ಬಾರ್‌ನಲ್ಲಿ ಕೆಲಸ: ಬಾಲಕಾರ್ಮಿಕನ ರಕ್ಷಣೆ

Vijayanagara Vani
ಬಾರ್‌ನಲ್ಲಿ ಕೆಲಸ: ಬಾಲಕಾರ್ಮಿಕನ ರಕ್ಷಣೆ
ಚಿತ್ರದುರ್ಗಆಗಸ್ಟ್.09:
ಪಾನ್-ಇಂಡಿಯಾ ರೆಸ್ಕೋ ಅಂಡ್ ರಿಹ್ಯಾಬಿಲಿಟೇಶನ್ ಕ್ಯಾಂಪೇನ್ ಅಂಗವಾಗಿ ಹಿರಿಯೂರು ನಗರದಲ್ಲಿ ಬಾಲ್ಯ ಮತ್ತು ಕಿಶೋರಾವಸ್ಥೆ ಕಾರ್ಮಿಕ ನಿಷೇಧ ಕುರಿತು ಶುಕ್ರವಾರ ಅಧಿಕಾರಿಗಳ ತಂಡ ದಾಳಿ ನಡೆಸಿತು.
ಹಿರಿಯೂರು ನಗರದ ವಿವಿಧ ವಾಣಿಜ್ಯ ಸಂಸ್ಥೆಗಳು ಹಾಗೂ ಬಾರ್ ಅಂಡ್ ರೆಸ್ಟೋರೆಂಟ್‌ಗಳನ್ನು ಭೇಟಿ ಮಾಡಿ ಪರಿಶೀಲಿಸಲಾಗಿ ಬಾರ್‌ನಲ್ಲಿ ಕೆಲಸ ಮಾಡುತ್ತಿದ್ದ ಬಾಲಕಾರ್ಮಿಕನನ್ನು ಕೆಲಸದಿಂದ ಬಿಡುಗಡೆಗೊಳಿಸಿ, ಚಿತ್ರದುರ್ಗ ಸರ್ಕಾರಿ ಬಾಲಕರ ಬಾಲಮಂದಿರ ದಾಖಲು ಮಾಡಲಾಯಿತು. ನಂತರ ಮಾಲೀಕರ ವಿರುದ್ಧ ಸೂಕ್ತ ಕಾನೂನು ಕ್ರಮ ತೆಗೆದುಕೊಳ್ಳಲಾಗುತ್ತದೆ.
ತಂಡದಲ್ಲಿ ಕಾರ್ಮಿಕ ನಿರೀಕ್ಷಕ ಅಲ್ಲಾಭಕ್ಷಿ, ಬಾಲಕಾರ್ಮಿಕ ಯೋಜನಾ ಸೊಸೈಟಿ ಯೋಜನಾ ನಿರ್ದೇಶಕ ಪಿ.ಸತೀಶ್ ಕುಮಾರ್, ಶಿಶು ಅಭಿವೃದ್ಧಿ ಯೋಜನಾಧಿಕಾರಿ ರಾಘವೇಂದ್ರ, ಜಿಲ್ಲಾ ಮಕ್ಕಳ ರಕ್ಷಣಾ ಘಟಕ ಸಿಬ್ಬಂದಿ ಶಿಲ್ಪಾ, ಪೊಲೀಸ್ ಇಲಾಖೆಯ ವಿಕಾಸ್, ಮಕ್ಕಳ ಸಹಾಯವಾಣಿ ಸಿಬ್ಬಂದಿ ಚಂದನ ಇದ್ದರು.
Share This Article
error: Content is protected !!
";