`ವೈಶ್ವಿಕ ಹಿಂದೂ ರಾಷ್ಟ್ರ ಮಹೋತ್ಸವ’ ಉತ್ಸಾಹ ವಾತಾವರಣದಲ್ಲಿ ಪ್ರಾರಂಭ  ‘ರಾಮಾಯಣ-ಮಹಾಭಾರತ’ ಈ ಗ್ರಂಥಗಳಲ್ಲಿ ನೂರಾರು ಖಗೋಳದ ಉಲ್ಲೇಖ; ಭಾರತೀಯ ಜ್ಞಾನದಿಂದಾಗಿಯೇ ಪಾಶ್ಚಿಮಾತ್ಯರ ವೈಜ್ಞಾನಿಕ ಪ್ರಗತಿ ! – ಡಾ.ನೀಲೇಶ ಓಕ್, ಅಮೇರಿಕಾ

Vijayanagara Vani
`ವೈಶ್ವಿಕ ಹಿಂದೂ ರಾಷ್ಟ್ರ ಮಹೋತ್ಸವ’ ಉತ್ಸಾಹ ವಾತಾವರಣದಲ್ಲಿ ಪ್ರಾರಂಭ  ‘ರಾಮಾಯಣ-ಮಹಾಭಾರತ’ ಈ ಗ್ರಂಥಗಳಲ್ಲಿ ನೂರಾರು ಖಗೋಳದ ಉಲ್ಲೇಖ; ಭಾರತೀಯ ಜ್ಞಾನದಿಂದಾಗಿಯೇ ಪಾಶ್ಚಿಮಾತ್ಯರ ವೈಜ್ಞಾನಿಕ ಪ್ರಗತಿ ! – ಡಾ.ನೀಲೇಶ ಓಕ್, ಅಮೇರಿಕಾ

ಸನಾತನ ಧರ್ಮವು ಶಬ್ದಪ್ರಮಾಣವನ್ನು ಆಧರಿಸಿದೆ; ಏಕೆಂದರೆ ನಮ್ಮ ಋಷಿಮುನಿಗಳು ಏನನ್ನು  ಪ್ರತ್ಯಕ್ಷ ಅನುಭವಿಸಿದರೋ, ಅದನ್ನೇ ಶಬ್ದಪ್ರಮಾಣವೆಂದು ಪರಿಗಣಿಸಿದ್ದಾರೆ. ಈ ಶಬ್ದಪ್ರಮಾಣವನ್ನು ನಾವೂ ಅನುಭವಿಸಲು ಪ್ರಯತ್ನಿಸಬೇಕು. ರಾಮಾಯಣ-ಮಹಾಭಾರತ ಮುಂತಾದ ಗ್ರಂಥಗಳಲ್ಲಿ ನೂರಾರು ಖಗೋಳಗಳ ಉಲ್ಲೇಖಗಳಿವೆ. ಅಮೇರಿಕಾ, ಕೆನಡಾ ದೇಶಗಳಲ್ಲಿರುವ 500-600 ವಿಶ್ವವಿದ್ಯಾಲಯಗಳಲ್ಲಿ ಈ ಗ್ರಂಥಗಳ  ಅಧ್ಯಯನಗಳನ್ನು ನಡೆಸಲಾಗುತ್ತಿದೆ.  ಯುರೋಪಿನಲ್ಲಿ  ವಿಜ್ಞಾನದ ಪ್ರಗತಿಯಾಗಿದ್ದರೂ, ಈ  ಜ್ಞಾನವನ್ನು ಭಾರತದಿಂದಲೇ ವಿದೇಶಗಳಿಗೆ ಒಯ್ಯಲಾಗಿದೆ. ಭಾರತದಲ್ಲಿರುವ ಸಮೃದ್ಧ ಗ್ರಂಥಗಳ ಭಾಷಾಂತರವನ್ನು ಮಾಡಿಯೇ ಪಾಶ್ಚಿಮಾತ್ಯರು ಆಧುನಿಕ ವಿಜ್ಞಾನದಲ್ಲಿ ಪ್ರಗತಿಯನ್ನು ಸಾಧಿಸಿದ್ದಾರೆ ಎಂದು ಅಮೇರಿಕೆಯ `ಇನ್ಸ್ಟಿಟ್ಯೂಟ್ ಆಫ್ ಅಡ್ವಾನ್ಸ್ಡ್ ಸಾಯನ್ಸ’ ನ  ಡಾ.ನೀಲೇಶ ನೀಲಕಂಠ ಓಕ್ ಸ್ಪಷ್ಟವಾಗಿ ಪ್ರತಿಪಾದಿಸಿದ್ದಾರೆ. ಅವರು ` ಶ್ರೀ ರಾಮನಾಥ ದೇವಸ್ಥಾನ’ ಫೋಂಡಾ, ಗೋವಾದಲ್ಲಿ ನಡೆದ ‘ವೈಶ್ವಿಕ ಹಿಂದೂ ರಾಷ್ಟ್ರ ಮಹೋತ್ಸವ’ದ ಉದ್ಘಾಟನಾ ಸಂದರ್ಭದಲ್ಲಿ  ‘ವಿಶ್ವಗುರು ಭಾರತದ ಬಲಸ್ಥಾನ;  ಸನಾತನ ಹಿಂದೂ ಧರ್ಮ’ ಕುರಿತು ಮಾತನಾಡುತ್ತಿದ್ದರು.

ಈ ಮಹೋತ್ಸವಕ್ಕೆ ಇಂಡೋನೇಷ್ಯಾದ ರಸ ಆಚಾರ್ಯ ಡಾ. ಧರ್ಮಯಶ, ಆಫ್ರಿಕಾದ ‘ಇಸ್ಕಾನ್’ನಿಂದ ಶ್ರೀವಾಸ ದಾಸ ವನಚಾರಿ, ಮಹಾಮಂಡಲೇಶ್ವರ ನರ್ಮದಾ ಶಂಕರಪುರಿಜಿ ಮಹಾರಾಜ, ‘ಇಂಟರನ್ಯಾಶನಲ್ ವೇದಾಂತ ಸೊಸೈಟಿ’ಯ ಪೂ. ಸ್ವಾಮಿ ನಿರ್ಗುಣಾನಂದ ಪುರಿ , ಶ್ರೀ ಸ್ವಾಮಿ  ಅಖಂಡಾನಂದ ಗುರುಕುಲ ಆಶ್ರಮದ ಸಂಸ್ಥಾಪಕರಾದ ಮಹಾಮಂಡಲೇಶ್ವರ ಆಚಾರ್ಯ ಸ್ವಾಮಿ ಪ್ರಣವಾನಂದ ಸರಸ್ವತಿ, ಸಂತ ರಾಮಜ್ಞಾನಿದಾಸ ಮಹಾತ್ಯಾಗಿ ಮಹಾರಾಜ, ಪ.ಪೂ. ಸಂತೋಷ ದೇವಜಿ ಮಹಾರಾಜ,  ಅಖಿಲ ಭಾರತೀಯ ಸಂತ ಸಮಿತಿ ಧರ್ಮ ಸಮಾಜದ ಮಹಾರಾಷ್ಟ್ರ ಪ್ರದೇಶಾಧ್ಯಕ್ಷ ಮಹಂತ ಡಾ. ಅನಿಕೇತ ಶಾಸ್ತ್ರಿ, ಶ್ರೀ ಸಂದೀಪ್ ರಾಜ್ಯ ಪ್ರವಕ್ತಾ, ಹಿಂದೂರಾಷ್ಟ್ರ ಸೇನಾ ಕರ್ನಾಟಕ, ಶ್ರೀ ಪುನೀತ್ ಕೆರೆಹಳ್ಳಿ ಸಂಸ್ಥಾಪಕರು ರಾಷ್ಟ್ರ ರಕ್ಷಣಾ ಪಡೆ, ‘ಸ್ವಾತಂತ್ರ್ಯವೀರ ಸಾವರ್ಕರ ರಾಷ್ಟ್ರೀಯ ಸ್ಮಾರಕ’ದ ಕಾರ್ಯಾಧ್ಯಕ್ಷ ಶ್ರೀ.ರಣಜಿತ ಸಾವರಕರ, ಮಹಾರಾಷ್ಟ್ರದ ವಾರಕರಿ ಪಂಥದ ಸಂತವೀರ ಹ.ಭ.ಪ. ಬಂಡಾತಾತ್ಯಾ ಕರಾಡಕರ ಇವರಲ್ಲದೇ ದೇಶ ವಿದೇಶಗಳಿಂದ ಹಿಂದೂ ಸಂಘಟನೆಗಳ 450 ಕ್ಕಿಂತ ಅಧಿಕ ಪ್ರತಿನಿಧಿಗಳು ಉಪಸ್ಥಿತರಿದ್ದರು.

 
ಸನಾತನ ಧರ್ಮದ ಮೇಲಾಗುವ ಆರೋಪಗಳಿಗೆ  ‘ಹಿಂದೂ ವಿಚಾರಕ ಸಂಘ’ ಉತ್ತರಿಸುವುದು !
 – ಸದ್ಗುರು (ಡಾ.) ಚಾರುದತ್ತ ಪಿಂಗಳೆ, ರಾಷ್ಟ್ರೀಯ ಮಾರ್ಗದರ್ಶಕರು, ಹಿಂದೂ ಜನಜಾಗೃತಿ ಸಮಿತಿ

ಈ ವರ್ಷದ  ಲೋಕಸಭೆ ಚುನಾವಣೆಯಲ್ಲಿ ಪಾಕಿಸ್ತಾನದ `ಐಎಸ್‌ಐ ‘ ದೊಂದಿಗೆ  ಸಂಪರ್ಕ ಹೊಂದಿದ್ದ ಖಲಿಸ್ತಾನಿ ನಾಯಕ ಅಮೃತಪಾಲ್ ಸಿಂಗ್ ಮತ್ತು ಕಾಶ್ಮೀರದಲ್ಲಿ ಭಯೋತ್ಪಾದಕರಿಗೆ ಹಣಕಾಸು ನೆರವು ನೀಡುವ ‘ರಶೀದ್ ಇಂಜಿನಿಯರ್’ ಗಳಂತಹ ದೇಶವಿರೋಧಿಗಳು ಮತ್ತು ಪ್ರತ್ಯೇಕತಾವಾದಿಗಳು ಕಾರಾಗೃಹದಿಂದ  ಚುನಾವಣೆಗೆ ಸ್ಪರ್ಧಿಸಿ ಆಯ್ಕೆಯಾಗಿದ್ದಾರೆ. ‘ಸೆಕ್ಯುಲರ್‌’ ಪ್ರಜಾಪ್ರಭುತ್ವವನ್ನು ಬಳಸಿಕೊಂಡು ಇಂತಹ ಪ್ರತ್ಯೇಕತಾವಾದಿಗಳು ಆಯ್ಕೆಯಾಗುವುದು  ರಾಷ್ಟ್ರಕ್ಕೆ ಅಪಾಯಕಾರಿಯಾಗಿದೆ. ಅದರಲ್ಲಿಯೂ ಈಗ ಹಿಂದೂ ರಾಷ್ಟ್ರ , ಸನಾತನ ಧರ್ಮವನ್ನು ಗುರಿಯಾಗಿಟ್ಟುಕೊಂಡು ಅನೇಕ ಸುಳ್ಳು ಆರೋಪಗಳನ್ನು ಮಾಡಲಾಗುತ್ತದೆ. ಅಂತಹ ಸಮಯದಲ್ಲಿ, ಹಿಂದೂಗಳಲ್ಲಿ ಗೊಂದಲ ಉಂಟಾಗುತ್ತದೆ. ಆದ್ದರಿಂದ ಈ ಆರೋಪಗಳಿಗೆ ಉತ್ತರಿಸಲು ‘ಹಿಂದೂ ವಿಚಾರಕ ಸಂಘ’ ಸ್ಥಾಪಿಸಲಾಗಿದೆ. ಎಡ ವಿಚಾರಸರಣಿಯ ಜನರಿಂದ ವಿವಿಧ  ರೀತಿಯ `ನರೆಟಿವ್’, `ಟೂಲಕಿಟ್’, ಪ್ರಸಾರ ಮಾಧ್ಯಮಗಳು ಮತ್ತು ರಾಜಕಾರಣಿಗಳನ್ನು  ಸೇರಿಸಿಕೊಂಡು ಮಾಡಿರುವ ಅಪಪ್ರಚಾರಗಳನ್ನು ` ಹಿಂದೂ ವಿಚಾರಕ ಸಂಘ’ ದಿಂದ ಸೂಕ್ತ ದಾಖಲೆಗಳ ಆಧಾರಗಳೊಂದಿಗೆ ಖಂಡಿಸಲಾಗುವುದು ಎಂದು ಹಿಂದೂ ಜನಜಾಗೃತಿ ಸಮಿತಿಯ ರಾಷ್ಟ್ರೀಯ ಮಾರ್ಗದರ್ಶಕರಾದ ಸದ್ಗುರು (ಡಾ.) ಚಾರುದತ್ತ ಪಿಂಗಳೆಯವರು ಈ ಸಂದರ್ಭದಲ್ಲಿ ಹೇಳಿದರು.

ಈ ಪ್ರಸಂಗದಲ್ಲಿ ಸ್ವಾಮಿ ಪ್ರಣವಾನಂದ ಸರಸ್ವತಿ ಅವರು ‘ಮತಾಂತರವನ್ನು ತಡೆಯಲು ಬುಡಕಟ್ಟು ಪ್ರದೇಶದಲ್ಲಿ ಮಾಡಿದ ಕಾರ್ಯ’ ಎಂಬ ವಿಷಯದ ಕುರಿತು ಮಾತನಾಡುತ್ತಾ, ‘ಭಾರತಕ್ಕೆ ಸ್ವಾತಂತ್ರ್ಯ ಬಂದ ನಂತರ ನಮಗೆ ಧರ್ಮಶಿಕ್ಷಣ ಮತ್ತು ನೈತಿಕತೆಯನ್ನು ಕಲಿಸದ ಕಾರಣ ಇಂದು ಹೆಚ್ಚಿನ ಸಂಖ್ಯೆಯಲ್ಲಿ ಹಿಂದೂಗಳು ನಾಸ್ತಿಕರಾಗಿದ್ದಾರೆ. ಧರ್ಮಶಿಕ್ಷಣದ ಕೊರತೆಯಿಂದಾಗಿ ಇಂದು ಅನೇಕ ಹಿಂದೂಗಳೇ ಮತಾಂತರಗೊಂಡಿದ್ದಾರೆ. ಆದ್ದರಿಂದ, ಭವಿಷ್ಯದಲ್ಲಿ, ನಮಗೆ ಬಡವರು ಮತ್ತು ಆದಿವಾಸಿಗಳಂತಹ ಜನರೊಂದಿಗೆ ಹೋಗಿ ಬೆರೆಯುವುದು ಅನಿವಾರ್ಯವಾಗಿದೆ. ಇದು ಸಂಭವಿಸಿದಲ್ಲಿ, ಕಡಿಮೆಪಕ್ಷ ಮುಂದಿನ ಪೀಳಿಗೆಯಾದರೂ ಮತಾಂತರದಿಂದ ಪಾರಾಗಬಹುದು” ಎಂದು ಹೇಳಿದರು.

‘ಸ್ವಾತಂತ್ರ್ಯವೀರ ಸಾವರ್ಕರ್ ರಾಷ್ಟ್ರೀಯ ಸ್ಮಾರಕ’ದ ಅಧ್ಯಕ್ಷ ಶ್ರೀ. ರಣಜಿತ ಸಾವರ್ಕರ್ ಅವರು ‘ಹಿಂದೂ ಇಲ್ಲಿಂದ ಹಿಂದೂ ವ್ಯವಹಾರಕ್ಕೆ ಪ್ರೋತ್ಸಾಹ’ ಎಂಬ ವಿಷಯದ ಕುರಿತು ಮಾರ್ಗದರ್ಶನ ಮಾಡುತ್ತಾ, “ಈಗಿನ ಯುದ್ಧವು ಸಾಂಪ್ರದಾಯಿಕವಲ್ಲ, ಬದಲಾಗಿ ಆಧುನಿಕ ಪದ್ದತಿಯದ್ದಾಗಿದೆ. ಅದರಲ್ಲಿ ಆರ್ಥಿಕ ಶಸ್ತ್ರ ಬಹಳ ಮುಖ್ಯವಾಗಿದೆ. ಆದ್ದರಿಂದ ಹಲಾಲ್ ಪ್ರಮಾಣಪತ್ರದ ಮೂಲಕ ಮುಸ್ಲಿಮರು ನಿರ್ಮಿಸಿರುವ ಸಮನಾಂತರ ಅರ್ಥವ್ಯವಸ್ಥೆಗೆ ಪ್ರತ್ಯುತ್ತರ ನೀಡಲು ಹಿಂದುತ್ವನಿಷ್ಠ ಸಂಘಟನೆಗಳ ನೇತೃತ್ವದಿಂದ ‘ಓಂ ಶುದ್ಧ ಪ್ರಮಾಣಪತ್ರ’ವನ್ನು ಹಿಂದೂ ಅಂಗಡಿಗಳಿಗೆ ನೀಡಲು ಆರಂಭಿಸಲಾಗಿದೆ. ತ್ರ್ಯಂಬಕೇಶ್ವರದಿಂದ (ನಾಸಿಕ್) ಅಭಿಯಾನ ಆರಂಭಿಸಲಾಗಿದೆ. ಹಿಂದೂ ಅಂಗಡಿಯವರಿಗೆ ಪ್ರಸಾದ ಶುದ್ಧಿಗಾಗಿ ಈ ಪ್ರಮಾಣಪತ್ರ ವಿತರಣೆ ಮಾಡಲು ಆರಂಭಿಸಲಾಗಿದೆ” ಎಂದು ಹೇಳಿದರು.

ವೈಶ್ವಿಕ ಹಿಂದೂ ರಾಷ್ಟ್ರ ಮಹೋತ್ಸವದ ನಿಮಿತ್ತ ಶೃಂಗೇರಿಯ ದಕ್ಷಿಣಾಮ್ನಯ ಶ್ರೀ ಶಾರದಾ ಪೀಠದ ಜಗದ್ಗುರು ಶಂಕರಾಚಾರ್ಯ ಶ್ರೀ ಶ್ರೀ ಶ್ರೀ ಭಾರತೀ ತೀರ್ಥ ಮಹಾಸ್ವಾಮೀಜಿಯವರ ಉತ್ತರಾಧಿಕಾರಿ ಜಗದ್ಗುರು ಶಂಕರಾಚಾರ್ಯ ಶ್ರೀ ಶ್ರೀ ಶ್ರೀ ವಿಧುಶೇಖರ ಭಾರತೀ ಮಹಾರಾಜರು ಆಶೀರ್ವಚನ ಸಂದೇಶ ಕಳುಹಿಸಿದ್ದಾರೆ. ಈ ಸಂದೇಶದಲ್ಲಿ ಅವರು, ‘ಸನಾತನ ಧರ್ಮ ಸರ್ವಶ್ರೇಷ್ಠವಾಗಿದ್ದು, ಅದರ ಜ್ಞಾನವನ್ನು ಪಡೆದುಕೊಳ್ಳಬೇಕು ಹಾಗೂ ಸನಾತನ ಧರ್ಮದ ರಕ್ಷಣೆಗೆ ಎಲ್ಲರೂ ಸಂಘಟಿತರಾಗಬೇಕು’, ಎಂದು ಕರೆ ನೀಡಿದರು. ಈ ಸಂದರ್ಭದಲ್ಲಿ ಸನಾತನ ಸಂಸ್ಥೆಯ ಸಂಸ್ಥಾಪಕ ಸಚ್ಚಿದಾನಂದ ಪರಬ್ರಹ್ಮ ಡಾ. ಜಯಂತ ಅಠವಲೆ ಇವರು ನೀಡಿದ ಸಂದೇಶವನ್ನು ಸದ್ಗುರು ಸತ್ಯವಾನ ಕದಮ್ ಇವರು ಓದಿದರು. ‘ಸರ್ವಸ್ವದ ತ್ಯಾಗವೇ ಹಿಂದೂ ರಾಷ್ಟ್ರ ಸ್ಥಾಪನೆಗೆ ಬುನಾದಿಯಾಗಿದೆ, ಎಂಬುದನ್ನು ಗಮನದಲ್ಲಿಟ್ಟುಕೊಂಡು ಧರ್ಮಸಂಸ್ಥಾಪನೆಯ ಮಹತ್ಕಾರ್ಯವನ್ನು ಮಾಡಿ’, ಎಂದು ಅವರು ಸಂದೇಶದ ಮೂಲಕ ಕರೆ ನೀಡಿದರು.

ಪುಸ್ತಕಗಳ ಪ್ರಕಾಶನ !

ಈ ಸಂದರ್ಭದಲ್ಲಿ, ‘ರೋಗಿಗಳ ಆರೈಕೆಯನ್ನು ಸಾಧನೆ ಎಂದು ಹೇಗೆ ಮಾಡಬೇಕು?’ ಹಾಗೂ ‘ಅಧ್ಯಾತ್ಮಶಾಸ್ತ್ರದ ವಿವಿಧ ವಿಷಯಗಳ ಬೋಧನೆ’ ಈ ಎರಡು ಮರಾಠಿ, ‘ಪಾಪ-ಪುಣ್ಯ ಇವುಗಳ ವಿಧ ಮತ್ತು ಪರಿಣಾಮ’ ಹಾಗೂ ‘ಪಾಪದ ಪರಿಣಾಮ ತಡೆಗಟ್ಟಲು ಪ್ರಾಯಶ್ಚಿತ್ತಗಳು’ ಈ ಎರಡು ತೆಲುಗು ಹಾಗೂ ‘ಗುರುಗಳ ಮಹತ್ವ’ ಈ ತಮಿಳು ಭಾಷೆಯ ಒಂದು ಗ್ರಂಥಗಳನ್ನು ಗಣ್ಯರ ಹಸ್ತದಿಂದ ಪ್ರಕಾಶನ ಮಾಡಲಾಯಿತು.
ಮಹೋತ್ಸವದಲ್ಲಿ ಶಂಖನಾದ ಹಾಗೂ ಗಣ್ಯರ ಶುಭಹಸ್ತದಿಂದ ದೀಪ ಬೆಳಗಿಸುವ ಮೂಲಕ ಚಾಲನೆ ನೀಡಲಾಯಿತು. ದೀಪ ಬೆಳಗಿದ ನಂತರ ವೇದಮಂತ್ರ ಪಠಣ ಮಾಡಲಾಯಿತು. ಈ ವರ್ಷ ಹಿಂದೂ ಧರ್ಮಕ್ಕಾಗಿ ಕಾರ್ಯ ಮಾಡುವಾಗ ಮೃತಪಟ್ಟ ಎಲ್ಲ ಜ್ಞಾತ-ಅಜ್ಞಾತ ಹಿಂದೂ-ಧರ್ಮಪ್ರೇಮಿಗಳಿಗೆ ಸದ್ಗತಿ ಸಿಗಲಿ ಎಂದು ಸನಾತನ ಸಂಸ್ಥೆಯ ಸಾಧಕ ಪುರೋಹಿತ ಶ್ರೀ. ಸಿದ್ಧೇಶ ಕರಂದಿಕರ ಹಾಗೂ ಶ್ರೀ. ಅಮರ ಜೋಶಿ ಇವರು ಮಂತ್ರಪಠಣ ಮಾಡಿದರು. ಈ ಅಧಿವೇಶನದ ನಿಮಿತ್ತ ಟ್ವಿಟ್ಟರ್ ನಲ್ಲಿ VHRMGoa_Begins ಎಂಬ ಹ್ಯಾಷ್ ಟ್ಯಾಗ್ ಮೂಲಕ ದೇಶದೆಲ್ಲೆಡೆ ಹಿಂದೂ ರಾಷ್ಟ್ರದ ಚರ್ಚೆ ನಡೆಯುತ್ತಿರುವುದು ಕಂಡುಬಂತು. ಅಧಿವೇಶವನ್ನು ಹಿಂದೂ ಜನಜಾಗೃತಿ ಸಮಿತಿಯ ಜಾಲತಾಣ HinduJagruti.org ಮೂಲಕ ಮತ್ತು ಯೂಟ್ಯೂಬ್ ಚಾನೆಲ್ ‘HinduJagruti’ ಮೂಲಕ ನೇರ ಪ್ರಸಾರ ಮಾಡಲಾಗುತ್ತಿದೆ.

WhatsApp Group Join Now
Telegram Group Join Now
Share This Article
error: Content is protected !!