Ad image

ಯೋಗ ದಿನಾಚರಣೆ ಪ್ರಯುಕ್ತ ಯೋಗಾಭ್ಯಾಸ ಕಾರ್ಯಕ್ರಮ

Vijayanagara Vani
ಶಿವಮೊಗ್ಗ,ಜೂ.18: ಜೂನ್ 21 ರಂದು ನಡೆಯಲಿರುವ 11 ನೇ ಅಂತರಾಷ್ಟಿçÃಯ ಯೋಗ ದಿನಾಚರಣೆಯ ಅಂಗವಾಗಿ ಜಿಲ್ಲಾ ಆಯುಷ್ ಕಚೇರಿ ವತಿಯಿಂದ ಬುಧವಾರ ಪೇಸ್ ಪಿಯು ಕಾಲೇಜಿನಲ್ಲಿ ಯೋಗಾಭ್ಯಾಸ ಕಾರ್ಯಕ್ರಮವನ್ನು ನಡೆಸಲಾಯಿತು.
ಈ ಕಾರ್ಯಕ್ರಮದಲ್ಲಿ ಪ್ರಥಮ ವರ್ಷ ಮತ್ತು ದ್ವಿತೀಯ ವರ್ಷ ಪದವಿ ಪೂರ್ವ ಕಾಲೇಜಿನ 100ಕ್ಕೂ ಹೆಚ್ಚು ವಿದ್ಯಾರ್ಥಿ/ವಿದ್ಯಾರ್ಥಿನಿಯರು ಪಾಲ್ಗೊಂಡಿದ್ದರು. ಈ ವೇಳೆ ಯೋಗ ತರಬೇತುದಾರರಾದ ಮೋನಿಕಾ ವಿದ್ಯಾರ್ಥಿಗಳಿಗೆ ಯೋಗ ಮತ್ತು ಯೋಗಾಭ್ಯಾಸದ ಮಹತ್ವವನ್ನು ತಿಳಿಸಿದರು ಹಾಗೂ 15 ನಿಮಿಷಗಳ ಕಾಲದ “ವೈ-ಬ್ರೇಕ್” ಯೋಗಾಭ್ಯಾಸವನ್ನು ಮಾಡಿಸಿದರು.
ಈ ಕಾರ್ಯಕ್ರಮದಲ್ಲಿ ಜಿಲ್ಲಾ ಆಯುಷ್ ಅಧಿಕಾರಿಗಳಾದ ಡಾ.ಲಿಂಗರಾಜ್.ಎಸ್.ಹಿAಡಸಗಟ್ಟಿ, ವೈದ್ಯಾಧಿಕಾರಿಯಾದ ಡಾ.ಅನಿಲ್ ಕುಮಾರ್.ಎಸ್.ಹೆಚ್, ಯೋಗ ತರಬೇತುದಾರರಾದ ಮಹೇಂದ್ರ ಮತ್ತು ಮೋನಿಕಾ, ಪೇಸ್ ಪಿಯು ಕಾಲೇಜಿನಲ್ಲಿ ಪ್ರಾಂಶುಪಾಲರಾದ ಪ್ರೊ.ಹೆಚ್. ಆನಂದ್ ಭಾಗವಹಿಸಿದ್ದರು.

Share This Article
error: Content is protected !!
";