1947 ಆಗಸ್ಟ್ 15 ಇಡೀ ದೇಶಕ್ಕೆ ದೇಶವೇ ಸಂಭ್ರಮ ಪಟ್ಟು ತಿರಂಗ ಹಿಡಿದು ಸ್ವತಂತ್ರವೆಂದು ಘೋಷಿಸಿಕೊಂಡ ಸಂಭ್ರಮ ಮನೆ ಮಾತಾಗಿತ್ತು. ಪ್ರತಿಯೊಬ್ಬರ ಮುಖದಲ್ಲೂ ಸ್ವತಂತ್ರರೆಂಬ ಮಂದಹಾಸ ಆತ್ಮ ಗೌರವ, ಇನ್ನು ನಮಗೆ ಯಾರ ಭಯವೂ ಇಲ್ಲ ಎಂಬ ನಿರ್ಭೀತ ಭಾವ ಆವರಿಸಿದಾಗ, ದಕ್ಷಿಣ ಭಾರತದ ಅದೊಂದು ಭಾಗ ಹಳೆಯ ಕ್ರೂರ ತರವನ್ನೇ ಒಪ್ಪಿಕೊಂಡು ಮುನ್ನಡೆಯುವ ಅನಿವಾರ್ಯತೆ ತಂದುಕೊಂಡಿತ್ತು. ಈ ಭಾಗವನ್ನು ಯಾರು ಉದ್ದರಿಸಲಾರರು, ಯಾರು ಸ್ವತಂತ್ರಗೊಳಿಸಲಾರರು, ನಮ್ಮನ್ನು ದಾಸ್ಯದಿಂದ ಮುಕ್ತಗೊಳಿಸಲಾರರು, ದೌರ್ಜನ್ಯದಿಂದ ತಡೆಯಲಾರರು ಎಂದುಕೊಂಡಿರುವಾಗಲೇ ಸರ್ದಾರ್ ವಲ್ಲಭಾಯಿ ಪಟೇಲ್ ರೆಂಬ ನಕ್ಷತ್ರವೊಂದು ಉದಯಿಸಿ ಸೆಪ್ಟಂಬರ್ 17 ರಂದು ಒಂದು ವರ್ಷ, ಒಂದು ತಿಂಗಳು ತಡವಾಗಿ 1948 ರಂದು “ಆಪರೇಷನ್ ಪೋಲೋ” ಹೆಸರಿನ ಕಾರ್ಯಾಚರಣೆ ನಡೆಸಿ, ಈ ಭಾಗದ ಜನರ ಜೀವನ ಹಸನು ಮಾಡಿದ ದಿನವಾಗಿದೆ.
ಭಾರತದ ಸ್ವತಂತ್ರವಾದಾಗ 565 ಹೆಚ್ಚು ರಾಜ ಸಂಸ್ಥಾನಗಳಲ್ಲಿ ಹಂಚಿಹೋಗಿತ್ತು. ಬ್ರಿಟಿಷರು ನಮಗೆ ಸ್ವತಂತ್ರ ಕೊಟ್ಟ ನಂತರ ಅವರ ಫಾರ್ಮಾನು ಪ್ರಕಾರ ಭಾರತದಲ್ಲಿ ವಿಲೀನವಾಗುವ, ಹೊಸದಾಗಿ ರಚನೆಯಾದ ಪಾಕಿಸ್ತಾನದ ಜೊತೆ ಸೇರಿಕೊಳ್ಳುವ, ಮತ್ತು ಸ್ವತಂತ್ರವಾಗಿ ಉಳಿಯುವ ಆಯ್ಕೆಗಳನ್ನು ಕೊಟ್ಟಿದ್ದರು. ಈ ಆಯ್ಕೆಗಳ ಪ್ರಕಾರ ಭಾರತದ ರಾಜರುಗಳು ತಮ್ಮ ಸಂಸ್ಥಾನಗಳನ್ನು, ಭಾರತದೊಂದಿಗೆ ವಿಲೀನ ಮಾಡಲು ಒಪ್ಪಿಕೊಂಡರು, ಅಖಂಡ ದೇಶವನ್ನಾಗಿ, ಪ್ರಜಾಪ್ರಭುತ್ವದ ವ್ಯವಸ್ಥೆ ಜಾರಿಗೆ ಬರಲು, ತಮ್ಮ ಉದಾರತೆಯಿಂದ ಅವಕಾಶ ಮಾಡಿದರು. ಅದರ ಪ್ರಕಾರ, 549 ಸಂಸ್ಥಾನಗಳು ಭಾರತವನ್ನು ಸೇರಿಕೊಂಡವು, ಇನ್ನುಳಿದ 13 ಸಿಂಧು ಪ್ರಾಂತದ ರಾಜ್ಯ ಸಂಸ್ಥಾನಗಳು ಪಾಕಿಸ್ತಾನದೊಂದಿಗೆ ಸೇರಿಕೊಂಡವು, ಇನ್ನುಳಿದ ಮೂರು ಸಂಸ್ಥಾನಗಳು ಅತ್ತ ಭಾರತವನ್ನು ಸೇರದೆ ಇತ್ತ ಪಾಕಿಸ್ತಾನವನ್ನು ಸೇರಿದೆ, ಸ್ವತಂತ್ರವಾಗಿ ಉಳಿಯುವ ನಿರ್ಧಾರ ಮಾಡಿದವು. ಅವುಗಳಲ್ಲಿ ಕಾಶ್ಮೀರದ ರಾಜ ಹರಿಸಿಂಗ್, ಗುಜರಾತ್ ನ ಜುನಾಗಡದ ರಾಜ ಮೂರನೇ ಮಹಮ್ಮದ್ ಖಾನ್, ಹೈದರಾಬಾದಿನ ನಿಜಾಮ ಉಸ್ಮಾನ್ ಅಲಿ ಖಾನ್, ಸೇರಿದ್ದರು. ರಾಜಹರಿಸಿಂಗ್ ಪಾಕಿಸ್ತಾನದ ಕಪಟ ಅರಿತು ವಿಶೇಷ ಸ್ಥಾನಮಾನದೊಂದಿಗೆ, ಭಾರತ ಸೇರ್ಪಡೆ ಮಾಡಿಕೊಂಡ, ಜುನಾಗಡದ ರಾಜ 3 ನೇ ಮೊಹಮ್ಮದ್ ಖಾನ್ ಶರಣಾದ. ಆದರೆ ಹೈದರಾಬಾದಿನ ನಿಜಮ ದಕ್ಷಿಣಭಾರತದ ಮಧ್ಯದಲ್ಲಿ ಇದ್ದುಕೊಂಡು ಪಾಕಿಸ್ತಾನ ಸೇರಲು ಬಯಸಿದ. ಆದರೆ ಅಲ್ಲಿದ್ದ ಬಹುಸಂಖ್ಯಾತ ಹಿಂದುಗಳು ಹಾಗೂ ಎಲ್ಲಾ ಮತೀಯರು ಭಾರತದೊಂದಿಗೆ ವಿಲೀನವಾಗಲು ಬಯಸಿದ್ದರು. ಅವರನ್ನೆಲ್ಲ ಧಿಕ್ಕರಿಸಿ ಪಾಕಿಸ್ತಾನ ಸೇರಲು ಸಾಧ್ಯವಿರದಿರುವಾಗ, ಸ್ವತಂತ್ರವಾಗಿ ಇರುತ್ತೇನೆ ಎಂದು ಘೋಷಿಸಿಕೊಂಡ.
ಪ್ರಜಾಪೀಡನೆ ಪರಿಪಾಲನೆಯನ್ನೇ ಮುಖ್ಯವಾಗಿರಿಸಿ ಕೊಂಡಿದ್ದ ನಿಜಾಮ, ಜನರನ್ನು ಪಶುಗಳಂತೆ ಕಾಣುತ್ತಿದ್ದ, ಮತಾಂತರಗೊಳಿಸಲು ಪ್ರೋತ್ಸಾಹ ನೀಡುತ್ತಿದ್ದ, ಅನ್ಯಾಯದ ಕರಗಳನ್ನು ಹೇರಿ ಪ್ರಜೆಗಳಿಗೆ ಹಿಂಸೆ ಕೊಡುತ್ತಿದ್ದ, ಅತ್ತ ಸಮೃದ್ಧ ಮೈಸೂರು ರಾಜ್ಯದಲ್ಲಿ ಪ್ರಜೆಗಳನ್ನು ಮಕ್ಕಳಂತೆ ನೋಡಿಕೊಳ್ಳುತ್ತಿದ್ದ, ರಾಜಪ್ರಭುತ್ವ ಪ್ರಜೆಗಳಿಗಾಗಿ, ಕನ್ನಡ ಶಾಲೆ, ಸಂಸ್ಕೃತ ಶಾಲೆ, ಪ್ರಜಾಪ್ರತಿನಿಧಿ ಪರಿಷತ್, ಸ್ಥಾಪಿಸಿ, ಡ್ಯಾಮ್ ಗಳನ್ನು, ಕಾಲುವೆಗಳನ್ನು ಕಟ್ಟಿಸಿ, ನೀರಾವರಿ ವ್ಯವಸ್ಥೆ ಮಾಡಿಸಿ, ಪ್ರಜೆಗಳನ್ನು ಮಕ್ಕಳಂತೆ ನೋಡಿ ಕೊಂಡರು. ಅಲ್ಲಿಯ ಜನ ವಿದ್ಯಾವಂತರಾದರು. ಆರ್ಥಿಕವಾಗಿ ಸಬಲರಾದರು. ಆದರೆ ಅಂದಿನ ಹೈದರಾಬಾದ್ ಕರ್ನಾಟಕದ 5 ಜಿಲ್ಲೆಗಳ ಸುಮಾರು 375 ಹಳ್ಳಿಗಳ ಜನ ಭಯದ ವಾತಾವರಣದಲ್ಲಿ, ತಮ್ಮ ಬದುಕನ್ನು ಉಳಿಸಿಕೊಳ್ಳಲು ಪರಿತಪಿಸುತ್ತಿದ್ದರು. ದೇಶಕ್ಕೆ ಸ್ವಾತಂತ್ರ್ಯ ಸಿಗುತ್ತದೆ ಎಂದು ಆಸೆ ಕಂಗಳಿಂದ ನೋಡುತ್ತಿದ್ದ ಜನಕ್ಕೆ, ಬ್ರಿಟಿಷರಿಂದ ಮುಕ್ತಿ ಬೇಕೆರಲಿಲ್ಲ, ಬದಲಾಗಿ ನಿಜಾಮನಿಂದ ಮುಕ್ತಿ ಬೇಕಿತ್ತು, ಆದರೆ ಆಸೆ ಕನಸು ಕೂಡ ನಿಜಾಮನ ಘೋಷಣೆಯಿಂದ ಬಗ್ನವಾಯಿತು. 1947ರ ಸ್ವಾತಂತ್ರ್ಯ ದಿನದಂದು ತನ್ನದೇ ರೇಡಿಯೋ ಸ್ಟೇಷನ್ ಮೂಲಕ ನಾವು ಸ್ವತಂತ್ರವಾಗಿ ಉಳಿಯುತ್ತೇವೆ ಎಂಬ ಘೋಷಣೆ ಮಾಡಿದ ನಿಜಾನಾ ತೀರ್ಮಾನ ಆ ಭಾಗದ ಜನರನ್ನು ದಂಗೆ ಹೇಳುವಂತೆ ಮಾಡಿತ್ತು, ಈ ಪ್ರಜಾಪೀಡಕ ನಿಂದ ಮುಕ್ತಿ ಬೇಕೆಂದು ಅಂದಿನ ಹೈದರಾಬಾದ್ ಕಾಂಗ್ರೆಸ್ ನ ಅಧ್ಯಕ್ಷರಾಗಿದ್ದ ಹಿಂದೂ ಸನ್ಯಾಸಿ ಸ್ವಾಮಿ ರಮಾನಂದ ತೀರ್ಥರು ಅಕ್ಷರ ಸಹ ಕೆರಳಿದ್ದರು. ಜನರಿಗೆ ದಂಗೆ ಹೇಳುವಂತೆ ಪ್ರಚೋದಿಸಿದರು. ಕಾಲೇಜು ವಿದ್ಯಾರ್ಥಿಗಳು ಕ್ವಿಟ್ ಕಾಲೇಜ್ ಚಳುವಳಿ ಮೂಲಕ ಹೊರಬಂದು, ನಿಜಾಮನ ವಿರುದ್ಧ ದಂಗೆ ಎದ್ದರು. 1920 ರಲ್ಲಿ ನಿಜಾಮನ ಆಡಳಿತವನ್ನು ಕಾಪಾಡಲು ಕ್ರೂರ ಪಡೆಯೊಂದು ಹೈದರಾಬಾದ್ ನಲ್ಲಿ ಹುಟ್ಟಿಕೊಂಡಿತ್ತು, ಅದುವೇ ರಜಾ ಕರ ಸೇನೆ. ಅದು ಇಂದಿನ ಯಾವ ISIS ಗೂ ಕಡಿಮೆ ಇರಲಿಲ್ಲ. ಇದರ ನೇತೃತ್ವ ವಹಿಸಿದ ಮೊಹಮ್ಮದ್ ನವಾಜ್ ಖಾನ್ ಅತ್ಯಂತ ಕ್ರೂರ ವ್ಯಕ್ತಿಯಾಗಿದ್ದ. ಭಾರತದಲ್ಲಿ ಇಸ್ಲಾಮನ್ನು ಪಸರಿಸುವುದು, ಬಲವಂತವಾಗಿ ಮತಾಂತರಗೊಳಿಸುವುದು, ಮುಸ್ಲಿಂ ದರಗಳನ್ನು ಕಾಪಾಡುವುದು ಅದರ ಉದ್ದೇಶವಾಗಿತ್ತು. ಕಾಸಿಂ ರಿಜ್ವಿ ಎಂಬ ಕ್ರೂರಿ 1946 ರಲ್ಲಿ ಈ ಪಡೆಯ ನೇತೃತ್ವ ವಹಿಸಿ, ದೌರ್ಜನ್ಯ ಎಸಗುತ್ತಿದ್ದ, ಈ ದುರ್ಜನ್ಯಗಳನ್ನು ಕೆ ಎಂ ಮುನ್ಷಿರವರು ತಮ್ಮ ಎಂಡ್ ಆಫ್ ಎರಾ ಪುಸ್ತಕದಲ್ಲಿ ಬರೆದಿದ್ದರು. ಪತ್ರಿಕೆಗಳಲ್ಲಿ ಅಂಕಣಗಳನ್ನು ಪ್ರಕಟಿಸಿದ್ದರು. ಇವೆಲ್ಲವುಗಳನ್ನು ಗಮನಿಸಿದ ಸರ್ದಾರ್ ಪಟೇಲರು. ಹೈದರಾಬಾದನ್ನು ನಿಜಾಮನಿಂದ ಮುಕ್ತಗೊಳಿಸಲು ತೀರ್ಮಾನಿಸಿದರು. ಆದರೆ ಸೈನಿಕ ಕಾರ್ಯಾಚರಣೆ ಮಾಡುವಂತಿರಲಿಲ್ಲ. ಮಾಡಿದರೆ ವಿಶ್ವಸಂಸ್ಥೆಯ ಕೆಂಗಣ್ಣಿಗೆ ಗುರಿ ಯಾಗಬೇಕಾಗಿತ್ತು.
ಎರೆಪ್ಪ ಗೌಡ
ಶಿಕ್ಷಕರು