Ad image

ಯೋಗವೆಂಬುದು ವ್ಯಾಯಾಮವಲ್ಲ ಜೀವನ ವಿಧಾನ ”

Vijayanagara Vani
ಯೋಗವೆಂಬುದು ವ್ಯಾಯಾಮವಲ್ಲ ಜೀವನ ವಿಧಾನ ”

ಜೂನ್ 21 ಅಂತರಾಷ್ಟ್ರೀಯ ಯೋಗ ದಿನವೆಂದು ವಿಶ್ವಸಂಸ್ಥೆ ಘೋಷಿಸಿದೆ. ಜಗತ್ತಿನ 195 ಕ್ಕಿಂತಲೂ ಹೆಚ್ಚಿನ ದೇಶಗಳು ಪ್ರಸ್ತಾವನೆಯನ್ನು ಒಪ್ಪಿ ಅಂದು ದೊಡ್ಡ ಮಟ್ಟದ ರಾಷ್ಟ್ರೀಯ ಕಾರ್ಯಕ್ರಮವಾಗಿ ಯೋಗ ದಿನವನ್ನು ಆಚರಿಸಿ ಯೋಗದ ಮಹತ್ವವನ್ನು ಸಾರಿ ಇಂದು ಇಡೀ ವಿಶ್ವವೇ ಯೋಗ ಮಯವಾಗಿ ಮಾರ್ಪಾಟಾಗಿದೆ.

- Advertisement -
Ad imageAd image

     ಸುಮಾರು 6000 (ಆರುಸಾವಿರ ವರ್ಷ) ಹಳೆಯ ಆರೋಗ್ಯ ಪದ್ದತಿಂದುಲೊ0ದಾದ ‘ಯೋಗ’ಕತೃ ‘ಪತಂಜಲಿ’ ಮಹರ್ಷಿಗಳು ಯೋಗ ಶಬ್ದವು ಸಂಸ್ಕೃತದ ‘ಯುಜ್’ ಪದದಿಂದ ಬಂದಿದ್ದು ಯೋಗವೆಂದರೆ ಜೋಡಿಸು ಹೊಂದಿಸು ಎಂಬ ಅರ್ಥ ನೀಡುತ್ತದೆ. “ಯೋಗಶ್ಚಿತ್ತ ವೃತ್ತಿ ನಿರೋಧ:” ಎಂಬ ವಾಕ್ಯವು ಯೋಗ ಸರ್ವ ನಿಯಂತ್ರಕವೆ0ತಾತ್ಪರ್ಯ ನೀಡಬಲ್ಲದು ಇದು ಕೇವಲ ವ್ಯಾಯಾಮದಲ್ಲ ಕೆಟ್ಟದನ್ನು ತ್ಯಜಿಸಿ ಪರಿಶುದ್ಧವಾದುದನ್ನು ಆಯ್ದುಕೊಳ್ಳುವ ಪ್ರಕ್ರಿಯೆ ಅದರಲ್ಲಿ ನಿಯಮಗಳಿವೆ ಕ್ರಮಬದ್ಧ ಆಸನಗಳಿವೆ, ವಾಯು ದಿಗ್ಭಂದನದ ಒಳಹೊರ ಸಂಚಾರ ನಿಯಂತ್ರಣವಿದೆ. ಇಂತಹುದು ಆರೋಗ್ಯಕರ ಇಂತಹದುವುದು ಅನಾರೋಗ್ಯಕರವೆಂಬ ಪ್ರತ್ಯಾಹಾರದ ವಿವೇಕವಿದೆ. ಯುಗದ ಧಾರಣೆಯಿಂದ ಧ್ಯಾನ ತನ್ಮಯತೆಯಗಳು ಮೈಗೂಡಿ ಮನುಷ್ಯನನ್ನು ಸಮಸ್ಥಿತಿಯಿಂದ ಸಮಾಧಿ ಸ್ಥಿತಿಯಡೆಗೆ ಸಮಾದಿ ಸ್ಥಿತಿಯಿಂದ ಸಮಸ್ಥಿತಿಗೆ ಕರೆದೊಯ್ಯಬಲ್ಲ ಆದಮ್ಯ ಆಲೋಚನೆಗಳು ಯೋಗದ ಜೀವಾಳವಾಗಿದೆ. ಪ್ರಾಣವಾಯುವನ್ನು ನಿಯಂತ್ರಿಸಿ ಶಾರೀರಿಕ ಶಕ್ತಿಯನ್ನು ಸರ್ವಶ್ರೇಷ್ಠತೆಯಡೆಗೆ ಕೊಂಡೊಯ್ಯಬಲ್ಲ ಯೋಗ ಇಂದು ಜಗತ್ತಿನ ಜಾಗೃತ ವೇದಿಕೆಯಲ್ಲಿ ಚರ್ಚಿತವಾಗಿ ಆಚರಣೆಗೊಳಪಡುತ್ತಿರುವ ಜೀವನ ವಿಧಾನವೇ ಆಗಿದೆ.

                ದೇಶದ ಪ್ರತಿಯೊಬ್ಬ ನಾಗಾರಿಕನೂ ಫಿಟ್ ಅಂಡ್ ಫೈನ್ ಆದಾಗಲೇ ನಮ್ಮ ದೇಶದ ಏಳ್ಗೆ ಸಾಧ್ಯ ದೇಶದ ಶೇ. 60% ರಷ್ಟು ಜನಸಂಖ್ಯೆ ಯುವ ಸಮೂಹದಿಂದ ಕೂಡಿದೆ. ಎಲ್ಲಾ ಯುವಕರು ಸ್ವಾಮಿ ವಿವೇಕಾನಂದರು ಆಶಿಸಿದಂತೆ ಉಕ್ಕಿನಂಥ ನರಮಂಡಲ, ಕಬ್ಬಿಣದಂಥ ಮಾಂಸ ಖಂಡಗಳು, ವಿದ್ಯುತ್‌ಶ್ಚಕ್ತಿಯಂಥಾ ಇಚಾಶಕ್ತಿ ಬರಬೇಕಾದರೆ ಪ್ರತಿಯೊಬ್ಬ ಯುವಕ ಮತ್ತು ನಾಗರಿಕನ ದಿನದ ಆರಂಭ ಆರೋಗ್ಯಕರವಾಗಿದ್ದರೆ ಮಾತ್ರ ಅವನು ದೇಶಕ್ಕಾಗಿ ಏನಾದರೂ ಕೊಡುಗೆ ನೀಡಬಲ. ಮಾನವ ಸಂಪನ್ಮೂಲವಾಗಬಲ್ಲರು. ನಿಟ್ಟಿನಲ್ಲಿ ಯೋಗದ ಆಯ್ಕೆ ಬಹು ಅನುಶ್ಚಿತವಾದುದಾಗಿದೆ.

                “ ಸದೃಢ ದೇಹದಲ್ಲಿ ಮಾತ್ರ ಸದೃಢ ಮನಸ್ಸಿರುತ್ತದೆ” ವ್ಯಕ್ತಿ ದುಡಿಯಲು ಶಕ್ತನಾದಾಗ ಮಾತ್ರ ಉತ್ಪನ್ನ ತರಲು ಸಾಧ್ಯ. ದೇಹದ ಪ್ರತಿಯೊಂದು ಅಂಗವೂ ಆರೋಗ್ಯ ಸ್ವಾಸ್ಥöಯವೆನ್ನು ಕಂಡುಕೊಳ್ಳಬಹುದಾದ ಶಕ್ತಿಯನ್ನು ವಿವಿಧ ಯೋಗ ವಿಧಾನಗಳಲ್ಲಿ ಕಂಡುಕೊಳ್ಳಬಹುದಾಗಿದೆ. ಹಿಂದೆ ನಮ್ಮ ಹಿರಿಯರೆಲ್ಲ, 100 ವರ್ಷಗಳ ಕಾಲ ಯಾವುದೇ ಅನಾರೋಗ್ಯದಿಂದ ದೂರವಾಗಿ ಪ್ರಕೃತಿಯ ಜೊತೆ ಜೊತೆಗೆ ದೈಹಿಕ ಪರಿಶ್ರಮ ಮಾನಸಿಕ ನೆಮ್ಮದಿಯಿಂದ ಬದುಕುತ್ತಿದ್ದರು. ಇಂದು ಜೀವನದ ಪ್ರತಿಯೊಂದು ಹಂತದಲ್ಲೂ ಔಷದೋಪಚಾರ ಎಲ್ಲರಿಗೂ ದೊರೆತರೂ ವ್ಯಕ್ತಿಯನ್ನು ಬದುಕಿಸಬಹುದೇ ವಿನಃ ಬಾಳಿಸಲು ಸಾಧ್ಯವಾಗುತ್ತಿಲಲ್ಲ ಸರಾಸರಿ ಜೀವಿತಾವಧಿಯೇ 65 ವರ್ಷದ ಆಸುಪಾಸಿನಲ್ಲಿ ಬಂದು ನಿಂತು ಬಿಟ್ಟಿದೆ. ನಾವಿಂದು ನಮ್ಮ ಮನೆಯವರ ಮೇಲೆ, ಕಛೇರಿಯ ಸಿಬ್ಬಂದಿಯ ಮೇಲೆ ನಮ್ಮ ಬಂಧು ಬಾಂದವರ ಮೇಲೆ ನಿಯಂತ್ರಣ ಹೊಂದಿದ್ದೇವೆ. ಆದರೆ ಸ್ವತಃ ನಮ್ಮ ದೇಹದ ಮೇಲೆ ನಿಯಂತ್ರಣ ಸಾಧಿಸಲು ಸಾಧ್ಯವಿರದ ಪರಿಣಾಮ, ಮಧುವೇಹ, ಅತೀದಸ್ಥೂಲಕಾಯ, ತಲೆನೋವು, ಬೆನ್ನುನೋವು, ಕೀವಿನೋವು, ಅರ್ಜಿರ್ಣ ಸಮಸ್ಯೆ (ಗ್ಯಾಸ್ಟ್ರಿಕ್) ಮುಂತಾದ  ಪೀಡಕ ಕಾಯಿಲೆಗಳಿದ ಭಾದಿತರಾಗಿದ್ದೇವೆ.ಇವನ್ನೆಲ್ಲಾ ಯೋಗದಿಂದ ಹೊಡೆದೋಡಿಸ ಬಹುದಾಗಿದೆ. ಆದರೆ ನಮ್ಮನ್ನಾವರಿಸಿರುವ ಸೋಮಾರಿತನವು ಯೋಗಾ ಯೋಗವನ್ನು ಪಡೆಯುವ ಹಾದಿಯಲ್ಲಿ ಮುಳ್ಳಾಗಿದೆ. ಅದನ್ನೆಲ್ಲಾ ಬದಿಗೊತ್ತಿ ಮನಸ್ಸು ಮಾಡಿದ್ದಲ್ಲಿ ರೋಗ ನಿರೋಧಕ ಶಕ್ತಿ ಹೆಚ್ಚಿಸಿಕೊಳ್ಳಬಹುದಾಗಿದೆ.

                ಕ್ರಿಡಾಂಗಣದ ವರೆಗೂ ಬೈಕ್‌ನಲ್ಲಿಯೋ, ಕಾರ್ ನಲ್ಲಿಯೋ ಹೋಗಿ ಅಲ್ಲಿ ವಾಕಿಂಗ್, ವ್ಯಾಯಾಮ ಯೋಗಗಳನ್ನು ಮಾಡಿ ಮನೆಗೆ ವಾಹನದಲ್ಲಿಯೇ ಹಿಂದಿರುಗುವ ಪರಿಪಾಠವಿದೆ. ಆರೋಗ್ಯ ವ್ಯಾಯಾಮ ದೃಷ್ಟಿ  ನಮ್ಮ ಜೀವನ ವಿಧಾನದಲ್ಲಿ ಬೆರತು, ಸಂಕುಚಿತತೆಯಿ0ಹೊರಬಂದು ಪ್ರತಿನಿತ್ಯ ರೂಢಿಸಿಕೊ0ಡು ನೆಡೆಯುವ ಪರಿಪಾಠ ಹಾಕಿಕೊಂಡಾಗ ಅದನ್ನು ದಿನದ 24 ಗಂಟೆ ಜೊತೆಜೊತೆಗೆ ಕೊಂಡೊಯ್ಯಬಹುದಾಗಿದೆ. “ ಯೋಗ ಬಲ್ಲವನಿಗೆ ರೋಗವಿಲ”ಎಂಬ0ತಾದ ದಿನಮಾನಗಳಲ್ಲಿ ಬೆಳಿಗ್ಗೆ ಬೇಗನೆ ಎದ್ದು ಟಿ.ವಿ. ನೋಡುತ್ತಾ ಕುಳಿತು ಕೊಳ್ಳುವ ಬದಲು ಯೋಗ ಚಿಂತನೆಯಿ0ಸೂರ್ಯೊದಯವನ್ನು ಸಂಭ್ರಮಿಸಿದಾಗ ಧೀರ್ಗಾರೋಗ್ಯ, ಧೀರ್ಘಾಯುಷ್ಯ ನಮ್ಮದಾಗಬಲ್ಲದು ಅಂತರಾಷ್ಟ್ರಿಯ ಮಾನವ ಅಭಿವೃದ್ಧಿ ಸೂಚ್ಯಂಕದ ಕಳಪೆ ಸಾಧನೆಯನ್ನು ನಮ್ಮ ದೇಶ ಹೊಂದಿರುವುದನ್ನು ಸಹ ನಾವು ಪ್ರಮಾಣಿಕವಾಗಿ ಒಪ್ಪಬೇಕು. ನಿಟ್ಟಿನಲ್ಲಿ ಅಭಿವೃದ್ಧಿಯೆಡೆಗೆ ಕೊಂಡೊಯ್ಯುವಲ್ಲಿ ‘ಯೋಗ’ವು ಪ್ರಥಮ ಮೆಟ್ಟಿಲಾಗದಿರದು.

                ಜಗತ್ತಿನ ಜನರೆಲ್ಲರೂ ಕಾಲಚಕ್ರದ ತಿರುವಿಲ್ಲಿ  ಮತ್ತೆ ಹಳೆಯ ಆಹಾರ ಪದ್ದತಿಗಳು ಯೋಗ ವಿಚಾರಗಳು ನೀತಿ ನಿಯಮಗಳ ಕಡೆ ಹೆಚ್ಚು ಆಕರ್ಷಿತರಾಗುತ್ತಿದ್ದಾರೆ ತರಕಾರಿ, ನೆನಸಿದ ಮೊಳಕೆಯೊಡದ ಕಾಳು, ಸೊಪ್ಪು, ಗಡ್ಡೆ, ಬೇರುಗಳು ಸರ್ವಶ್ರೇಷ್ಠವೆಂಬ ಹಿನ್ನೋಟ ಪ್ರತಿಯೊಬ್ಬರ ಜೀವನದ ಮುನ್ನುಡಿಯಾಗುತ್ತಿದೆ. ಪತಂಜಲಿ ಚರಕ ಯೂನಾನಿ, ಮುಂತಾದ ಮಹರ್ಷಿಗಳು ನೀಡಿದ ವರದಾನಗಳು ಆಯುರ್ವೇದ ಪದ್ದತಿಗಳು ಯಾವುದೇ ಅಡ್ಡ ಪರಿಣಾಮ ಬೀರದ ಆರೋಗ್ಯ ಚಿಕಿತ್ಸೆ, ಮನೆ ಮದ್ದುಗಳನ್ನು ಜಗತ್ತಿಗೆ ಸರ್ವಶ್ರೇಷ್ಠ ಸಂಸ್ಕೃತಿಯನ್ನೂ ಬಳುವಳಿಯಾಗಿ ನೀಡಿದ್ದು ಭಾರತದ ಹೆಮ್ಮೆ! ಯೋಗ ಸೂರ್ಯನಮಸ್ಕಾರ, ಪ್ರಾಣಾಯಾಮ, ಆಸನಗಳನ್ನೆಲ್ಲಾ ಮೊದಲು ಮಾಡುವಾಗ ಒಬ್ಬ ಮಾರ್ಗದರ್ಶಕ ಇಲ್ಲವೇ ಬಲ್ಲ ವ್ಯಕ್ತಿಗಳಿಂದ ತಿಳಿದು ಅಬ್ಯಾಸ ಮಾಡುವುದು ಒಳಿತು. ಇಂದು ಶಾಲಾ ಪಠ್ಯಗಳಲ್ಲೂ ಯೋಗವನ್ನು ಕಲಿಸಲಾಗುತ್ತಿದೆ ‘’ ಸರ್ವೇಜನೋ ಸುಖಿನೋಭವಂತು “ ಜಗತ್ತಿನ ಸರ್ವರೂ ಆರೋಗ್ಯ ಕ್ಷೇಮ ಭಾಗ್ಯಗಳನ್ನು ಪಡೆಯಲೆಂದು ಯೋಗವು ಆಶಿಸುತ್ತದೆ. ‘ಯೋಗಂ ಸರ್ವತ್ರ ಆರೋಗ್ಯ ಸಾಧನಂ’ ಎಂಬುದು ಪ್ರತಿಯೊಬ್ಬರಿಗೂ ಮನವರಿಕೆಯಾಗುತ್ತಿದೆ. ಇದೊಂದು ಜಗತ್ತಿನ ಜನಾಂದೋಲವನ್ನಾಗಿಸಿದ ಹಿಂದಿನ, ಇಂದಿನ, ಮುಂದಿನ ಮಹನೀಯರಿಗೆ ಪ್ರಪಂಚದ ಜನತೆಯ ತುಂಬು ಹೃದಯದ ಧನ್ಯವಾದಗಳು.

  ಎರೆಪ್ಪಗೌಡ. ಸಿ.ಡಿ

ಎಂ.ಎ.,ಬಿ.ಎಡ್., ಸ.ಹಿ.ಪ್ರಾ.ಶಾಲೆ, ಅರಳಿಗನೂರು, ಸಿರುಗುಪ್ಪ ತಾ.

 

ಮೊ : 9880958055

Share This Article
error: Content is protected !!
";