Ad image

48 ಗಂಟೆಗಳಲ್ಲಿ ಕೊಲೆ ಪ್ರಕರಣ ಪತ್ತೆ, ಆರೋಪಿತರ ಬಂಧನ

Vijayanagara Vani

ಧಾರವಾಡ () ಡಿಸೆಂಬರ 05: ಡಿಸೆಂಬರ್ 3, 2024 ರಂದು ಮದ್ಯಾಹ್ನ 3.30 ಗಂಟೆಯಿಂದ ಸಾಯಂಕಾಲ 5 ಗಂಟೆಯ ನಡುವಿನ ಅವಧಿಯಲ್ಲಿ ಗರಗ ಗ್ರಾಮದ ಹಳೇ ಪೆÇಲೀಸ್ ಠಾಣೆ ಹತ್ತಿರ ಇರುವ ಪಿರ್ಯಾದಿ ವಾಸವಿದ್ದ ಲೀಸ್ ಮನೆಯನ್ನು ಯಾರೋ ಆರೋಪಿತರು, ಯಾವುದೋ ದುರುದ್ದೇಶದಿಂದ ಅಕ್ರಮ ಪ್ರವೇಶ ಮಾಡಿ. ಮನೆಯಲ್ಲಿದ್ದ ಪಿರ್ಯಾಧಿಯ ಗಂಡನಾದ ಮೃತ ಗಿರೀಶ ತಂದೆ ಮಹದೇವಪ್ಪ ಕರಡಿಗುಡ್ಡ, ವಯಾ 49 ವರ್ಷ ಜಾತಿ ಹಿಂದೂ ಲಿಂಗಾಯತ. ಉದ್ಯೋಗ ರಿಯಲ್ ಎಸ್ಟೇಟಿ ಸಾ: ಗರಗ, ಇವನಿಗೆ ಯಾರೋ ಆರೋಪಿತರು ಹರಿತವಾದ ಆಯುಧದಿಂದ ಸಿಕ್ಕಸಿಕ್ಕಲ್ಲಿ ಕೊಚ್ಚಿ ಕೊಲೆ ಮಾಡಿದ ಬಗ್ಗೆ.

ಸದರಿ ಆಪಾದಿತರ ಮೇಲೆ ಕಾನೂನು ರಿತ್ಯ ಕ್ರಮ ಜರುಗಿಸುವಂತೆ ಪಿರ್ಯಾದಿ ದೀಪಾ ಕೋಂ ಗಿರೀಶ ಕರಡಿಗುಡ್ಡ, ವಯಾ 39 ವರ್ಷ, ಉದ್ಯೋಗ ಶಿಕ್ಷಕಿ, ಸಾ: ಗರಗ, ಇವರು ದಿನಾಂಕ: 03-12-2024 ರಂದು ರಾತ್ರಿ 20.20 ಗಂಟೆಗೆ ಠಾಣೆಗೆ ಹಾಜರಾಗಿ ನೀಡಿದ ದೂರನ್ನು ಗರಗ ಪೆÇಲೀಸ್ ಠಾಣೆಯ ಗರಗ ಪಿಎಸ್ ಗುನ್ನಾ ನಂ. 237/2024 ಕಲಂ: 329(2), 103(1), ಬಿಎನ್‍ಎಸ್-2023 ನೇದ್ದಕ್ಕೆ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದು ಇರುತ್ತದೆ.

ಈ ಬಗ್ಗೆ ಸೂಕ್ತ ತನಿಖೆ ಮತ್ತು ಆರೋಪಿ ಪತ್ತೆಗಾಗಿ ಧಾರವಾಡ ಜಿಲ್ಲಾ ಎಸ್.ಪಿ ಡಾ. ಗೋಪಾಲ ಬ್ಯಾಕೋಡ, ಐಪಿಎಸ್ ಇವರ ಮಾರ್ಗದರ್ಶನದಲ್ಲಿ ಎನ್.ವಿ.ಬರಮನಿ, ಹೆಚ್ಚುವರಿ ಪೆÇಲೀಸ್ ಅಧೀಕ್ಷಕರು ಹಾಗೂ ಎಸ್.ಎಮ್.ನಾಗರಾಜ ಇವರ ಮೇಲುಸ್ತುವಾರಿಯಲ್ಲಿ ತನಿಖಾಧಿಕಾರಿಗಳಾದ ಸಮೀರ ಮುಲ್ಲಾ, ಸಿಪಿಐ ಗರಗ ಮತ್ತು ಸಿದ್ದರಾಮಪ್ಪ ಹುಣ್ಣದ, ಪಿ.ಎಸ್.ಐ ಕಾನ್‍ಸು, ಎಫ್.ಎಮ್. ಮಂಟೂರ, ಪಿಎಸ್‍ಐ ಹೆಚ್ಚುವರಿ. ಗರಗ ಪೆÇಲೀಸ್ ಠಾಣೆ ಇವರ ನೇತೃತ್ವದಲ್ಲಿ ತಂಡ ರಚಿಸಿ ಕೂಡಲೇ ತನಿಖೆ ಪ್ರಾರಂಭಿಸಿ ಪ್ರಕರಣದಲ್ಲಿಯ ಒಟ್ಟು 04 ಜನ ಆರೋಪಿತರನ್ನು ದಸ್ತಗೀರ ಮಾಡಿ ಕಾನೂನು ರಿತ್ಯ ಕ್ರಮ ಕೈಗೊಂಡಿದ್ದು ಇರುತ್ತದೆ
**

Share This Article
error: Content is protected !!
";