Ad image

ವಿಶ್ವ ರಕ್ತದಾನಿಗಳ ದಿನಾಚರಣೆ

Vijayanagara Vani
ವಿಶ್ವ ರಕ್ತದಾನಿಗಳ ದಿನಾಚರಣೆ

ಮಾನ್ವಿ:ಪಟ್ಟಣದ ಗಂಗಾಮತಸ್ಥರ ಸಮುದಾಯ ಭವನದಲ್ಲಿ ವಿಶ್ವಸ್ವಯಂ ಪ್ರೇರಿತ ರಕ್ತದಾನಿಗಳ ದಿನಾಚರಣೆ ಅಂಗವಾಗಿ ತಾಲೂಕು ಸಾರ್ವಜನಿಕ ಆಸ್ಪತ್ರೆ, ರಿಮ್ಸ್ ರಕ್ತ ಭಂಡರ, ಅಪ್ಪು ಅಭಿಮಾನಿ ಬಳಗ, ತಾ.ಭಾರತೀಯ ರೆಡ್ ಕ್ರಾಸ್ ಸಂಸ್ಥೆ, ಹೆಚ್.ಡಿ.ಎಫ್ ಬ್ಯಾಂಕ್ ಸಂಯುಕ್ತಾಶ್ರಯದಲ್ಲಿ ನಡೆದ ರಕ್ತದಾನ ಶಿಬಿರಕ್ಕೆ ತಾಲೂಕು ಅರೋಗ್ಯಾಧಿಕಾರಿ ಡಾ.ಶರಣಬಸವ ಚಾಲನೆ ನೀಡಿ ಮಾತನಾಡಿ ದಾನಗಳಲ್ಲಿಯೇ ಅತ್ಯಂತ ಶ್ರೇಷ್ಟವಾದ ದಾನ ರಕ್ತದಾನವಾಗಿದ್ದು ದಾನಿಗಳು ನೀಡುವ 300 ಮಿ.ಲಿ.ಯಷ್ಟು ರಕ್ತವು ತುರ್ತು ಸಂದರ್ಭದಲ್ಲಿ ನಾಲ್ಕು ಜನರ ಪ್ರಾಣವನ್ನು ಉಳಿಸಬಲ್ಲದು.ರಕ್ತವನ್ನು ಕೃತಕವಾಗಿ ತಯಾರಿಸಲು ಇದುವರೆಗೂ ಸಾಧ್ಯವಾಗಿಲ್ಲ ಅದರಿಂದ ಅರೋಗ್ಯವಂತ ದಾನಿಗಳಿಂದ ಪಡೆದ ರಕ್ತವನ್ನು ಅಪಘಾತ, ಗರ್ಭಿಣಿಯರಿಗೆ ಹೆರಿಗೆ ಸಮಯದಲ್ಲಿ, ರಕ್ತಹಿನತೆಯಿಂದ ಬಳಲುತ್ತಿರುವವರಿಗೆ ನೀಡುವ ಮೂಲಕ ಜೀವವನ್ನು ಉಳಿಸುವುದಕ್ಕೆ ಸಾಧ್ಯವಾಗುವುದರಿಂದ ಪ್ರತಿಯೊಬ್ಬರೋಗ್ಯವಂತರು ಕೂಡ 6 ತಿಂಗಳಿಗೆ ಒಮ್ಮೆ ರಕ್ತವನ್ನು ದಾನ ಮಾಡಬೇಕು ಎಂದು ತಿಳಿಸಿದರು.
ರಕ್ತದಾನ ಶಿಬಿರದಲ್ಲಿ ಅಪ್ಪು ಅಭಿಮಾನಿ ಬಳಗದ ತಾ.ಗೌರವ ಅಧ್ಯಕ್ಷ ಕೆ ಸಾಜೀದ್ ಬಾಷಾ, ತಾ.ಅಧ್ಯಕ್ಷ ರೇಣುಕರಾಜ್, ಸದಸ್ಯರಾದ ರಾಜೇಶ್,ಮೋತಿ ರಾಘವೇಂದ್ರ,ಕೊAಡನಾಯಕ್, ಬಂಟಿ,ನಾಗರಾಜ, ಬಸವರಾಜಸ್ವಾಮಿ,ನಾಗು ಕುಂಬಾರ, ಅಮರೇಶ್, ಸಂದೀಪ್, ತಾ.ಭಾರತೀಯ ರೆಡ್ ಕ್ರಾಸ್ ಸಂಸ್ಥೆಯ ಮೆಹಬೂಬ್ ಮದ್ಲಾಪೂರ್, ರಿಮ್ಸ್ ರಕ್ತ ಭಂಡರದ ವೈದ್ಯರಾದ ಡಾ.ರಾಜಶ್ರೀ,ಡಾ.ಯಶವಂತ್ ಮುದಗಲ್, ಡಾ.ಯಶ್ವಿನ್ ಸೆಬರ್‌ನಾಥ್, ಡಾ.ಐಶ್ವರ್ಯ ಜೀ, ಸಿಬ್ಬಂದಿಗಳಾದ ರವಿಕುಮಾರ,ಲೋಕಪ್ಪ, ತಾಲೂಕು ಸಾರ್ವಜನಿಕ ಆಸ್ಪತ್ರೆಯ ರಕ್ತಶೇಖರಣ ಘಟಕದ ತಂತ್ರಜ್ಞಾನರಾದ ಶ್ರೀದೇವಿ,ಹೆಚ್.ಡಿ.ಎಫ್ ಬ್ಯಾಂಕಿನ ಕಾರ್ಯನಿರ್ವಹಕ ವ್ಯವಸ್ಥಾಪಕರಾದ ವೀರೇಶ್ ಸೇರಿದಂತೆ ಇನ್ನಿತರರು ಇದ್ದರು.

- Advertisement -
Ad imageAd image

ಮಾನ್ವಿ:ಪಟ್ಟಣದ ಗಂಗಾಮತಸ್ಥರ ಸಮುದಾಯ ಭವನದಲ್ಲಿ ವಿಶ್ವಸ್ವಯಂ ಪ್ರೇರಿತ ರಕ್ತದಾನಿಗಳ ದಿನಾಚರಣೆ ಅಂಗವಾಗಿ ರಕ್ತದಾನ ಶಿಬಿರ ನಡೆಯಿತು.

Share This Article
error: Content is protected !!
";