ಅಶೋಕ ಗುಡಿಕೋಟಿಗೆ.”ವಿಶ್ವ ಪ್ರಜಾಸೇವಾ ರತ್ನ” ರಾಷ್ಟ್ರೀಯ ಪ್ರಶಸ್ತಿ.

Vijayanagara Vani
ಅಶೋಕ ಗುಡಿಕೋಟಿಗೆ.”ವಿಶ್ವ ಪ್ರಜಾಸೇವಾ ರತ್ನ” ರಾಷ್ಟ್ರೀಯ ಪ್ರಶಸ್ತಿ.
ಗಂಗಾವತಿ: ವಿಜಯನಗರ ಜಿಲ್ಲೆಯ ಕಮಲಾಪುರದ ರೈತ ಭವನದಲ್ಲಿ ವಿಶ್ವದರ್ಶನ ದಿನ ಪತ್ರಿಕೆಯ ಸಂಪಾದಕರಾದ ಡಾ ಎಸ್ ಎಸ್ .ಪಾಟೀಲ್.ರವರ ಸಾರತ್ಯದಲ್ಲಿ ನಾಲ್ಕನೇ ಭಾವೈಕ್ಯತೆ ಸಮ್ಮೇಳನ ನಡೆಯಿತು  ರಾಜ್ಯದ ವಿವಿಧ ದಾರ್ಶಿನಿಕರು. ಮಠಾದೀಶರು. ಚಿಂತಕರು. ಮೌಲ್ವಿಗಳು.ಸಂತರು ಇನ್ನು ಅನೇಕ ಧರ್ಮದ ಅನುಯಾಯಿಗಳು ಸಮ್ಮೇಳನದಲ್ಲಿ ಭಾಗವಹಿಸಿದ್ದರು. ಈ ಶುಭ ಸಂಧರ್ಬದಲ್ಲಿ ಅಶೋಕ್ ಗುಡಿಕೋಟೆ ಅವರಿಗೆ  ಸಾಹಿತ್ಯ ಹಾಗು ಸಂಘಟನೆ ಸೇವೆಯ ಚಟುವಟಿಕೆಗಳನ್ನು ಗಮನಿಸಿ 2024 ನೇ ಸಾಲಿನ ರಾಷ್ಟ್ರೀಯ (ನ್ಯಾಷನಲ್ ) ” ವಿಶ್ವ ಪ್ರಜಾ ಸೇವಾ ರತ್ನ” ಪ್ರಶಸ್ತಿ ನೀಡಿ ಗೌರವಿಸಿದರು. ಇನ್ನು ಈ ಕಾರ್ಯಕ್ರಮಕ್ಕೆ ರಾಜ್ಯದ ವಿವಿಧ ಕಡೆಯಿಂದು ಸಾದಕರು. ಕಲಾವಿದರು. ನಿವೃತ್ತ ಸರಕಾರಿ ಅಧಿಕಾರಿಗಳು ಭಾಗವಹಿಸಿದ್ದರು.ಈ ಸಂದರ್ಭದಲ್ಲಿ  ಸಂಪಾದಕರಾದ ಡಾ ಎಸ್ ಎಸ್ ಪಾಟೀಲ್ ಅವರು ಮಾತನಾಡಿ ವೈದ್ಯಕೀಯ, ದೇಶಸೇವ(ವೀರಯೋದರು), ಸಂಗೀತ, ಭರತನಾಟ್ಯ, ಚಿತ್ರಕಲೆ, ಸಿನಿಮಾಕ್ಷೇತ್ರ, ಯಕ್ಷಗಾನ, ಕ್ರೀಡೆ, ಕೃಷಿ, ಪರಿಸರ, ರಾಜಕೀಯ ಸಮಾಜಸೇವೆ, ಎಲೆಕ್ಟ್ರಾನಿಕ್ ಮಾಧ್ಯಮ ಹಾಗೂ ಪತ್ರಿಕಾ ಮಾಧ್ಯಮ, ಜಾನಪದ, ಸಾಂಸ್ಕೃತಿಕ ಕಲಾ ಕ್ಷೇತ್ರಗಳಲ್ಲಿ ಗಣನೀಯವಾಗಿ ಸೇವೆ ಸಲ್ಲಿಸುತ್ತಿರುವ ಎಲ್ಲರಿಗೂ ಈ 4ನೇ ಭಾವೈಕ್ಯ ಸಮ್ಮೇಳನದಲ್ಲಿ  ರಾಷ್ಟ್ರೀಯ ಪ್ರಶಸ್ತಿಯನ್ನು ಕೊಟ್ಟು ಗೌರವಿಸುತ್ತಿದ್ದೇವೆ ನಾಡಿನ ಹರ-ಗುರು-ಶರಣರ ಅಶೀರ್ವಾದ, ಜನರ ಆಶೀರ್ವಾದ ನಮ್ಮ ಮೇಲೆ ಸದಾಕಾಲ ಇರಲೆಂದು ಶುಭ ಹಾರೈಸಿದರು.
WhatsApp Group Join Now
Telegram Group Join Now
Share This Article
error: Content is protected !!