ಮಾನ್ವಿ: ಪಟ್ಟಣದ ಇಂಡಿಯನ್ ಬ್ಯಾಂಕ್ ಮಾನ್ವಿ ಶಾಖೆಯ ಎ.ಟಿ.ಎಂ. ಜಮಾ ಮಿಷನ್ನಲ್ಲಿ ತಾಲೂಕಿನ ಚಹಪುಡಿ ಕ್ಯಾಂಪ್ ಸೀಕಲ್ ಗ್ರಾಮದ ವಿರೂಪಾಕ್ಷಿ ಎನ್ನುವವರು ಇಂಡಿಯನ್ ಬ್ಯಾಂಕ್ ಮಾನ್ವಿ ಶಾಖೆಯ ತಮ್ಮ ಖಾತೆಗೆ ಮೇ 13 ರಂದು ಸಂಜೆ 4.15 ಕ್ಕೆ 18ಸಾವಿರ ಮೋತ್ತದ 5 ನೂರು ಮುಖ ಬೆಲೆಯ 36 ಖೋಟಾ ನೋಟುಗಳನ್ನು ಜಮಾ ಮಾಡುವುದಕ್ಕೆ ಹಾಕಿದನ್ನು ಬ್ಯಾಂಕಿನ ವ್ಯವಸ್ಥಾಪಕರು ಪತ್ತೆ ಹಚ್ಚಿ ಈ ಕುರಿತು ಮಾನ್ವಿ ಪೊಲೀಸ್ ಠಾಣೆಯಲ್ಲಿ ದೂರು ನೀಡಿದರಿಂದ ಜಿಲ್ಲಾ ಪೊಲೀಸ್ ವರೀಷ್ಠಾಧಿಕಾರಿ ಪುಟ್ಟಮಾದಯ್ಯ ರವರ ಹಾಗೂ ಸಿಂಧನೂರು ಡಿವೈಎಸ್ಪಿ. ಬಿ.ಎಸ್.ತಳವಾರ ಮಾರ್ಗದರ್ಶನದಲ್ಲಿ ಪಿ.ಐ.ಸೋಮಶೇಖರ ಎಸ್. ಕೆಂಚರೆಡ್ಡಿ ಹಾಗೂ ಸಿಬ್ಬಂದಿಗಳು ತನಿಖೆ ನಡೆಸಿ ಅರೋಪಿತರಾದ ಚಹಪುಡಿ ಕ್ಯಾಂಪ್ ಸೀಕಲ್ ಗ್ರಾಮದ ವಿರೂಪಾಕ್ಷಿ,ಶೇಖರ, ಶಾಸ್ತಿç ಕ್ಯಾಂಪಿನ ಹುಸೇನ್ ಬಾಷ, ಸಿರವಾರ ತಾಲೂಕಿನ ಮಾಚನೂರು ಗ್ರಾಮದ ಖಾಜಾ ಹುಸೇನ್, ಸಿದ್ದನಗೌಡ,ಅಮರೇಶ, ಮಾನ್ವಿ ಪಟ್ಟಣದ ಅಜ್ಮೀರ,ಸಿಂಧನೂರಿನ ಆಲಂ ಬಾಷಾ, ರಾಯಚೂರಿನ ನರಸಯ್ಯಶೆಟ್ಟಿ, ಕಾರಟಗಿಯ ಭೀಮೇಶ ಎನ್ನುವವರನ್ನು ವಶಕ್ಕೆ ಪಡೆದು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಿ ಅರೋಪಿತರಿಂದ ಬ್ಯಾಂಕಿನಲ್ಲಿ ಜಮಾ ಮಾಡಿದ 18 ಸಾವಿರ ಬೆಲೆಯ 500 ಮುಖಬೆಲೆಯ 36 ಖೋಟನೋಟುಗಳು, 1ಕಾರ್,4 ದ್ವೀಚಕ್ರವಾಹನ, ಜಪ್ತಿ ಮಾಡಿಕೊಂಡು ತನಿಖೆಯನ್ನು ಮುಂದುವರೆಸಿದ್ದರೆ.
ಪಿ.ಐ.ಸೋಮಶೇಖರ ಎಸ್. ಕೆಂಚರೆಡ್ಡಿ,ಸಿಬ್ಬAದಿಗಳಾದ ಹುಸೇನ್ ಸಾಬ್, ಮುಖ್ಯ ಪೆದೆ ವೆಂಕಟೇಶ,ಆAಜನೇಯ್ಯ,ಕೆ.ಸೂಗಪ್ಪ, ಬಸವರಾಜ, ಪಿ.ಸಿ. ಡೆವಿಡ್, ರಹಿಮಾನ್, ಬಂದೇನಾವಾಜ್, ಸೇರಿದಂತ ತಂಡವು ನಕಲಿ ನೋಟುಗಳ ಚಲಾವಣೆ ಪ್ರಕರಣವನ್ನು ಯಶಸ್ವಿಯಾಗಿ ಭೇದಿಸಿ 10 ಜನ ಅರೋಪಿತರನ್ನು ದಸ್ತಗಿರಿ ಮಾಡುವಲ್ಲಿ ಯಶಸ್ವಿಯಾಗಿರುವುದಕ್ಕೆ ಜಿಲ್ಲಾ ಪೊಲೀಸ್ ವರೀಷ್ಠಾಧಿಕಾರಿ ಪುಟ್ಟಮಾದಯ್ಯ ರವರು ಅಭಿನಂದಿಸಿದ್ದರೆ ಎಂದು ಪಿ.ಐ.ಸೋಮಶೇಖರ ಎಸ್. ಕೆಂಚರೆಡ್ಡಿ ಮಾಹಿತಿ ನೀಡಿದ್ದಾರೆ.