Ad image

ದೇಶಸೇವೆಗೆ ಯುವಕರನ್ನು ತರಬೇತುಗೊಳಿಸುತ್ತಿರುವ ವೀರ ಬಹಾದ್ದೂರ್ ಹೆಂಜಾ ನಾಯ್ಕ ಸೇನಾ ಆಯ್ಕೆ ಪೂರ್ವ ತರಬೇತಿ ಶಾಲೆ

Vijayanagara Vani
ದೇಶಸೇವೆಗೆ ಯುವಕರನ್ನು ತರಬೇತುಗೊಳಿಸುತ್ತಿರುವ ವೀರ ಬಹಾದ್ದೂರ್ ಹೆಂಜಾ ನಾಯ್ಕ ಸೇನಾ ಆಯ್ಕೆ ಪೂರ್ವ ತರಬೇತಿ ಶಾಲೆ
ಸೇನಾಪಡೆಗಳನ್ನು ಸೇರಿ ದೇಶಸೇವೆ ಮಾಡಬೇಕೆನ್ನುವುದು ಸಾವಿರಾರು ಯುವಕರ ಗುರಿಯಾಗಿದ್ದರೂ, ಸೇನಾ ಆಯ್ಕೆ ಪ್ರಕ್ರಿಯೆ, ತನ್ನಲ್ಲಿ ಇರಬೇಕಾದ ಅರ್ಹತೆ, ತಾನು ಪಡೆಯಬೇಕಾದ ತರಬೇತಿ ಇವೆಲ್ಲವುಗಳ ಮಾಹಿತಿಯ ಕೊರತೆಯಿಂದ , ನೇರವಾಗಿ ಸೇನಾ ನೇಮಕಾತಿ ರ್ಯಾಲಿಗಳಲ್ಲಿ ಭಾಗವಹಿಸಿ, ಆಯ್ಕೆಯಾಗುವಲ್ಲಿ ವಿಫಲರಾದವರ ಸಂಖ್ಯೆ ಅತ್ಯಧಿಕವಾಗಿದೆ. ಯುವ ಜನತೆಯ ಈ ಸಮಸ್ಯೆಗೆ ಪರಿಹಾರ ಒದಗಿಸಿ, ರಾಜ್ಯದ ಯುವಕರ ದೇಶಸೇವೆಯ ಕನಸನ್ನು ನನಸು ಮಾಡುವಲ್ಲಿ ಉತ್ತರ ಕನ್ನಡ ಜಿಲ್ಲೆಯ ಮಾಜಾಳಿಯಲ್ಲಿ ಸರಕಾರದ ವತಿಯಿಂದಲೇ ಆರಂಭಿಸಲಾಗಿರುವ ವೀರ ಬಹಾದ್ದೂರ್ ಹೆಂಜಾ ನಾಯ್ಕ ಸೇನಾ ಆಯ್ಕೆ ಪೂರ್ವ ಉಚಿತ ತರಬೇತಿ ಶಾಲೆ ಅತ್ಯಂತ ಕ್ರಿಯಾಶೀಲವಾಗಿದೆ.
ರಾಜ್ಯ ಹಿಂದುಳಿಗ ವರ್ಗಗಳ ಇಲಾಖೆಯ ವತಿಯಿಂದ ಆರಂಭಿಸಲಾಗಿರುವ ಈ ತರಬೇತಿ ಶಾಲೆಯಲ್ಲಿ, ಭಾರತೀಯ ಸೇನೆ/ಇತರೆ ಯುನಿಫಾರ್ಮ ಸೇವೆಗಳಿಗೆ ಸೇರಬಯಸುವ ರಾಜ್ಯದ ಹಿಂದುಳಿದ ವರ್ಗಗಳ ಅರ್ಹ ಅಭ್ಯರ್ಥಿಗಳಿಗೆ ಆಯ್ಕೆಯ ಪೂರ್ವ ಸಿದ್ಧತೆ ಬಗ್ಗೆ ವೃತ್ತಿ ಮಾರ್ಗದರ್ಶನ ಹಾಗೂ ತರಬೇತಿಯನ್ನು ಉಚಿತ ಊಟ ಮತ್ತು ವಸತಿ ಸೌಲಭ್ಯಗಳೊಂದಿಗೆ ನೀಡಿ, ಹೆಚ್ಚಿನ ಸಂಖ್ಯೆಯಲ್ಲಿ ರಾಜ್ಯದ ಹಿಂದುಳಿದ ವರ್ಗಗಳ ಅಭ್ಯರ್ಥಿಗಳು ಸೇವೆ/ಇತರೆ ಸೇವೆಗಳಿಗೆ ಆಯ್ಕೆಯಾಗಲು ಪ್ರೋತ್ಸಾಹಿಸಲಾಗುತ್ತಿದ್ದು, ತರಬೇತಿ ಅವಧಿ 4 ತಿಂಗಳಾಗಿದ್ದು, ಪ್ರತೀ ಬ್ಯಾಚ್ ನಲ್ಲಿ 100 ಜನರಂತೆ, ವರ್ಷದಲ್ಲಿ 3 ಬ್ಯಾಚ್ಗಳಿಗೆ ತರಬೇತಿ ನೀಡಲಾಗುತ್ತದೆ.
ಈ ಸೇನಾ ತರಬೇತಿ ಶಾಲೆಗೆ ಸೇರ್ಪಡೆಗೊಳ್ಳಲು ಅಭ್ಯರ್ಥಿಯು ಭಾರತದ ಪ್ರಜೆಯಾಗಿದ್ದು, ಕರ್ನಾಟಕದ ಖಾಯಂ ನಿವಾಸಿಯಾಗಿರಬೇಕು. ಕರ್ನಾಟಕ ರಾಜ್ಯ ಅಧಿಸೂಚಿಸಿರುವ ಹಿಂದುಳಿದ ವರ್ಗಗಳ ಪ್ರವರ್ಗ-1, 2(ಎ), 3(ಎ) ಹಾಗೂ 3(ಬಿ) ಗಳ ಅಭ್ಯರ್ಥಿಯಾಗಿರಬೇಕು.ಅಭ್ಯರ್ಥಿಯು 10ನೇ ತರಗತಿಯಲ್ಲಿ ಉತ್ತೀರ್ಣವಾಗಿದ್ದು, ಪ್ರತಿ ವಿಷÀಯದಲ್ಲಿ ಕನಿಷ್ಠ್ಠ 33 ಅಂಕಗಳನ್ನು ಪಡೆದಿರಬೇಕು. ಮತ್ತು ಸರಾಸರಿ ಶೇಕಡ 45 ಅಂಕಗಳನ್ನು ಪಡೆದಿರಬೇಕು. 17 ರಿಂದ 20 ವರ್ಷ ವಯೋಮಿತಿಯೊಳಗಿರಬೇಕು. ಒಬ್ಬ ಅಭ್ಯರ್ಥಿಯು ಒಂದು ಬಾರಿ ಮಾತ್ರ ಈ ತರಬೇತಿ ಸೌಲಭ್ಯವನ್ನು ಪಡೆಯಬಹುದಾಗಿದೆ. ಅಭ್ಯರ್ಥಿಗಳಿಗೆ ಎಲ್ಲಾ ಮೂಲಭೂತ ಸೌಕರ್ಯಗಳನ್ನು , ಆಟದ ಮೈದಾನವನ್ನು ಕಲ್ಪಿಸಿ, ಉಚಿತ ಊಟ ಹಾಗೂ ವಸತಿ ಸೌಲಭ್ಯವನ್ನು ಕಲ್ಪಿಸಲಾಗುತ್ತದೆ. ಒಂದು ಜೊತೆ ಟ್ರ್ಯಾಕ್ ಸೂಟ್, ದೈಹಿಕ ತರಬೇತಿಗೆ ಅಗತ್ಯವಾದ ಒಂದು ಜೊತೆ ಸಮವಸ್ತ್ರ ಹಾಗೂ ಶೂ ಗಳನ್ನು ವಿತರಿಸಲಾಗುತ್ತದೆ.
ತರಬೇತಿಗಾಗಿ ಅಭ್ಯರ್ಥಿಗಳ ಆಯ್ಕೆಗೆ ದೈಹಿಕ ಅರ್ಹತೆಗಳಾದ, ಕನಿಷ್ಠ 50 ಕೆಜಿ ತೂಕÀ, 166 ಸೆಂ.ಮೀ ಎತ್ತರ, ಎದೆಯ ಸುತ್ತಳತೆ (77+5) ಹಾಗೂ 1.6 ಕಿಮೀ ದೂರವನ್ನು 6 ನಿಮಿಷದಲ್ಲಿ ಪೂರ್ಣಗೊಳಿಸುವ ಪರೀಕ್ಷೆಗಳನ್ನು ನಡೆಸಲಾಗುವುದು. ಈ ಅರ್ಹತಾ ಪರೀಕ್ಷೆಯಲ್ಲಿ ಉತ್ತೀರ್ಣರಾದರಿಗೆ 4 ತಿಂಗಳ ಸೇನಾ ಪೂರ್ವ ಆಯ್ಕೆ ಕುರಿತು ಮಾಜಿ ಸೈನಿಕರಿಂದ ಮತ್ತು ಲಿಖಿತ ಪರೀಕ್ಷೆಗಳಿಗೆ ತರಬೇತಿ ನೀಡುವ ತರಬೇತುದಾರಿಂದ ತರಬೇತಿಯನ್ನು ನೀಡಲಾಗುವುದು.
ಈ ಸೇನಾ ಆಯ್ಕೆ ಪೂರ್ವ ತರಬೇತಿ ಶಾಲೆಯ ಅಭ್ಯರ್ಥಿಗಳಿಗೆ ದೈಹಿಕವಾಗಿ, ಮಾನಸಿಕವಾಗಿ ಹಾಗೂ ಭಾವನಾತ್ಮಕವಾಗಿ ವೃತ್ತಿ ಮಾರ್ಗದರ್ಶನ ನೀಡಲಾಗುತ್ತಿದ್ದು, ಸದರಿ ಅಭ್ಯರ್ಥಿಗಳಿಗೆ ಲಿಖಿತ ಪರೀಕ್ಷೆಗೆ ಅನ್ವಯಿಸುವಂತೆ ಸ್ಪರ್ಧಾತ್ಮಕ ಪರೀಕ್ಷೆಯ ತರಬೇತಿ ಹಾಗೂ ದೈಹಿಕ ಸಹಿಷ್ಣುತಾ ತರಬೇತಿ ಎರಡೂ ರೀತಿಯ ತರಬೇತಿಗಳನ್ನು ನೀಡಲಾಗುತ್ತದೆ.
ಅಭ್ಯರ್ಥಿಗಳಿಗೆ ಲಿಖಿತ ತರಬೇತಿಯ ಬೋಧನೆಯಲ್ಲಿ: General English , Genral Knowledge and Awareness, Quantitive Aptitude , Reasoning, Airthmatic ಬಗ್ಗೆ ಮತ್ತು ದೈಹಿಕ ಸಹಿಷ್ಣುತಾ ತರಬೇತಿಯ ಬೋಧನೆಯಲ್ಲಿ, Running , Chin up bar,Long jump , Chest extention bar, Push ups, Pull ups, Short run, 5 m. Shuttle, Toe touch, Sit ups ತರಬೇತಿಯನ್ನು ನೀಡಲಾಗುವುದು.
ತರಬೇತಿ ಅವಧಿಯಲ್ಲಿ 3 ಬಾರಿ ಪರೀಕ್ಷೆಗಳನ್ನು ನಡೆಸಿ, ಅಭ್ಯರ್ಥಿಗಳ ಕಲಿಕಾ ಸಾಮರ್ಥ್ಯವನ್ನು ಪರಿಶೀಲಿಸಲಾಗುತ್ತದೆ. 2022-23 ನೇ ಸಾಲಿನಲ್ಲಿ 2 ಬ್ಯಾಚ್ಗಳಲ್ಲಿ ಒಟ್ಟೂ 147 ಅಭ್ಯರ್ಥಿಗಳಿಗೆ ತರಬೇತಿ ನೀಡಲಾಗಿದ್ದು, 31 ಅಭ್ಯರ್ಥಿಗಳು ಅಗ್ನಿ ವೀರ್ ಹುದ್ದೆಗೆ ನೇಮಕಗೊಂಡಿರುತ್ತಾರೆ. ಅದರಲ್ಲಿ 6 ಅಭ್ಯರ್ಥಿಗಳು ಉತ್ತರ ಕನ್ನಡ ಜಿಲ್ಲೆಯವರಾಗಿರುತ್ತಾರೆ.
ಹಾಗೂ 2023-24 ನೇ ಸಾಲಿನಲ್ಲಿ ಒಟ್ಟೂ 84 ಅಭ್ಯರ್ಥಿಗಳಿಗೆ ತರಬೇತಿ ನೀಡಲಾಗಿದ್ದು, 27 ಅಭ್ಯರ್ಥಿಗಳು ಅಗ್ನಿ ವೀರ್ ನೇಮಕಾತಿಗಾಗಿ ಅರ್ಜಿ ಸಲ್ಲಿಸಿ, ಲಿಖಿತ ಪರೀಕ್ಷೆಯಲ್ಲಿ ಉತ್ತೀರ್ಣಗೊಂಡಿದ್ದು, ದೈಹಿಕ ಸಹಿಷ್ಣುತಾ ಪರೀಕ್ಷೆಯ ನಿರೀಕ್ಷೆಯಲ್ಲಿರುತ್ತಾರೆ. ಅದರಲ್ಲಿ 8 ಅಭ್ಯರ್ಥಿಗಳು ಉತ್ತರ ಕನ್ನಡ ಜಿಲ್ಲೆಯವರಾಗಿರುತ್ತಾರೆ.
ಈ ಕೇಂದ್ರದಲ್ಲಿ ತರಬೇತಿ ಪಡೆದ ಅಭ್ಯರ್ಥಿಗಳು ಭಾರತೀಯ ಸೇನಾ ಪಡೆ ಮಾತ್ರವಲ್ಲದೇ, ಅಸ್ಸಾಂ ರೈಫಲ್ಸ್, ಗಡಿ ಭದ್ರತಾ ಪಡೆ (BSF), ಕೇಂದ್ರೀಯ ಮೀಸಲು ಪೊಲೀಸ್ ಪಡೆ (CRPF) ಸಶಸ್ತç ಸೀಮಾ ಬಲ್ (SSB), ಇಂಡೋ ಟಿಬೆಟ್ ಬಾರ್ಡರ್ ಪೊಲೀಸ್(ITBP), ಕೇಂದ್ರ ಕೈಗಾರಿಕಾ ಭದ್ರತಾ ಪಡೆ (CISF), ರಾಜ್ಯ ಪೊಲೀಸ್ ಸೇವೆಗಳು ಸೇರಿದಂತೆ ಇತರೆ ಎಲ್ಲಾ ಯೂನಿಫಾರ್ಮ್ ಸೇವೆಗಳಿಗೆ ಸೇರ್ಪಡೆಯಾಗಲು ಅರ್ಹರಾಗುವಂತೆ ಅಗತ್ಯವಿರುವ ಸಮಗ್ರ ತರಬೇತಿಯನ್ನು ನೀಡಲಾಗುವುದು.

Share This Article
error: Content is protected !!
";