ನಗರದಲ್ಲಿ ವಿಶ್ವ ತಂಬಾಕು ವಿರೋಧಿ ದಿನಾಚರಣೆ ಕಾರ್ಯಕ್ರಮ

Vijayanagara Vani
ನಗರದಲ್ಲಿ ವಿಶ್ವ ತಂಬಾಕು ವಿರೋಧಿ ದಿನಾಚರಣೆ ಕಾರ್ಯಕ್ರಮ

ಸಿರುಗುಪ್ಪ31 ತಂಬಾಕು ಸೇವನೆಯಿಂದ ದೇಹದ ಮೇಲೆ ಅನೇಕ ದುಷ್ಪರಿಣಾಮಗಳು ಬೀರಲಿದ್ದು, ಮಾರಣಾಂತಿಕ ಕಾಯಿಲೆಗಳಾದ ಕ್ಯಾನ್ಸ್ರ್, ಹೃದಯಾಘಾತ ಮುಂತಾದ ರೋಗಗಳು ಹರಡುತ್ತವೆ, ಇದರಿಂದ ತಂಬಾಕು ಸೇವನೆ ಮಾಡುವವರು ನುರಿತ ತಜ್ಞರಿಂದ ಸಲಹೆ ಪಡೆದು ತಂಬಾಕು ಸೇವನೆಯನ್ನು ಅತಿ ಶೀಘ್ರವಾಗಿ ಬಿಡಬೇಕೆಂದು ನಗರದ ಜೆ.ಎಂ.ಎಫ್.ಸಿ ನ್ಯಾಯಾಲಯದ ನ್ಯಾಯಾಧೀಶರಾದ ಹಾಜಿ ಹುಸೇನ್ ಸಾಬ್ ಯಾದವಾಡ ಕರೆನೀಡಿದರು.
ನಗರದ ತಾಲೂಕು ಆರೋಗ್ಯಾಧಿಕಾರಿಗಳ ಕಾರ್ಯಾಲಯದ ಸಭಾಂಗಣದಲ್ಲಿ ತಾಲೂಕು ಕಾನೂನು ಸೇವೆಗಳ ಪ್ರಾಧಿಕಾರ, ವಕೀಲರ ಸಂಘ ಹಾಗೂ ಆರೋಗ್ಯ ಇಲಾಖೆ ವತಿಯಿಂದ ಶುಕ್ರವಾರ ನಡೆದ ವಿಶ್ವ ತಂಬಾಕು ವಿರೋಧಿ ದಿನಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು ಇತ್ತೀಚೆಗೆ ತಂಬಾಕು ಸೇವನೆಯು ಸಮಾಜದಲ್ಲಿ ಹೆಮ್ಮರವಾಗಿ ಬೆಳೆದು ನಿಂತಿದೆ. ಬೆಳೆಯುವ ಸಿರಿ ಮೊಳಕೆಯಲ್ಲಿ ಎಂಬoತೆ ಈಗಿನ ಮಕ್ಕಳಿಗೆ ಶಾಲಾ ಪಾಠದೊಂದಿಗೆ ಸಮಾಜದಲ್ಲಿ ಅನುಸರಿಸಬೇಕಾದ ನೈತಿಕ ಪಾಠದ ಅಗತ್ಯವಿದೆ.
ಸಾರ್ವಜನಿಕ ಸ್ಥಳಗಳಾದ ಬಸ್‌ನಿಲ್ದಾಣ, ಚಿತ್ರಮಂದಿರ, ಆಸ್ಪತ್ರೆ, ಸರ್ಕಾರಿ ಕಚೇರಿಗಳು, ವಿದ್ಯಾಲಯಗಳು ಇನ್ನಿತರ ಕಡೆಗಳಲ್ಲಿ ಯಾರಾದರೂ ದೂಮಪಾನ ಹಾಗೂ ತಂಬಾಕು ಸೇವನೆ ಮಾಡುವುದನ್ನು ಕಂಡುಬAದಲ್ಲಿ ಒಗ್ಗಟ್ಟಿನಿಂದ ವಿರೋಧಿಸಬೇಕೆಂದು ತಿಳಿಸಿದರು.
ಹಿರಿಯ ವಕೀಲರಾದ ಎನ್.ಅಬ್ದುಲ್‌ಸಾಬ್, ಮಲ್ಲಿಗೌಡ, ಟ.ಹೆಚ್.ಒ. ಡಾ.ಈರಣ್ಣ ಮಾತನಾಡಿದರು. ವಕೀಲರ ಸಂಘದ ತಾ.ಅಧ್ಯಕ್ಷ ಎಸ್.ಮಂಜನಾಥಗೌಡ, ಕಾರ್ಯದರ್ಶಿ ಎಚ್.ಪ್ಯಾಟೆಗೌಡ, ವಕೀಲರಾದ ಟಿ.ವೆಂಕಟೇಶ ನಾಯ್ಕ್, ದೊಡ್ಡನಗೌಡ, ಬಾಬುಖಾನ್, ನೆಲಗುಂಟಯ್ಯ, ಜಗದೀಶಸ್ವಾಮಿ ಹಾಗೂ ಆಶಾ ಕಾರ್ಯಕರ್ತೆಯರು, ಆರೋಗ್ಯ ಇಲಾಖೆ ಸಿಬ್ಬಂದಿ ಇದ್ದರು.

WhatsApp Group Join Now
Telegram Group Join Now
Share This Article
error: Content is protected !!