ಒತ್ತಡಮುಕ್ತ ಜೀವನ ನಡೆಸುವ ಮಾರ್ಗೋಪಾಯದಲ್ಲಿ ನಡೆಯಿರಿ

Vijayanagara Vani
ಒತ್ತಡಮುಕ್ತ ಜೀವನ ನಡೆಸುವ ಮಾರ್ಗೋಪಾಯದಲ್ಲಿ ನಡೆಯಿರಿ
ದಾವಣಗೆರೆ ಜು.09 ಇತ್ತೀಚಿನ ದಿನದಲ್ಲಿ ಒತ್ತಡದ ಜೀವನದಿಂದ ಮಾನಸಿಕ ಅನಾರೋಗ್ಯಕ್ಕೆ ತುತ್ತಾಗುತ್ತಿದ್ದಾರೆ. ಈ ಒತ್ತಡ ಮುಕ್ತ ಜೀವನವನ್ನು ನಡೆಸುವ ಮಾರ್ಗೋಪಾಯಗಳನ್ನು ತಿಳಿದುಕೊಂಡು ಮುನ್ನಡೆದರೆ ಮಾತ್ರ ಪ್ರತಿಯೊಬ್ಬರೂ ಮಾನಸಿಕ ಆರೋಗ್ಯವಂತರಾಗಿರಲು ಸಾಧ್ಯ ಎಂದು ತಾಲ್ಲೂಕು ಆರೋಗ್ಯಾಧಿಕಾರಿ ಡಾ.ದೇವರಾಜ್ ಪಟಗೆ ತಿಳಿಸಿದರು.
ಅವರು ಮಂಗಳವಾರ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಜಿಲ್ಲಾ ಮಾನಸಿಕ ಆರೋಗ್ಯ ಕಾರ್ಯಕ್ರಮ ವತಿಯಿಂದ ನಗರದ ತಾಲ್ಲೂಕು ಆರೋಗ್ಯ ಅಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಆಯೋಜಿಸಲಾಗಿದ್ದ ನಗರ ಪ್ರದೇಶದ ವ್ಯಾಪ್ತಿಗೆ ಬರುವ ಆಶಾ ಕಾರ್ಯಕರ್ತೆಯರಿಗೆ ಮಾನಸಿಕ ಆರೋಗ್ಯದ ಕುರಿತ ತರಬೇತಿ ಕಾರ್ಯಕ್ರಮದಲ್ಲಿ ಮಾನಸಿಕ ಆರೋಗ್ಯ ಕೇಂದ್ರದ ಪೋ ಸ್ಟರ್ ಬಿಡುಗಡೆ ಮಾಡುವುದರ ಮೂಲಕ ಉದ್ಘಾಟಿಸಿ ಮಾತಾನಾಡಿದರು.
ಯಾರಲ್ಲಿ ಮಾನಸಿಕ ಕಿರಿಕಿರಿ, ನಿವೇದನೆ, ಚಿಂತೆ, ವ್ಯಥೆ, ನಕಾರಾತ್ಮಕ ಆಲೋಚನೆ, ಇರುತ್ತದೆಯೋ ಅಂಥವರು ಮಾನಸಿಕ ಆರೋಗ್ಯ ಸಹಾಯವಾಣಿ 14416 ಗೆ ಕರೆ ಮಾಡಿ ಆಪ್ತ ಸಮಾಲೋಚನೆ ಪಡೆಯಬಹುದಾಗಿದೆ. ಹಾಗೂ ಪ್ರತಿಯೊಂದು ಸರ್ವೇಯಲ್ಲಿ ಮಾನಸಿಕ ಅಸ್ವಸ್ಥರನ್ನು ಗುರುತಿಸುವ ಕೆಲಸವಾಗಲಿ ಮತ್ತು ಮಾನಸಿಕ ಅಸ್ವಸ್ಥರನ್ನು ಮುಖ್ಯವಾಹಿನಿಗೆ ತರುವಲ್ಲಿ ಆಶಾಕಾರ್ಯಕರ್ತೆಯರ ಪಾತ್ರ ಮುಖ್ಯ ಎಂದರು.
ಮಾನಸಿಕ ಖಾಯಿಲೆಯೂ ಮೆದುಳಿನಲ್ಲಾಗುವ ರಾಸಾಯನಿಕ ಬದಲಾವಣೆ, ಅನುವಂಶೀಯತೆ, ಒತ್ತಡದಿಂದ ಬರುವಂತದಾಗಿದೆ. ಯಾವುದೇ ದೆವ್ವ ಭೂತ ಮಾಟ ಮಂತ್ರ ಪೂರ್ವಜನ್ಮದ ಪಾಪ ಬರುವಂತದಲ್ಲ, ಈ ರೀತಿಯ ಮೂಡನಂಬಿಕೆಗೆ ಒಳಗಾಗಿ ಜನಸಾಮಾನ್ಯರು ಯಾವುದೇ ತರಹದ ಅಹಿತಕರ ಘಟನೆಗಳನ್ನು ಮಾಡಿಕೊಳ್ಳದಿರಲು ಜನಸಾಮಾನ್ಯರಿಗೆ ತಿಳಿಸಿ ಎಂದು ಆಶಾ ಕಾರ್ಯಕರ್ತೆಯರಿಗೆ ತಿಳಿಸಿದರು. ಮಾನಸಿಕ ಕಾಯಿಲೆಗೆ ಚಿಕಿತ್ಸೆ ಇದ್ದು ಮನೋವೈದ್ಯರ ಬಳಿ ಬಂದು ಚಿಕಿತ್ಸೆ ಪಡೆಯಲು ಸಲಹೆ ನೀಡಿದರು.
ಹಿರಿಯ ಕ್ಷೇತ್ರ ಆರೋಗ್ಯ ಶಿಕ್ಷಣಾಧಿಕಾರಿ ಉಮಾಪತಿ, ತಾಲ್ಲೂಕು ಕಾರ್ಯಕ್ರಮ ವ್ಯವಸ್ಥಾಪಕರಾದ ರವಿಕುಮಾರ್ ಆಶಾ ಮೇಲ್ವಿಚಾರಕರಾದ ಸುರೇಖಾ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಸೋಶಿಯಲ್ ವರ್ಕರ್ ಸಂತೋ ಷ ಕುಮಾರ್ ಎಂ ಉಪಸ್ಥಿತರಿದ್ದರು.
WhatsApp Group Join Now
Telegram Group Join Now
Share This Article
error: Content is protected !!