ರಾಯಚೂರು ಲೋಕಸಭಾ ಚುನಾವಣೆಯ ಮತದಾನಕ್ಕೆ ಸಕಲ ಸಿದ್ದತೆ ಪೂರ್ಣ

Vijayanagara Vani
ರಾಯಚೂರು ಲೋಕಸಭಾ ಚುನಾವಣೆಯ ಮತದಾನಕ್ಕೆ ಸಕಲ ಸಿದ್ದತೆ ಪೂರ್ಣ

ಮಾನ್ವಿ: ಪಟ್ಟಣದ ಬಾಷುಮಿಯಾ ಸರಕಾರಿ ಪ್ರಥಮದರ್ಜೆ ಪದವಿ ಕಾಲೇಜಿನ ಅವರಣದಲ್ಲಿ ಮೇ ೭ ರಂದು ನಡೆಯಲಿರುವ ರಾಯಚೂರು ಪ.ಪಂಗಡ ಮೀಸಲು ಚುನಾವಣೆ ಅಂಗವಾಗಿ ಮಾನ್ವಿ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿನ ಮತಗಟ್ಟೆಗಳಲ್ಲಿ ನಡೆಯುವ ಮತದಾನದ ಮಾಸ್ಟರಿಂಗ್ ಕಾರ್ಯ ಮಾನ್ವಿ ಸಹಾಯಕ ಚುನಾವಣಾಧಿಕಾರಿ ಪ್ರಕಾಶ್.ವಿ ನೇತೃತ್ವದಲ್ಲಿ ನಡೆಯಿತು. ಈ ಬಾರಿಯ ಚುನಾವಣೆಯು ವಿದ್ಯೂನ್ಮಾನ ಮತಯಂತ್ರಗಳ ಮೂಲಕ ನಡೆಯುವುದರಿಂದ ಚುನಾವಣಾ ಕರ್ತವ್ಯಕ್ಕೆ ನೇಮಕವಾಗಿರುವ ಚುನಾವಣಾ ಸಿಬ್ಬಂದಿಗಳು ಹಾಗೂ ಪೊಲೀಸ್ ಸಿಬ್ಬಂದಿ ತಮ್ಮಗೆ ನೇಮಕ ಮಾಡಿರುವ ಮತಗಟ್ಟೆಗಳಿಗೆ ವಿದ್ಯೂನ್ಮಾನ ಮತಯಂತ್ರಗಳು,ವಿ.ವಿ.ಪ್ಯಾಟ್ ಯಂತ್ರ ಸೇರಿದಂತೆ ಚುನಾವಣೆಗೆ ಅಗತ್ಯವಿರುವ ಎಲ್ಲಾ ಸಮಾಗ್ರಿಗಳನ್ನು ಪಡೆದುಕೊಂಡು ತಮ್ಮ ತಮ್ಮ ಮತಗಟ್ಟೆಗಳಿಗೆ ತೆರಳುವುದಕ್ಕೆ ನಿಗದಿತ ವಾಹನಗಳ ವ್ಯವಸ್ಥೆಯನ್ನು ಕೂಡ ಮಾಡಲಾಗಿತ್ತು.

ಮಾನ್ವಿ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ಬರುವ ಮಾನ್ವಿ ಮತ್ತು ಸಿರವಾರ ತಾಲೂಕುಗಳ ವ್ಯಾಪ್ತಿಯಲ್ಲಿನ ೨೭೬ ಮತಗಟ್ಟೆಗಳಲ್ಲಿ ಮತದಾನಕ್ಕೆ ಅನುಕೂಲವಾಗುವಂತೆ ಎಲ್ಲಾ ಮೂಲ ಭೂತಸೌಲಭ್ಯಗಳ ವ್ಯವಸ್ಥೆಯನ್ನು ಮಾಡಲಾಗಿದೆ ಈ ಬಾರಿ ರಾಯಚೂರು ಪ.ಪಂಗಡ ಕ್ಷೇತ್ರದಿಂದ ಲೋಕಸಭಾಗೆ ನಡೆಯುತ್ತಿರುವ ಚುನಾವಣೆ ೨೦೨೪ ಸ್ಪರ್ಧಿಸುವುದಕ್ಕೆ ಅಂತಿಮವಾಗಿ ೮ ಅಭ್ಯರ್ಥಿಗಳು ಸ್ಫರ್ಧೆ ಕಣದಲ್ಲಿದ್ದು .ಮಾನ್ವಿ ವಿಧಾನಸಭಾ ವ್ಯಾಪ್ತಿಯಲ್ಲಿ ಪುರುಷ ಮತದಾರರು ೧,೧೬,೯೫೩, ಮಹಿಳಾ ಮತದಾರರು ೧,೨೨,೫೩೦, ತೃತೀಯಲಿಂಗಿ ಮತದಾರರು ೬೪, ಒಟ್ಟು ೨,೩೯,೫೪೭ ಮತದಾರರು ಈ ಬಾರಿ  ಮತ ಚಾಲಾಯಿಸುವ ಹಕ್ಕನ್ನು ಹೊಂದಿದ್ದಾರೆ,

ಈ ಬಾರಿ ಶೇ ೧೦೦ ರಷ್ಟು ಮತದಾನ ನಡೆಯಬೇಕು ಎನ್ನುವ ಉದ್ದೇಶದಿಂದ ಮತದಾರರನ್ನು ಮತಗಟ್ಟೆಗಳಿಗೆ ಬರುವಂತೆ ಆಕರ್ಷಿಸುವುದಕ್ಕಾಗಿ ಕ್ಷೇತ್ರದ ವ್ಯಾಪ್ತಿಯಲ್ಲಿ ೫ ಸಖೀ ಮತಗಟ್ಟೆಗಳು, ೧ ವಿಕಲಾಚೇತನರ ವಿಶೇಷ ಮತಗಟ್ಟೆ, ೧ ಸಂಪ್ರಾದಾಯಿಕ ಮತಗಟ್ಟೆ ,೧ ಯುವ ಮತಗಟ್ಟೆ , ೧ ಮಾದರಿ ಮತಗಟ್ಟೆ ಸೇರಿ ೯ ವಿಶೇಷವಾದ ಮತಗಟ್ಟೆಗಳ ವ್ಯವಸ್ಥೆಯನ್ನು ಮಾಡಲಾಗಿದೆ ತಾಲೂಕು ಅಡಳಿತದಿಂದ ಮತಗಟ್ಟೆ ಅಧಿಕಾರಿಗಳಿಗೆ ಸರಕಾರಿ ಪ್ರಥಮದರ್ಜೆ ಪದವಿ ಕಾಲೇಜಿನ ಅವರಣದಲ್ಲಿ ಊಟದ ವ್ಯವಸ್ಥೆಯನ್ನು ಮಾಡಲಾಗಿದೆ.

ಮತಗಟ್ಟೆಗಳಲ್ಲಿ ಚುನಾವಣಾ ಕರ್ತವ್ಯ ನಿರ್ವಹಿಸುವ ಅಧಿಕಾರಿಗಳಿಗೆ ತಾ.ಅಕ್ಷರ ದಾಸೋಹ ಇಲಾಖೆಯಿಂದ ಮೇನುವಿನಂತೆ ಊಟದ ವ್ಯವಸ್ಥೆ ಮಾಡಲಾಗಿದೆ.

ಈ ಬಾರಿ ಚುನಾವಣೆಯು ಬೇಸಿಗೆಯಲ್ಲಿ ಬಂದಿರುವುದರಿAದ ಮತದಾರರು ಮತದಾನಕ್ಕೆ ಬಂದ ವೇಳೆ ಬಿಸಿಲಿನಿಂದ ತೊಂದರೆಯಾದಲ್ಲಿ ಪ್ರಥಮ ಚಿಕಿತ್ಸೆಗಾಗಿ ಅರೋಗ್ಯ ಇಲಾಖೆಯಿಂದ ಅಗತ್ಯ ಪ್ರಥಮ ಚಿಕಿತ್ಸೆ ಕಿಟ್‌ಗಳನ್ನು ಕೂಡ ವಿತರಿಸಲಾಗಿದೆ.

ರಾಯಚೂರು ಪ.ಪಂಗಡ ಕ್ಷೇತ್ರದಿಂದ ಲೋಕಸಭಾಗೆ ನಡೆಯುತ್ತಿರುವ ಚುನಾವಣೆ೨೦೨೪ ರಲ್ಲಿ ಅಂತಿಮವಾಗಿ ಸ್ಪರ್ಧೆ ಕಣದಲ್ಲಿ  ೮ ಅಭ್ಯರ್ಥಿಗಳು ಇದ್ದು  ಮಾನ್ಯತೆ ಪಡೆದ ರಾಷ್ಟಿçÃಯ ಮತ್ತು ರಾಜ್ಯ ರಾಜಕೀಯ ಪಕ್ಷಗಳ ಅಭ್ಯರ್ಥಿಗಳು ಇಂಡಿಯನ್ ನ್ಯಾಷನಲ್ ಕಾಂಗ್ರೇಸ್ ಪಕ್ಷದಿಂದ ಜಿ,ಕುಮಾರ ನಾಯಕ ಚಿಹ್ನೆ ಕೈ ಗುರುತು, ಬಹುಜನ್ ಸಮಾಜ ಪಾರ್ಟಿ ಯಿಂದ ಎಸ್.ನರಸಣ್ಣಗೌಡನಾಯಕ ಚಿಹ್ನೆ ಆನೆ, ಭಾರತೀಯ ಜನತಾ ಪಾರ್ಟಿಯಿಂದ ರಾಜಾ ಅಮರೇಶ್ವರನಾಯಕ ಚಿಹ್ನೆ ಕಮಲ,ನೊಂದಾಯಿತ ರಾಜಕೀಯ ಪಕ್ಷಗಳಿಂದ  ಕರ್ನಾಟಕ ರಾಷ್ಟç ಸಮಿತಿ  ವತಿಯಿಂದ ಬಸವಪ್ರಭು ಮೇದ ಚಿಹ್ನೆ ಬ್ಯಾಟರಿ ಟಾರ್ಚ್, ಸೋಷಲಿಸ್ಟ್ ಯುನಿಟ್ ಸೆಂಟರ್ ಆಫ್ ಇಂಡಿಯಾ ( ಕಮ್ಯುನಿಷ್ಟ್) ವತಿಯಿಂದ  ರಾಮಲಿಂಗಪ್ಪ ಚಿಹ್ನೆ ಮಡಿಕೆ, ಭಾರತೀಯ ಜನ ಸಾಮ್ರಾಟ್ ಪಾರ್ಟಿ ವತಿಯಿಂದ ಮೇದಾರ ಶಾಮರಾವ್ ಚಿಹ್ನೆ ಆಟೋರಿಕ್ಷಾ, ಸ್ವತಂತ್ರ ಆಭ್ಯರ್ಥಿಗಳಾಗಿ ಅಮರೇಶ ಚಿಹ್ನೆ ತೆಂಗಿನ ತೋಟ,ಯಲ್ಲಮ್ಮ ದಳಪತಿ ಚಿಹ್ನೆ ಗ್ಯಾಸ್ ಸಿಲೆಂಡರ್ ಇರುತ್ತದೆ.

ಮಾನ್ವಿ ತಹಸೀಲ್ದಾರ್ ಜಗದೀಶ್ ಚೌರ್, ಸಿರವಾರ ತಹಸೀಲ್ದಾರ್ ಮಲ್ಲಿಕಾರ್ಜುನ,ಗ್ರೇಡ್-೨ ತಹಸೀಲ್ದಾರ್ ಅಬ್ದುಲ್ ವಾಹಿದ್, ತಾ.ಅರೋಗ್ಯಧಿಕಾರಿ ಶರಣಬಸವಪಾಟೀಲ್,ತಾ.ಬಿಸಿಯೂಟ ಯೋಜನೆಯ ಅಕ್ಷರ ದಾಸೋಹ ಅಧಿಕಾರಿ ಸುರೇಶನಾಯಕ್, ಸೇರಿದಂತೆ ಕಂದಯ ಇಲಾಖೆ ಅಧಿಕಾರಿಗಳು,ವಿವಿಧ ಇಲಾಖೆಯ ಅಧಿಕಾರಿಗಳು ಇದ್ದರು ಅರೆಸೇನಪಡೆಯ ಸಿಬ್ಬಂದಿಗಳು ಹಾಗೂ ಪೊಲೀಸ್ ಸಿಬ್ಬಂದಿಯಿAದ ಸೂಕ್ತವಾದ ಭದ್ರತೆಯನ್ನು ಕೈಗೊಳ್ಳಲಾಯಿತು.

ಪಟ್ಟಣದ ಬಾಷುಮಿಯಾ ಸರಕಾರಿ ಪ್ರಥಮದರ್ಜೆ ಪದವಿ ಕಾಲೇಜಿನ ಅವರಣದಲ್ಲಿ ರಾಯಚೂರು ಲೋಕಸಭಾ ಚುನಾವಣೆ ಅಂಗವಾಗಿ ಮತಗಟ್ಟೆ ಸಿಬ್ಬಂದಿಗಳು ತಮ್ಮಗೆ ಕರ್ತವ್ಯಕ್ಕೆ ವಹಿಸಿದ ಮತಗಟ್ಟೆಗಳಿಗೆ ತೆರಳುವುದಕ್ಕೆ ಸಿದ್ದತೆಗಳನ್ನು ಮಾಡಿಕೊಳ್ಳುತ್ತಿರುವುದು.

೬-ಮಾನ್ವಿ-೨: ಮಾನ್ವಿ: ಮಾನ್ವಿ: ಪಟ್ಟಣದ ಬಾಷುಮಿಯಾ ಸರಕಾರಿ ಪ್ರಥಮದರ್ಜೆ ಪದವಿ ಕಾಲೇಜಿನ ಅವರಣದಲ್ಲಿ ಲೋಕಸಭಾ ಚುನಾವಣೆಯ ಮತಗಟ್ಟೆ ಕರ್ತವ್ಯ ಅಧಿಕಾರಿಗಳಿಗೆ ಅರೋಗ್ಯ ಇಲಾಖೆಯಿಂದ ಬೇಸಿಗೆ ಅಂಗವಾಗಿ ಪ್ರಥಮ ಚಿಕಿತ್ಸೆ ಕಿಟ್ ಗಳನ್ನು ವಿತರಿಸಲಾಯಿತು.

೬-ಮಾನ್ವಿ-೩: ಮಾನ್ವಿ: ಮಾನ್ವಿ: ಪಟ್ಟಣದ ಬಾಷುಮಿಯಾ ಸರಕಾರಿ ಪ್ರಥಮದರ್ಜೆ ಪದವಿ ಕಾಲೇಜಿನ ಅವರಣದಲ್ಲಿ ಲೋಕಸಭಾ ಚುನಾವಣೆಯ ಮತಗಟ್ಟೆ ಕರ್ತವ್ಯ ಅಧಿಕಾರಿಗಳಿಗೆ ತಮ್ಮ ಮತಗಟ್ಟೆಗಳಿಗೆ ತೆರಳುವುದಕ್ಕೆ ವಾಹನ ವ್ಯವಸ್ಥೆಯನ್ನು ಮಾಡಲಾಗಿತು

 

WhatsApp Group Join Now
Telegram Group Join Now
Share This Article
error: Content is protected !!