ರಾಯಚೂರು, ಜುಲೈ 20 : ರಾಯಚೂರು ಜಿಲ್ಲೆಯ ಯುವಕರನ್ನು ಸಕಾರಾತ್ಮಕವಾಗಿ ಸಕ್ರಿಯಗೊಳಿಸಲು ಯೋಜಿಸಿ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಸಹಯೋಗದೊಂದಿಗೆ ರಾಯಚೂರು ಮಹಾನಗರ ಪಾಲಿಕೆಯು ವಿನೂತನವಾಗಿ ರೂಪಿಸಿರುವ ಯುವಜನರಿಗಾಗಿ ನಗರ-ನಗರಕ್ಕಾಗಿ ಯುವಕರು (ಸಿಟಿ ಫಾರ್ ಯೂಥ್ ಅಂಡ್ ಯೂಥ್ ಫಾರ್ ಸಿಟಿ) ಕಾರ್ಯಕ್ರಮಕ್ಕೆ ಜುಲೈ 20ರಂದು ವಿದ್ಯುಕ್ತ ಚಾಲನೆ ಸಿಕ್ಕಿತು.
ಯುವಜನರಿಗಾಗಿ ನಗರ – ನಗರಕ್ಕಾಗಿ ಯುವಕರು ಬ್ಯಾನರಡಿ ಜುಲೈ 20 ರಿಂದ ಅಕ್ಟೋಬರ್ವರೆಗೆ 10 ನಾನಾ ಕಾರ್ಯಕ್ರಮಗಳು ನಡೆಯಲಿದ್ದು, ಈ ಉಪಕ್ರಮದ ಮೊದಲ ಭಾಗವಾಗಿ ಜುಲೈ 20ರಂದು ನಡೆದ ಗಬ್ಬೇರು ಬೆಟ್ಟ ಚಾರಣಕ್ಕಾಗಿ ಬೆಳ್ಳಂ ಬೆಳಗ್ಗೆಯೇ ಹೆಚ್ಚಿನ ಸಂಖ್ಯೆಯಲ್ಲಿ ಯುವಕರು ಸೇರಿದ್ದು ಕಂಡು ಬಂದಿತು.
ಸಣ್ಣ ನೀರಾವರಿ ಮತ್ತು ವಿಜ್ಞಾನ ತಂತ್ರಜ್ಞಾನ ಸಚಿವರಾದ ಎನ್.ಎಸ್.ಬೋಸರಾಜು ಅವರು ಬೆಳಗಿನ ವಾಯುವಿಹಾರದ ವಸ್ತçಧರಿಸಿ ಕಾರ್ಯಕ್ರಮದಲ್ಲಿ ಭಾಗಿಯಾಗಿ ನಗರದ ಮಹಾತ್ಮಗಾಂಧಿ ಜಿಲ್ಲಾ ಕ್ರೀಡಾಂಗಣದಲ್ಲಿ ಹಸಿರು ನಿಶಾನೆ ತೋರುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.
ಈ ವೇಳೆ ಮಾತನಾಡಿದ ಸಚಿವರು, ಅಧಿಕಾರಿಗಳು ಜನಪರ ಕಾಳಜಿ ಇಟ್ಟುಕೊಂಡು ಯೋಚಿಸಿದಲ್ಲಿ ಹೊಸ ಬಗೆಯ ಕಾರ್ಯಕ್ರಮಗಳನ್ನು ರೂಪಿಸಬಹುದಾಗಿದೆ. ಆ ಕೆಲಸವನ್ನು ಮಹಾನಗರ ಪಾಲಿಕೆಯ ಆಯುಕ್ತರಾದ ಜುಬಿನ್ ಮೊಹಾಪತ್ರ ಅವರು ಮಾಡುತ್ತಿದ್ದಾರೆ. ಯುವಜನರಿಗಾಗಿ ನಗರ – ನಗರಕ್ಕಾಗಿ ಯುವಕರು ಎನ್ನುವ ಥೀಮ್ನೊಂದಿಗೆ ರೂಪಿಸಿರುವ ಇಂತಹ ಕಾರ್ಯಕ್ರಮಗಳು ರಾಯಚೂರ ನಗರಕ್ಕೆ ಅತೀ ಅವಶ್ಯವಿತ್ತು. ಈ ಕಾರ್ಯಕ್ರಮದಲ್ಲಿ ಜಿಲ್ಲೆಯ ಯುವಕರು ಸಕ್ರಿಯ ಭಾಗಿಯಾಗಬೇಕು. ಈ ಕಾರ್ಯಕ್ರಮ ಯಶ ಕಾಣಲಿದೆ ಎಂದು ತಿಳಿಸಿದರು.
ಪಾಲಿಕೆಯ ಆಯುಕ್ತರಾದ ಜುಬಿನ್ ಮೊಹಾಪತ್ರ ಅವರು ಮಾತನಾಡಿ, ರಾಯಚೂರ ಜಿಲ್ಲೆಯಲ್ಲಿ ಉತ್ತಮವಾದ ಪರಿಸರವಿದೆ. ಇಲ್ಲಿನ ಯುವಕರು ಸಧೃಢ ಕಾಯ ಹೊಂದಿದವರಾಗಿದ್ದು ಉತ್ತಮವಾದ ಯೋಚನೆಗಳನ್ನು ಅವರ ಮನಸಿನಲ್ಲಿ ಬಿತ್ತಬೇಕಿದೆ. ಈ ನಿಟ್ಟಿನಲ್ಲಿ ಯೋಚಿಸಿ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಸಹಯೋಗದೊಂದಿಗೆ ಈ ಕಾರ್ಯಕ್ರಮ ರೂಪಿಸಲಾಗಿದೆ. ಮಹಾನಗರ ಪಾಲಿಕೆಯಿಂದ ಜುಲೈ 20 ರಿಂದ ಅಕ್ಟೋಬರ್ವರೆಗೆ 10ರವರೆಗೆ ನಡೆಯುವ ಎಲ್ಲ ಕಾರ್ಯಕ್ರಮಗಳಲ್ಲಿ ಜಿಲ್ಲೆಯ ಯುವಕರು ಭಾಗಿಯಾಗಬೇಕು ಎಂದು ಮನವಿ ಮಾಡಿದರು.
ಗಮನ ಸೆಳೆದ ಚಾರಣ: ಯುವಜನರಿಗಾಗಿ ನಗರ – ನಗರಕ್ಕಾಗಿ ಯುವಕರು ಚಾಲನಾ ಕಾರ್ಯಕ್ರಮದಲ್ಲಿ ಮಹಾನಗರ ಪಾಲಿಕೆಯ ಸದಸ್ಯರು, ಗಣ್ಯರು, ಅಧಿಕಾರಿಗಳು ಹೆಚ್ಚಿನ ಸಂಖ್ಯೆಯಲ್ಲಿ ನೆರದು ಕಾರ್ಯಕ್ರಮದ ಮೆರುಗು ಹೆಚ್ಚಿಸಿದರು. ಇದರ ಭಾಗವಾಗಿ ನಡೆದ ಚಾರಣದಲ್ಲಿ ಭಾಗಿಯಾದ ಯುವಕರು, ಸಾರ್ವಜನಿಕರು ಉತ್ಸಾಹದಿಂದ ಬೆಟ್ಟ ಏರಿ ಗ್ರೂಪ್ ಫೋಟೊ ತೆಗೆಯಿಸಿಕೊಂಡು ಸಂತಸ ವ್ಯಕ್ತಪಡಿಸಿದರು.
ಕ್ಯಾಲೆಂಡರ್ ಬಿಡುಗಡೆ: ಯುವಜನರಿಗಾಗಿ ನಗರ – ನಗರಕ್ಕಾಗಿ ಯುವಕರು ಕಾರ್ಯಕ್ರಮವು ಒಟ್ಟು 3 ತಿಂಗಳಿನ ಕಾರ್ಯಕ್ರಮವಾಗಿದ್ದು ರಾಯಚೂರು ಮಹಾನಗರ ಪಾಲಿಕೆಯಿಂದ ಜುಲೈ 20 ರಿಂದ ಅಕ್ಟೋಬರ್ವರೆಗೆ 10 ವಿವಿಧ ಕ್ರೀಡೆಗಳು, ಆಡಳಿತದೊಂದಿಗೆ ಸಂವಹನ ಮತ್ತು ಪ್ರತಿಭಾ ಸ್ಪರ್ಧೆಗಳು ಹಾಗೂ ಕಾರ್ಯಕ್ರಮಗಳು ನಡೆಯಲಿದ್ದು ಇದಕ್ಕೆ ಸಂಬAಧಿಸಿದ ಕಾರ್ಯಕ್ರಮಗಳ ಪಟ್ಟಿಯ ಕ್ಯಾಲೆಂಡರನ್ನು ಇದೆ ವೇಳೆ ಬಿಡುಗಡೆ ಮಾಡಲಾಯಿತು.
ಕಿಟ್ ವಿತರಣೆ: ಇದೆ ಸಂದರ್ಭದಲ್ಲಿ 10 ಜನ ಪೌರ ಕಾರ್ಮಿಕರಿಗೆ ಅಡುಗೆ ಸಲಕರಣೆಗಳನ್ನು ಒಳಗೊಂಡ ಕಿಟ್ಗಳನ್ನು ಸಾಂಕೇತಿಕವಾಗಿ ವಿತರಣೆ ಮಾಡಲಾಯಿತು.
ಸಮಾರಂಭದಲ್ಲಿ ಮಹಾನಗರ ಪಾಲಿಕೆಯ ಪ್ರಭಾರ ಅಧ್ಯಕ್ಷರಾದ ಜೆ ಸಾಜಿದ್ ಸಮೀರ್, ಮಹಾನಗರ ಪಾಲಿಕೆಯ ಸದಸ್ಯರು, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಅಧಿಕಾರಿ ವೀರೇಶ್ ನಾಯಕ, ಸೇರಿದಂತೆ ಇನ್ನೀತರರು ಇದ್ದರು