ಹುಬ್ಬಳ್ಳಿ : ಎನ್.ಕೆ.ಎಂ.ಪಿ.ಎಸ್.ಸ್ಟುಡಿಯೋ ನಿರ್ಮಾಣದ ‘ನಮ್ಮ ಮತ ನಮ್ಮ ಸರಕಾರ’ ಮೊಟ್ಟ ಮೊದಲ ಸಲ ಫೇಸ್ ರಿಪ್ಲೇಸ್ಮೆಂಟ್ ಆರ್ಟಿಫಿಶಿಯಲ್ ಇಂಟೆಲಿಜೆನ್ಸ್(ಎ ಆಯ್) ಸಾಫ್ಟವೇರ್ ಟೆಕ್ನಾಲಜೀಸ್ ಬಳಸಿ ತಯಾರಿಸಲಾದ ಕರ್ನಾಟಕದ ಮೊದಲ ಪ್ಯಾನ್ ಇಂಡಿಯಾ ಕಿರುಚಿತ್ರ ಏಳು ಭಾಷೆಗಳಲ್ಲಿ ಇಂದು ಬಿಡುಗಡೆ ಮಾಡಲಾಯಿತು.
<span;> ಪೋಸ್ಟರ್ ಬಿಡುಗಡೆಯ ಜೊತೆಗೆ ಕನ್ನಡ, ಇಂಗ್ಲೀಷ್, ಹಿಂದಿ, ಮರಾಠಿ, ತೆಲಗು, ತಮಿಳು, ಮಲಯಾಳಂ ಹೀಗೆ ಏಳು ಭಾಷೆಗಳಲ್ಲಿ ಕಿರುಚಿತ್ರವನ್ನು ಎನ್ಕೆಎಂಪಿಎಸ್ ಯೂಟ್ಯೂಬ್ ಚಾನೆಲ್ನಲ್ಲಿ ಬಿಡುಗಡೆ ಮಾಡಿದ ಹಿರಿಯರಂಗ ಮತ್ತು ಚಿತ್ರರಂಗ ಕಲಾವಿದ ಟಿ.ಜೆ.ಭಾಂಡಗೆ ಮಾತನಾಡಿ ಮತದಾನ ಮಾಡುವದು ಪ್ರತಿಯೊಬ್ಬ ಭಾರತೀಯರ ಹಕ್ಕು ಮತ್ತು ಕರ್ತವ್ಯ. ಈ ಹಕ್ಕು ಚಲಾಯಿಸಲು ಪ್ರತಿಯೊಬ್ಬ ಭಾರತೀಯರಿಗೆ ಹದಿನೆಂಟು ವರ್ಷ ತುಂಬಿರಬೇಕು. ದೇಶದ ಉಜ್ವಲ ಭವಿಷ್ಯಕ್ಕಾಗಿ ಮತದಾನ ಅಗತ್ಯವಿದ್ದು ವಿವಿಧ ಪಕ್ಷಗಳು,ವ್ಯಕ್ತಿಗÀಳು ನೀಡುವ ಟೊಳ್ಳು ಭರವಸೆಗಳು ಆಮಿಷಗಳಿಗೆ ಒಳಗಾಗದೆ ಪ್ರಾಮಾಣಿಕವಾಗಿ ತಪ್ಪದೇ ನಮ್ಮ ನಮ್ಮ ಮತವನ್ನು ಚಲಾಯಿಸಬೇಕು . ಇಂಥ ಮತದಾನ ಜಾಗೃತಿ ಕುರಿತು ಈ ಕಿರುಚಿತ್ರ ತಯಾರಿಸಲಾಗಿದ್ದು ಮತದಾರ ಪ್ರಭುಗಳು ಕಿರುಚಿತ್ರ ವೀಕ್ಷಿಸಿ ಜಾಗೃತಗೊಂಡು ತಮ್ಮ ಅಮೂಲ್ಯ ಮತ ಚಲಾಯಿಸಿದರೆ ಚಿತ್ರ ತಂಡದ ಶ್ರಮ ಸಾರ್ಥಕ ಎಂದರು. ಈ ಸಂದರ್ಭದಲ್ಲಿ ಪ್ರೊಡಕ್ಷನ್ ಮ್ಯಾನೇಜರ್ ವಿಕ್ರಂ ಕುಮಠ, ಸಹಾಯಕ ನಿರ್ದೇಶಕಿ ಭಾವನಾ ಶಿಂಧೆ, ಹಿರಿಯ ರಂಗಕಲಾವಿದೆ ರೇಖಾ ಹೊನವಾಡ ಮತ್ತು, ನಿರ್ದೇಶಕ ಎಸ್.ಎಸ್.ಕುಲಕರ್ಣಿ(ಬಾಬಾ) ಉಪಸ್ಥಿತರಿದ್ದರು.
ತಾರಾಗಣದಲ್ಲಿ ರೂಪಶ್ರೀ ವಿ ಪಾಟೀಲ, ಮಯೂರಿ ಎಸ್ ಛತ್ರೆ, ಅಭಿಷೇಕ್ ಎ ಕುಲಕರ್ಣಿ,ಸಂದೀಪ್ ಪದಕಿ, ಗೀತಾ ತಬೀಬ್,ತಾಂತ್ರಿಕ ವರ್ಗದಲ್ಲಿ ಪಿಆರ್ಓ ಡಾ.ಪ್ರಭು ಗಂಜಿಹಾಳ, ಡಾ.ವೀರೇಶ ಹಂಡಿಗಿ, ಸಹಾಯಕ ನಿರ್ದೇಶನ ಭಾವನಾ ಶಿಂಧೆ, ಚಿತ್ರಕಥೆ-ಸಂಭಾಷಣೆ, ವಿಎಫ್ ಎಕ್ಷ್-೩ಡಿ ಅನಿಮೇಷನ್, ಸಂಕಲನ ನಿರ್ದೇಶನ ಜೊತೆಗೆ ನಿರ್ಮಾಣ ಎಸ್.ಎಸ್.ಕುಲಕರ್ಣಿ(ಬಾಬಾ)ಅವರೆ ನಿರ್ಮಾಪಕರಾಗಿದ್ದಾರೆ. ನಿರ್ಮಾಣ ವ್ಯವಸ್ಥೆಯನ್ನು ವಿಕ್ರಂ ಕುಮಠ ಹೊತ್ತಿದ್ದಾರೆ,