Ad image

ಯುವ ಮತದಾರರು ದೇಶದ ಭವಿಷ್ಯ ನಿರ್ಮೀಸ ಬಲ್ಲರು

Vijayanagara Vani
ಯುವ ಮತದಾರರು ದೇಶದ ಭವಿಷ್ಯ ನಿರ್ಮೀಸ ಬಲ್ಲರು

ಬಳ್ಳಾರಿ: ಯುವ ಮತದಾರರು ಇಂದು ಭಾರತದ ಭವಿಷ್ಯ ನಿರ್ಮಿಸಬಲ್ಲರು ಅದಕ್ಕಾಗಿ ಯುವಕರಿಗೆ ಮತದಾನದ ಮಹತ್ವವನ್ನು ತಿಳಿಸುವ ಜವಾಬ್ದಾರಿ ನಮ್ಮ ಮೇಲೆ ಇದೆ ಎಂದು ಬಾಲಕಿಯರ ಸರ್ಕಾರಿ ಪದವಿ ಪೂರ್ವ ಕಾಲೇಜ್ ಬಳ್ಳಾರಿಯ ಪ್ರಾಂಶುಪಾಲರಾದ ಸುಲೇಖಾ ಬಿ ಪ್ರತಿಪಾದಿಸಿದರು.

- Advertisement -
Ad imageAd image


ನಗರದ ಬಾಲಕಿಯರ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಪದವಿ ಪೂರ್ವ ಶಿಕ್ಷಣ ಇಲಾಖೆಯು ರಾ ಷ್ಟ್ರೀಯ ಮತದಾನ ( ಜನವರಿ 2025) ದಿನಾಚರಣೆ ಅಂಗವಾಗಿ ಏರ್ಪಡಿಸಿದ್ದ ತಾಲ್ಲೂಕು ಮಟ್ಟದ ವಿವಿಧ ಸ್ಪರ್ಧೆ ಗಳಿಗೆ ಚಾಲನೆ ನೀಡಿ ಮಾತನಾಡಿದ ಅವರು ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಮತಕ್ಕೆ ದೊಡ್ಡ ಬೆಲೆ ಇದೆ,ಅದು ಸೂಕ್ತವಾಗಿ ಚಲಾವಣೆ ಆದಾಗ ಮಾತ್ರ ದೇಶ ಅಭಿವೃದ್ಧಿ ಹೊಂದಬಲ್ಲುದು ಎಂದರು. ಆ ಬಗ್ಗೆ ಜಾಗೃತಿಗಾಗಿ ಇಲಾಖೆಯು ವೈವಿದ್ಯಮಯ ಕಾರ್ಯಕ್ರಮ ಗಳನ್ನು ಹಮ್ಮಿಕೊಳ್ಳುವ ಮೂಲಕ ಯುವಕರಲ್ಲಿ ಜವಾಬ್ದಾರಿ ಕಲಿಸುತ್ತದೆ ಎಂದರು.
ರಾಜ್ಯಶಾಸ್ತ್ರದ ಉಪನ್ಯಾಸಕ ಕೆ ವಿ ನಾಗರೆಡ್ಡಿ ಮಾತನಾಡಿ ಯಾವ ಮತದಾರನೂ ಯಾವುದೆ ಆಮಿಷಕ್ಕೆ ಒಳಗಾಗದೆ ಮತಚಲಾಯಿಸ ಬೇಕು,ನಿಮ್ಮ ಮತ ಉತ್ತಮ ನಾಯಕನನ್ನು ಆಯ್ಕೆ ಮಾಡುವಂತಿರ ಬೇಕು ಮಾತ್ರವಲ್ಲ ನನ್ನ ಒಂದು ಓಟಿನಿಂದ ಏನಾಗುತ್ತದೆ ಎಂಬ ಮನೋಭಾವ ಸಲ್ಲದು ಎಂದರು.ಕಾರ್ಯಕ್ರಮ ದಲ್ಲಿ ತಾಲೂಕಿನ ನೋಡಲ್ ಅಧಿಕಾರಿಗಳಾದ ಎಸ್ ಪ್ರಕಾಶ ಅವರು ಪ್ರಾಸ್ತಾವಿಕ ಮಾತುಗಳಾಡಿದರು,ವೇದಿಕೆಯ ಮೇಲೆ ಉಪನ್ಯಾಸಕ ರಾದ ಕೆ ಪಿ ಮಂಜುನಾಥ ರೆಡ್ಡಿ,ಶ್ಯಾಮಣ್ಣ,ರಾಘವೇಂದ್ರ. ಡಿ. ಉಪಸ್ಥಿತರಿದ್ದರು ಉಪನ್ಯಾಸಕರು ಗಳಾದ ಡಾ.ಯು.ಶ್ರೀನಿವಾಸ ಮೂರ್ತಿ ಸ್ವಾಗತಿಸಿದರು,ಈರೇಶಪ್ಪ ವಂದಿಸಿದರು,ಚಾಂದ್ ಪಾಷಾ ನಿರೂಪಿಸಿದರು

Share This Article
error: Content is protected !!
";