ಮಾನ್ವಿ: ತಾಲೂಕಿನಲ್ಲಿ ಈಶಾನ್ಯ ಪದವೀಧರ ಕ್ಷೇತ್ರದ ಚುನಾವಣೆ ತಾಲೂಕಿನಲ್ಲಿನ 3 ಮತಗಟ್ಟೆಗಳಲ್ಲಿ ಉತ್ತಮ ರೀತಿಯಲ್ಲಿ ಸರಸಾರಿ ಶೇ 75.26 ಮತದಾನ ನಡೆಯಿತು ಕುರ್ಡಿ ಗ್ರಾಮ ಪಂಚಾಯಿತಿ ಮತಗಟ್ಟೆ 88 ರಲ್ಲಿ 192 ಪುರುಷ ಮತದಾರರು, 47 ಮಹಿಳಾ ಮತದಾರರು, ಒಟ್ಟು239 ಮತಗಳು ಚಲಾವಣೆಯಾಗಿದ್ದು ಶೇ 73.99 ಮತದಾನ ನಡೆದಿದೆ, ಮಾನ್ವಿ ಮತಗಟ್ಟೆ 89 ರಲ್ಲಿ 650 ಪುರುಷ ಮತದಾರರು, 324 ಮಹಿಳಾ ಮತದಾರರು, ಒಟ್ಟು 974 ಶೇ 74.12 ಮತಗಳು ಚಲಾವಣೆಯಾಗಿವೆ, ಹಿರೆಕೋಟ್ನೆಕಲ್ ಮತಗಟ್ಟೆ 90ರಲ್ಲಿ 176 ಪುರುಷ ಮತದಾರರು, 64 ಮಹಿಳಾ ಮತದಾರರು, ಒಟ್ಟು 240 ಶೇ 77.67 ಮತಗಳು ಚಲಾವಣೆಯಾಗಿದ್ದು ಶಿಕ್ಷಕರು, ವಕೀಲರು, ಸೇರಿದಂತೆ ಪದವೀಧರ ಮತದಾರರು ತಮ್ಮ ಮತದಾನದ ಹಕ್ಕನ್ನು ಉತ್ಸಾಹದಿಂದ ಚಾಲಯಿಸಿದರು.
ಮಾನ್ವಿ: ಪಟ್ಟಣದ ತಹಸೀಲ್ದಾರ್ ಕಚೇರಿಯ ಅವರಣದಲ್ಲಿನ ಕಟ್ಟಡದಲ್ಲಿನ ಮತಗಟ್ಟೆಯಲ್ಲಿ ಪದವೀಧರರು ಸರತಿಸಾಲಿನಲ್ಲಿ ನಿಂತು ತಮ್ಮ ಮತವನ್ನು ಚಲಾಯಿಸಿದರು.