಕಣೆಕಲ್ ಎರ್ರಿಸ್ವಾಮಿ ರವರು ಉದ್ಘಾಟಿಸಿ ತಮ್ಮ ಉದ್ಘಾಟನಾ ನುಡಿಯಲ್ಲಿ ವಚನ ಸಾಹಿತ್ಯಗಳು ಜನರ ಬದುಕನ್ನು ಕಟ್ಟಿಕೊಡುತ್ತವೆ,
ಜೊತೆಗೆ ಸಮಾಜಿಕ ಕಳಕಳಿ, ಸಾಮಾಜಿಕ ಚಿಂತನೆಯನ್ನು ಮಾಡುವಲ್ಲಿ ಸಹಕಾರಿಯಾಗುತ್ತವೆ ಎಂದು ನುಡಿದರು

ರಾಷ್ಟ್ರೀಯ ಬಸವದಳದ ರಾಜ್ಯ  ಉಪಾಧ್ಯಕ್ಷರಾದ    ಕೆ ವಿ ರವಿಶಂಕರ್ ಮಾತನಾಡಿ      ಬಸವಣ್ಣನವರ ಅನುಭವ ಮಂಟಪದಲ್ಲಿ ಚರ್ಚೆಯಾಗುತ್ತಿದ್ದ ವಿಷಯಗಳು    ಇಂದಿನ ಸಂಸತ್ತಿನಲ್ಲಿ ಚರ್ಚೆಯಾಗಬೇಕು ಎಂದರು.
ಉಪಸ್ಥಿತರಿದ್ದರು ಜಿಲನ್ ಬಾಷಾ, ತಾಲೂಕು ಘಟಕದ ಅಧ್ಯಕ್ಷರಾದ ನಾಗರೆಡ್ಡಿ ಕೆ ವಿ , ಅಖಂಡ ಬಳ್ಳಾರಿ ಜಿಲ್ಲೆಯ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ಡಾಕ್ಟರ್ ನಿಷ್ಟಿ ರುದ್ರಪ್ಪ ರವರು ಪ್ರಾಸ್ತಾವಿಕ ನುಡಿದರು.

ಮುಖ್ಯ ಅತಿಥಿಗಳಾಗಿ  ವರದಿಗಾರರಾದ ಎಸ್ ಕಿನ್ನೂರೇಶ್ವ
ಪರಿಷತ್ತಿನ ಅಧ್ಯಕ್ಷರಾದ ಎಚ್ ಹಂಪನ ಗೌಡ್ರು
ಕಾರ್ಯಕ್ರಮದಲ್ಲಿ ಸಾಹಿತಿಗಳಾದ ಎನ್ ಡಿ ವೆಂಕಮ್ಮ, ಅಜಯ್ ಬಣಕಾರ್, ಅಬ್ದುಲ್ ಐ, ಪ್ರಭು ಸರ್, ಉಪಸ್ಥಿತರಿದ್ದರು. ಕಾರ್ಯಕ್ರಮದಲ್ಲಿ ಸಾಹಿತ್ಯ ಪರಿಷತ್ತಿನ ಸದಸ್ಯರು, ಸಾಹಿತ್ಯ ಅಭಿಮಾನಿಗಳು ಉಪಸ್ಥಿತರಿದ್ದರು. ಅತಿಥಿಗಳಿಗೆ ಮತ್ತು ಉಪನ್ಯಾಸ ನೀಡಿದ ಶರಣಪ್ಪ ರವರಿಗೆ ಗೌರವಿಸಲಾಯಿತು. ಚಾಂದ್ ಪಾಷಾ ತಾಲೂಕು ಅಧ್ಯಕ್ಷರಾದ ನಾಗರೆಡ್ಡಿ ಕೆ ವಿ ಉಪಸ್ಥಿತರಿದ್ದರು..​

Share This Article
error: Content is protected !!
";