ವಿಶ್ವ ಜನಸಂಖ್ಯಾ ದಿನ….. ಜನರು ಇನ್ನಷ್ಟು ಮಾನವ ಸಂಪನ್ಮೂಲವಾಗ ಬೇಕಿದೆ ಜನನ ನಿಯಂತ್ರಣವು ಭೂಮಿಗೆ ಒಂದು ವರ

Vijayanagara Vani
ವಿಶ್ವ ಜನಸಂಖ್ಯಾ ದಿನ….. ಜನರು ಇನ್ನಷ್ಟು ಮಾನವ ಸಂಪನ್ಮೂಲವಾಗ ಬೇಕಿದೆ ಜನನ ನಿಯಂತ್ರಣವು ಭೂಮಿಗೆ ಒಂದು ವರ

ಜುಲೈ 11ರ ದಿನಾಂಕವನ್ನೂ ‘ವಿಶ್ವ ಜನಸಂಖ್ಯಾ ದಿನ’ವೆಂದು ಕರೆಯಲಾಗುತ್ತಿದೆ. ಜಾಗತಿಕವಾಗಿ ಜನಸಂಖ್ಯೆ ಏರುತ್ತಿರುವ ವೇಗ ನೋಡಿ ವಿಶ್ವಸಂಸ್ಥೆ1987ರ ವರ್ಷದಲ್ಲಿ ಈ ವಿಶ್ವ ಜನಸಂಖ್ಯಾ ದಿನಾಚರಣೆಗೆ ಮುನ್ನುಡಿ ಬರೆಯಿತು. ಆ ದಿನದಂದು ವಿಶ್ವ ಜನಸಂಖ್ಯೆ 5 ಬಿಲಿಯನ್ ತಲುಪಿತಂತೆ. ಹೀಗೆ ಈ ದಿನವನ್ನು ಆಚರಿಸುವುದರ ಮೂಲಕ ವಿಶ್ವದಲ್ಲಿ ಜನಸಂಖ್ಯೆಯ ಕುರಿತಾದ ವಿವಿಧ ಸಮಸ್ಯೆಗಳ ಕುರಿತಾಗಿ ವಿಶ್ವ ಸಮುದಾಯದ ಗಮನ ಸೆಳೆಯುವುದು ಈ ಆಚರಣೆಯ ಪ್ರಮುಖ ಉದ್ದೇಶ.

ಜನರಿರುವ ಗ್ರಹ ಭೂಮಿಯೊಂದೇ ಎಂದು ನಂಬಲಾಗಿದೆ, ಜನರಿಂದಾಗಿ ಭೂಮಿಯೂ ಅನನ್ಯತೆ ಏನಿಸಿದೆ.ಜನರಿಗೆ ವಿವೇಕ, ಯೋವನೆ, ನಾವಿನ್ಯತೆಯ ಬಯಕೆ ಮೊದಲಾದವು ಮನುಷ್ಯನನ್ನು ವಿಶೇಷ ಮಾಡಿವೆ. ಇಂತಹ ಮನುಷ್ಯರು ಸೌಲಭ್ಯಗಳನ್ನು ಪ್ರಕೃತಿಯಿಂದ ಪಡೆದುಕೊಂಡು ಸುಖವಾಗಿದ್ದಾನೆ. ಈ ಸುಖ ಮತ್ತು ಸೌಲಭ್ಯಗಳು ಭೂಮಿಯ ಮೇಲೆ ಜನಸಂಖ್ಯೆಯನ್ನು ಹೆಚ್ಚಿಸಿದೆ.ಜನಸಂಖ್ಯೆ ಹೆಚ್ಚಾದಾಗ, ಎಚ್ಚರಿಕೆಯ ಮಾತಾಡಿದ್ದೂ ಕೂಡ ಮಾನವನೇ ಜನಸಂಖ್ಯೆ ಹೆಚ್ಚಾದಂತೆಲ್ಲ ಜನರ ಬೇಡಿಕೆ ಹೆಚ್ಚಾದಂತೆಲ್ಲ ಅವರ ಬೇಡಿಕೆಗಳು ಹೆಚ್ಚಾದವು. ಅವುಗಳನ್ನು ಪೂರೈಸಲು ನಿಸರ್ಗಕ್ಕೆ ಅಸಾಧ್ಯವಾಗುತ್ತಿದೆ. ಜನಸಂಖ್ಯೆ ಬೆಳೆದಂತೆಲ್ಲಾ ಆದಕ್ಕೆ ಅನುಗುಣವಾಗಿ ಭೂಮಿ ಬೆಳೆಯುವುದಿಲ್ಲ, ಆಗ ಮನುಷ್ಯ ತನ್ನ ಆಹಾರ ಬೆಳೆಯಲು ಕೃಷಿ ಭೂಮಿಗಾಗಿ ಅರಣ್ಯವನ್ನು ನಾಶ ಮಾಡುತ್ತಾನೆ. ಜೊತೆಗೆ ಅವನಿಗೆ ಬೇಕಾದ ಸೌಲಭ್ಯಗಳು ಪಡೆಯುವುದರೊಂದಿಗೆ ವಾತಾವರಣವನ್ನು ಮಲಿನ ಮಾಡಿವೆ.ಜೀವ ವೈವಿದ್ಯತೆಗೆ ಧಕ್ಕೆ
ಜನಸಂಖ್ಯೆ ಏರುತ್ತಿರುವಾಗ ಜನರಿಗೆ ಸೌಲಭ್ಯ ನೀಡಲು ಅನುವಾಗಲು ಜನಗಣತಿ ಆರಂಭವಾಯಿತು, ಜನಗಣತಿಯು ವೈಜ್ಞಾನಿಕವಿರಲು ಕಾಲಾನುಕ್ರಮದಲ್ಲಿ ಆನೇಕ ಬದಲಾವಣೆಗಳನ್ನು ತಂದುಕೊಂಡಿತು.ಒಂದು ಹಂತದಲ್ಲಿ ಅದು ಶಾಸ್ತ್ರವಾಯಿತು ಅದನ್ನು ಜನಸಂಖ್ಯಾ ಶಾಸ್ತ್ರ ಎಂದರು. ಜನಸಂಖ್ಯಾಶಾಸ್ತ್ರ ಎಂದರೆ, ಒಂದು ನಿರ್ಧಿಷ್ಟ ಪ್ರದೇಶದಲ್ಲಿ ವಾಸಿಸುವ ಜನರ ಬಗೆಗಿನ ವೈಜ್ಞಾನಿಕ ಅಧ್ಯಯನವೇ ಆಗಿದೆ.10 ವರ್ಷಗಳಿಗೊಮ್ಮೆ
ನಡೆಯುವ ಜನಗಣತಿ ಎಂದರೆ ಕೇವಲ ಜನರ ಎಣಿಕೆ ಅಲ್ಲ, ಅದರ ಸುತ್ತ ಜನರ ಸಾಮಾಜಿಕ, ಆರ್ಥಿಕ, ರಾಜಕೀಯ, ಶೈಕ್ಷಣಿಕ, ಆರೋಗ್ಯದಂತಹ ನೂರಾರು ವಿಧ್ಯಮಾನಗಳ ಬಗೆಗಿನ ಚಿಂತನೆ ಇರುತ್ತದೆ.
ಜನಸಂಖ್ಯಾಶಾಸ್ತ್ರದ ಮತ್ತಷ್ಟು ವೈಜ್ಞಾನಿಕ ವಿಚಾರ ಅಂದರೆ ಜನರ ಎಣಿಕೆಯಲ್ಲಿ
1.ಜನಸಂಖ್ಯೆಯ ಗಾತ್ರ ಬೆಳವಣಿಗೆ
(ಬೆಳವಣಿಗೆಯ ದರ) ಇದು ದೇಶದ ಪ್ರಗತಿಗೆ ಮತ್ತು ಯೋಜನೆಗೆ ಜನಸಂಖ್ಯೆಯ ಗಾತ್ರ ಮತ್ತು ಅದು ಬೆಳೆಯುವ ದರ ಪ್ರಭುತ್ವಗಳಿಗೆ ತಿಳಿದರೆ ಅನುಕೂಲವಾಗುತ್ತದೆ. ಒಂದು ಯೋಜನೆ ಇಂದು ಆರಂಭಿಸಿದರೆ ಅದರ ಪ್ರತಿಫಲ ಮುಂದಿನ 30-40 ವರ್ಷಗಳ ದೂರ ದೃಷ್ಟಿ ಇರಬೇಕಾಗುತ್ತದೆ. ಅಂದಾಗ ಜನಸಂಖ್ಯೆಯ ಬೆಳವಣಿಗೆಯ ದರ ನಮಗೆ ಯೋಜನೆಯ ವಿಸ್ತಾರ ತಿಳಿಸುತ್ತದೆ.
2.ವಯೋಮಾನ ನಮ್ಮ ಜನಸಂಖ್ಯೆಯಲ್ಲಿ ಯಾವ ವಯಸ್ಸಿನವರು ಎಷ್ಟಿದ್ದಾರೆ ಎಂಬ ಮಾಹಿತಿ ಪಡೆಯುವುದು, ಜನಗತಿಯಲ್ಲಿ ವಯಸ್ಸು ಮುಖ್ಯಪಾತ್ರವಹಿಸುತ್ತದೆ. ಒಂದು ಸಮಾಜದಲ್ಲಿ ಎಷ್ಟು ಜನ 60 ವರ್ಷ ಮೀರಿದವರಿದ್ದಾರೆ. ಅದೇ ರೀತಿ ಅತೀ ಚಿಕ್ಕ ವಯಸ್ಸಿನ ಮಕ್ಕಳಿದ್ದಾರೆ ಎಂಬುದು ತಿಳಿಸುತ್ತದೆ. ಈ ಇಬ್ಬರು ದುಡಿಯುವವರ ಮೇಲೆ ಅವಲಂಭಿತರಾಗುತ್ತಾರೆ. ಅದಕ್ಕಾಗಿ ದುಡಿಯುವವರು,ಮತ್ತು ಅವಲಂಭಿತರ ನಡುವೆ ಒಂದು ಅನುಪಾತ ವೈಜ್ಞಾನಿಕವಾಗಿರ ಬೇಕು. ಅಂದರೆ ದುಡಿಯುವ ಜನ ಹೆಚ್ಚಿದ್ದು ಅವಲಂಬಿತರ ಸಂಖ್ಯೆ ಅನುಕೂಲಕರವಾಗಿರ ಬೇಕು. ಚೀನಾ ದೇಶದಲ್ಲಿ ಜನಸಂಖ್ಯಾ ಸ್ಫೋಟದ
ಕಾರಣ 1972 ರ ಸುಮಾರಿನಲ್ಲಿ ಒಂದು ಮಗು ಎಂಬ ನಿಯಮದಡಿಯಲ್ಲಿ ಸಂತಾನ ನಿಯಂತ್ರಣ ಪದ್ಧತಿ ಅಳವಡಿಸಿಕೊಂಡಿತು.ಇದರ ಪರಿಣಾಮ ಅಲ್ಲಿ ಹುಟ್ಟುವ ಮಕ್ಕಳ ಸಂಖ್ಯೆ ಕಡಿಮೆಯಾಯಿತು, ಅದರಿಂದ ಇವತ್ತು ಅಲ್ಲಿ ಮುದುಕರ ಸಂಖ್ಯೆ ಹೆಚ್ಚಿದೆ ಒಂದರ್ಥದಲ್ಲಿ ಅದು ಮುದುಕರ ದೇಶವಾಗಿದೆ,ಈಗ ಆ ದೇಶದ ಸರಾಸರಿ ವಯಸ್ಸು 37 ವರ್ಷಗಳು, ಜಪಾನಿಯರ ವಯಸ್ಸಯ 48 ಅದೇ ರೀತಿ ಹಲವು ದೇಶಗಳ ಯುವಕರ ಸಂಖ್ಯೆ ಕಡಿಮೆ ಇದೆ. ಭಾರತದಲ್ಲಿ ಎರಡು ಮಕ್ಕಳಿರಲಿ ಎಂಬ ಸಿದ್ಧಾಂತದಿಂದ ಕುಟುಂಬ ನಿಯಂತ್ರಣ ಆಳವಡಿಸಿಕೊಂಡಿದೆ. ಇಂದು ಯುವಜನತ ನಮ್ಮ ದೇಶದಲ್ಲಿ ಹೆಚ್ಚಿದೆ, ಡಾ.ಅಬ್ದುಲ್ ಕಲಾಂ ಅವರು 2000 ನೇ ಇಸವಿಯಲ್ಲಿ ಹೇಳಿದರು. 2020ರಲ್ಲಿ ಭಾರತವನ್ನು ನೋಡಿ,ಅಂದು ನಮ್ಮ ದೇಶ ಯುವ ಭಾರತವಾಗಿರುತ್ತದೆ ಎಂದು. ಇಂದು ವಿಶ್ವದಲ್ಲಿ ಅತಿ ಹೆಚ್ಚು ಯುವಕರನ್ನು ಹೊಂದಿದ ದೇಶ ಎಂದರೆ ಅದು ಭಾರತ. ನಮ್ಮ ದೇಶದ ಜನರಸರಾಸರಿ ವಯಸ್ಸು 20 ಇದೆ. ಅಂತಹ ಯುವಜನತೆಗೆ ಶಿಕ್ಷಣ ಮತ್ತು ಕೌಶಲ ನೀಡಿ ಉದ್ಯೋಗ ಸೃಷ್ಟಿ ಮಾಡಿದರೆ ಜನ ಸಂಖ್ಯೆ ಎಂಬುದು ಮಾನವ ಸಂಪನ್ಮೂಲವಾಗುತ್ತದೆ. ಅಂತಹ ಉತ್ತಮ ಸ್ಥಿತಿಯಲ್ಲಿ ಭಾರತ ಇದೆ.
3.ಲಿಂಗಾನುಪಾತ: ಲಿಂಗ ಆಧಾರಿತ
ಗಣತಿಯು ನಮ್ಮ ಸಮುದಾಯದಲ್ಲಿ ಪುರುಷರು ಮಹಿಳೆಯರ ಅನುಪಾತದ ಬಗ್ಗೆ ಮಾತನಾಡುತ್ತದೆ.ಒಂದು ಆರೋಗ್ಯಕರ
ಸಮಾಜವೆಂದರೆ ಪುರಷರಿಗಿಂತ ಮಹಿಳೆಯರ
ಸಂಖ್ಯೆ ಹೆಚ್ಚಿರ ಬೇಕು, ಆದರೆ ಪುರುಷ ಪಾಧಾನ ವ್ಯವಸ್ಥೆ ಮತ್ತು ಗಂಡು ಸಂತತಿಯ
ಬಯಕೆಯಿಂದಾಗಿ ಹೆಣ್ಣು ಮಕ್ಕಳ ಸಂಖ್ಯೆ ಕ್ಷೀಣಿಸುತ್ತಿದೆ. ಇದು ಹೊಸ ಸಮಸ್ಯೆಗಳಿಗೆ ಕಾರಣವಾಗುತ್ತದೆ. ಬಾಲಕಿಯರು,ಮಹಿಳೆಯರು ಆನೇಕ ಸಮಸ್ಯೆಗಳಿಗೆ ಮತ್ತು ಶೋಷಣೆಗಳಿಗೆ ಬಲಿಯಾಗುವ ಸಾಧ್ಯತೆಗಳು ಹೆಚ್ಚಾಗುತ್ತವೆ. ಅದಕ್ಕಾಗಿ ಲಿಂಗಾಧಾರಿತ ಗಣತಿ ನಮಗೆ ಹೆಚ್ಚರಿಕೆಯ ಗಂಟೆಯಾಗಿ ಕೆಲಸ ಮಾಡುತ್ತದೆ. ಹೆಣ್ಣು ಭ್ರೂಣಹತ್ಯೆ, ಹೆಣ್ಣು ಕೂಸುಗಳನ್ನು ಕೊಲ್ಲುವ ರಾಜ್ಯ ಮತ್ತು ಜಿಲ್ಲೆಗಳು ನಮ್ಮಲ್ಲಿದೆ. ಇದು ಅಮಾನವೀಯತೆಯನ್ನು ತೋರುತ್ತವೆ. ಸುಂತಹ ಪಿಡುಗುಗಳಿಗೆ ಮದ್ದು ನೀಡಲು ಪ್ರಭುತ್ವಗಳಿಗೆ ಲಿಂಗಾಧಾರಿತ ಗಣತಿ ಸಹಕಾರಿಯಾಗುತ್ತದೆ.
4.ಸಾಕ್ಷರತೆ: ಜನರು ಶಿಕ್ಷಣ ಪಡೆದಾಗ ಅವರು ಸಂಪನ್ಮೂಲವಾಗುತ್ತಾರೆ. ಶಿಕ್ಷಣ ಮಗುವನ್ನು ಉತ್ತಮ ವ್ಯಕ್ತಿಯನ್ನಾಗಿ, ಸಾಧಕನನ್ನಾಗಿ ಮಾಡ ಬಲ್ಲುದು. ದೇಶದ ಜನರಲ್ಲಿ ಎಷ್ಟು ಜನರು ಶಿಕ್ಷಣ ಪಡೆದಿದ್ದಾರೆ, ಎಂತಹ ಶಿಕ್ಷಣ ಪಡೆದಿದ್ದಾರೆ, ಶಾಲೆ-ಕಾಲೇಜುಗಳ ಸಂಖ್ಯೆಯ ಆಗತ್ಯತೆಯನ್ನು ವಿವರಿಸುತ್ತದೆ, ದೇಶದ ಪ್ರಗತಿಗೆ ಎಂತಹ ಮಾನವ ಸಂಪನ್ಮೂಲ ಸೃಷ್ಟಿಸಬೇಕು ಎಂಬುದನ್ನು ಅರಿಯಲು ಇದು ಸಹಕಾರಿ ಮತ್ತು ಮಾರ್ಗದರ್ಶಿಯಾಗಿದೆ. ದೇಶದ ವಾಯಮಾನ ಮತ್ತು ಅಗತ್ಯತೆಗಳಿಗೆ ತಕ್ಕಂತೆ ಮಕ್ಕಳಿಗೆ ಶಿಕ್ಷಣದ ಪಠ್ಯ ರೂಪಿಸಲು
ಸಹಕಾಧಿಯಾಗಿದೆ.
ಮೇಲ್ಕಾಣಿಸಿದ ಎಲ್ಲಾ ಅಂಶಗಳನ್ನು ಆಧರಿಸಿ ಜನರ ಆರೋಗ್ಯಕ್ಕಾಗಿ ವೈದ್ಯಕೀಯ ಸೌಲಭ್ಯಗಳು, ಆಹಾರ ಉತ್ಪಾದನೆ, ರಸ್ತೆ, ಕುಡಿಯುವ ನೀರು, ಸಾರಿಗೆ, ಉದ್ಯೋಗ ಸೃಷ್ಟಿ ಮೊದಲಾದ
ಅಂಶಗಳನ್ನು ಸೂಕ್ತವಾಗಿ ಜನರಿಗೆ ತಲುಪಿಸಲು ಜನಗಣತಿ ಬೇಕಾಗುತ್ತದೆ. ವಿಶ್ವ ಜನಸಂಖ್ಯಾ ದಿನ 2024
ಜಾಗಣತಿಯ ಇತಿಮಾಸ ಬಂದಾ ಹಳೆಯದು 1787 ರಲ್ಲಿ ಅಮೇರಿಕಾದಲ್ಲಿ ಮೊದಲ ಜನಗಣತಿ ನಡೆಯಿತು ಎನ್ನಲಾಗಿದೆ. 1800ರಲ್ಲಿ ಯುರೋಪ್ ರಾಷ್ಟ್ರಗಳಲ್ಲೂ ಜನಗಣತಿ ಜಾರಿಗೆ ಬಂದಿದೆ. ಭಾರತದಲ್ಲಿ ಬ್ರಿಟೀಷ್ ಸರ್ಕಾರವಿದ್ದಾಗ 1867 ರಲ್ಲಿ ಜನಗಣತಿ ಆರಂಭಿಸಿತು, ಮಾತ್ರವಲ್ಲ ಪ್ರತಿ 10 ವರ್ಷಗಳಿಗೊಮ್ಮೆ ಈ ಪ್ರಕ್ರಿಯೆ ಯನ್ನು ಮುಂದುವರೆಸಿದರು. ಸ್ವಾತಂತ್ರ್ಯಾ ನಂತರ ನಮ್ಮ ದೇಶವೂ 1951 ರಿಂದ ಜನಗಣತಿಯನ್ನು ಮುಂದುವರೆಸಿ 2011 ರವರೆಗೆ ಮಾಡಿದೆ. ಆದರೆ 2021 ರಲ್ಲಿ ಬಹುಶಃ ಕೋವಿಡ್ 19 ಕಾರಣ ಜನಗಣತಿ ನಡೆದಿಲ್ಲ. ಈ ಜನಗಣತಿಯ ಹಾದಿಯಲ್ಲಿ ಬರುತ್ತಿರುವ ಜನಸಂಖ್ಯೆಯನ್ನು ಗಮನಿಸಿದ ವಿಶ್ವ 1987ರ ಜುಲೈ 11ರಂದು ವಿಶ್ವದ ಜನಸಂಖ್ಯೆ 5 ಶತಕೋಟಿ (5 ಜಿಲಿಯನ್) ತಲುಪಿದಾಗ ಅಚ್ಚರಿ ಮತ್ತು ಗಾಭರಿ ಹೊಂದಿತು. ಭವಿಷ್ಯದ ಜನಾಂಗದ ಬದುಕಿನ ಬಗ್ಗೆ ಯೋಜನೆ ಆರಂಭವಾಯಿತು.ಅದಕ್ಕಾಗಿ ಜಾಗತಿಕ ಜನಸಂಖ್ಯೆಯ ಸಮಸ್ಯೆಗಳ ಸಂಕೀರ್ಣತೆಯ ಬಗ್ಗೆ ಜಾಗೃತಿ ಮೂಡಿಸಲು 1989ರಲ್ಲಿ ಯು ಎನ್ ಡಿ ಪಿ ಆಡಳಿತ ಮಂಡಳಿ ಪ್ರತೀ ವರ್ಷ ಜುಲೈ 11 ನ್ನು ವಿಶ್ವ ಜನಸಂಖ್ಯಾ
ದಿನವೆಂದು ಆಚರಿಸಲು ತೀರ್ಮಾನಿಸಲಾಯಿತು.
ಆ ಪ್ರಕಾರ 1990 ರ ಜುಲೈ 11 ರಂದು ಮೊದಲ ವಿಶ್ವ ಜನಸಂಖ್ಯಾ ದಿನ ಆಚರಿಸಲು
ಆರಂಭಿಸಲಾಯಿತು,
ನಮಗೆಲ್ಲಾ ಗೊತ್ತಿರುವ ಹಾಗೆ ಈ ಭೂಮಿ ಬೆಳೆಯುವುದಿಲ್ಲ ಆದರೆ ಜನಸಂಖ್ಯೆ ಈ ವೇಗದಲ್ಲಿ ಬೆಳೆದರೆ ನಮ್ಮ ಗತಿಯೇನು ಎಂಬುದು ಪ್ರಶ್ನೆ ಮೂಡಿದೆ.ಬರುತ್ತಿರುವ ಜನಸಂಖ್ಯೆಗೆ ತಕ್ಕುದಾದ ಆಹಾರ, ವಸತಿ, ಆರೋಗ್ಯ ದ ಜೊತೆಗೆ ಸುಸ್ಥಿರ ಅಭಿವೃದ್ಧಿ ನೀಡಲು ಆಗುತ್ತಿರುವ ಸಮಸ್ಯೆಗಳನ್ನು ಅರಿಯಲು ವೇದಿಕೆಯಾಗುತ್ತಿದೆ ಈ ದಿನ ಜನಸಂಖ್ಯೆ ಉಳಿಯಲು ಜನಸಂಖ್ಯಾ ಬೆಳವಣಿಗೆಯನ್ನು ನಿಯಂತ್ರಿಸ ಬೇಕು.ಜನಸಂಖ್ಯಾ ಬೆಳವಣಿಗೆ ಸುಸ್ಥಿರ ಅಭಿವೃದ್ಧಿಯ ಮೇಲೆ ಪ್ರಭಾವ ಬೀರುತ್ತದೆ.ನಮ್ಮ ಜನಸಂಖ್ಯೆಯ ಬಹು ಪಾಲು ಯುವ ಜನತೆ ಇದ್ದು, ಅವಲಂಬಿತ ಅನುಪಾತ
ಕಡಿಮೆ ಇರುವಂತೆ ಜನಸಂಖ್ಯೆಯ ಸಿರೀಕರಣ ಯೋಜಿಸುವ ಅಗತ್ಯತೆ ಇಂದು ಇದೆ. ಲಿಂಗ
ಸಮಾನತೆ, ಮಹಿಳಾ ಸಬಲೀಕರಣ ಪ್ರತಿಪಾದಿಸಲು ಜನಸಂಖ್ಯೆಯ ನಿರ್ವಹಣೆ ಮತ್ತು ಸುಸ್ಥಿರ ಅಭಿವೃದ್ಧಿಯಲ್ಲಿ ಶಿಕ್ಷಣ, ಆರೋಗ್ಯ, ಉದ್ಯೋಗ – ಆರ್ಥಿಕ ಅವಕಾಶಗಳ ಮೇಲೆ ಜನಸಂಖ್ಯೆ ಬೆಳವಣಿಗೆಯ ಪ್ರಭಾವ ಜನರಿಗೆ ತಿಳಿಸಬೇಕಿದೆ. ಪರಿಸರದ ಸುಸ್ಥಿರತೆಯೂ ಕೂಡ ಏರುತ್ತಿರುವ ಜನಸಂಖ್ಯೆಯ ಮೇಲೆ ಆಧಾರವಾಗಿದೆ. 2024ರಲ್ಲಿ ವಿಶ್ವ ಜನಸಂಖ್ಯೆ 8 ಬಿಲಿಯನ್ ಆಗಿದೆ, ವಿಶ್ವ ಜನಸಂಖ್ಯಾದಿನದ೦ದು ಜನರಿಗೆ ಜನಸಂಖ್ಯಾ ಬೆಳವಣಿಗೆಯ ಬಗ್ಗೆ ಅರಿವು ಮೂಡಿಸುವ ಅಗತ್ಯವಿದೆ.ಡಾ.ಕೆ ಸಿ ಜಾರಿಯ ವಿಶ್ವ ಜನಸಂಖ್ಯಾದಿನದ ಪಿತಾಮಹಾ ಎಂದು ಕರೆಯಲಾಗುತ್ತದೆ, ಜನನ ನಿಯಂತ್ರಣವು ಭೂಮಿಗೆ ಒಂದು ವರ ಎಂಬ ಮಟ್ಟಿಗೆ
ಜನಸಂಖ್ಯೆ ಏರುತ್ತಿದೆ.
ಈ ವರ್ಷದ ವಿಶ್ವ ಜನಸಂಖ್ಯಾ ದಿನದ ಘೋಷವಾಖ್ಯ ಅಥವಾ ಥೀಮ್ “ಸುಸ್ಥಿರ ಭವಿಷತ್‌ಗಾಗಿ ಸುಸ್ಥಿರ ಜನಸಂಖ್ಯಾ ಬೆಳವಣಿಗೆ ಈ ಎಂಬುದಾಗಿದೆ.ಜನಸಂಖ್ಯೆಯು ವೈಜ್ಞಾನಿಕವಾಗಿ ಬೆಳೆಯ ಬೇಕು ಸುಸ್ಥಿರವಾಗಿರ ಬೇಕು ಅಂದಾಗ ಮಾತ್ರ ಭವಿಷತ್ ಸುಸ್ಥಿರವಾಗಿರುತ್ತದೆ.
-ಡಾ. ಯು ಶ್ರೀನಿವಾಸಮೂರ್ತಿ, ಬಳ್ಳಾರಿ, ಉಪನ್ಯಾಸಕರು, ವಿಚಾರ ಕುರ ರಾಮನಗರ 1ನೇ ಕ್ರಾಸ್, ಹಂಸಭಾವಿ ಬಳ್ಳಾರಿ-583101 ಮೊ
9731063950

WhatsApp Group Join Now
Telegram Group Join Now
Share This Article
error: Content is protected !!