ಶ್ರಮಜೀವಿ ಕಟ್ಟಡ ಕಾರ್ಮಿಕರಿಂದ ಮತದಾನ ಜಾಗೃತಿ ಜಾಥಾ.

Vijayanagara Vani
ಶ್ರಮಜೀವಿ ಕಟ್ಟಡ ಕಾರ್ಮಿಕರಿಂದ ಮತದಾನ ಜಾಗೃತಿ ಜಾಥಾ.

ಗಂಗಾವತಿ: ನಗರದ ಶ್ರಮಜೀವಿ ಕಲ್ಯಾಣ ಕರ್ನಾಟಕ ಕಟ್ಟಡ ನಿರ್ಮಾಣ ಮತ್ತು ಇತರೆ ಕಾರ್ಮಿಕರ ಸೇವಾ ಸಂಘವು ,ತಾಲೂಕು ಸ್ವೀಪ್ ಸಮಿತಿ ,ಕಾರ್ಮಿಕ ಇಲಾಖೆ ಹಾಗೂ ನಗರಸಭೆ ಸಹಯೋಗದಲ್ಲಿ ಇಂದು ವಿಶ್ವ ಕಾರ್ಮಿಕ ದಿನಾಚರಣೆ ಅಂಗವಾಗಿ ಲೋಕಸಭಾ ಚುನಾವಣೆ 2024 ಮತದಾನ ಜಾಗೃತಿ ಜಾಥಾ  ನಡೆಸಿದರು. ಚನ್ನಬಸವಸ್ವಾಮಿ ಮಠದ ಆವರಣದಿಂದ ಪ್ರಾರಂಭವಾದ ಜಾಥಾಕ್ಕೆ ಸ್ವೀಪ್ ಜಿಲ್ಲಾ ರಾಯಭಾರಿ ಡಾ.ಶಿವಕುಮಾರ ಮಾಲಿಪಾಟೀಲ ಚಾಲನೆ ನೀಡಿದರು. ಮಹಾತ್ಮ ಗಾಂಧಿ ವೃತ್ತ,ಬಸವಣ್ಣ ವೃತ್ತ, ಡಾ.ಬಿ.ಆರ್.ಅಂಬೇಡ್ಕರ್ ವೃತ್ತ,ಬಸ್ ನಿಲ್ದಾಣದ ಮಾರ್ಗವಾಗಿ ಸಂಘಟನೆಯ ಕಚೇರಿಯವರೆಗೆ ಜಾಥಾ ಸಂಚರಿಸಿತು.

- Advertisement -
Ad imageAd image

ಡೊಳ್ಳು ಬಾರಿಸುತ್ತಾ, ಮತದಾನ ಜಾಗೃತಿ ಘೋಷಣೆಗಳನ್ನು ಕೂಗುತ್ತಾ , ಫಲಕಗಳನ್ನು ಹಿಡಿದು ಸಾಗಿದ ಜಾಥಾವು, ಮೇ 7 ರಂದು ನಡೆಯುವ ಲೋಕಸಭಾ ಚುನಾವಣೆಯಲ್ಲಿ ಪ್ರತಿಯೊಬ್ಬರೂ ತಮ್ಮ ಹಕ್ಕು ಚಲಾಯಿಸಬೇಕು,ಯಾವುದೇ ಆಮಿಷಗಳಿಗೆ,ಪ್ರಚೋದನೆಗೆ ಒಳಗಾಗದೇ  ತಮ್ಮ ಇಷ್ಟದ ಅಭ್ಯರ್ಥಿಗಳಿಗೆ ಮತ ಚಲಾಯಿಸಿ,ಜಿಲ್ಲೆಯಲ್ಲಿ ಅತಿಹೆಚ್ಚು ಮತದಾನ ಪ್ರಮಾಣ ದಾಖಲಿಸಬೇಕು ಎಂದು ಜಾಥಾ ಮೂಲಕ ಜನಜಾಗೃತಿ ಮೂಡಿಸಲಾಯಿತು.

ಸಂಘಟನೆಯ ಸಂಸ್ಥಾಪಕ ಅಧ್ಯಕ್ಷ ಶಿವಕುಮಾರ ಗೌಡ, ಪಂಪಪಾತಿ ಇಂಗಳಗಿ ಜಿಲ್ಲಾ ಅಧ್ಯಕ್ಷರು,ರಾಮು, ವೀರೇಶ್, ಚಂದ್ರು, ಶ್ರೀನಿವಾಸ್, ಗಾದಿಲಿಂಗಪ್ಪ, ಹನುಮಂತಪ್ಪ, ಭೋಜರಾಜ್, ಬಸವರಾಜ್, ಶರಣಬಸವ, ಮಂಜುನಾಥ್, ವೀರಣ್ಣ, ಲಕ್ಷ್ಮಣ, ರಂಗಣ್ಣ, ಗೌಸ್, ಭೀಮೇಶ್,ಕಾನೂನು ಸಲಹೆಗಾರ ಪ್ರಕಾಶ ಕುಸುಬಿ, ನಗರಸಭೆ ವ್ಯವಸ್ಥಾಪಕ   ಷಣ್ಮುಖಪ್ಪ,ಆರೋಗ್ಯ ನಿರೀಕ್ಷಕ ನಾಗರಾಜ, ಉದ್ಯಮಿ ಶರಣಬಸವರಾಜ ಎಸ್ ಗದಗ ಸೇರಿದಂತೆಸಿಬ್ಬಂದಿ,ನೂರಾರು ಕಟ್ಟಡ ಕಾರ್ಮಿಕರು ಜಾಥಾದಲ್ಲಿ  ಪಾಲ್ಗೊಂಡಿದ್ದರು.

Share This Article
error: Content is protected !!
";