ಪ್ರತಿಭೆಗಳನ್ನು ಪ್ರೋತ್ಸಾಹಿಸುವುದೇ ಪಂಚಮಸಾಲಿ ಸಮಾಜದ ಧ್ಯೇಯ : ವಚನಾನಂದ ಶ್ರೀ

Vijayanagara Vani
ಪ್ರತಿಭೆಗಳನ್ನು ಪ್ರೋತ್ಸಾಹಿಸುವುದೇ ಪಂಚಮಸಾಲಿ ಸಮಾಜದ ಧ್ಯೇಯ : ವಚನಾನಂದ ಶ್ರೀ
filter: 0; fileterIntensity: 0.0; filterMask: 0; brp_mask:0; brp_del_th:null; brp_del_sen:null; delta:null; module: photo;hw-remosaic: false;touch: (-1.0, -1.0);sceneMode: 32768;cct_value: 0;AI_Scene: (-1, -1);aec_lux: 0.0;aec_lux_index: 0;albedo: ;confidence: ;motionLevel: -1;weatherinfo: null;temperature: 39;
 ಕೊಟ್ಟೂರು : ಪ್ರತಿಭೆಗಳನ್ನು ಪ್ರೋತ್ಸಾಹಿಸುವುದೇ ಪಂಚಮಸಾಲಿ ಸಮಾಜದ ಧ್ಯೇಯವಾಗಿದೆ. ಎಂದು ಹರಿಹರ ಪೀಠದ ಶ್ವಾಸಗುರು ಶ್ರೀ ವಚನಾನಂದ ಸ್ವಾಮೀಜಿ ಆಶೀರ್ವಚನದಲ್ಲಿ ಹೇಳಿದರು.
 ಪಟ್ಟಣದ ಮಹದೇವ ಶಾಲಾ ಆವರಣದಲ್ಲಿ ವೀರಶೈವ ಪಂಚಮಸಾಲಿ ಸಮಾಜದಿಂದ  ಆಯೋಜಿಸಿದ್ದ ಪ್ರತಿಭಾ ಪುರಸ್ಕಾರ ಹಾಗೂ ನಿವೃತ್ತ ನೌಕರರಿಗೆ ಸನ್ಮಾನ ಕಾರ್ಯಕ್ರಮದ ದಿವ್ಯ ಸಾನಿಧ್ಯ ವಹಿಸಿ ಮಾತನಾಡಿದರು.
 ಸಮಾಜದ ವಿದ್ಯಾರ್ಥಿಗಳು ರಾಜ್ಯಕ್ಕೆ ಮೊದಲ ರ್‍ಯಾಂಕ್ ತಂದಿರುವುದು ಸಂತೋಷದ ಸಂಗತಿ. ಹರಿಹರ ಪೀಠ ವಿದ್ಯಾರ್ಥಿಗಳಲ್ಲಿ ಆತ್ಮಸ್ಥೈರ್ಯ ತುಂಬಿದೆ. ನಮ್ಮ ಸಮಾಜದ ವಿದ್ಯಾರ್ಥಿಗಳು ಕೇಂದ್ರದ ಓಬಿಸಿ ಪಟ್ಟಿಯಲ್ಲಿ ಸೇರಬೇಕು ಎನ್ನುವುದು ಮಹಾದಾಶೆಯಾಗಿದೆ. ಈ ನಿರ್ಣಯ ಕೋರ್ಟ್ ಹಂತದಲ್ಲಿದ್ದು, ಒಂದು ವೇಳೆ ಜಾರಿಯಾದರೆ ನಮ್ಮ ಮಕ್ಕಳು ಉನ್ನತ  ಐಎಎಸ್, ಐಪಿಎಸ್ ಹಾಗೂ ನೀಟ್ ಪರೀಕ್ಷೆಗಳಿಗೆ ಸಹಕಾರಿಯಾಗುತ್ತದೆ. ಈ ನಿಟ್ಟಿನಲ್ಲಿ ಸದಾಕಾಲ ಪೀಠವು ವಿದ್ಯಾರ್ಥಿಗಳಿಗೆ ಬೆನ್ನೆಲುಬಾಗಿರುತ್ತದೆ. ಎಂದರು 
 ಪಂಚಮಸಾಲಿ ಸಮಾಜದ ಜಿಲ್ಲಾ ಬಿಜೆಪಿ ಅಧ್ಯಕ್ಷರಾದ ಚನ್ನಬಸವನಗೌಡ ಮಾತನಾಡಿ ಎಲ್ಲಾ ಸಮಾಜಗಳಲ್ಲಿ ಉತ್ತಮ ಬಾಂಧವ್ಯ ಹೊಂದಿದ ಸಮಾಜವೇ  ವೀರಶೈವ ಪಂಚಮಸಾಲಿ ಸಮಾಜವಾಗಿದೆ. ಎಂದರು
 ವೀರಶೈವ ಪಂಚಮಸಾಲಿ ಸಮಾಜದ ರಾಜ್ಯ ಘಟಕದ ಅಧ್ಯಕ್ಷರಾದ ಬಾವಿಬೆಟ್ಟಪ್ಪ ಮಾತನಾಡಿ ಸಮಾಜದಿಂದ 2004 ರಿಂದ ವಿದ್ಯಾರ್ಥಿಗಳ ಪ್ರತಿಭೆಯನ್ನು ಗುರುತಿಸಿ ಪ್ರೋತ್ಸಾಹಿಸಲಾಗುತ್ತಿರುವುದು ಹೆಮ್ಮೆಯ ಸಂಗತಿಯಾಗಿದೆ. ಇದರಿಂದ ನಮ್ಮ ಸಮಾಜಕ್ಕೆ ಒಳ್ಳೆಯ ಹೆಸರು ಮತ್ತು ಕೀರ್ತಿ ದೊರೆತು ಸಮಾಜ ವಿಸ್ತರಣೆಯಾಗಲಿ ಎಂದು ಹೇಳಿದರು.
 ಈ ವೇಳೆ ಶ್ರೀಗಳು ಪ್ರಸಕ್ತ ಸಾಲಿನಲ್ಲಿ ರಾಜ್ಯಮಟ್ಟಕ್ಕೆ ಮೊದಲ ಹಾಗೂ ಹತ್ತನೇ ರ್‍ಯಾಂಕ್ ಗಳಿಸಿದ ಇಂದು  ಕಾಲೇಜಿನ ವಿದ್ಯಾರ್ಥಿಗಳಾದ ಬಿವಿ ಕವಿತಾ ಹಾಗೂ ಅಮೃತ ರನ್ನು ಸನ್ಮಾನಿಸಿದರು. ತಾಲೂಕಿನ ಸಮಾಜದ ಐದು  ಪ್ರಗತಿಪರ ರೈತರನ್ನು, ಎಸ್ ಎಸ್ ಎಲ್ ಸಿ ಪರೀಕ್ಷೆಯಲ್ಲಿ ಅತಿ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳು ಹಾಗೂ ನಿವೃತ್ತ ನೌಕರರನ್ನು ಈ ಸಂದರ್ಭದಲ್ಲಿ ಸನ್ಮಾನಿಸಿ ಗೌರವಿಸಲಾಯಿತು. ಪಂಚಮಸಾಲಿ ಸಮಾಜದ ಚಾಪಿ ಚಂದ್ರಪ್ಪ, ಕೊಟ್ರಪ್ಪ ಎಚ್ ರೇವಣ್ಣ ಕಲ್ಲೇಶಪ್ಪ ಇಂಜಿನಿಯರ್ ಅಶೋಕ್ ಮುಕೇಶ  ಇಂದು ಕಾಲೇಜಿನ ಎಚ್ ಎನ್ ವೀರಭದ್ರಪ್ಪ, ಬಿ ಪಂಪಾಪತಿ ಹಾಗೂ ಸಮಾಜದ ಬಂಧು ಬಾಂಧವರು ಉಪಸ್ಥಿತರಿದ್ದರು
WhatsApp Group Join Now
Telegram Group Join Now
Share This Article
error: Content is protected !!