ಮಾಡಬಾರದುದನು
ಮಾಡಿದ ಮೇಲೆ
ಪಶ್ಚಾತ್ತಾಪವ
ಪಟ್ಟರೇನು? ಜೀವವೇ ಪಣಕೆ ಇಟ್ಟರೇನು?
ಗಂಗೆಯಲಿ ಪ್ರತಿ ದಿನ
ಮುಳುಗಿದರೇನು
ಜೀವನ ಪಾವನ ವಾಗುವುದೇನು?
ನಾಲಿಗೆ ಕೆಂಡದಿ
ಸುಟ್ಟರೇನು?
ಪಾಪವು ನಾಶ ಆಗುವುದೇನು?
ಹಗಲಿರುಳೆನ್ನದೆ
ಹರಿಯ ನಾಮವ ಪಠಿಸಿದೊಡೆ?
ತಟ್ಟಿದ ಪಾಪವು ತೊಲಗುವುದೇನು?
ಪಾಪವು ಗೈಯ್ಯುವ ಘಳಿಗೆಯ ಮೊದಲು
ಒಂಚಣ ಯೋಚನೆ ತರವಲ್ಲವೇನು?
ಪ್ರಭಂಜನ ವಿಠ್ಠಲ ನಾಮವ ಪಠಿಸಲು
ಪಾಪಕೆ ಸ್ಥಳವು
ಇಹುದೇನು?
*ಪಶ್ಚಾತ್ತಾಪದ ಅವಷ್ಯಕತೆ ಏನು* ?
ಪ್ರೊ.ಪ್ರವೀಣ. ವಿ.ಕುಲಕರ್ಣಿ. ಬಿದಿಗೆಚಂದ್ರ✒️. ಜಮಖಂಡಿ/ ಕಲಬುರಗಿ