ಬಳ್ಳಾರಿ,ಮಾ.21
ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಹಾಗೂ ಜಿಲ್ಲಾ ಕ್ಷಯರೋಗ ನಿರ್ಮೂಲನಾ ಕೇಂದ್ರ ವತಿಯಿಂದ ‘ವಿಶ್ವ ಕ್ಷಯರೋಗ ದಿನಾಚರಣೆ-2025’ ರ ಅಂಗವಾಗಿ ಸಾರ್ವಜನಿಕರಲ್ಲಿ ಕ್ಷಯರೋಗದ ಬಗ್ಗೆ ಅರಿವು ಮೂಡಿಸಲು ಮಾ.24 ರಂದು ಬೆಳಿಗ್ಗೆ 08.30 ಗಂಟೆಗೆ ನಗರದ ಕನಕದಾಸರ ವೃತ್ತದ ಕೆಎಂಎಫ್ ಮುಂಭಾಗದಲ್ಲಿ ಜನಜಾಗೃತಿ ಜಾಥಾ ಹಮ್ಮಿಕೊಳ್ಳಲಾಗಿದೆ.
ಜಾಥಾವು ನಗರದ ಕನಕದಾಸರ ವೃತ್ತದ ಕೆಎಂಎಫ್ ಮುಂಭಾಗದಿ0ದ ಆರಂಭಗೊ0ಡು ಇನ್ ಫ್ಯಾಂಟರಿ ರಸ್ತೆಯ ಮೂಲಕ ಬಳ್ಳಾರಿ ವೈದ್ಯಕೀಯ ಕಾಲೇಜ್ ಮತ್ತು ಸಂಶೋಧನಾ ಕೇಂದ್ರ (ಬಿಮ್ಸ್)ದ ಬಿಸಿ ರಾಯ್ ಸಭಾಂಗಣದವರೆಗೆ ಸಾಗಿ ಬರಲಿದೆ.
ಬಳಿಕ ಅಂದು ಬೆಳಿಗ್ಗೆ 10 ಗಂಟೆಗೆ ಬಿಮ್ಸ್ ನ ಬಿಸಿ ರಾಯ್ ಸಭಾಂಗಣದಲ್ಲಿ 2024 ನೇ ಸಾಲಿಗೆ ಎಸ್‌ಟಿಇಪಿ ಕಾರ್ಯಕ್ರಮದಲ್ಲಿ ಉತ್ತಮ ಸೇವೆ ಸಲ್ಲಿಸಿದ ಅಧಿಕಾರಿ ಮತ್ತು ಸಿಬ್ಬಂದಿ ವರ್ಗದವರಿಗೆ ಸನ್ಮಾನ ಸಮಾರಂಭ ಕಾರ್ಯಕ್ರಮ ಆಯೋಜಿಸಲಾಗಿದೆ ಎಂದು ಜಿಲ್ಲಾ ಕ್ಷಯರೋಗ ನಿರ್ಮೂಲನಾಧಿಕಾರಿ ಡಾ.ಇಂದ್ರಾಣಿ.ವಿ ಅವರು ತಿಳಿಸಿದ್ದಾರೆ.