ರಾಜ್ಯದ SSLC ಯಲ್ಲಿ 625ಕ್ಕೆ 624 ಅಂಕ ಗಳಿಸಿದ ವಿದ್ಯಾರ್ಥಿಗಳ ಸಂಖ್ಯೆ ಎಷ್ಟು?

Vijayanagara Vani
ರಾಜ್ಯದ  SSLC ಯಲ್ಲಿ 625ಕ್ಕೆ 624 ಅಂಕ  ಗಳಿಸಿದ ವಿದ್ಯಾರ್ಥಿಗಳ ಸಂಖ್ಯೆ ಎಷ್ಟು?

ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯಮಾಪನ ಮಂಡಳಿ ಮಾರ್ಚ್ 25ರಿಮದ ಏಪ್ರಿಲ್ 6ರವರೆಗೆ ಎಸ್‌ಎಸ್‌ಎಲ್‌ಸಿ ಪರೀಕ್ಷೆ ನಡೆಸಿದ್ದು, ಇಂದು (ಮೇ 09) ಫಲಿತಾಂಶ ಪ್ರಕಟವಾಗಿದೆ. ಈ ಪರೀಕ್ಷೆಯಲ್ಲಿ ರಾಜ್ಯದ 7 ವಿದ್ಯಾರ್ಥಿಗಳು 625ಕ್ಕೆ 624 ಅಂಕಗಳನ್ನು ಪಡೆಯುವ ಮೂಲಕ ದ್ವಿತೀಯ ಸ್ಥಾನವನ್ನು ಗಳಿಸಿದ್ದಾರೆ. ಹಾಗಾದರೆ ಅವರು ಯಾವ ಜಿಲ್ಲೆಯವರು ಹಾಗೂ ಹಿನ್ನೆಲೆ ಏನು ಎನ್ನುವ ಮಾಹಿತಿಯನ್ನು ಇಲ್ಲಿ ತಿಳಿಯಿರಿ.

ಬೆಂಗಳೂರಿನ ಮೇಧಾ ಪಿ ಶೆಟ್ಟಿ, ಹರ್ಷಿತಾ ಡಿಎಂ-ಮಧುಗಿರಿ, ಚಿನ್ಮಯ್‌-ದಕ್ಷಿಣ ಕನ್ನಡ, ಸಿದ್ಧಾಂತ್‌-ಚಿಕ್ಕೋಡಿ, ದರ್ಶನ್‌-ಶಿರಸಿ, ಚಿನ್ಮಯ್‌-ಶಿರಸಿ, ಶ್ರೀರಾಮ್‌-ಶಿರಸಿ ವಿದ್ಯಾರ್ಥಿಗಳು ಎಸ್‌ಎಸ್‌ಎಲ್‌ಸಿ ಪರೀಕ್ಷೇಯಲ್ಲಿ 625ಕ್ಕೆ 624 ಅಂಕಗಳನ್ನು ಪಡೆಯುವ ಮೂಲಕ ದ್ವಿತೀಯ ಸ್ಥಾನವನ್ನು ಪಡೆದಿದ್ದಾರೆ.

SSLC ಫಲಿತಾಂಶ ಪರಿಶೀಲಿಸುವುದು ಹೇಗೆ?

* KSEAB ಫಲಿತಾಂಶ ಪುಟಕ್ಕೆ ಹೋಗಿ, karresults.nic.inಗೆ ಭೇಟಿ ನೀಡಿ.

 * ನಿಮ್ಮ ನೋಂದಣಿ ಸಂಖ್ಯೆ, ಹುಟ್ಟಿದ ದಿನಾಂಕವನ್ನು ನಮೂದಿಸಿ, ಲಾಗ್‌ ಇನ್‌ ಆಗಿ ಫಲಿತಾಂಶ ವೀಕ್ಷಣೆ ಮಾಡಬಹುದಾಗಿದೆ.

* ಅಥವಾ ನೀವು ಕರ್ನಾಟಕ SSLC ಫಲಿತಾಂಶ 2024 ಲಿಂಕ್ ಅನ್ನು ಕ್ಲಿಕ್ ಮಾಡಿ.

 * ಲಾಗಿನ್ ಆಗಿ ವಿವರವನ್ನು ಹಾಕಿ ಅಲ್ಲಿ ಸಬಮಿಟ್‌ ಬಟನ್‌ ಮೇಲೆ ಕ್ಲಿಕ್ ಮಾಡಿ

. * ಬಳಿಕ ನಿಮ್ಮ ಫಲಿತಾಂಶವನ್ನು ಪರದೆಯ ಮೇಲೆ ಪ್ರದರ್ಶಿಸಲಾಗುತ್ತದೆ.

* ಫಲಿತಾಂಶವನ್ನು ಪರಿಶೀಲಿಸಿದ ಬಳಿಕ ಅಂಕಪಟ್ಟಿಯ ಪ್ರತಿಯನ್ನು ಡೌನ್‌ಲೋಡ್ ಮಾಡಿಕೊಳ್ಳಬಹುದಾಗಿದೆ.

ರಾಜ್ಯದಲ್ಲಿ 8,59,967 ವಿಧ್ಯಾರ್ಥಿಗಳು ಪರೀಕ್ಷೆ ಬರೆದಿದ್ದು, ಈ ಪೈಕಿ 6,31,204 ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ. ಈ ಮೂಲಕ 2023-24ನೇ ಸಾಲಿನ ಶೇಕಡಾವಾರು ಫಲಿತಾಂಶ 73.40ಕ್ಕೆ ಕುಸಿತವಾಗಿದೆ. ಕಳೆದ ವರ್ಷಕ್ಕೆ ಹೋಲಿಕೆ ಮಾಡಿದರೆ ಶೇಕಡ 10ರಷ್ಟು ಕುಸಿತ ಕಂಡಿದೆ ಎನ್ನುವ ಮಾಹಿತಿ ಲಭ್ಯವಾಗಿದೆ. ಇನ್ನು ಬಾಗಲಕೋಟೆಯ ಅಂಕಿತಾ ರಾಜ್ಯಕ್ಕೆ ಪ್ರಥಮ ಸ್ಥಾನ ಪಡೆದಿದ್ದು, 625ಕ್ಕೆ 625 ಅಂಕ ಪಡೆದುಕೊಂಡಿದ್ದಾರೆ. ಇನ್ನು 7 ವಿದ್ಯಾರ್ಥಿಗಳು 624 ಅಂಕ ಪಡೆಯುವ ಮೂಲಕ ದ್ವಿತೀಯ ಸ್ಥಾನ ಪಡೆದಿದ್ದಾರೆ.

 

WhatsApp Group Join Now
Telegram Group Join Now
Share This Article
error: Content is protected !!