Ad image

ಅಮೆರಿಕ ನೌಕಾಪಡೆಯ ನಿವೃತ್ತ ಸೈನಿಕನಾದ ಆತ ಹೊಸ ವಿಶ್ವ ದಾಖಲೆಯನ್ನು ಮಾಡಿದ್ದಾನೆ

Vijayanagara Vani
ಅಮೆರಿಕ ನೌಕಾಪಡೆಯ ನಿವೃತ್ತ ಸೈನಿಕನಾದ ಆತ ಹೊಸ ವಿಶ್ವ ದಾಖಲೆಯನ್ನು ಮಾಡಿದ್ದಾನೆ

ಜಗತ್ತಿನಲ್ಲಿ ಎಷ್ಟು ವಿಚಿತ್ರ ಹಾಗೂ ವಿಭಿನ್ನ ರೀತಿಯ ವ್ಯಕ್ತಿಗಳಿದ್ದಾರೆ ಎಂದು ನಾವು ನೋಡಿರುತ್ತೇವೆ. ಅದರಲ್ಲೂ ಕೆಲವರು ಎಂತೆಂತ ಸಾಹಸಕ್ಕೆ ಕೈಹಾಕುತ್ತಾರೆ ಅಂದ್ರೆ ನಾವು ನಂಬಲು ಸಾಧ್ಯವಾಗುವುದಿಲ್ಲ. ಇಲ್ಲಿಯೂ ಸಹ ಒಬ್ಬ ಅಂತಹ ಸಾಹಸ ಮಾಡಿ ಈಗ ಎಲ್ಲರ ಗಮನ ಸೆಳೆದಿದ್ದಾನೆ.

- Advertisement -
Ad imageAd image

ಆತ ವಯಸ್ಸಾಗದಿರಲು ಮಾಡಿದ ಸಾಹಸ ಕಂಡು ಜನರೆ ನಿಬ್ಬೆರಗಾಗಿದ್ದಾರೆ. ಏಕೆಂದರೆ ಆತ ಸಮುದ್ರದಲ್ಲಿ ಬರೋಬ್ಬರಿ 100 ದಿನಗಳ ಕಾಲ ಕಳೆದಿದ್ದ. ಇದರಿಂದ ಆತ  ಚಿಕ್ಕವನಾಗಿದ್ದಾನಂತೆ. ವಯಸ್ಸಾದಿಕೆಯನ್ನು ತಡೆಯುವುದು ಅಸಾಧ್ಯ ಆದ್ರೆ ಇದನ್ನು ಮಾಡಿಯೇ ತೀರುತ್ತೇವೆ ಎಂದು ಪ್ರಪಂಚದಾದ್ಯಂತದ ವಿಜ್ಞಾನಿಗಳು ನಿರಂತರ ಅಧ್ಯಯನದಲ್ಲಿ ತೊಡಗಿದ್ದಾರೆ.

ಇದಕ್ಕೆ ಜೀವಂತ ಸಾಕ್ಷಿ ಒದಗಿಸಬೇಕು ಎಂದು ಯೋಚಿಸಿದ ಜೋಸೆಫ್ ಡಿಟೂರಿ ಎಂಬ ವ್ಯಕ್ತಿ ೧೦೦ ದಿನಗಳ ಕಾಲ ನೀರಿನೊಳಗೆ ಬದುಕಲು ನರ‍್ಧರಿಸಿದ್ದ, ಹೊರ ಜಗತ್ತಿನ ಸಂರ‍್ಕವೇ ಇಲ್ಲದೆ ನೀರಿನೊಳಗೆ ೧೦೦ ದಿನ ಕಳೆದು ಆತ ಈಗ ಎಲ್ಲರ ಹುಬ್ಬೇರುವಂತೆ ಮಾಡಿದ್ದಲ್ಲದೆ ೧೦ ರ‍್ಷ ಚಿಕ್ಕವನಾಗಿದ್ದಾನಂತೆ.

ಡಾ.ಡೀಪ್ ಸೀ ಎಂದೂ ಕರೆಯಲ್ಪಡುವ ಡಿಟುರಿ, ೨೦೨೩ರಲ್ಲಿ ಅಟ್ಲಾಂಟಿಕ್ ಸಾಗರದಲ್ಲಿ ಮೇಲ್ಮೈಯಿಂದ ೬.೭ ಮೀಟರ್ ಕೆಳಗೆ ಒಂದು ಚಿಕ್ಕ ಪಾಡ್ನೊಳಗೆ ೯೩ ದಿನಗಳನ್ನು ಕಳೆಯುವ ಮೂಲಕ ವಿಶ್ವದಾಖಲೆಯನ್ನು ಮಾಡಿದ್ದರು. ಅಮೆರಿಕ ನೌಕಾಪಡೆಯ ನಿವೃತ್ತ ಸೈನಿಕನಾದ ಆತ ಹೊಸ ವಿಶ್ವ ದಾಖಲೆಯನ್ನು ಮಾಡಿದ ಬಳಿಕವೂ ೧೦೦ ದಿನಗಳ ಪೂರೈಸದೆ ಹೊರಬರುವುದಿಲ್ಲ ಎಂದಿದ್ದ.ನೀರಿನೊಳಗಿದ್ದ ಡಿಟೂರಿಗೆ ಏನಾಯಿತು ? ಅವರು ಸುಮಾರು ೧೦ ರ‍್ಷಗಳ ಕಿರಿಯವರಂತೆ ಕಂಡು ಬಂದಿರುವುದಾಗಿ ವರದಿಯಾಗಿದೆ. ಡಿಎನ್ಎ ಪರೀಕ್ಷೆಗಳು ಸೇರಿದಂತೆ ವ್ಯಾಪಕವಾದ ವೈದ್ಯಕೀಯ ಪರೀಕ್ಷೆಗಳು, ಡಿಟೂರಿ ಅವರು ದೈಹಿಕವಾಗಿ ಅಲ್ಲದಿದ್ದರೂ ಜೈವಿಕ ಕ್ರಿಯೆಯಲ್ಲಿ ಕಿರಿಯರಾಗಿರುವುದರಿಂದ ಗಮನರ‍್ಹವಾಗಿ ಬದಲಾವಣೆ ಕಂಡುಕೊಂಡಿದ್ದಾರೆ ಎಂದು ತಿಳಿದುಬಂದಿದೆ. ವೈದ್ಯಕೀಯ ಮೌಲ್ಯಮಾಪನಗಳ ನಂತರ, ಡಿಟೂರಿಯ ಟೆಲೋಮಿರ‍್ಗಳು, ಕ್ರೋಮೋಸೋಮ್ಗಳ ಅಂತ್ಯದಲ್ಲಿರುವ ಡಿಎನ್ಎ ಕ್ಯಾಪ್ಗಳು ಸಾಮಾನ್ಯವಾಗಿ ವಯಸ್ಸಿನೊಂದಿಗೆ ಕುಗ್ಗುತ್ತವೆ, ಆದರೆ ಈಗ ಮೂರು ತಿಂಗಳ ಹಿಂದಿನದಕ್ಕಿಂತ ೨೦ ಪ್ರತಿಶತದಷ್ಟು ಬೆಳವಣಿಗೆ ಹೊಂದಿವೆ ಎಂದು ಕಂಡುಬಂದಿದೆ. ಇದಿಷ್ಟೆ ಅಲ್ಲ ಡಿಟೂರಿಯ ಸ್ಟೆಮ್ ಸೆಲ್ ಎಣಿಕೆಯು ಗಣನೀಯವಾಗಿ ಏರಿಕೆ ಕಂಡಿದೆ, ಆತನ ಕೊಲೆಸ್ಟ್ರಾಲ್ ಮಟ್ಟ ೭೨ ಪಾಯಿಂಟ್ಗಳಷ್ಟು ಕಡಿಮೆಯಾಯಿತು ಮತ್ತು ಅವನ ಉರಿಯೂತದ ಗುರುತುಗಳು ರ‍್ಧದಷ್ಟು ಕಡಿಮೆಯಾಯಿತು. ಆತನ ನಿದ್ರೆಯ ಗುಣಮಟ್ಟವು ಗಮನರ‍್ಹವಾಗಿ ಸುಧಾರಿಸಿತು ಎಂದು ಕಂಡುಕೊಂಡರು. ನೀರಿನೊಳಗಿದ್ದರೆ ಜೈವಿಕವಾಗಿ ಚಿಕ್ಕವರಾಗಲು ಹೇಗೆ ಸಾಧ್ಯವಾಯಿತು ಎಂಬುದು ಅಚ್ಚರಿ ಹುಟ್ಟಿಸಿದೆ. ಅವರು ಹೊರ ಜಗತ್ತಿಗೆ ಕಾಣಿಸಿಕೊಳ್ಳದ ಕಾರಣ ಇದು ಸಂಭವಿಸಿರಬಹುದು ಎಂದು ನಂಬಲಾಗಿದೆ. ಅವರು ಸಣ್ಣ ಪಾಡ್ನೊಳಗೆ ಅಗತ್ಯವಾಗಿ ಬೇಕಾಗಿದ್ದ ಆಹಾರ, ಆಮ್ಲಜನಕ ಹಾಗೂ ತರ‍್ತು ಸಂರ‍್ಭದಲ್ಲಿ ಬಳಕೆಗೆ ಅಗತ್ಯವಾದ ವಸ್ತುಗಳನ್ನು ಇಟ್ಟುಕೊಂಡಿದ್ದರು. ಕೆಲವೇ ಗ್ಯಾಜೆಟ್ಗಳು ಅವರನ್ನು ಸುತ್ತುವರೆದಿದ್ದವು. ಅಲ್ಲಿ ಅವರಿಗೆ ಒತ್ತಡವೇನು ಇರಲಿಲ್ಲ. ಸಮುದ್ರ ಮಟ್ಟದಿಂದ ಅವರು ಕೇವಲ ೬.೭ ಮೀಟರ್ ದೂರದಲ್ಲಿದ್ದರು.

Share This Article
error: Content is protected !!
";