*ಬೆಂಗಳೂರು ನಗರ ಜಿಲ್ಲೆ, ಜುಲೈ 24ಸೈನಿಕ ಕಲ್ಯಾಣ ಮತ್ತು ಪುನರ್ವಸತಿ ಇಲಾಖೆ ನಿರ್ದೇಶನಾಲಯದ ವತಿಯಿಂದ ವೀರಗಲ್ಲು ಲೋಕಾರ್ಪಣೆ ಹಾಗೂ ‘ಕಾರ್ಗಿಲ್ ವಿಜಯ ದಿವಸ್’ ಸಮಾರೋಪ ಸಮಾರಂಭವನ್ನು 2025 ನೇ ಜುಲೈ 26 ರಂದು ಬೆಳಿಗ್ಗೆ 09:30 ಗಂಟೆಗೆ ಬೆಂಗಳೂರಿನ ಚೌಡಯ್ಯ ರಸ್ತೆಯಲ್ಲಿರುವ ಇಂದಿರಾಗಾಂಧಿ ಸಂಗೀತ ಕಾರಂಜಿ ಉದ್ಯಾನವನದ ಹತ್ತಿರ ರಾಷ್ಟ್ರೀಯ ಮಿಲಿಟರಿ ಸ್ಮಾರಕದಲ್ಲಿ ಆಚರಿಸಲಾಗುವುದು.
ಸಮಾರಂಭದಲ್ಲಿ ಪಾಲ್ಗೊಳ್ಳುವ ಮಾಜಿ ಸೈನಿಕರು ತಮ್ಮ ಮಾಜಿ ಸೈನಿಕರ ಗುರುತಿನ ಚೀಟಿಯೊಂದಿಗೆ ಭಾಗವಹಿಸಬಹುದಾಗಿದೆ. ವಾಹನಗಳನ್ನು ನೆಹರು ತಾರಾಲಯದ ಕಾಂಪೌಂಡ್ ಒಳಗೆ ನಿಲ್ಲಿಸಲು ವ್ಯವಸ್ಥೆ ಕಲ್ಲಿಸಲಾಗಿದೆ ಮತ್ತು ನೆಹರು ತಾರಾಲಯದ ಎದುರಿನ ರಾಷ್ಟ್ರೀಯ ಮಿಲಿಟರಿ ಸ್ಮಾರಕದ ಗೇಟ್ ಬಳಿ ಆಸನಗಳು ವ್ಯವಸ್ಥೆಯ ಮಾರ್ಗಸೂಚಿಯಿದ್ದು, ಅದರನ್ವಯ ಆಸನಗಳನ್ನು ಗ್ರಹಣ ಮಾಡಬೇಕೆಂದು ಸೈನಿಕ ಕಲ್ಯಾಣ ಮತ್ತು ಪುನರ್ವಸತಿ ಇಲಾಖೆ ನಿರ್ದೇಶನಾಲಯದ ಪ್ರಭಾರ ನಿರ್ದೇಶಕರಾದ ಎಂ.ಎಸ್.ಲೋಲಾಕ್ಷ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.